ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಪಕ್ಕದಲ್ಲೇ ಮಧುಚಂದ್ರ, 2027ಕ್ಕೆ ಬಹುದಿನದ ಕನಸು ನನಸು..!

|
Google Oneindia Kannada News

ಮಧುಚಂದ್ರ ಅರ್ಥಾತ್ ಹನಿಮೂನ್ ಮೂಡ್‌ನಲ್ಲಿ ಗಂಡ ಹೆಂಡತಿಗೆ ಕೊಡಬಹುದಾದ ಭರವಸೆಗಳು ಯಾವು..? ಇದರಲ್ಲಿ ಬಹುಪಾಲು ಜನರು ಕೇಳೋದು, ಹೇಳೋದು ನಿನಗಾಗಿ ಚಂದ್ರನನ್ನ ಬೇಕಾದರೂ ತಂದು ಕೊಡುವೆ ಅಂತಾ. ಹೌದು, ಹೀಗೆ ಸುಳ್ಳು ಆಶ್ವಾಸನೆ ಕೊಟ್ಟಿದ್ದು ಸಾಕು ಕಣ್ರೀ. 2027ಕ್ಕೆ ಈ ಕನಸು ಕೂಡ ಇನ್ನು ಸ್ವಲ್ಪ ವರ್ಷದಲ್ಲೇ ನನಸಾಗಲಿದೆ. ಆದರೆ ಇದಕ್ಕಾಗಿ 6 ರಿಂದ 7 ವರ್ಷ ಕಾಯಬೇಕು ಅಷ್ಟೇ.

ಅಂದಹಾಗೆ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ ಭೂ ಕಕ್ಷೆಯಲ್ಲಿ ಹೋಟೆಲ್ ನಿರ್ಮಾಣಕ್ಕೆ ನಿರ್ಧರಿಸಿದೆ. ಸುಮಾರು 400 ಜನರಿಗೆ ಸ್ಥಳವಾಕಾಶ ಕಲ್ಪಿಸುವ ಈ ಹೋಟೆಲ್ ನಿರ್ಮಾಣ ಕಾಮಗಾರಿ 2025ಕ್ಕೆ ಮಗಿಯುವ ಸಾಧ್ಯತೆ ಇದೆ. ಆದರೆ ಇದು ಗ್ರಾಹಕರ ಬಳಕೆಗೆ ಲಭ್ಯವಾಗುವುದು 2027ಕ್ಕೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಭೂಮಿ ಕೆಳ ಕಕ್ಷೆ ಅಂದರೆ ನೆಲದ ಮೇಲಿಂದ ಸುಮಾರು 160 ಕಿ.ಮೀ.ನಿಂದ 1000 ಕಿ.ಮೀ. ಅಂತರದಲ್ಲಿ ಹೋಟೆಲ್ ನಿರ್ಮಾಣವಾಗಬಹುದು. ಈಗಾಗಲೇ ಹೋಟೆಲ್ ನಿರ್ಮಾಣಕ್ಕಾಗಿ ಸಕಲ ಸಿದ್ಧತೆಗಳು ಸಾಗಿದೆ. ಭೂಮಿ ಕಕ್ಷೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಮಾದರಿಯಲ್ಲಿ ಸ್ಪೇಸ್ ಸ್ಟೇಷನ್ ನಿರ್ಮಾಣ ಮಾಡಿ, ಅಲ್ಲಿ ಹೋಟೆಲ್‌ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ದಿನಕ್ಕೆ 16 ಬಾರಿ ಸೂರ್ಯೋದಯ..!

ದಿನಕ್ಕೆ 16 ಬಾರಿ ಸೂರ್ಯೋದಯ..!

24 ಗಂಟೆಗಳ ಅವಧಿಯಲ್ಲಿ ಭೂಮಿ ಮೇಲೆ ಎಷ್ಟು ಬಾರಿ ಸೂರ್ಯೋದಯ (Sunrise) ನೋಡಬಹುದು ಹೇಳಿ..? ಒಂದು ಬಾರಿ ಅನ್ನೋದು ಯೂನಿವರ್ಸಲ್ ಉತ್ತರ. ಆದರೆ ಬಾಹ್ಯಾಕಾಶ ಹೋಟೆಲ್‌ನಲ್ಲಿ ನೀವು ದಿನಕ್ಕೆ 16 ಬಾರಿ ಸೂರ್ಯೋದಯ (Sunrise) ನೋಡಬಹುದು. ಏಕೆಂದರೆ ಭೂಮಿ ಕಕ್ಷೆಯಲ್ಲಿ ಹೋಟೆಲ್ ನಿರ್ಮಾಣ ಮಾಡಿದ ಮೇಲೆ ಅದು ಭೂಮಿಯ ಗುರುತ್ವ ಬಲಕ್ಕೆ ಸಿಲುಕಿ ನೆಲಕ್ಕೆ ಉರುಳದಂತೆ ತಡೆಯಬೇಕು. ಇದಕ್ಕೆ ಇರುವ ಏಕೈಕ ಮಾರ್ಗ ಹೋಟೆಲ್‌ನ ಭೂಮಿಯ ಸುತ್ತಾ ಗಿರಕಿ ಹೊಡೆಸುವುದು. ಹೀಗೆ 90 ನಿಮಿಷ ಅವಧಿಯಲ್ಲಿ 1 ಬಾರಿ ಭೂಮಿ ಸುತ್ತಲೂ ಬಾಹ್ಯಾಕಾಶ ಹೋಟೆಲ್ ಗಿರಕಿ ಹೊಡೆಯಬೇಕು. ಹಾಗಾದ್ರೆ ಮಾತ್ರ ಹೋಟೆಲ್ ಭೂಮಿ ಕಕ್ಷೆಯಲ್ಲಿ ಉಳಿಯಬಹುದು. ಭೂಮಿ ಗುರುತ್ವಕ್ಕೆ ಸಿಲುಕದೆ ಬದುಕಬಹುದು.

ಮಸ್ಸಾಜ್, ಪಾರ್ಲರ್, ಸ್ವಿಮ್ಮಿಂಗ್..!

ಮಸ್ಸಾಜ್, ಪಾರ್ಲರ್, ಸ್ವಿಮ್ಮಿಂಗ್..!

ಸುಮಾರು 400 ಜನರಿಗೆ ಸ್ಥಳಾವಕಾಶ ಕಲ್ಪಿಸುವ ಬಾಹ್ಯಾಕಾಶ ಹೋಟೆಲ್‌ನಲ್ಲಿ ಭೂಮಿ ಮೇಲೆ ಇರುವ ಎಲ್ಲಾ ವ್ಯವಸ್ಥೆಗಳನ್ನೂ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಸಿಗುವ ಸಕಲ ಸೌಲಭ್ಯ ಇಲ್ಲಿ ಕೂಡ ಸಿಗಲಿದೆ. ಮಸ್ಸಾಜ್, ಪಾರ್ಲರ್, ಸ್ವಿಮ್ಮಿಂಗ್ ಹೀಗೆ ರಿಲ್ಯಾಕ್ಸ್ ಆಗಲು ಹಾಗೂ ರಜೆ ದಿನಗಳನ್ನು ಕಳೆಯಲು ಬೇಕಾದ ಸಕಲ ವ್ಯವಸ್ಥೆಗಳು ಇಲ್ಲಿ ಸಿಗಲಿವೆ. ಈವರೆಗೂ ಹೋಟೆಲ್‌ನ ಬೆಲೆ ಎಷ್ಟಾಗಬಹುದೆಂಬ ಅಂದಾಜು ವೆಚ್ಚ ಹೇಳದೇ ಇದ್ದರೂ, ಜೇಬಿಗೆ ಭಾರವಾಗುವ ಕನಸು ಇದಾಗಲಿದೆ. ಒನ್ಸ್ ಅಗೈನ್ ಶ್ರೀಮಂತರ ಪಾಲಿಗೆ ಮಾತ್ರ ದಕ್ಕುವ ಗಗನ ಕುಸುಮವಾದರೂ ಅಚ್ಚರಿ ಇಲ್ಲ.

ಚಂದ್ರನ ರೀತಿ ವಾತಾವರಣ ಸೃಷ್ಟಿ..!

ಚಂದ್ರನ ರೀತಿ ವಾತಾವರಣ ಸೃಷ್ಟಿ..!

ನಿಮಗೆಲ್ಲಾ ತಿಳಿದಿದೆ ಬಾಹ್ಯಾಕಾಶದಲ್ಲಿ ಗುರುತ್ವ ಬಲ ಇರುವುದಿಲ್ಲ. ಹೀಗಾಗಿ ಯಾವ ವಸ್ತುವೇ ಇದ್ದರೂ ಅಲ್ಲಿ ತೇಲುತ್ತದೆ. ಆದ್ರೆ ಹೋಟೆಲ್ ಎಂದ ತಕ್ಷಣ ಅಲ್ಲಿ ನಾನಾ ವಸ್ತುಗಳನ್ನ ಸ್ಥಾಪಿಸಬೇಕು, ಗುರುತ್ವ ಇಲ್ಲದೇ ಇದ್ರೆ ಅದೆಲ್ಲಾ ಸಾಧ್ಯವಿಲ್ಲ. ಹೀಗಾಗಿ ಸ್ಪೇಸ್ ಹೋಟೆಲ್‌ನಲ್ಲಿ ಚಂದ್ರನ ರೀತಿ ಅಲ್ಪಪ್ರಮಾಣದ ಗುರುತ್ವ ಇರುವಂತಹ ವಾತಾವರಣ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಇದು ಅತ್ಯಂತ ಕಷ್ಟದ ಕೆಲಸವಾದರೂ ಸಾಧಿಸಲು ಉತ್ಸಾಹ ತೋರಿಸಿರುವ ಬಹುರಾಷ್ಟ್ರೀಯ ಕಂಪನಿ, ಬಾಹ್ಯಾಕಾಶ ಹೋಟೆಲ್ ನಿರ್ಮಾಣಕ್ಕೆ ರೋಬೋಟ್‌ ಸಹಾಯ ಪಡೆಯಲು ಮುಂದಾಗಿದೆ. ಹೀಗಾಗಿ ಈ ಯೋಜನೆ ಸಂಪೂರ್ಣ ಭಿನ್ನವಾಗಿರಲಿದೆ.

ಬಾಹ್ಯಾಕಾಶ ಹೋಟೆಲ್ ಜೊತೆಗೆ ಮಂಗಳನಲ್ಲಿ ಲೇಔಟ್

ಬಾಹ್ಯಾಕಾಶ ಹೋಟೆಲ್ ಜೊತೆಗೆ ಮಂಗಳನಲ್ಲಿ ಲೇಔಟ್

ಮಂಗಳ ಗ್ರಹದ ಮೇಲೆ ಜೀವಿಸುವ ಮಾನವನ ಬಹುದಿನಗಳ ಕನಸು ನನಸಾಗುವ ಸುಳಿವು ಸಿಕ್ಕಿದೆ. ಭಾರತದ ಹೆಮ್ಮೆಯ ಇಸ್ರೋ, ಅಮೆರಿಕದ ನಾಸಾ, ಚೀನಾ, ಯುಎಇ ಸೇರಿ ಬಹುತೇಕ ರಾಷ್ಟ್ರಗಳು ಮಂಗಳನ ಮೇಲೆ ಕಣ್ಣು ಇಟ್ಟಿವೆ. ಹೀಗಾಗಿ ಭವಿಷ್ಯದಲ್ಲಿ ಬಾಹ್ಯಾಕಾಶ ಹೋಟೆಲ್ ಜೊತೆಗೆ ಮಂಗಳನಲ್ಲಿ ಲೇಔಟ್ ನಿರ್ಮಾಣ ಆಗೋದು ಪಕ್ಕಾ ಎನ್ನಬಹುದು. ಈಗಾಗಲೇ ಚಂದ್ರನ ಮೇಲೆ ಸೈಟ್ ಮಾಡಿ ಸೇಲ್ ಕೂಡ ಮಾಡಲಾಗಿದೆ. ಹೀಗೆ ಸದ್ಯದ ತಂತ್ರಜ್ಞಾನ ಹಾಗೂ ಅದು ಮುಂದುವರಿಯುತ್ತಿರುವ ರೀತಿ ನೋಡಿದರೆ ಮುಂದಿನ ದಿನಗಳಲ್ಲಿ ಮಾನವ ಬಾಹ್ಯಾಕಾಶವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡರೂ ಅಚ್ಚರಿಪಡಬೇಕಿಲ್ಲ.

English summary
Multinational company planning to construct a hotel in space by 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X