• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!

|
Google Oneindia Kannada News

ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಈ ಸಾಲು ಸದಾಕಾಲ ಸರ್ವರಿಗೂ ಚಿರಪರಿಚಿತವಾಗಿ ಇರುತ್ತದೆ. ಎಣ್ಣೆ ಕುಡಿದರೆ ಕರಳು ಸುಟ್ಟು ಹೋಗುತ್ತೆ ಎಂದು ಎಷ್ಟೋ ತಜ್ಞರು ಹೇಳೋದನ್ನು ಕೇಳಿರುತ್ತೀರಿ. ಇದರ ಮದ್ಯೆ ಮದ್ಯಪ್ರಿಯರು ಖುಷಿ ಪಡುವ ಸುದ್ದಿಯೊಂದು ಹೊರ ಬಿದ್ದಿದೆ.

ಮದ್ಯಪಾನ ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಯು ನಿವಾರಣೆ ಆಗುತ್ತದೆ. ಮದ್ಯಪಾನದಿಂದ ನಿಮ್ಮ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಹೇಳುವ ವಿಭಿನ್ನ, ವಿಶೇಷ ಹಾಗೂ ಅಚ್ಚರಿ ಮೂಡಿಸುವಂತಹ ಸಮೀಕ್ಷೆಯೊಂದು ಪ್ರಕಟವಾಗಿದೆ.

ಬಿಯರ್ ಪ್ರಿಯರೇ ಓದಿ: ಇದೊಂದು ರಾಷ್ಟ್ರದಲ್ಲಿ ಮೂತ್ರದಿಂದ ಬಿಯರ್ ಉತ್ಪಾದನೆ!ಬಿಯರ್ ಪ್ರಿಯರೇ ಓದಿ: ಇದೊಂದು ರಾಷ್ಟ್ರದಲ್ಲಿ ಮೂತ್ರದಿಂದ ಬಿಯರ್ ಉತ್ಪಾದನೆ!

ಬಿಯರ್ ಕುಡಿದರೆ ಕರುಳಿನ ಸಮಸ್ಯೆ ಕಾಡುವುದಿಲ್ಲ, ಮಧುಮೇಹದ ಸಮಸ್ಯೆ ಅಂಟಿಕೊಳ್ಳುವುದಿಲ್ಲ, ಬೊಜ್ಜು ಕಡಿಮೆಯಾಗುತ್ತದೆ. ಹೀಗೆ ಹಲವು ಆರೋಗ್ಯಕರ ಅಂಶಗಳನ್ನು ವಿಭಿನ್ನ ಸಮೀಕ್ಷಾ ವರದಿಯು ತಿಳಿಸಿದೆ. ಮದ್ಯಪ್ರಿಯ ಮುಖದಲ್ಲಿ ಮಂದಹಾಸ ಮೂಡಿಸುವ, ಕುಡುಕರಿಗೆ ಖುಷಿ ಕೊಡುವ ಸಮೀಕ್ಷೆಯಲ್ಲಿ ಒಟ್ಟಾರೆ ಏನೆಲ್ಲಾ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ದೀರ್ಘಕಾಲಿಕ ರೋಗಗಳಿಗೆ ಮದ್ದು ಈ ಬಿಯರ್!

ದೀರ್ಘಕಾಲಿಕ ರೋಗಗಳಿಗೆ ಮದ್ದು ಈ ಬಿಯರ್!

ಬಿಯರ್ ಕುಡಿಯುವುದು ಕರುಳಿಗೆ ಪ್ರಯೋಜನಕಾರಿ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವೊಂದು ಹೇಳಿದೆ. ಬಿಯರ್ ಕರುಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಬಿಯರ್‌ನಲ್ಲಿರುವ ಪಾಲಿಫಿನಾಲ್ ಅಂಶವು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಆಗಿರುತ್ತದೆ. ರೆಡ್ ವೈನ್‌ನಲ್ಲಿ ಪಾಲಿಫಿನಾಲ್‌ಗಳ ಪ್ರಯೋಜನಗಳು ಎಷ್ಟರ ಮಟ್ಟಿಗೆ ಉಪಯೋಗಕಾರಿ ಎಂಬುದನ್ನು ಸಂಶೋಧಕರು ಈಗಾಗಲೇ ಸಾಬೀತುಪಡಿಸಿದ್ದಾರೆ. ಈ ಅಂಶವನ್ನು ಸಹ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಹಾಗಿದ್ದರೆ ಈ ಪಾಲಿಫಿನಾಲ್ ಅಂಶವು ಹೇಗೆ ರೋಗದಿಂದ ರಕ್ಷಣೆ ಒದಗಿಸುತ್ತದೆ ಎಂಬುದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ.

ದೇಹದಲ್ಲಿ ಪಾಲಿಫಿನಾಲ್ ಹೇಗೆ ಕೆಲಸ ಮಾಡುವುದು?

ದೇಹದಲ್ಲಿ ಪಾಲಿಫಿನಾಲ್ ಹೇಗೆ ಕೆಲಸ ಮಾಡುವುದು?

ಸಾಮಾನ್ಯವಾಗಿ ಬಿಯರ್‌ನಲ್ಲಿ ಪಾಲಿಫಿನಾಲ್ ಎಂಬ ಅಂಶವಿರುತ್ತದೆ. ಈ ಪಾಲಿಫಿನಾಲ್ ಅಂಶವು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅದೇ ರೀತಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳೆಂದು ಕರೆಯಲ್ಪಡುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಕ್ಯಾರೊಟಿನಾಯ್ಡ್‌ಗಳು ದೇಹದ ಅಂಗಾಂಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಕ್ಯಾನ್ಸರ್, ಪರಿಧಮನಿಯ ಹೃದಯ ಕಾಯಿಲೆ ಮತ್ತು ಉರಿಯೂತದಂತಹ ಸಂಬಂಧಿತ ರೋಗಗಳಿಂದ ರಕ್ಷಿಸುತ್ತವೆ.

ಯಾವ ರೋಗಗಳಿಂದ ರಕ್ಷಣೆ ನೀಡುವುದು ಬಿಯರ್?

ಯಾವ ರೋಗಗಳಿಂದ ರಕ್ಷಣೆ ನೀಡುವುದು ಬಿಯರ್?

ಸಾಮಾನ್ಯವಾಗಿ ಬಿಯರ್ ಸೇವಿಸುವುದರಿಂದ ಹಲವು ದೀರ್ಘಕಾಲಿಕ ರೋಗಗಳಿಂದ ರಕ್ಷಣೆ ಸಿಗಲಿದೆ. ಈ ಪೈಕಿ ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಈ ರೋಗಗಳಿಂದ ರಕ್ಷಣೆಯನ್ನು ಹೊಂದುವುದರ ಜೊತೆಗೆ ಬಿಯರ್ ಸೇವನೆಯಿಂದಾಗಿ ಕರುಳಿನ ಮೈಕ್ರೋ-ಬಯೋಟಾದ ಸಂಯೋಜನೆಯನ್ನು ಸುಧಾರಿಸಬಹುದು ಎಂದು ಅಧ್ಯಯನವು ತಿಳಿಸಿದೆ.

ಫೋರ್ಚುಗಲ್ ಸಂಶೋಧನಾ ಕೇಂದ್ರವು ಹೇಳಿದ್ದೇನು?

ಫೋರ್ಚುಗಲ್ ಸಂಶೋಧನಾ ಕೇಂದ್ರವು ಹೇಳಿದ್ದೇನು?

"ಕರುಳಿನ ಮೈಕ್ರೋ-ಬಯೋಟಾದ ಸಂಯೋಜನೆಯ ಬಿಯರ್ ಸೇವನೆಯು ಹೆಚ್ಚು ಉಪಯುಕ್ತವಾಗಿರುತ್ತದೆ. ಇದರ ಜೊತೆಗೆ ಬೊಜ್ಜು, ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ಸಾಮಾನ್ಯ ದೀರ್ಘಕಾಲದ ಕಾಯಿಲೆಗಳ ತಡೆಗಟ್ಟುವಿಕೆಗೆ ಸಂಬಂಧಿಸಿದೆ," ಎಂದು ಉತ್ತರ ಪೋರ್ಚುಗಲ್‌ನ ಪೋರ್ಟೊ ನಗರದಲ್ಲಿನ ಸೆಂಟರ್ ಫಾರ್ ರಿಸರ್ಚ್ ಇನ್ ಹೆಲ್ತ್ ಟೆಕ್ನಾಲಜೀಸ್ ಅಂಡ್ ಸರ್ವೀಸಸ್ (CINTESIS) ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಬಿಯರ್ ಸಂಬಂಧಿತ ಸಂಶೋಧನೆ ನಡೆದಿದ್ದು ಹೇಗೆ?

ಬಿಯರ್ ಸಂಬಂಧಿತ ಸಂಶೋಧನೆ ನಡೆದಿದ್ದು ಹೇಗೆ?

ಸಾಮಾನ್ಯವಾಗಿ 23 ರಿಂದ 58 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರನ್ನು ಒಳಗೊಂಡಂತೆ ಈ ಅಧ್ಯಯನವನ್ನು ನಡೆಸಲಾಯಿತು. ಸಂಶೋಧನೆಯಲ್ಲಿ ಭಾಗವಹಿಸಿದ ಪುರುಷರಿಗೆ ನಾಲ್ಕು ವಾರಗಳವರೆಗೆ ಪ್ರತಿನಿತ್ಯ ಆಲ್ಕೋಹಾಲ್ ಅಥವಾ ವಿಥೌಟ್ ಅಲ್ಕೋಹಾಲ್ ಉಳ್ಳ 330 ಮಿಲಿ ಮೀಟರ್ ಬಿಯರ್ ಕುಡಿಯುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ CINTESIS ನಡೆಸಿದ ಸಂಶೋಧನೆಯಿಂದ ಬಿಯರ್ ಸೇವನೆಯು ತೂಕ ಮತ್ತು ಕೊಬ್ಬಿನ ಅಂಶವನ್ನು ಹೆಚ್ಚಿಸುವುದಿಲ್ಲ, ಕರುಳಿನ ಸಮಸ್ಯೆಯಿಂದ ರಕ್ಷಣೆಯನ್ನು ನೀಡುತ್ತದೆ ಎಂದು ತಿಳಿದು ಬಂದಿದೆ.

Recommended Video

   Petromax ಚಿತ್ರ ನೋಡೋ ಡೆಲಿವರಿ ಬಾಯ್ ಗಳಿಗೆ ನೀನಾಸಂ ಸತೀಶ್ ಕಡೆಯಿಂದ ಫ್ರೀ ಟಿಕೆಟ್ | *Entertainment | OneIndia
   English summary
   A recent study has found that beer consumption increases the diversity of the intestinal microbiota, without increasing weight and fat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X