Bengaluru Airport: ನೀವು ಮೊದಲ ಬಾರಿ ವಿಮಾನ ಪ್ರಯಾಣ ಮಾಡ್ತಿದಿರಾ? ಹಾಗಾದ್ರೆ ಇವೆಲ್ಲ ನಿಮಗೆ ಗೊತ್ತಿರಲಿ.
ಬೆಂಗಳೂರು, ಫೆಬ್ರವರಿ 16: ಬೆಂಗಳೂರಿನಲ್ಲಿ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಎರಡನೇ ವಿಮಾನ ನಿಲ್ದಾಣ (Bengaluru 2nd Airport) ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರು ಇಂದಿನ ದಿನಗಳಲ್ಲಿ ವಿಮಾನ ಜರ್ನಿ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಮಿಡ್ಲ್ ಕ್ಲಾಸ್ ಹುಡುಗರಿಗೆ ತಮ್ಮ ಅಪ್ಪ, ಅಮ್ಮ ಮತ್ತು ತಾವು, ತಮ್ಮಿಷ್ಟದವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ಇಷ್ಟಪಡುತ್ತಾರೆ. ಅಂತವರಿಗಾಗಿ ಇಲ್ಲೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ. ನೀವು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುವವರಾಗಿದ್ದರೆ ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು.
ವಿಮಾನ ಹತ್ತುವ ಕನಸು ಇಂದಿನ ದಿನಗಳಲ್ಲಿ ನನಸು ಮಾಡಿಕೊಳ್ಳುವುದು ತುಂಬಾ ಸುಲಭ, ದೇಶಿಯ ವ್ಯಾಪ್ತಿಯಲ್ಲೂ ಮತ್ತು ಕರ್ನಾಟಕದ ಒಳಗೋ ನೀವು ಅಂತಾರಾಜ್ಯದಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು. ತಿಂಗಳು, ವಾರಗಳ ಮೊದಲೇ ವಿಮಾನ ಬುಕ್ ಮಾಡಿದರೆ ಕೈಗೆಟುಕುವ ಬೆಲೆಯಲ್ಲಿ ಪ್ರಯಾಣ ಮಾಡಬಹುದು. ತುರ್ತು ಸಂದರ್ಭಕ್ಕಾಗಿ ವಿಮಾನ ಜರ್ನಿ ದುಬಾರಿ ಎನ್ನಿಸುತ್ತದೆ.

ಮೊದಲ ಬಾರಿ ವಿಮಾನ ಪ್ರಯಾಣ ವೇಳೆ ಇವು ಗೊತ್ತಿರಲಿ!
* ನೀವು ದೇಶದೊಳಗಿನ ಬೇರೆ ಬೇರೆ ರಾಜ್ಯ, ಪ್ರದೇಶಗಳಿಗೆ ತೆರಳುವವರಾದರೆ, ನೀವು ಹೊರಡುವ ವಿಮಾನ ನಿಲ್ದಾಣಕ್ಕೆ 1.30 ಗಂಟೆ ಸಮಯ ಮುಂಚಿತವಾಗಿ ತಲುಪಿರಬೇಕು.
* ಉದಾಹರಣೆಗೆ ನೀವು ಬೆಂಗಳೂರಿನಿಂದ ವಿದೇಶಗಳಿಗೆ ಹೊರಟಿದ್ದರೆ ಅಂತ ಅಂತಾರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3 ಗಂಟೆ ಮೊದಲೇ ಇರಬೇಕು.
* ನಿಲ್ದಾಣ ಪ್ರವೇಶಿಸುತ್ತಿದ್ದಂತೆ ವಿಮಾನ ಟಿಕೆಟ್ ಜೊತೆಗೆ ಗುರುತಿಸಿ ಚಿಟಿ (ಐಡಿ) ಒಯ್ಯುವುದು ಕಡ್ಡಾಯವಾಗಿರುತ್ತದೆ. ಐಟಿ ತೋರಿಸಿದರೆ ನಿಮಗೆ ಪ್ರವೇಶ ಅನುಮತಿಸುತ್ತಾರೆ.
* ಏರ್‌ಪೋರ್ಟ್ ಮುಖ್ಯ ದ್ವಾರದಲ್ಲಿ ಪ್ರವೇಶಿಸುತ್ತಿದ್ದಂತೆ ನೀವು ಮೊದಲು ನಿಮ್ಮ ವಿಮಾನದ ಸರಿಯಾದ ಸಮಯವನ್ನು ಎಲ್‌ಇಡಿ ಸ್ಕ್ರೀನ್‌ನಲ್ಲಿ ಚೆಕ್ ಮಾಡಿಕೊಳ್ಳಬೇಕು. ತಡವಾಗಿ ಬರುವುದಿದ್ದರೆ ಅಲ್ಲಿ ಗೊತ್ತಾಗುತ್ತದೆ.
* ನಂತರ ನೀವು ನೇರವಾಗಿ ಫ್ಲೈಟ್ ಕೌಂಟರ್ ಬಳಿ ತೆರಳಿ ನಿಮ್ಮ ಬ್ಯಾಗ್ ಇಟ್ಟು ಬೋರ್ಡಿಂಗ್ ಪಾಸ್ ಅನ್ನು ಕಡ್ಡಾಯವಾಗಿ ಪಡೆಯಬೇಕು.
* ವಿಮಾನ ಪ್ರಯಾಣ ವೇಳೆ ಅತ್ಯಧಿಕ ಬಾರದ ವಸ್ತುಗಳಿಗೆ ಪ್ರವೇಶ ಇರುವುದಿಲ್ಲ. ನಿಮ್ಮ ಕೈಯಲ್ಲಿ 07 ಕೆ.ಜಿ. ತೂಕದ ಬ್ಯಾಗ್ ಒಯ್ಯಬಹುದು. ಮತ್ತೊಂದು 15 ಕೆ.ಜಿ. ತೂಕಕ್ಕಿಂತ ಜಾಸ್ತಿ ಇರಬಾರದು.

* ನಂತರ ನೀವು ಭದ್ರತಾ (ಸೆಕ್ಯೂರಿಟಿ) ಚೆಕ್ಕಿಂಗ್ ಗೆಒಳಪಡುತ್ತೀರಾ. ಅಲ್ಲಿ ಬ್ಯಾಗ್, ನಿಮ್ಮ ಪರ್ಸ್, ವಾರ್ಚ್, ಬೆಲ್ಟ್, ಶೂ ಸೇರಿದಂತೆ ಪ್ರತಿಯೊಂದನ್ನು ಪರಿಶೀಲಿಸುತ್ತಾರೆ. ನಿಮ್ಮನ್ನು ವಾಹಕಗಳಿಂದ ಪರಿಶೀಲಿಸುತ್ತಾರೆ. ಪರೀಕ್ಷೆ ಬಳಿಕ ಹ್ಯಾಂಡ್ ಬ್ಯಾಗ್‌ಗೆ ಎಲ್ಲ ವಸ್ತುಗಳನ್ನು ಹಾಕಿಕೊಳ್ಳಬೇಕು.
* ಈ ತಪಾಸಣೆ ಬಳಿಕ ನೀವು ಬೋರ್ಡಿಂಗ್ ಆಗಿದ್ದೀರಿ ಎಂದು ತಿಳಿಯಬೇಕು. ಅಲ್ಲಿಂದ ನೇರವಾಗಿ ಬೋರ್ಡಿಂಗ್ ಪಾಸ್‌ನಲ್ಲಿ ತಿಳಿಸಿರುವ ಬೋರ್ಡಿಂಗ್ ಗೇಟ್ ಬಳಿ ಹೋಗಬೇಕು. ವಿಮಾನ ತಡವಾಗಿ ಬರುವುದಿದ್ದರೆ ಅಲ್ಲಿಯೇ ವಿಶ್ರಾಂತಿ ಮಾಡಬಹುದು.
* ಬೋಡಿಂಗ್ ಗೆಟ್‌ನಿಂದ ನಿಮ್ಮ ಆಧಾರ್, ಟಿಕೆಟ್ ಪರಿಶೀಲಿಸುವ ಸಿಬ್ಬಂದಿ ವಿಮಾನದ ಬಳಿ ಕರೆದೊಯ್ಯುವ ಬಸ್ ಬಳಿಗೆ ನಿಮ್ಮನ್ನು ಕರೆದೊಯ್ಯುತ್ತಾರೆ. ಅಲ್ಲಿಂದ ನೀವು ಬಸ್ ಹತ್ತಬೇಕು.
* ಬೋಡಿಂಗ್ ಪಾಯಿಂಟ್‌ನಿಂದ ಹತ್ತುವ ಬಸ್ ನಿಮ್ಮನ್ನು ವಿಮಾನ ಇರುವ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ಕರೆದುಕೊಂಡು ಹೋಗುತ್ತದೆ. ಬಸ್ ಇಳಿದ ತಕ್ಷಣ ಪ್ರಯಾಣದ ವಿಮಾನ ಹತ್ತಿ, ಒಳಗೆ ಟಿಕೆಟ್‌ನಲ್ಲಿ ಇರುವ ಸೀಟು ಸಂಖ್ಯೆ ನೋಡಿಕೊಂಡು ಕೂತು ಪ್ರಯಾಣ ಮಾಡಬಹುದು.












Click it and Unblock the Notifications