ಪ್ರವಾಸಿ ಪ್ರಿಯರಿಗೆ ಗುಡ್‌ ನ್ಯೂಸ್: ಭರಚುಕ್ಕಿ, ಹೊಗೆನಕಲ್ ಜಲಪಾತ ಪ್ರವಾಸಿಗರಿಗೆ ಮುಕ್ತ

ಚಾಮರಾಜನಗರ,ಜುಲೈ 23 : ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಹಾಗೂ ಹನೂರು ತಾಲೂಕಿನ ಹೊಗೇನಕಲ್ ಜಲಪಾತಗಳಿಗೆ ವಿಧಿಸಿದ್ದ ಪ್ರವಾಸಿಗರ ಪ್ರವೇಶ ನಿರ್ಬಂಧ ಆದೇಶವನ್ನು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಹಿಂಪಡೆದಿದ್ದಾರೆ.

ಕೇರಳದ ವೈನಾಡು ಮತ್ತು ಕಾವೇರಿ ಸೀಮೆಯಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಭರಚುಕ್ಕಿ ಜಲಪಾತ ಹಾಗೂ ಹೊಗೆನಕಲ್ ಜಲಪಾತ ಅಪಾಯಕಾರಿಯಾಗಿ ಭೋರ್ಗರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಈಗ ಮಳೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕಾವೇರಿ ಹಾಗೂ ಕಬಿನಿ ನದಿಗಳಲ್ಲಿ ನೀರಿನ ಹರಿವು ಇಳಿದಿರುವುದರಿಂದ ಪ್ರವಾಸಿಗರಿಗಿದ್ದ ನಿರ್ಬಂಧವನ್ನು ವಾಪಾಸ್ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಭರಚುಕ್ಕಿ ಜಲಪಾತಕ್ಕೆ ಜನಸಾಗರವೇ ಹರಿದುಬರುತ್ತಿತ್ತು, ನಿರ್ಬಂಧ ಹೇರಿದ ಬಳಿಕ ನೂರಾರು ಮಂದಿ ನಿರಾಸೆ ಮೊಗ ಹೊತ್ತು ಹಿಂತಿರುಗುತ್ತಿದ್ದರು. ಈಗ, ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಮತ್ತೇ ಪ್ರವಾಸಿತಾಣಗಳು ಗಿಜಿಗುಡಲಿದೆ. ಅದರಲ್ಲೂ ವಾರಂತ್ಯದಲ್ಲಿ ಜಿಲ್ಲಾಧಿಕಾರಿ ಈ ನಿರ್ಧಾರ ತೆಗೆದುಕೊಂಡಿರುವುದು ಪ್ರವಾಸಿ ಪ್ರಿಯರಿಗೆ ಜಲಪಾತಗಳ ವೈಭೋಗ ಕಣ್ತುಂಬಿಕೊಳ್ಳಲು ಸದಾವಕಾಶ ಸಿಕ್ಕಿದೆ.

Ban on visiting Bharachukki, hogenakal falls lifted from Chamrajanagara DC

ಕೆಎಸ್‌ಆರ್‌ಟಿಸಿಯಿಂದ ಭರ್ಜರಿ ಆಫರ್
ಕೆಎಸ್ಆರ್​ಟಿಸಿ ಭರ್ಜರಿ ಆಫರ್​ಗಳನ್ನು ಘೋಷಿಸುತ್ತಿದೆ, ಈಗಾಗಲೇ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ವೀಕೆಂಡ್ ಆಫರ್ ಘೋಷಿಸಿತ್ತು. ಇದೀಗ ಕೆಎಸ್​ಆರ್​ಟಿಸಿ ಜೊತೆ ಜೊತೆಗೆ ಸೋಮನಾಥಪುರ, ತಲಕಾಡು, ಗಗನಚುಕ್ಕಿ, ಭರಚುಕ್ಕಿ, ಜಲಪಾತಗಳಿಗೂ ಭರ್ಜರಿ ಆಫರ್ ಘೋಷಿಸಿದೆ. ಜುಲೈ 23ರಿಂದಲೇ ಈ ವಿಶೇಷ ಪ್ರವಾಸದ ಪ್ಯಾಕೇಜ್‌ ಘೋಷಣೆ ಮಾಡಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಬಸ್‌ ಹೊರಡಲಿದ್ದು, ಮದ್ದೂರು ಮೂಲಕ 9ಗಂಟೆಗೆ ಸೋಮನಾಥಪುರ, ನಂತರ ತಲಕಾಡು,ಭರಚುಕ್ಕಿ-ಗಗನ ಚುಕ್ಕಿಗೆ ಹೋಗಲಿದೆ.

Ban on visiting Bharachukki, hogenakal falls lifted from Chamrajanagara DC

ಒಂದೇ ದಿನ ನಾಲ್ಕೈದು ಪ್ರವಾಸಿ ತಾಣಗಳನ್ನು ನೋಡುವ ಅವಕಾಶವನ್ನು ಕೆಎಸ್‌ಆರ್‌ಟಿಸಿ ಒದಗಿಸಿಕೊಟ್ಟಿದೆ. ವಯಸ್ಕರಿಗೆ 400 ರೂ, 6ರಿಂಧ 12 ವರ್ಷದ ಮಕ್ಕಳಿಗೆ 250 ರೂ ಹಣ ನಿಗಧಿ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಮುಂಗಡವಾಗಿಯೂ ಟಿಕೆಟ್ ಬುಕ್‌ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+