• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bigg Boss Kannada Season 9 : ಇಂದಿನಿಂದ ಬಿಗ್‌ಬಾಸ್‌ ಆರಂಭ: ಹೊಸ ಸ್ಪರ್ಧಿಗಳೊಂದಿಗೆ ಹಳಬರ ಗ್ರ್ಯಾಂಡ್ ಎಂಟ್ರಿ!

|
Google Oneindia Kannada News

ರೀ... ಕಮಲಮ್ಮ ಇವತ್ತು ಸಂಜೆ ಆರು ಗಂಟೆ ಅನ್ನೋ ಒಳಗೆ ಎಲ್ಲಾ ಕೆಲ್ಸ ಮುಗಿಸಿಕೊಂಡು ಬಿಡಿ. ಯಾಕೆಂದರೆ ಆರು ಗಂಟೆಯಿಂದ ಬಿಗ್‌ಬಾಸ್ ಸ್ಟಾರ್ಟ್ ಆಗುತ್ತೆ. ಹೌದಂತೆ ಶಾಂತಕ್ಕಾ ಈ ಸಲ ಹೊಸಬರೊಂದಿಗೆ ಹಳಬರೂ ಬಿಗ್‌ಬಾಸ್ ಮನೆಗೆ ಬರ್ತಾರಂತೆ... ಬೀದಿಲಿ ಹೊರಟರೆ ಅಕ್ಕಪಕ್ಕದ ಮನೆ ಹೆಣ್ಣು ಮಕ್ಕಳ ಮಾತು ಹೀಗೆ ಕಿವಿಗೆ ಬೀಳುತ್ತೆ. ಇದು ಒಂದು ಮನೆ ಅಥವಾ ಗಲ್ಲಿ ಮಾತಲ್ಲ. ಹಲವಾರು ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ 'ಬಿಗ್‌ಬಾಸ್‌ ಕನ್ನಡ ಸೀಸನ್ 9' ನೋಡೋಕೆ ಕಾತುರದಿಂದ ಕಾಯ್ತಾಯಿದ್ದಾರೆ. ಯಾವ ಸ್ಪರ್ಧಿ? ಹಿನ್ನಲೆ ಏನು? ಹೇಗೆ? ಎಂದು ತಿಳಿಯೋಕೆ ಸಂಜೆ ಆಗೋದನ್ನೇ ವೇಯಿಟ್ ಮಾಡ್ತಾಯಿದ್ದಾರೆ. ಈಗಾಗಲೇ ದೊಡ್ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಲಿಸ್ಟ್ ಬಹಿರಂಗಗೊಂಡಿದ್ದರು, ಸಂಜೆ ಸ್ಪರ್ಧಿಗಳ ಪಟ್ಟಿ ಬಿಡುಗಡೆಯಾಗಲಿದೆ.

ಹಲವು ತಿಂಗಳುಗಳ ನಂತರ ಟಿವಿ ಪದರೆ ಮೇಲೆ ಬಿಗ್‌ಬಾಸ್ ಮನೆ ತೆರೆದುಕೊಳ್ಳಲಿದೆ. ನೋಡಗರಿಗೆ ಸಖತ್ ಥ್ರಿಲ್ ನೀಡುವ ಕಾರ್ಯಕ್ರಮ ಈ ಬಾರಿ ಹೇಗಿರಲಿದೆ ಅನ್ನೋದೇ ಎಲ್ಲರಲ್ಲಿರುವ ಪ್ರಶ್ನೆ. ಈ ಪ್ರಶ್ನೆಗೆ ಕೊಂಚ ಮಟ್ಟಿಗೆ ಉತ್ತರ ನೀಡುವ ಪ್ರಯತ್ನ ನಾವು ಮಾಡಬಹುದು. ಯಾಕೆಂದ್ರೆ ದೊಡ್ಮನೆಗೆ ಹೋಗೋ ಸ್ಪರ್ಧಿಗಳಿಂದ ಮನೆಯ ವಾತಾವರಣ ಹೇಗೆ ಇರಬಹುದು ಎನ್ನುವ ಲೆಕ್ಕಾಚಾರವನ್ನು ಕೊಂಚ ಮಟ್ಟಿಗೆ ಮಾಡಬಹುದು. ಹಾಗಾದ್ರೆ ಈ ಬಾರಿ ಯಾರು 'ಬಿಗ್‌ಬಾಸ್‌ ಕನ್ನಡ ಸೀಸನ್ 9' ನ ಸ್ಪರ್ಧಿಗಳಾಗಿದ್ದಾರೆ ಅನ್ನೋದನ್ನ ನೋಡೋಣ.

ಬಿಗ್ ಬಾಸ್ ಕನ್ನಡ ಒಟಿಟಿ ಶೋ ಫಿನಾಲೆ ಮುಗಿದಿದೆ. ಅಲ್ಲಿನ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್​ಗೆ ಎಂಟ್ರಿ ಆಗಿದ್ದಾರೆ. ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಸಹ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿದ್ದಾರೆ. ಇನ್ನೂ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ ಸೀಸನ್ 9 ನಲ್ಲೂ ಹೊಸಬರ ಜೊತೆ ಬಿಗ್‌ಬಾಸ್ ಮನೆ ಎಂಟ್ರಿ ಕೊಡಲಿದ್ದಾರೆ. ಜೊತೆಗೆ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಹಿಂದೆ ಬಿಗ್‌ಬಾಸ್‌ ಸ್ಪರ್ಧಿಯೂ ಆಗಿದ್ದ ಮಯೂರಿ ಕೂಡ ಈ ಬಾರಿ ಬಿಗ್‌ಬಾಸ್ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್, ದಿವ್ಯ ಉರುಡುಗ, ವಿನೋದ್ ಗೊಬ್ರ, ಅರುಣ್ ಸಾಗರ್ ಹಳೆಯ ಸ್ಪರ್ಧಿಗಳಾಗಿದ್ದಾರೆ. ಈ ಬಾರಿ ಒಟ್ಟು 18 ಜನ ಸ್ಪರ್ಧಿಗಳು 90 ದಿನ ಬಿಗ್‌ಬಾಸ್‌ ಮನೆಯಲ್ಲಿ ಕಳೆಯಲೇಬೇಕು ಎನ್ನುವ ಛಲದೊಂದಿಗೆ ತಯಾರಾಗಿದ್ದಾರೆ.

'ಬಿಗ್‌ಬಾಸ್‌ ಕನ್ನಡ ಸೀಸನ್ 9' ಸ್ಪರ್ಧಿಗಳ ಪಟ್ಟಿ

ವೈಷ್ಣವಿ ಗೌಡ

ದೀಪಿಕಾ ದಾಸ್

ಅನುಪಮ ಗೌಡ

ಪ್ರಶಾಂತ್ ಸಂಬರ್ಗಿ

ಅರುಣ್ ಸಾಗರ್

ಮಯೂರಿ

ದಿವ್ಯ ಉರುಡುಗ

ವಿನೋದ್ ಗೊಬ್ರಗಾಲ

Bigg Boss kannada Season 9: Grand entry of contestants into the Bigg Boss house today!

ಮಂಗಳ ಗೌರಿ ಕಾವ್ಯ ಶ್ರೀ

ನವಾಜ್

ನೇಹಾ ಗೌಡ

ರೂಪೇಶ್ ರಾಜಣ್ಣ

ಬೈಕರ್ ಐಶ್ವರ್ಯಾ ರಾಯ್

ಅಕ್ಷಯ್ ಬೈರಮುಡಿ

ರೂಪೇಶ್ ಶೆಟ್ಟಿ

ರಾಕೇಶ್ ಅಡಿಗ

ಆರ್ಯವರ್ಧನ್

ಸಾನ್ಯಾ ಅಯ್ಯರ್

English summary
Bigg Boss Season 9: Bigg Boss Kannada season 9 will start from today and old contestants will make a grand entry along with new contestants. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X