ಮಕ್ಕಳಿಲ್ಲದ ದಂಪತಿಗಳ ಆಶಾಕಿರಣ ಈ ನಾಟಿ ವೈದ್ಯೆ ಚನ್ನಪಟ್ಟಣದ ಲಕ್ಷ್ಮಮ್ಮ
ರಾಮನಗರ, ಅಕ್ಟೋಬರ್ 10: ಹೆಣ್ಣುತನ ಪರಿಪೂರ್ಣ ವಾಗಬೇಕಾದರೆ ತಾಯ್ತನದ ಸವಿ ಅನುಭವಿಸಬೇಕು. ದಾಂಪತ್ಯ ಜೀವನದಲ್ಲಿ ಮಕ್ಕಳಾದರೆ ಆ ಸಂಸಾರ ಅನಂದ ಸಾಗರವಾಗಿರುತ್ತದೆ. ಮದುವೆಯಾದ ಒಂದರಿಂದ ಎರಡು ವರ್ಷದಲ್ಲಿ ಪ್ರತಿಯೊಬ್ಬರು ಮಕ್ಕಳನ್ನು ಪಡೆಯುವ ಹಂಬಲ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ಬಂಜೆತನ ಜನರನ್ನು ಶಾಪವಾಗಿ ಕಾಡುತ್ತಿದೆ. ಮಕ್ಕಳಿಲ್ಲದವರ ಬಾಳಲ್ಲಿ ನಾಟಿ ಪದ್ಧತಿಯ ಮಹಿಳಾ ವೈದ್ಯೆ ಲಕ್ಷ್ಮಮ್ಮ ಬೆಳಕಾಗಿದ್ದಾರೆ.
ಅಧುನಿಕ ಜೀವನ ಶೈಲಿ , ಸತ್ವವಿಲ್ಲದ ಊಟೋಪಚಾರ, ಕಲವೊಂದು ತಪ್ಪು ನಿರ್ಧಾರ, ಇನ್ನೂ ಆನೇಕ ಕಾರಣಗಳಿಂದ ಸ್ತ್ರೀ ಅಥವಾ ಪುರುಷರ ಹಲವು ದಂಪತಿಗಳಿಗೆ ಮಕ್ಕಳ ಭಾಗ್ಯ ದೊರೆತಿರುವುದಿಲ್ಲ. ಮಕ್ಕಳು ಬೇಕೆಂದು ದಂಪತಿಗಳು ಅಲೆಯದ ಆಸ್ಪತ್ರೆಗಳಿರುವುದಿಲ್ಲ. ಹೀಗೆ ಮಕ್ಕಳಿಲ್ಲ ಎಂಬ ಕೊರಗುತ್ತಿರುವ ದಂಪತಿಗಳಿಗೆ ಚನ್ನಪಟ್ಟಣದ ಕೆ.ಟಿ.ಲಕ್ಷಮ್ಮ ಸಂತಾನ ಭಾಗ್ಯ ದೊರಕಿಸಿಕೊಡುತ್ತಿದ್ದಾರೆ.
ಕೆ.ಟಿ. ಲಕ್ಷ್ಮಮ್ಮ. ಓದಿದ್ದು ಕೇವಲ 10 ನೇ ತರಗತಿ. ವೈದ್ಯರನ್ನೆ ಬೆರಗುಗೊಳಿಸುವ ಶಕ್ತಿಯನ್ನು ನಾಟಿ ಔಷಧದ ಮೂಲಕ ಸಿದ್ದಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಬಳಿ ಇರುವ ಹಾರೋಹಳ್ಳಿದೊಡ್ಡಿಯ ಪುಟ್ಟ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ನಾಟಿ ಔಷಧಿ ನೀಡುವ ಮೂಲಕ ಹಲವರ ಬಾಳಲ್ಲಿ ಬೆಳಕು ತಂದಿದ್ದಾರೆ.
ಲಕ್ಷ್ಮಮ್ಮ ಮಕ್ಕಳಿಲ್ಲದ ಹಲವಾರು ದಂಪತಿಗಳಿಗೆ ಮಕ್ಕಳನ್ನು ಕರುಣಿಸುವ ಮಹಾತಾಯಿ ಎಂದೇ ಪ್ರಸಿದ್ಧ ಪಡೆದಿದ್ದಾರೆ. ಇವರು ಕಳೆದ 15 ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದಾರೆ. ನಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆ ಸಸ್ಯಗಳನ್ನು ಗುರುತಿಸಿ ಅದನ್ನು ಚಿಕಿತ್ಸೆಗೆ ಬಳಸಿಕೊಳ್ಳುತ್ತಾರೆ. ತಮ್ಮ ಅತ್ತೆಯಿಂದ ಈ ನಾಟಿ ವಿದ್ಯಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ.

ಕಾಡಿನ ಗಿಡಮೂಲಿಕೆಗಳಿಂದ ಔಷಧಿ ತಯಾರಿ
ಬಂಜೆತನದಿಂದ ನರಳುತ್ತಿರುವ ದಂಪತಿಗಳಿಗೆ ನೀಡುವ ಔಷಧಿಗಾಗಿ ಕಾಡಿಗೆ ಹೋಗಿ ಗಿಡಮೂಲಿಕೆಗಳನ್ನು ತರುತ್ತಾರೆ. ಮನೆಯಲ್ಲಿಯೇ ಕಾಡಿನಿಂದ ತಂದ ಗಿಡಮೂಲಿಕೆಯಿಂದ ಔಷಧಿ ತಯಾರು ಮಾಡುತ್ತಾರೆ. ನಂತರ ಮಕ್ಕಳಿಲ್ಲದ ಬರುವ ಸ್ತ್ರೀಯರಿಗೆ ಔಷಧಿಯನ್ನು ಮನೆಯ ಮುಂಭಾಗದ ಹೊಸಲಿನ ಮದ್ಯದಲ್ಲಿ ಕೂರಿಸಿ ನಾಟಿ ಔಷಧಿಯನ್ನು ನೀಡುತ್ತಾರೆ. ಅಲ್ಲದೇ ಸ್ತ್ರೀಯರ ಎಲ್ಲಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡುವ ಇವರು ಋತುಮತಿಯಾದ ನಂತರದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೂ ಪರಿಹಾರ ತಿಳಿಸುತ್ತಾರೆ.

ಅಕ್ಕಪಕ್ಕದ ಜಿಲ್ಲೆಗಳಿಂದ ಔಷಧಿಗೆ ಬರುವ ದಂಪತಿಗಳು
ಮದುವೆಯಾಗಿ 10 ರಿಂದ 15 ವರ್ಷ ಕಳೆದರೂ ಮಕ್ಕಳ ಭಾಗ್ಯ ಕಾಣದೆ ಹಲವು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರು ಕೈಚೆಲ್ಲಿದ್ದ ಪ್ರಕರಣಗಳಲ್ಲೂ, ಈ ನಾಟಿ ಚಿಕಿತ್ಸೆ ಮೂಲಕ ಮಕ್ಕಳಾದ ಘಟನೆಗಳು ಸಾಕಷ್ಟಿವೆ. ಇದುವರೆಗೂ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳು ಸೇರಿದಂತೆ ಮೊದಲಾದ ಕಡೆಗಳಿಂದ ಅನೇಕ ದಂಪತಿಗಳು ಇವರಿಂದ ಔಷಧಿ ಪಡೆದು ಮಕ್ಕಳ ಭಾಗ್ಯ ಪಡೆದಿದ್ದಾರೆ.

ಸಾವಿರಾರು ಮಹಿಳೆಯರಿಗೆ ಚಿಕಿತ್ಸೆ
ತಮ್ಮ ಸೇವೆಗೆ ಯಾರಿಂದಲೂರ ಯಾವ ಪ್ರತಿಫಲವನ್ನ ಅಪೇಕ್ಷಿಸದೇ ಅವರು ವನಸ್ಪತಿ ಔಷಧಿ ನೀಡುತ್ತಾ ಬರುತ್ತಿದ್ದಾರೆ. ತಮ್ಮ ಅತ್ತೆಯಿಂದ ಬಳುವಳಿಯಾಗಿ ಬಂದ ಈ ವಿದ್ಯೆಯನ್ನ ಇದುವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಪ್ರಯೋಗ ಮಾಡಿದ್ದು, ಸಾಕಷ್ಟು ಯಶಸ್ಸು ಕೂಡ ಪಡೆದಿದ್ದಾರೆ. ಈ ಕಾಯಕವನ್ನ ದೇವರ ಕೆಲಸವೆಂದು ಚಿಕಿತ್ಸೆ ನೀಡುತ್ತಾರೆ. ಕರ್ಮಫಲ ನೀಡುವುದು ದೇವರಿಗೆ ಬಿಟ್ಟದ್ದು ಎಂದು ಎನ್ನುವುದು ಲಕ್ಷ್ಮಮ್ಮ ಅವರ ಅಭಿಪ್ರಾಯ.

ಮನೆಯಂಗಳದಲ್ಲೇ ಹಲವು ಗಿಡಗಳು
ಔಷಧಿಗಾಗಿ ಮನೆಯಂಗಳದಲ್ಲೂ ಸಾಕಷ್ಟು ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಿಕೊಂಡಿದ್ದಾರೆ. ಇನ್ನೂ ಚಿಕಿತ್ಸೆಗೆ ಅಗತ್ಯವಿರುವ ಅಪರೂಪದ ಗಿಡಮೂಲಿಕೆಗಳನ್ನು ಕಾಡಿನ ತೆರಳಿ ತರುತ್ತಾರೆ. ಕೆ.ಟಿ.ಲಕ್ಷಮ್ಮ ಅವರ ಸಾಮಾಜಿಕ ಸೇವೆ ಗುರುತಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ '2021ರ ಭಗವಾನ್ ಬುದ್ಧ ನ್ಯಾಷನಲ್ ಅವಾರ್ಡ್' ನೀಡಿ ಗೌರವಿಸಿದೆ. ಅಲ್ಲದೇ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವು ಸಂಘ ಸಂಸ್ಥೆಗಳು ಲಕ್ಷಮ್ಮ ಸೇವೆಗೆ ಹಲವು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಲಕ್ಷ್ಮಮ್ಮರನ್ನು ಭೇಟಿ ಮಾಡುವುದು ಹೇಗೆ?
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಬಳಿ ಇರುವ ಹಾರೋಹಳ್ಳಿದೊಡ್ಡಿಯ ಪುಟ್ಟ ಗ್ರಾಮದಲ್ಲಿ ಕೆಟಿ ಲಕ್ಷ್ಮಮ್ಮರನ್ನು ಭೇಟಿ ಮಾಡಬಹುದಾಗಿದೆ. ಲಕ್ಷ್ಮಮ್ಮ ಅವರನ್ನು ಸಂಪರ್ಕಿಸಬೇಕಾದರೆ ಈ ಮೊಬೈಲ್ ಸಂಖ್ಯೆಗೆ ಕೆರೆ ಮಾಡಿ; 98440 88953.












Click it and Unblock the Notifications