ವಾರದ ಸಾಧಕಿ : ಧಾರವಾಡದ ಕಸೂತಿ ಪ್ರವೀಣೆ ಆರತಿ

Posted By:
Subscribe to Oneindia Kannada
   ಈ ವಾರದ ಮಹಿಳಾ ಸಾಧಕಿ : ಆರತಿ ಹಿರೇಮಠ್, ಧಾರವಾಡ | Oneindia Kannada

   ಸೂಕ್ಷ ಎಳೆಯ, ಚೆಂದ ಚೆಂದದ ಚಿತ್ತಾರದ ಕಸೂತಿ ಕಲೆಯನ್ನು ಬಟ್ಟೆಗಳ ಮೇಲೆ ನೋಡಿದರೆ ಅರಿವಿಲ್ಲದೆ 'ವ್ಹಾವ್' ಎಂಬ ಉದ್ಗಾರವೊಂದು ಹೊರಡುತ್ತದೆ. ನಮ್ಮ ಕಣ್ಣಿಗೆ ಹಬ್ಬ ಉಂಟಾಮಾಡುವ ಆ ಚೆಂದದ ಚಿತ್ತಾರವೇ ಹಲವರಿಗೆ ಬದುಕಿನ ಅನ್ನ ಕೊಡುತ್ತದೆ! ಹಲವರನ್ನು ಸ್ವಾವಲಂಬನೆಯ ದಿಕ್ಕಿನತ್ತ ಯಶಸ್ವಿಯಾಗಿ ಕೊಂಡೊಯ್ಯುತ್ತದೆ.

   ಸೀರೆಯ ಮೇಲೆ ಕನ್ನಡದ ರಂಗು ಚೆಲ್ಲಿದ ವೃಂದಾ ಶೇಖರ್

   ಇದೇ ಕಸೂತಿ ಕಲೆಯ ಮೂಲಕ ನೂರಾರು ಮಹಿಳೆಯರಿಗೆ ಸ್ವಾವಲಂಬನೆಯ ಹಾದಿ ತೋರಿಸಿಕೊಟ್ಟ ಧಾರವಾಡದ ಆರತಿ ಹಿರೇಮಠ್ ಅವರು ನಮ್ಮ ಈ ವಾರದ ಸಾಧಕಿ. 1990 ರಿಂದ ಕಸೂತಿಯನ್ನು ಕೇವಲ ಕಲೆಯನ್ನಾಗಿ ಮಾತ್ರವಲ್ಲದೆ, ನೂರಾರು ಬಡ ಮಹಿಳೆಯರ ಆದಾಯದ ಮೂಲವನ್ನಾಗಿ ಬದಲಿಸಿದ ಕೀರ್ತಿ ಆರತಿ ಅವರಿಗೆ ಸೇರುತ್ತದೆ.

   ಸಾಲದ ದಿನಗಳಿಂದ ಸೋಲದ ದಿನಗಳವರೆಗೆ ಅಂಕಿತ ಪ್ರಕಾಶನದ 'ಪ್ರಭಾ'ವಳಿ

   ಮಹಿಳಾ ಸ್ವಾವಲಂಬನೆಯ ಜೊತೆಯಲ್ಲೇ ಕರ್ನಾಟಕದ ಸಾಂಸ್ಕೃತಿಕ ಕಸೂತಿ ಕಲೆಯನ್ನೂ ಬೆಳೆಸುವ ಉದ್ದೇಶವನ್ನೂ ಹೊಂದಿರುವ ಅವರು ತಮ್ಮ ಕಸೂತಿ ಕಲೆಯಿಂದಾಗಿ ಹಲವರು ಬದುಕು ಕಂಡುಕೊಂಡ ಬಗೆಯನ್ನು ಒನ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದು ಹೀಗೆ...

   ವಿನೂತನ ಕಾರ್ಯ ಆರಂಭವಾಗಿದ್ದು ಹೀಗೆ...

   ವಿನೂತನ ಕಾರ್ಯ ಆರಂಭವಾಗಿದ್ದು ಹೀಗೆ...

   "ನಾನು ಮೊದಲು ಜಾಬ್ ಆರ್ಡರ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೆ. ಧಾರವಾಡದಲ್ಲಿ ಮೊದಲಿನಿಂದಲೂ ಕಸೂತಿ ಕಲೆಯನ್ನು ಬೆಳೆಸುವುದಕ್ಕೆ ಹೆಚ್ಚು ಅವಕಾಶಗಳು ಇಲ್ಲದಿದ್ದರೂ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕೆಲ ಮಹಿಳೆಯರು ತಮಗೆ ಜಾಬ್ ಆರ್ಡರ್ ನೀಡುವಂತೆ ಕೇಳಿಕೊಂಡು ನನ್ನ ಬಂದರು. ಆಗ ಈ ವಿನೂತನ ಕೆಲಸದ ಯೋಚನೆ ಬಂತು. ತಕ್ಷಣಕ್ಕೆ ಕಲಿಯಲು ಸಾಧ್ಯವಿದ್ದ ಕಸೂತಿ ಕಲೆಯನ್ನೇ ಅವರು ಕಲಿತು, ಸೀರೆಗಳ ಮೇಲೆ ಕಸೂತಿ ಹಾಕುವುದಕ್ಕೆ ಶುರುಮಾಡಿದರು. ಹೀಗೇ ಶುರುವಾಯ್ತು 'ಆರ್ತಿಕ್ರಾಫ್ಟ್' ಕೆಲಸ."

   ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗಾಗಿ

   ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗಾಗಿ

   "1990 ರಲ್ಲಿ ಆರ್ತಿ ಕ್ರಾಫ್ಟ್ ಎಂಬ ಹೆಸರಿನಲ್ಲಿ ಪುಟ್ಟ ಸಂಸ್ಥೆಯೊಂದನ್ನು ಕಟ್ಟಿಕೊಂಡು, ಬೇರೆ ಬೇರೆ ಸ್ಥಳಗಳಿಂದ ಆರ್ಡರ್ ತೆಗೆದುಕೊಳ್ಳುವುದಕ್ಕೆ ಶುರುಮಾಡಿದೆ. ಪ್ಲೇನ್ ಸೀರೆಗಳನ್ನು ಖರೀದಿಸಿ ಅವುಗಳ ಮೇಲೆ ಕಸೂತಿ ಹಾಕುವುದಕ್ಕಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಅಥವಾ ಅಂಗ ವೈಕಲ್ಯದಿಂದ ಬಳಲುತ್ತಿರುವ ಮಹಿಳೆಯರಿಗೆ ನೀಡುತ್ತಿದ್ದೆ. ಮೊದ ಮೊದಲು ಅವರಿಗೆ ಕಷ್ಟವೆನ್ನಿಸಿದರೂ, ಅವರು ಕ್ರಮೇಣ ಕಸೂತಿ ಕಲೆಯನ್ನು ಕಲಿತರು. ನನ್ನ ಬಳಿ ಆರ್ಡರ್ ತೆಗೆದುಕೊಳ್ಳುವವರು ಹತ್ತು ಜನರಾದರೆ ಅವರಲ್ಲಿ ಒಬ್ಬೊಬ್ಬರ ಬಳಿಯೂ ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಾರೆ. ಇದರಿಂದಾಗಿ ಅವರೆಲ್ಲರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಸದ್ಯಕ್ಕೆ ಸುಮಾರು 200 ಜನ ನನ್ನ ಬಳಿ ಕೆಲಸ ಮಾಡುತ್ತಿದ್ದಾರೆ."

   ಅಂಗವಿಕಲರಿಗೂ ಸ್ವಾವಲಂಬನೆಗೆ ದಾರಿ

   ಅಂಗವಿಕಲರಿಗೂ ಸ್ವಾವಲಂಬನೆಗೆ ದಾರಿ

   "ಈ ಕಸೂತಿ ಕಲೆಯನ್ನು ಕೇವಲ ಸೀರೆಗಳ ಮೇಲೆ ಮಾತ್ರವಲ್ಲದೆ, ಸ್ಟೋಲ್, ಬ್ಯಾಗ್, ದುಪ್ಪಟ್ಟಾಗಳ ಮೇಲೂ ಮಾಡುತ್ತೇವೆ. ಈ ಎಲ್ಲಕ್ಕೂ ನಾವು ಯಂತ್ರವನ್ನು ಬಳಸದೆ ಕೇವಲ ಕೈಯಿಯಲ್ಲೇ ಮಾಡುತ್ತೇವೆ. ಅಂಗ ವೈಕಲ್ಯದಿಂದ ಬಳಲುತ್ತಿರುವವರಿಗೂ ನಾವಿಲ್ಲಿ ಅವಕಾಶ ಕಲ್ಪಿಸಿದ್ದೇವೆ. ನಮ್ಮಲ್ಲಿ "ಡೆಡ್ ಲೈನ್" ಪರಿಕಲ್ಪನೆ ಇಲ್ಲದಿರುವುದರಿಂದ ಒತ್ತಡದಿಂದ ಕೆಲಸ ಮಾಡುವ ಅಗತ್ಯವಿಲ್ಲ. ಇದರಿಂದ ಅಂಗವಿಕಲರಿಗೂ ತಮ್ಮ ಬದುಕಿಗೊಂದು ದಾರಿ ಸಿಕ್ಕಂತಾಗುತ್ತದೆ."

   ಹಲವೆಡೆ ಪ್ರದರ್ಶನವೂ ಆಗಿದೆ

   ಹಲವೆಡೆ ಪ್ರದರ್ಶನವೂ ಆಗಿದೆ

   "ಈಗಾಗಲೇ ನಾವು ಹಲವೆಡೆ ಕಸೂತಿ ಪ್ರದರ್ಶನವನ್ನೂ ಮಾಡಿದ್ದೇವೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರದರ್ಶನ ನಡೆದಿದೆ. ಕೆಲ ವರ್ಷಗಳ ಕಾಲ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಸಹಯೋಗದೊಂದಿಗೂ ನಾನು ಕೆಲಸಮಾಡಿದ್ದೆ. ಕಸೂತಿ ಪ್ರೈಡ್ ಆಫ್ ಕರ್ನಾಟಕ ಎಂಬ ಫೇಸ್ ಬುಕ್ ಪೇಜ್ ಮೂಲಕವೂ ನಮ್ಮ ಉತ್ಪನ್ನ ಜನರಿಗೆ ಪರಿಚಯವಾಗುವಂತೆ ಮಾಡಿದ್ದೇವೆ. "

   ಕಲಿಕೆಗೂ ಅವಕಾಶ

   ಕಲಿಕೆಗೂ ಅವಕಾಶ

   "ನಮ್ಮಲ್ಲಿ ಭಾರತೀಯ ಫ್ಯಾಶನ್ ತಂತ್ರಜ್ಞಾನ ಸಂಸ್ಥೆ(NIFT)ಯ ಹಲವು ವಿದ್ಯಾರ್ಥಿಗಳು ಕಲಿಕೆಗೆಂದು ಬರುತ್ತಾರೆ. ಅವರಿಗೂ ನಾವು ಸಾಕಷ್ಟು ತರಬೇತಿ ನೀಡುತ್ತೇವೆ. ನಮ್ಮ ಉತ್ಪನ್ನಕ್ಕೆ ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಬೇಡಿಕೆ ಬರುತ್ತಿದೆ. ವಿದೇಶದಲ್ಲಿರುವ ಭಾರತೀಯರು ನಮಗೂ ಕಸೂತಿ ಮಾಡಿಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ."

   ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಚೆಲ್ಲಿ

   ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಚೆಲ್ಲಿ

   "ನಾನೂ ಬಿಕಾಂ ಪದವಿಧರಳಾಗಿದ್ದರೂ ಮದುವೆಯಾದ ನಂತರ ಗೃಹಿಣಿಯಾಗಿ ಮನೆಯಲ್ಲೇ ಇದ್ದೆ. ಆದರೆ ಈ ಕೆಲಸ ಆರಂಭಿಸಿದ ಮೇಲೆ ನನ್ನಲ್ಲಿದ್ದ ಸಾಮರ್ಥ್ಯ ಏನು ಅನ್ನೋದು ನನಗೆ ಅರ್ಥವಾಯ್ತು. ಹಾಗೆಯೇ ಎಲ್ಲ ಮಹಿಳೆಯರೂ ತಮ್ಮಲ್ಲಿರುವ ಸಾಮರ್ಥ್ಯ ಅರಿತುಕೊಂಡು, ತಮ್ಮ ಪ್ರತಿಭೆಯನ್ನು ಹೊರಚೆಲ್ಲಿದರೆ ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಸಾಧ್ಯ. ಹಾಗೆಯೇ ಪ್ರತಿಯೊಬ್ಬ ಮಹಿಳೆಗೂ ತಮ್ಮ ಮನೆಯಿಂದ ಸಹಕಾರ ಅತ್ಯಗತ್ಯ. ನನಗೆ ನನ್ನ ಪತಿ, ಅತ್ತೆ-ಮಾವ, ಮಕ್ಕಳು, ತಂದೆ-ತಾಯಿ, ಸ್ನೇಹಿತರು ಎಲ್ಲರಿಂದ ಸಿಕ್ಕಂಥ ಪ್ರೋತ್ಸಾಹ ಪ್ರತಿಯೊಬ್ಬರಿಗೂ ಸಿಗುವಂತಾದರೆ ಸಾಧಿಸುವುದು ಕಷ್ಟವಾಗಲಾರದು ಅನ್ನೋದು ನನ್ನ ಭಾವನೆ "

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Arati Hiremath, from Dharwad has been into kasuti embroidery since 1990. Kasuti was a languishing craft then. Starting small with only job orders and just 2 artisans, She has over the years not only developed kasuti as a craft , but also as an income generation source to many economically backward women. She is our woman achiever of the week.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ