Dose: ಬರೀ..ಮಸಾಲೆ, ಸೆಟ್, ಖಾಲಿದೋಸೆ ಯಾಕೆ? ಹೀಗೂ ಒಂದಿದೆ ನೋಡಿ ದೋಸೆ!

ಗೊಂಬೆ ದೋಸೆ, ಸೈಕಲ್ ದೋಸೆ ವಿಧವಾದ ಆಕಾರದ ದೋಸೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿ ಅಂದರೆ ದೋಸೆ. ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ದಿನದ ಮೂರು ಹೊತ್ತು ಊಟ, ತಿಂಡಿಗೂ ಸಹ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ದೋಸೆ ಹಾಗೂ ನೀರುದೋಸೆ ಹೀಗೆ ಹಲವಾರು ವಿಧಗಳಿವೆ. ಆದರೀಗ ದೋಸೆಯ ಆಕಾರದಲ್ಲೂ ಬದಲಾವಣೆ ಮಾಡುವುದು ಕಂಡುಬರುತ್ತಿದೆ.

ಸಾಮಾನ್ಯವಾಗಿ ಯಾವುದೇ ದೋಸೆಯನ್ನು ವೃತ್ತಾಕಾರದಲ್ಲಿ, ಮೊಟ್ಟೆ ಅಥವಾ ಚೌಕಾಕಾರದಲ್ಲಿ ಮಾಡಲಾಗುತ್ತದೆ. ಆದರೀಗ ದೋಸೆಯನ್ನು ಸೈಕಲ್, ಗೊಂಬೆ ಆಕಾರದಲ್ಲಿ ತಯಾರಿಸುವುದು ಟ್ರೆಂಡ್ ಆಗಿದೆ.

Bombay Dosa:People appreciate to the Skill of Indias Foodstreet Chefs! Know why?

ಬೆಣ್ಣೆ ದೋಸೆ, ನೀರು ದೋಸೆ, ರಾಗಿ ದೋಸೆ, ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ನೂರು ವಿಧವಾದ ದೋಸೆಗಳು ಇಂದಿಗೂ ಲಭ್ಯವಿದೆ. ಆದರೆ ಅದೆಲ್ಲದರ ಆಕಾರ ಬಹುತೇಕ ಒಂದೇ ಆಗಿತ್ತು. ಆದರೀಗ ದೋಸೆಯ ಆಕಾರದಲ್ಲಿ ಬದಲಾವಣೆ ಮಾಡಲಾಗಿದೆ.

ಹೌದು.. ದೋಸೆ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ದೋಸೆ ಇಷ್ಟಪಡದವರು ಯಾರೂ ಇಲ್ಲ. ಇವರೆಲ್ಲರ ದೋಸೆ ಮೇಲಿನ ಪ್ರೀತಿ ಹೆಚ್ಚಿಸಲು ದೋಸೆ ತಯಾರಕರು ನಾನಾ ಬಗೆಯ ದೋಸೆಯ ಆಕಾರಗಳನ್ನು ಮಾಡಲು ಶುರು ಮಾಡಿದ್ದಾರೆ. ದೋಸೆಯನ್ನು ತಯಾರಿಸುವಾಗ ಗೊಂಬೆ ಆಕಾರ, ಸೈಕಲ್, ಮನೆ ಸೇರಿದಂತೆ ಹೀಗೆ ಹಲವಾರು ಆಕಾರದಲ್ಲಿ ದೋಸೆ ತಯಾರಿಸಲಾಗುತ್ತಿದೆ.

ದೋಸೆ ತಯಾರಿಸುವ ಈ ಕಲಾ ಕೌಶಲ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದ ಫುಡ್‌ಸ್ಟ್ರೀಟ್ ಬಾಣಸಿಗರ ಕೌಶಲ್ಯವನ್ನು ಮೆಚ್ಚಿ ಶ್ಲಾಘಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+