• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲು

|

ನವದೆಹಲಿ, ಏಪ್ರಿಲ್ 08 : ಭಾರತದ 130 ಕೋಟಿ ಜನರ ಕನಸನ್ನು ನನಸು ಮಾಡುವ ಉದ್ದೇಶದಿಂದ, ಮುಂದಿನ 5 ವರ್ಷಗಳ ಅಭಿವೃದ್ಧಿಯ ರೂಪುರೇಷೆಗಳೊಂದಿಗೆ, ಭಾರತೀಯ ಜನತಾ ಪಕ್ಷ 'ಸಂಕಲ್ಪ ಪತ್ರ'ವನ್ನು ಸೋಮವಾರ ಬಿಡುಗಡೆ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲೋಕಸಭೆ ಚುನಾವಣೆಯ ಮೊದಲ ಹಂತಹ ಮತದಾನ (ಏಪ್ರಿಲ್ 11)ಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಭಾರತೀಯ ಜನತಾ ಪಕ್ಷ 'ಸಂಕಲ್ಪಿತ್ ಭಾರತ್, ಸಕ್ಷಮ್ ಭಾರತ್' ಎಂಬ ಉದ್ಘೋಷದೊಂದಿಗೆ, ಭರವಸೆಗಳಿಂದ ತುಂಬಿದ ಚುನಾವಣಾ ಪ್ರಣಾಳಿಕೆಯನ್ನು ಹೊರತಂದಿದೆ.

ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು

ಪ್ರಣಾಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನಾವೆಲ್ಲ ಭಾರತೀಯರೂ ಸೇರಿ ಅತ್ಯಂತ ಬಲಿಷ್ಠವಾದ ಮತ್ತು ಎಲ್ಲವನ್ನೂ ಒಳಗೊಂಡಂತಿರುವ ದೇಶವನ್ನು ಕಟ್ಟೋಣ. ಭಾರತದ ನಾಗರಿಕರಿಗೆಲ್ಲ ಗೌರವ, ಸಮೃದ್ಧತೆ, ಭದ್ರತೆ ಮತ್ತು ಅವಕಾಶಗಳು ಸಿಗುವಂಥ ಭಾರತದ ನಿರ್ಮಾಣ ಮಾಡೋಣ ಎಂದು ಸುದೀರ್ಘ ಪತ್ರವನ್ನು ಪ್ರಣಾಳಿಕೆಯಲ್ಲಿ ಬರೆದಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡ, ಪ್ರಣಾಳಿಕೆ ಬಿಡುಗಡೆಗೂ ಮುನ್ನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಬಿಜೆಪಿಗೆ ಬಹುಮತ ಬರಲು ಒಗ್ಗಟ್ಟಿನಿಂದ ಶ್ರಮಿಸೋಣ ಮತ್ತು ಮತ್ತೊಮ್ಮೆ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಲು ನಮ್ಮೆಲ್ಲ ಶಕ್ತಿಗಳನ್ನು ವ್ಯಯಿಸೋಣ ಎಂದು ಹೇಳಿದ್ದಾರೆ.

ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?

ಬಿಜೆಪಿ ಪ್ರಣಾಳಿಕೆಯ ಪ್ರಥಮ ಮತ್ತು ಪ್ರಮುಖ ಸಂಗತಿಯೆಂದರೆ, ಎಲ್ಲಕ್ಕಿಂತ ದೇಶ ಮುಖ್ಯ ಎಂಬ ನಿರ್ಣಯ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಭಾರತದ ಭದ್ರತಾ ವ್ಯಾಖ್ಯಾನವೇ ಬದಲಾಗಿದೆ ಎಂದಿರುವ ಬಿಜೆಪಿ, ಎಲ್ಲಕ್ಕಿಂತ 'ದೇಶವೇ ಮೊದಲು' ಎಂದು ಹೇಳಿದ್ದು, ಅದರಡಿಯಲ್ಲಿ ಹಲವಾರು ಸಂಗತಿಗಳನ್ನು ಪ್ರಣಾಳಿಕೆಯಲ್ಲಿ ವಿವರಿಸಿದೆ.

ಭಯೋತ್ಪಾದನೆಯ ಬಗ್ಗೆ ಶೂನ್ಯ ತಾಳ್ಮೆ

ಭಯೋತ್ಪಾದನೆಯ ಬಗ್ಗೆ ಶೂನ್ಯ ತಾಳ್ಮೆ

ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯೇ ನಮಗೆ ಎಲ್ಲಕ್ಕಿಂತ ದೊಡ್ಡದು. ಕೆಲ ವರ್ಷಗಳ ಹಿಂದೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ಇತ್ತೀಚೆಗೆ ನಡೆಸಿದ ಏರ್ ಸ್ಟ್ರೈಕ್ ಗಳಿಂದಾಗಿ ನಮ್ಮ ಪಕ್ಷ ಭದ್ರತೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತದೆಂದು ಸಾಬೀತಾಗಿದೆ. ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಗಳಿಗೆ ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಮುಕ್ತ ಹಸ್ತ ನೀಡಲಾಗುವುದು.

ರಾಷ್ಟ್ರೀಯ ಭದ್ರತೆ ಮತ್ತು ಸೇನೆಗೆ ಬಲ

ಭಾರತೀಯ ಸೇನೆಗೆ ಮತ್ತಷ್ಟು ಬಲತುಂಬಲು ಖರೀದಿಸಬೇಕೆಂದು ಉದ್ದೇಶಿಸಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು. ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲಿದ್ದೇವೆ ಮತ್ತು ನಮ್ಮ ವಾಯು ಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಸ್ವಯಂ ಭದ್ರತೆಗಾಗಿ ಕಳೆದ 5 ವರ್ಷಗಳಲ್ಲಿ ಹಲವಾರು ಕ್ರಮ ತೆಗೆದುಕೊಂಡಿದ್ದೇವೆ. ಅಮೇಥಿಯಲ್ಲಿ 'ಮೇಕ್ ಇನ್ ಇಂಡಿಯಾ ಡಿಫೆನ್ಸ್' ಅಡಿಯಲ್ಲಿ ಎಕೆ 203 ರೈಫಲ್ ಉತ್ಪಾದನಾ ಕಾರ್ಖಾನೆಯನ್ನು ಹಾಕಲಾಗಿದೆ. ಇದರಿಂದ ಉದ್ಯೋಗವನ್ನೂ ಸೃಷ್ಟಿಸಲಿದೆ ಮತ್ತು ರಕ್ಷಣಾ ವಲಯದಲ್ಲಿ ಇನ್ನಷ್ಟು ಹೂಡಿಕೆಗೆ ಉತ್ತೇಜನ ನೀಡಲಿದೆ.

ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!

ಸೈನಿಕರ ಕಲ್ಯಾಣಕ್ಕಾಗಿ ಮೋದಿ ಭರವಸೆ

ಸೈನಿಕರ ಕಲ್ಯಾಣಕ್ಕಾಗಿ ಮೋದಿ ಭರವಸೆ

ಬಹುವರ್ಷಗಳ ನಂತರ, ಒಂದು ರ‍್ಯಾಂಕ್ ಮತ್ತು ಒಂದು ಹುದ್ದೆಯನ್ನು ಜಾರಿಗೆ ತರುವ ಮೂಲಕ ದೇಶದ ಹಿರಿಯ ಸೇನಾಪತಿಗಳ ಅಭ್ಯುದಯಕ್ಕಾಗಿ ಶ್ರಮಿಸಿದ್ದೇವೆ. ಹಿರಿಯ ಸೈನಿಕರ ಸೆಟ್ಲ್‌ಮೆಂಟ್ ಗೆ ಅತ್ಯಂತ ಪರಿಣಾಮಕಾರಿಯಾಗಿ ವ್ಯವಸ್ಥೆ ಜಾರಿಗೆ ತರುತ್ತೇವೆ. ಸೈನಿಕರು ನಿವೃತ್ತರಾಗುವ 3 ವರ್ಷಗಳಿಗೆ ಮುನ್ನವೇ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಸೈಕರಿಗೆ ಬಾಕಿ ಬರುವ ಮೊತ್ತದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಸೈನಿಕರಿಗೆ ಅಗತ್ಯವಾಗಿ ಬೇಕಾದ ತರಬೇತಿ, ಉನ್ನತ ಶಿಕ್ಷಣಕ್ಕಾಗಿ ಹಣಕಾಸು ನೆರವು, ಮನೆ ನಿರ್ಮಿಸಲು ಮತ್ತು ಉದ್ಯೋಗ ಆರಂಭಿಸಲು ಕೂಡ ಸಹಾಯ ಮಾಡಲಾಗುವುದು.

ಪೊಲೀಸ್ ಪಡೆಯ ಆಧುನೀಕರಣ

ಪೊಲೀಸ್ ಪಡೆಯ ಆಧುನೀಕರಣ

ಭಾರತ ಆಂತರಿಕವಾಗಿ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಬೇಕಾದ ಸಿದ್ಧತೆ ಮಾಡಿಕೊಳ್ಳಲು ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೇಂದ್ರ ಪೊಲೀಸ್ ಪಡೆಗೆ ಆಧುನೀಕರಣದ ಸ್ಪರ್ಶ ನೀಡಲಾಗುವ ಪ್ರಕ್ರಿಯೆ ಇನ್ನೂ ತ್ವರಿತವಾಗಿ ಮುಂದುವರಿಯಲಿದೆ. ಪೊಲೀಸ್ ಪಡೆ ಆಧುನೀಕರಣ ಯೋಜನೆಯ ಮೂಲಕ ಎಲ್ಲ ರಾಜ್ಯಗಳಿಗೂ ಸಹಕಾರ ನೀಡಲಾಗುವುದು. ಸೈಬರ್ ಅಪರಾಧದಂತಹ ಹೊಸ ಬಗೆಯ ಕ್ರೈಂಗಳ ವಿರುದ್ಧ ಪೊಲೀಸರು ಹೋರಾಡಲು ಪೊಲೀಸ್ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗುವುದು. ಅವರು ದುರ್ಬಲ ವರ್ಗದವರೊಂದಿಗೆ ಅತ್ಯಂತ ಸಂಯಮದಿಂದ ವರ್ತಿಸುವಂತೆ ಮಾಡಲು ಎಲ್ಲ ರೀತಿಯ ತರಬೇತಿ ನೀಡಲಾಗವುದು.

ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳು

ನುಸುಳುಕೋರರ ವಿರುದ್ಧ ಹೋರಾಟ

ನುಸುಳುಕೋರರ ವಿರುದ್ಧ ಹೋರಾಟ

ನುಸುಳುಕೋರರ ಅಕ್ರಮ ನುಸುಳುವಿಕೆಯಿಂದಾಗಿ ಸ್ಥಳೀಯ ಜನರ ಜೀವನ ಮತ್ತು ಉದ್ಯೋಗದ ಮೇಲೆ ಹೊಡೆದ ಬಿದ್ದಿದ್ದು, ಸಾಂಸ್ಕೃತಿಕವಾಗಿ ಮತ್ತು ಭಾಷಾತ್ಮಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಇಂಥ ಬದಲಾವಣೆ ಕಂಡ ಪ್ರದೇಶಗಳಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತ್ವರಿತಗೊಳಿಸಲಾಗುವುದು. ಇದನ್ನು ಇತರ ರಾಜ್ಯಗಳಿಗೂ ನಿಧಾನಗತಿಯಲ್ಲಿ ಜಾರಿಗೆ ತರಲಾಗುವುದು. ಗಡಿ ಭದ್ರತೆಯನ್ನು ಹೆಚ್ಚಿಸುವ ಮೂಲಕ ಈಶಾನ್ಯ ರಾಜ್ಯಗಳಲ್ಲಿ ನುಸುಳುವಿಕೆಯನ್ನು ತಡೆಗಟ್ಟಲಾಗುವುದು. ಅಸ್ಸಾಂನ ಧುಬಾರಿಯಲ್ಲಿ ತಂತ್ರಜ್ಞಾನವನ್ನು ಬಳಸಿ ಇದನ್ನು ಜಾರಿಗೆ ತರಲಾಗಿದೆ. ಇದನ್ನು ದೇಶದ ಎಲ್ಲ ಗಡಿಗಳಲ್ಲಿ ಜಾರಿಗೆ ತರಲಾಗುವುದು.

ಜಮ್ಮು ಮತ್ತು ಕಾಶ್ಮೀರ - ಅನುಚ್ಛೇದ 370

ಜಮ್ಮು ಮತ್ತು ಕಾಶ್ಮೀರ - ಅನುಚ್ಛೇದ 370

ಕಳೆದ 5 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಲು ಹಲವಾರು ಕ್ರಮಗಳನ್ನು ಬಿಜೆಪಿ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸಲು ಎಲ್ಲರಿಗೂ ಹಣಕಾಸಿನ ನೆರವು ನೀಡಲು ಪಕ್ಷ ಕಟಿಬದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿವಾಸಿಯಲ್ಲದವರು ಮತ್ತು ಮಹಿಳೆಯರಿಗೆ ತಾರತಮ್ಯ ಮಾಡುತ್ತಿರುವ ಸಂವಿಧಾನದ ಅನುಚ್ಛೇದ 35ಎ ಅನ್ನು ರದ್ದುಪಡಿಸಲಾಗುವುದು. ಅನುಚ್ಛೇದ 35ಎ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ರಾಜ್ಯದಲ್ಲಿ ಶಾಂತಿಯುವ ವಾತಾವರಣ ಸೃಷ್ಟಿಯಾಗಲು ಏನೇನು ಬೇಕೋ ಅದನ್ನೆಲ್ಲ ಮಾಡಲಾಗುವುದು. ಕಾಶ್ಮೀರಿ ಪಂಡಿತರು ತಮ್ಮ ರಾಜ್ಯಕ್ಕೆ ಸುರಕ್ಷಿತವಾಗಿ ಮರಳುವಂತೆ ಭದ್ರತೆ ಒದಗಿಸುತ್ತೇವೆ. ಪಶ್ಚಿಮ ಪಾಕಿಸ್ತಾನದ ನಿರ್ವಸಿದರು, ಪಾಕ್ ಆಕ್ರಮಿತ ಕಾಶ್ಮೀರದ ಮತ್ತು ಛಂಬ್ ನಾಗರಿಕರಿಗೆ ಎಲ್ಲ ರೀತಿಯ ಹಣಕಾಸು ನೆರವು ನೀಡಲಾಗುವುದು.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The decisive leadership of Prime Minister Shri Narendra Modi has fundamentally altered the national security paradigm of India in the last 􀂪ve years. Looking ahead, we propose to do

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more