• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಬಿಜೆಪಿಯಲ್ಲಿ ಬದಲಾವಣೆ; ಕರ್ನಾಟಕ ನಾಯಕತ್ವದ ಗತಿ?

|
Google Oneindia Kannada News

ಇನ್ನೆರಡು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ವಿಪರೀತ ಒತ್ತಡಕ್ಕೆ ಸಿಲುಕಿದೆ. ಸತತ ಎರಡು ಬಾರಿ ಅಧಿಕಾರ ಗಿಟ್ಟಿಸಿರುವ ಈ ಪಕ್ಷಕ್ಕೆ ಹ್ಯಾಟ್ರಿಕ್ ಗೆಲುವು ಅಷ್ಟು ಸುಲಭವಲ್ಲ. ಹಾಗಂತ ಪಕ್ಷಕ್ಕೆ ಅದು ಅಸಾಧ್ಯವೂ ಅಲ್ಲ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಸಾಲು ಸಾಲು ರಣತಂತ್ರಗಳನ್ನು ಯೋಜಿಸುತ್ತಿದೆ.

ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಬಿಜೆಪಿ ತನ್ನ ಸಂಘಟನೆಯಲ್ಲಿದ್ದ ತೊಡಕುಗಳನ್ನು ನಿವಾರಿಸುವ ಕೆಲಸಕ್ಕೆ ಆದ್ಯತೆ ಕೊಟ್ಟಿದೆ. ಆಯಕಟ್ಟಿನ ಸ್ಥಾನಗಳಲ್ಲಿ ಬದಲಾವಣೆ ಮಾಡುತ್ತಿದೆ.

ರಾಮೋಜಿರಾವ್ ಮಧ್ಯಸ್ಥಿಕೆಯಲ್ಲಿ ಚಂದ್ರಬಾಬು ನಾಯ್ಡು -ಅಮಿತ್ ಷಾ ಭೇಟಿರಾಮೋಜಿರಾವ್ ಮಧ್ಯಸ್ಥಿಕೆಯಲ್ಲಿ ಚಂದ್ರಬಾಬು ನಾಯ್ಡು -ಅಮಿತ್ ಷಾ ಭೇಟಿ

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮೊನ್ನೆ ಮೊನ್ನೆ ಮಹತ್ತರ ಬದಲಾವಣೆ ಮಾಡಲಾಗಿತ್ತು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ನಿತಿನ್ ಗಡ್ಕರಿಯಂಥ ಪ್ರಭಾವೀ ಮತ್ತು ಪ್ರಬಲ ವ್ಯಕ್ತಿಗಳನ್ನು ಮಂಡಳಿಯಿಂದ ಕೈಬಿಟ್ಟಿದ್ದು ಆಶ್ಚರ್ಯ ಹುಟ್ಟಿಸಿತ್ತು. ಹಾಗೆಯೇ, ರಾಜಕೀಯ ನೇಪಥ್ಯಕ್ಕೆ ಸರಿದೇಹೋದರು ಎಂದು ಭಾವಿಸಲಾಗಿದ್ದ ಬಿಎಸ್ ಯಡಿಯೂರಪ್ಪ ಅವರನ್ನು ಮಂಡಳಿಗೆ ಸೇರಿಸಿಕೊಂಡು ಇನ್ನಷ್ಟು ಅಚ್ಚರಿ ಹುಟ್ಟಿಸಿತು.

ಆದರೆ, ಬಿಜೆಪಿ ಹಾಗೆ ಸುಮ್ಮನೆ ಮಾಡಿದ ಬದಲಾವಣೆ ಅಲ್ಲ. ಹಲವು ಲೆಕ್ಕಾಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. 2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಅಣಿಗೊಳ್ಳುತ್ತಿದ್ದು, ಆ ನಿಟ್ಟಿನಲ್ಲಿ ಸಂಘಟನಾ ಜಾಲದಲ್ಲಿ ಮಹತ್ತರ ಬದಲಾವಣೆ ಮಾಡುತ್ತಿದೆ.

ಕುತೂಹಲವೆಂದರೆ ಬಿಜೆಪಿಯ ಸಂಸದೀಯ ಮಂಡಳಿ ಇದೇ ಮೊದಲ ಬಾರಿಗೆ ಮುಂದುವರಿದ ಜಾತಿಯವರ ಪ್ರಾಬಲ್ಯ ಕಡಿಮೆ ಆಗಿದೆ. ಹಿಂದುಳಿದ ಸಮುದಾಯದ ನಾಯಕರು ಮಂಡಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ. ಬಿಜೆಪಿಯ ಕಾರ್ಯತಂತ್ರ ಯಾವ ದಿಕ್ಕಿನಲ್ಲಿದೆ ಎಂಬುದಕ್ಕೆ ಇದು ದಿಗ್ಸೂಚಿ ಎಂದು ಪರಿಗಣಿಸಬಹುದು.

ಯಡಿಯೂರಪ್ಪ ಮುನ್ನೆಲೆಗೆ
ದಕ್ಷಿಣ ಭಾರತದಲ್ಲಿ ಬಿಜೆಪಿಯ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರವೇ. ಇಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೆಚ್ಚು ತಲೆಕೆಡಿಸಿಕೊಂಡಿದೆ. ಪಕ್ಷದಲ್ಲಿ ಯಡಿಯೂರಪ್ಪ ಮತ್ತವರ ಕುಟುಂಬದ ಪ್ರಾಬಲ್ಯ ಕಡಿಮೆ ಮಾಡಲು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಶಸ್ವಿಯಾಗಿದ್ದ ಬಿಜೆಪಿ ವರಿಷ್ಠರಿಗೆ ಈಗ ಕಾಂಗ್ರೆಸ್ ಎದುರಿಸಲು ಬಿಎಸ್‌ವೈ ಅಗತ್ಯ ಎಂಬ ಅರಿವು ಆದಂತಿದೆ. ಹೀಗಾಗಿ, ಯಡಿಯೂರಪ್ಪಗೆ 80 ವರ್ಷ ವಯಸ್ಸು ದಾಟಿದರೂ ಅವರನ್ನು ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆ ಮಾಡಲಾಗಿದೆ.

ಯಡಿಯೂರಪ್ಪ ಈಗಲೂ ರಾಜ್ಯದಲ್ಲಿ ಪ್ರಭಾವಿ ರಾಜಕಾರಣಿಯೇ. ಅವರ ಪಾಲ್ಗೊಳ್ಳುವಿಕೆ ಇಲ್ಲದೇ ಬಿಜೆಪಿ ಚುನಾವಣೆ ಎದುರಿಸಿದರೆ ಗೆಲುವು ಅಸಾಧ್ಯ. ಇದು ಹಿಂದೆ ಬಿಜೆಪಿಗೆ ಅನುಭವವಾಗಿದೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ.

ಬೊಮ್ಮಾಯಿ ಕೆಳಗಿಳಿಯುತ್ತಾರಾ?
ಕಳೆದ ತಿಂಗಳು ರಾಜ್ಯ ಬಿಜೆಪಿಯಲ್ಲಿ ಕೆಲ ಸಂಘಟನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೊಸ ಮುಖ ತರಲಾಗಿದೆ. ರಾಜೇಶ್ ಜಿವಿ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಅರುಣ್ ಕುಮಾರ್ ಅವರು ಆರೆಸ್ಸೆಸ್ ಪ್ರಚಾರಕ ಜವಾಬ್ದಾರಿಗೆ ಮರಳಿದ್ದಾರೆ. ಇದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಸಂಘಟನೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಇನ್ನು, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೊಬ್ಬರನ್ನು ಕೂರಿಸುವ ಸಾಧ್ಯತೆಯೂ ಇದೆ ಎಂಬ ಗುಸುಗುಸು ಸುದ್ದಿ ಇದೆ. ಸಿದ್ದರಾಮಯ್ಯ ಅವರನ್ನು ಎದುರಿಸಲು ಬೊಮ್ಮಾಯಿ ನಾಯಕತ್ವ ದುರ್ಬಲವಾಗಿದೆ ಎಂಬ ಅನಿಸಿಕೆ ಬಲವಾಗಿದೆ. ಹೀಗಾಗಿ, ಈ ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿಯ ಯಾವ ಮೂಲಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ. ಅದೇನೇ ಇದ್ದರೂ ಸಿಎಂ ಸ್ಥಾನ ಬದಲಾದರೆ ಅಚ್ಚರಿ ಎನಿಸುವುದಿಲ್ಲ.

BJP Prepares For Big Battle, Makes Several Organisational Changes, Karnataka May See Change
ಹಲವು ರಾಜ್ಯಗಳಲ್ಲಿ ಬದಲಾವಣೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ವಿವಿಧ ರೀತಿಯ ಕಾರ್ಯತಂತ್ರ ಅನುಸರಿಸುತ್ತಿದೆ. ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ಜಾತಿ ಸಮೀಕರಣ ಇತ್ಯಾದಿಯನ್ನು ಅವಲೋಕಿಸಿ ತನ್ನ ಸಂಘಟನೆಯ ಪುನಾರಚಣೆ ಮಾಡುತ್ತಿದೆ. ಮಹಾರಾಷ್ಟ್ರ, ಉತ್ತರಾಖಂಡ್ ಮತ್ತು ಛತ್ತೀಸ್‌ಗಡ್ ರಾಜ್ಯಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಾಯಿಸಲಾಗಿದೆ.

ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ಮಾಡಿದೆ. ಉತ್ತರಪ್ರದೇಶದಲ್ಲಿ ಹೊಸ ಅಧ್ಯಕ್ಷರ ನೇಮಕವಾಗುವ ನಿರೀಕ್ಷೆ ಇದೆ. ಬಿಹಾರದಲ್ಲಿ ವಿಪಕ್ಷ ಸ್ಥಾನಕ್ಕೆ ಇಳಿಯಬೇಕಾದ ಬಿಜೆಪಿ ಈಗ ಜೆಡಿಯು-ಆರ್‌ಜೆಡಿ ಮೈತ್ರಿಯನ್ನು ಎದುರಿಸಲು ಸಿದ್ಧವಾಗಬೇಕಿದೆ. ಅಲ್ಲಿಯೂ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಜರಿಗೆ ಕೈಹಾಕಬಹುದು ಎನ್ನಲಾಗಿದೆ.

ಪ್ರಮುಖ ಹುದ್ದೆಗೆ ಕಾಂಗ್ರೆಸ್‌ನ ಆನಂದ್ ಶರ್ಮಾ ರಾಜೀನಾಮೆಪ್ರಮುಖ ಹುದ್ದೆಗೆ ಕಾಂಗ್ರೆಸ್‌ನ ಆನಂದ್ ಶರ್ಮಾ ರಾಜೀನಾಮೆ

ಬಿಹಾರ ಬಿಜೆಪಿಗೆ 35 ಟಾರ್ಗೆಟ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಸ್ಥಾನಗಳನ್ನು ಉಳಿಸಿಕೊಳ್ಳುವುದೇ ಬಿಜೆಪಿಗೆ ಈತ ತಲೆನೋವಾಗಬಹುದು. ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಒಟ್ಟು ಸೇರಿ 39 ಸ್ಥಾನಗಳನ್ನು ಗೆದ್ದಿದ್ದವು. ಈಗ ಜೆಡಿಯು ಬೇರೆಯಾಗಿರುವುದು ಬಿಜೆಪಿಯನ್ನು ಒತ್ತಡಕ್ಕೆ ಕೆಡವಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ 35 ಸ್ಥಾನಗಳನ್ನು ಗೆಲ್ಲಬೇಕೆಂದು ಆ ರಾಜ್ಯದ ನಾಯಕರಿಗೆ ಗುರಿ ಕೊಡಲಾಗಿದೆ. ಆದರೆ, ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದರಿಂದ ಬಿಜೆಪಿಗೆ ಬಿಹಾರದಲ್ಲಿ 35 ಸ್ಥಾನಗಳನ್ನು ಗೆಲ್ಲುವುದು ತೀರಾ ದೊಡ್ಡ ಸವಾಲು. ಆದರೆ, ಆ ಗುರಿ ಇಟ್ಟುಕೊಳ್ಳದೇ ಬಿಜೆಪಿಗೆ ಬೇರೆ ದಾರಿ ಇಲ್ಲ.

(ಒನ್ಇಂಡಿಯಾ ಸುದ್ದಿ)

English summary
BJP has recently made several organizational change in various states. Its few state presidents are changed. BS Yediyurappa has gained prominence in Central leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X