• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವನಗಾಥೆ ಬರೆದು 24 ವರ್ಷಕ್ಕೆ ಪ್ರೊಫೆಸರ್ ಹುದ್ದೆ ಪಡೆದ ಪ್ರತಿಭಾವಂತ

By ಅಶ್ವಿನಿ ಅನೀಶ್
|

ಜೀವನದ ಬಗ್ಗೆ ಪುಸ್ತಕ ಬರೆದು ಪ್ರೊಫೆಸರ್ ಉದ್ಯೋಗ ಪಡೆದ 24 ವರ್ಷ ವಯಸ್ಸಿನ ಋತುಪರ್ಣ ಶರ್ಮ. ಋತುಪರ್ಣ ಶರ್ಮ ಅವರು ಬರೆದಿರುವ 'ಇನ್ ದಿ ರಿದಂ ಆಫ಼್ ಸೈಲೆಂಸ್' ಪುಸ್ತಕದಲ್ಲಿ ಜೀವನದ ಸಣ್ಣ ಸಣ್ಣ ಪಾಠಗಳನ್ನು ಮೂವತ್ತು ಸರಳ ಕಥೆಗಳ ಮೂಲಕ ಹೇಳಲಾಗಿದೆ.

"ಜೀವನ ನಮಗೆ ಗುರು ಇದ್ದ ಹಾಗೆ. ನಾವು ಕಲಿಯೋದಕ್ಕೆ ತಯಾರಿದ್ದರೆ ಅದು ನಮಗೆ ಖಂಡಿತ ಕಲಿಸೋದಕ್ಕೆ ತಯಾರಿರುತ್ತದೆ. ಈ ಮಾತಿನಿಂದ ಪ್ರೇರಿತನಾಗಿ ನಾನು ಈ ಪುಸ್ತಕವನ್ನು ಬರೆದಿದ್ದೇನೆ.

ಇನ್ ದಿ ಫೀಲ್ಡ್: ಬೆಂಗಳೂರು ಹುಡುಗಿಯರ ವಿನೂತನ ಯೋಜನೆ

ಸೈಲೆಂಸ್, ಅಂದರೆ ಮೌನ. ಮೌನ ಎನ್ನುವುದು ಅನಂತವಾದದ್ದು. ಈ ಅನಂತವಾದುದನ್ನು ನಾವು ನಮಗೆ ಇಷ್ಟವಾದ ಕೆಲಸವನ್ನು ಮಾಡುವಾಗ ಕಾಣಬಹುದು. ಹೀಗೆ ಇಷ್ಟವಾದ ಕೆಲಸ ಮಾಡುತ್ತಾ ಅನಂತವಾದುದರಲ್ಲಿ ತಲ್ಲೀನರಾಗುವುದೇ ನನ್ನ ಪುಸ್ತಕದ ಶೀರ್ಷಿಕೆಯ ವಿಶ್ಲೇಷಣೆ" ಎನ್ನುತ್ತಾರೆ ಋತುಪರ್ಣ ಅವರು.

ಫೇಸ್ ಬುಕ್ ನ ಸೂಪರ್ ಸ್ಟಾರ್ 'ಬಾಜೂ ಮನಿ ಕಾಕು' ಸೋನು!

ಬಸವನಗುಡಿಯಲ್ಲಿರುವ ಅಂಕಿತ, ಆನ್ಲೈನ್ ನಲ್ಲಿ ಅಮೆಜಾನ್ ಹಾಗು ಮುಂತಾದ ಕಡೆಗಳಲ್ಲಿ ಈಗಾಗಲೇ ಲಭ್ಯವಿದ್ದರೂ ಇದನ್ನು ಗುರುತಿಸಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದು ಶಿಕ್ಷಣ ತಜ್ಞರು, ಲೇಖಕರು ಹಾಗು ವರ್ಣಚಿತ್ರಕಾರರಾದ ಗೋಲ್ಡಿ ಮಲ್ಹೋತ್ರ ಅವರು ಹಾಗು ಮೆಡ್‍ಯೂಎಸ್‍ಎ ಅಧ್ಯಕ್ಷರಾದ ಸೋನಲ್ ಜಿಂದಾಲ್ ಅವರು. ಮಾರ್ಚ್ 17, 2018 ರಂದು ಆಕ್ಸ್ ಫರ್ಡ್ ಪುಸ್ತಕ ಅಂಗಡಿಯಲ್ಲಿ ಉದ್ಘಾಟಿಸಲಾಗಿತ್ತು.

ಎಲ್ಲರೂ ದೊಡ್ಡ ಕನಸುಸುಗಳನ್ನು ಕಾಣಬೇಕು

ಎಲ್ಲರೂ ದೊಡ್ಡ ಕನಸುಸುಗಳನ್ನು ಕಾಣಬೇಕು

24 ವರ್ಷದ ಋತುಪರ್ಣ ಶರ್ಮ ಅವರು ಕ್ರೈಸ್ಟ್ ಕಾಲೇಜಿಂದ ಎಂ.ಕಾಂ ಪದವೀಧರರಾಗಿದ್ದು, ಅವರು ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರರು, ನಾಟಕಕಾರರು ಹಾಗು ಜೈನ್ ವಿದ್ಯಾಲಯದಲ್ಲಿ ಮೈಂಡ್ ಮಾನೇಜ್ಮೆಂಟ್ ಎನ್ನುವ ವಿಷಯದ ಉಪನ್ಯಾಸಕರಾಗಿದ್ದಾರೆ. ಎಲ್ಲರೂ ದೊಡ್ಡ ಕನಸುಸುಗಳನ್ನು ಕಾಣಬೇಕು ಎನ್ನುವುದು ಅವರ ದೃಷ್ಟಿಕೋನ. ಇವರು ರಾಜ್ಯದ ವಿವಿಧೆಡೆ ಬಹಳಷ್ಟು ಕಾರ್ಯಗಾರಗಳನ್ನು ನಡೆಸಿ ಯಶಸ್ಸನ್ನು ಪಡೆದಿದ್ದಾರೆ.

"ಒಮ್ಮೆ ನನ್ನ ಸ್ನೇಹಿತೆ ನನ್ನ ಬಳಿ ಬಂದು ತನ್ನ ಪ್ರಿಯಕರ ತನ್ನನ್ನು ಬಿಟ್ಟಿದ್ದರ ಬಗ್ಗೆ ಹೇಳಿಕೊಂಡು ಬೇಸರಿಸಿಕೊಂಡಿದ್ದರು. ಆ ಪರಿಸ್ಥಿತಿಯನ್ನು ಪರಿಶೀಲಿಸಿದಾಗ 'ಪ್ರೀತಿ' ಎನ್ನುವ ಶಬ್ದ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವಾಯಿತು. 'ಪ್ರೀತಿ' ಎನ್ನುವ ಭಾವನೆಯಿಂದ ಒಬ್ಬರು ಜೀವನದಲ್ಲಿ ಸರಿಯಾದ ದಾರಿಯ ಮೇಲೆ ನಡೆಯಲು ಸಹಾಯ ಮಾಡುತ್ತದೆ"

 'ವಿನ್ ವರ್ಲ್ಡ್ ಬೈ ಲವ್' ಎನ್ನುವ ಬ್ಲಾಗ್

'ವಿನ್ ವರ್ಲ್ಡ್ ಬೈ ಲವ್' ಎನ್ನುವ ಬ್ಲಾಗ್

ಪ್ರೀತಿ ಎನ್ನುವುದು ಹುಡುಗ ಹುಡುಗಿಯ ನಡುವಿನದ್ದಷ್ಟೇ ಅಲ್ಲ. ಪ್ರೀತಿ ಎನ್ನುವುದು ತಾಯಿ ಮಗುವಿನ ನಡುವೆ ಆಗಿರ ಬಹುದು, ಸ್ನೇಹಿತರ ನಡುವಿನ ಪ್ರೀತಿಯಾಗಿರಬಹುದು ಅಥವಾ ಜಗತ್ತಿನ ಯಾವುದೇ ಸಂಬಂಧದ ನಡುವೆ ಇರಬಹುದು. ಒಬ್ಬ ಮನುಷ್ಯನಿಂದ ದೊರೆಯುವ ಪ್ರೀತಿ ಅಷ್ಟು ಪ್ರಬಲವಾಗಿದ್ದರೆ, ಜಗತ್ತಿನಲ್ಲಿರುವ ಎಲ್ಲರ ಪ್ರೀತಿ ದೊರೆಯುವುದು ಮತ್ತೆಷ್ಟು ಪ್ರಬಲವಾಗಿರುತ್ತದೆ. ಇದರ ಆಧಾರದ ಮೇಲೆ 'ವಿನ್ ವರ್ಲ್ಡ್ ಬೈ ಲವ್' ಎನ್ನುವ ಬ್ಲಾಗ್ ಒಂದನ್ನು ಆರಂಭಿಸಿದ್ದರು. ಈ ಬ್ಲಾಗ್ ಜೀವನದ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳುತ್ತವೆ," ಎನುತ್ತಾರೆ ಋತುಪರ್ಣ ಅವರು.

ಬ್ಲಾಗ್ ಅನ್ನು ಮೂರೂವರೆ ವರ್ಷ ಬರೆದ ನಂತರ, ಋತುಪರ್ಣ ಅವರ ಸ್ನೇಹಿತರು ಒಂದು ಪುಸ್ತಕ ಬರೆಯುವುದಾಗಿ ಸಲಹೆ ನೀಡಿದರು. ಮಹತ್ರಯಿ ಎನ್ನುವ ಲೇಖಕರನ್ನು ಅನುಸರಿಸುವ ಋತುಪರ್ಣ ಅವರು ಪುಸ್ತಕ ಬರೆಯುವ ನಿರ್ಧಾರ ತೆಗೆದುಕೊಂಡರು.

ನಗರದಲ್ಲಿ ಬಹಳಷ್ಟು ಗೊಂದಲಗಳಿಂದ ಕೂಡಿದ್ದರಿಂದ, ಅವರು ಕೇರಳದ ವಾಯ್ನಾಡ್ ಎಂಬ ಊರಿಗೆ ಹೋಗಿ ದಿನದಲ್ಲಿ 6-8 ಘಂಟೆಗಳ ಹಾಗೆ ಸತತವಾಗಿ ಮೂರು ದಿನ ಕುಳಿತುಕೊಂಡು ಪುಸ್ತಕವನ್ನು ಬರೆದರು. ಆ ಕ್ಷಣಗಳು ಬಹಳ ಅಪೂರ್ವವಾದದ್ದು ಹಾಗು ಉಲ್ಲಾಸಕರವಾಗಿದ್ದವು ಎಂದು ಋತುಪರ್ಣ ಅವರು ವಿವರಿಸುತ್ತಾರೆ. ಬರೆಯುವುದೊಂದೇ ತನ್ನ ಧ್ಯೇಯವಾಗಿತ್ತು.

ಜೈನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ

ಜೈನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ

"ನನ್ನ ಕಾಲೇಜು ದಿನಗಳಲ್ಲಿ ನಾನು ಒಂದು ದಿನವೂ ಪಾಠವನ್ನು ಬರೆದುಕೊಂಡವನಲ್ಲ. ಆದರೆ ಈಗ ಬರೆಯುವುದನ್ನು ನಿಲ್ಲಿಸುವುದು ಹೇಗೆ ಎಂದು ತಿಳಿಯುತ್ತಿಲ್ಲ. ಈಗ ಬರೆಯುವುದು ನನ್ನ ಜೀವನದ ಮುಖ್ಯ ಅಂಶವಾಗಿದೆ," ಎನ್ನುತ್ತಾರೆ ಋತುಪರ್ಣ ಅವರು.

ಈ ಪುಸ್ತಕ ಅವರಿಗೆ ಒಳ್ಳೆ ಹೆಸರನ್ನಷ್ಟೆ ಅಲ್ಲ, ಒಂದು ನೌಕರೀ ಕೂಡ ತಂದು ಕೊಟ್ಟಿದೆ. ಈ ಪುಸ್ತಕವನ್ನು ಜೈನ್ ಕಾಲೇಜಿನ ಉಪನ್ಯಾಸಕರೊಬ್ಬರು ಓದಿ ಇವರನ್ನು ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳ ಬೇಕೆಂದು ಸೂಚಿಸಿದರು. ಅದರಂತೆಯೇ ಅವರು ಈಗ ಜೈನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಮಾಡುತ್ತಿದ್ದಾರೆ.

ಒಬ್ಬ ಲೇಖಕನು ತನ್ನ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಒಂದು ಹಾಳೆಯ ಮೇಲೆ ಬರೆಯುವುದರ ಮೂಲಕ ವ್ಯಕ್ತಪಡಿಸಿದರೆ ಅದೇ ಲೇಖಕನ ನಿಜವಾದ ಯಶಸ್ಸು.

"ನಮ್ಮ ಜೀವನದಲ್ಲಿ ಘಟನೆಗಳು ನಡೆದಾಗ ಅದನ್ನು ಆತ್ಮಾವಲೋಕನ ಮಾಡುವ ಅವಕಾಶವನ್ನು ಕಳೆದುಕೊಂಡಿರುತ್ತೇವೆ. ಆದರೆ ಋತುಪರ್ಣ ಅವರು ಆ ಘಟನೆಗಳನ್ನು ನಮಗಾಗಿ ಅವಲೋಕಿಸಿ ಸಣ್ಣ ಕಥೆಗಳ ಮೂಲಕ ನಮ್ಮ ಮುಂದೆ ಇಟ್ಟಿದ್ದಾರೆ," ಎನ್ನುತ್ತಾರೆ ದರ್ಶನ್ ಕುಲದೀಪ್, ಖಾಸಗಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವವರು ಹಾಗು ಪುಸ್ತಕದ ಓದುಗರು.

ಕಥೆ ಹೇಳುವವರೆಂದು ಕರೆದುಕೊಳ್ಳುವುದು ಹೆಚ್ಚು ಇಷ್

ಕಥೆ ಹೇಳುವವರೆಂದು ಕರೆದುಕೊಳ್ಳುವುದು ಹೆಚ್ಚು ಇಷ್

"ಜೀವನದ ಮುಖ್ಯ ಘಟ್ಟವನ್ನು ಆರಂಭಿಸುವಾಗ ಈ ಪುಸ್ತಕ ಬಹಳ ಸಹಾಯವಾಗುತ್ತದೆ. ಬದುಕಿನ ಒಂದು ಹೊಸ ಆಯಾಮವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಈ ಪುಸ್ತಕ ಓದುವುದರಿಂದ ಬದುಕನ್ನು ಆಶಾದಾಯಕವಾಗಿ ನೋಡಲು ಸಾಧ್ಯವಾಗುತ್ತದೆ," ಎನ್ನುತ್ತಾರೆ ವರ್ಷಿಣಿ ಭಾರಧ್ವಾಜ್, ಕಾನೂನಿನ ವಿದ್ಯಾರ್ಥಿನಿ.

ಈ ಪುಸ್ತಕದ ಮೊತ್ತ 175 ರೂಪಾಯಿ ಆಗಿದ್ದು, ಇದರ ವಿನ್ಯಾಸ ಋತುಪರ್ಣ ಅವರ ಸ್ನೇಹಿತರು ಪ್ರಹ್ಲಾದ್ ಅವರು ತೆಗೆದುಕೊಂಡಿದ್ದರೆ, ಋತುಪ್ರಣ ಅವರೇ ಅದರ ಮುದ್ರಣವನ್ನು ಮಾಡಿಕೊಂಡಿದ್ದಾರೆ.

ಋತುಪರ್ಣ ಅವರು ತಮ್ಮನ್ನು ಉಪನ್ಯಾಸಕರು ಎಂದು ಕರೆದುಕೊಳ್ಳುವುದಕ್ಕಿಂತ ಕಥೆ ಹೇಳುವವರೆಂದು ಕರೆದುಕೊಳ್ಳುವುದು ಹೆಚ್ಚು ಇಷ್ಟ ಪಡುತ್ತಾರೆ. ಇವರ ತಂದೆ ತಾಯಿ ಆದ ಸುಬ್ರಹ್ಮಣ್ಯ ಹಾಗು ಪದ್ಮ ಅವರು ಮಗನ ಪ್ರಯತ್ನಗಳಿಗೆ ಬೆಂಗಾವಲಾಗಿದ್ದಾರೆ. ಅವರ ವೃತ್ತಿ ಹಾಗು ಬರವಣಿಗೆ ಒಂದಕ್ಕೊಂದು ಸ್ಫೂರ್ತಿಯಾಗಿವೆ.

ಇವು ರಂಗಾರ್ತಿ ಎನ್ನುವ ನಾಟಕ ಗುಂಪಿನಲ್ಲಿದ್ದು, ಇದುವರೆಗು 'ನಾವು ನಾಟಕ ಮಾಡ್ತಿಲ್'ಲ, ದೇವರೇ ಕಾಪಾಡಬೇಕು, ನೀವು ಕರೆ ಮಾಡುತ್ತಿರುವ ಚಂದಾದಾರರು ಹಾಗು ಮುಂತಾದವು ತೆರೆ ಕಂಡಿವೆ

ಋತುಪರ್ಣ ಅವರು 'ಲೈಫ್ ಲೆಸ್ಸನ್ಸ್' ಎನ್ನುವ ಮತ್ತೊಂದು ಪುಸ್ತಕ ಬರೆಯುವ ಪ್ರಯತ್ನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru : Meet 24 Year old Ruthuparna Sharma- M Com graduate from Christ College pens book on life, Jain College hired him as Professor.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more