Amarnath Yatra 2022: ಅಮರನಾಥ ಯಾತ್ರೆಗೆ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?

ಶ್ರೀನಗರ, ಏಪ್ರಿಲ್ 11: ಕಾಶ್ಮೀರ ಕಣಿವೆಯ ಹಿಮರೂಪಿ ಪರಮಶಿವನ ದರ್ಶನಕ್ಕಾಗಿ ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ಜೂನ್ 30ರಂದು ಚಾಲನೆ ದೊರೆಯಲಿದೆ. ಈ ವರ್ಷದ ತೀರ್ಥಯಾತ್ರೆ ಒಟ್ಟು 43 ದಿನಗಳ ಕಾಲ ನಡೆಯಲಿದೆ. ಈ ಬಾರಿಯ ಯಾತ್ರೆಗೆ ಏಪ್ರಿಲ್ 11ರಿಂದ ನೋಂದಣಿ, ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆನ್ ಲೈನ್, ಮೊಬೈಲ್ ಅಪ್ಲಿಕೇಷನ್ ಬಳಸಿ ಹೆಸರು, ವಿವರ ದಾಖಲಿಸಬಹುದು ಎಂದು ದೇಗುಲದ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.

2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೆಲವು ದಿನಗಳ ಮೊದಲು ಅಮರನಾಥ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡನೆ ಮಾಡಲಾಯಿತು.

ಜಮ್ಮು ಮತ್ತು ಕಾಶ್ಮೀರದ ಒಂದು ಗುಹೆಯಲ್ಲಿ ಅಮರನಾಥ ದೇವಾಲಯವಿದೆ. ಗುಹೆಯೊಳಗೆ ಮಂಜಿನ ಗೆಡ್ಡೆ ಲಿಂಗದ ಆಕಾರವನ್ನು ಹೊಂದಲಿದ್ದು, ಇದನ್ನು ಶಿವನ ಪ್ರತಿರೂಪ ಎಂದು ಪೂಜಿಸಲಾಗುತ್ತದೆ. ಇದರ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಪ್ರತಿವರ್ಷ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ.

Amarnath Yatra 2022: Registration Begins on April 11, Know How to Apply and Other Details

ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಯಾತ್ರೆ ಸರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಉಗ್ರರ ಉಪಟಳ, ಕೊರೊನಾ ಸಾಂಕ್ರಾಮಿಕದ ಕಾಟ, ಹವಾಮಾನ ವೈಪರೀತ್ಯ ಎಲ್ಲವೂ ಕಾರಣವಾಗಿತ್ತು.

ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ನಿಂದ ಹಾಗೂ ಗಂದರ್ಬಾಲ್ ಜಿಲ್ಲೆಯ ಬಾಲ್ಟಲ್ ಎರಡು ಮಾರ್ಗಗಳಿಂದ ಮಾತ್ರ ತೆರಳಲು ಅನುಮತಿ ನೀಡಲಾಗಿದೆ.

ಯಾತ್ರೆ ತೆರಳಲಿರುವ ಜಮ್ಮು-ಪಹಲ್ಗಾಮ್ ಮಾರ್ಗ ಮತ್ತು ಜಮ್ಮು-ಬಲ್ತಾಲ್ ರಸ್ತೆಯ ದಾರಿಯುದ್ದಕ್ಕೂ 40,000ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಮತ್ತು ರಾಜ್ಯ ಪೊಲೀಸರನ್ನು ಪಹರೆ ನಿಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.

Amarnath Yatra 2022: Registration Begins on April 11, Know How to Apply and Other Details

ಪೂರ್ಣ ಮಾಹಿತಿ ಅಧಿಕೃತ ವೆಬ್ ತಾಣದಲ್ಲಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಹಾಗೂ ಕಾಶ್ಮೀರ ಬ್ಯಾಂಕ್, ಯೆಸ್ ಬ್ಯಾಂಕ್‌ನ ದೇಶದ ಎಲ್ಲಾ ಶಾಖೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ನಿತಿಶ್ವರ್ ಕುಮಾರ್ ತಿಳಿಸಿದ್ದಾರೆ. ನೋಂದಣಿ ಪ್ರಕ್ರಿಯೆ, ಅರ್ಜಿ ಹಾಗೂ ರಾಜ್ಯಾವಾರು ಬ್ಯಾಂಕ್ ಶಾಖೆಗಳ ಸಂಪೂರ್ಣ ವಿವರವು ಮಂಡಳಿಯ ವೆಬ್ ಸೈಟ್‌ನಲ್ಲಿ ಲಭ್ಯವಿದೆ.

ಯಾತ್ರೆಗೆ ಏನೆಲ್ಲಾ ಅವಶ್ಯಕ? ಇಲ್ಲಿದೆ ಮಾಹಿತಿ...
* ಆರೋಗ್ಯ ಪ್ರಮಾಣಪತ್ರ ಹಾಗೂ ಫೋಟೊಗಳು ಒಳಗೊಂಡಂತೆ ಪ್ರಮುಖ ದಾಖಲೆಗಳು.
* ನೋಂದಣಿ ಅರ್ಜಿ ತುಂಬಿಸಿ ಅಪ್‌ಲೋಡ್ ಮಾಡುವುದು.
* ಮೊಬೈಲ್ ನಂಬರ್ ಪರಿಶೀಲನೆ.
* ಅರ್ಜಿ ಪ್ರಕ್ರಿಯೆ ಮುಗಿದ ನಂತರ ಮೊಬೈಲ್‌ಗೆ ಯಾತ್ರೆಯ ದೃಢೀಕರಣ ಸಂದೇಶ ಬರುತ್ತದೆ.
* ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸಬೇಕು.
* ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಯಾತ್ರಾ ಪರ್ಮಿಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

Recommended Video

      ಬಂದೇ ಬಿಡ್ತು RCB vs CSK ಪಂದ್ಮ | Oneindia Kannada

      ಆರೋಗ್ಯ ಪ್ರಮಾಣಪತ್ರ ಕಡ್ಡಾಯ. 13 ವರ್ಷಕ್ಕಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು, 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧಿಸಲಾಗಿದೆ ಎಂದು ಅಮರನಾಥ್ ಯಾತ್ರೆ ಮಂಡಳಿ ಪ್ರಕಟಿಸಿದೆ. ನೋಂದಣಿ ಮಾಡಲು ಬಯಸುವವರು www.shriamarnathjishrine.comಗೆ ಭೇಟಿ ನೀಡಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+