ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆ ಜೊತೆ ಅಮರ್ ಜವಾನ್ ಜ್ಯೋತಿ ವಿಲೀನ

|
Google Oneindia Kannada News

ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿ ಜ್ವಾಲೆಯನ್ನು 50 ವರ್ಷಗಳ ನಂತರ ನಂದಿಸಲಾಗುತ್ತದೆ. ಇಂಡಿಯಾ ಗೇಟ್‌ ಬಳಿಯಿಂದ 400 ಮೀಟರ್ ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಜ್ವಾಲೆಯೊಂದಿಗೆ ಶುಕ್ರವಾರದಂದು ವಿಲೀನಗೊಳ್ಳಲಿದೆ.

ಅಮರ್ ಜವಾನ್ ಜ್ಯೋತಿಯನ್ನು 1971 ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸ್ಮಾರಕವಾಗಿ ನಿರ್ಮಿಸಲಾಯಿತು, ಭಾರತದ ಗೆಲುವು, ಬಾಂಗ್ಲಾದೇಶದ ರಚನೆಗೆ ಕಾರಣವಾದ ನೆನಪು ಇದರಲ್ಲಿದೆ.

ಜ್ಯೋತಿ ವಿಲೀನ ಸಮಾರಂಭವು - ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದೆ - ಸಮಗ್ರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಏರ್ ಮಾರ್ಷಲ್ ಬಲಭದ್ರ ರಾಧಾ ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವರದಿಗಳ ಪ್ರಕಾರ, ಎರಡು ಜ್ವಾಲೆಗಳ ನಿರ್ವಹಣೆ ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಕಂಡುಬಂದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Amar Jawan Jyoti to Be Merged With Flame at National War Memorial at India Gate

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25, 2019 ರಂದು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಿದರು, ಅಲ್ಲಿ 25,942 ಸೈನಿಕರ ಹೆಸರನ್ನು ಗ್ರಾನೈಟ್ ಫಲಕಗಳ ಮೇಲೆ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ.

176 ಕೋಟಿ ರು ವೆಚ್ಚದಲ್ಲಿ 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಫೆಬ್ರವರಿ 2019 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಇಂಡಿಯಾ ಗೇಟ್‌ನಲ್ಲಿ ನಡೆಯುತ್ತಿದ್ದ ಎಲ್ಲಾ ಮಿಲಿಟರಿ ಸಮಾರಂಭಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು.

Amar Jawan Jyoti to Be Merged With Flame at National War Memorial at India Gate

ರಾಷ್ಟ್ರಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ನೆನಪಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಶಾಶ್ವತ ಜ್ವಾಲೆಯು ಅಮರ ಚಕ್ರದೊಳಗೆ ಸ್ಮಾರಕದ ಮುಖ್ಯ ಸ್ತಂಭವಾದ ಸ್ಮಾರಕ ಸ್ತಂಭದ ಹೃದಯಭಾಗದಲ್ಲಿದೆ.

ಅಮರ್ ಜವಾನ್ ಜ್ಯೋತಿ ಜ್ವಾಲೆ

ಜನವರಿ 26, 1972 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಇದನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25, 2019 ರಂದು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಿದರು, ಅಲ್ಲಿ 25,942 ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ.

ಮೂಲತಃ, ಇಂಡಿಯಾ ಗೇಟ್‌ನ ಮುಂಭಾಗದಲ್ಲಿ, ಈಗ-ಖಾಲಿಯಿರುವ ಮೇಲಾವರಣದ ಅಡಿಯಲ್ಲಿ ರಾಜ Vನೇ ಜಾರ್ಜ್‌‌ನ ಪ್ರತಿಮೆಯೊಂದನ್ನು ನಿಲ್ಲಿಸಲಾಗಿತ್ತು, ಮತ್ತು ಇತರ ಪ್ರತಿಮೆಗಳೊಂದಿಗೆ ಇದನ್ನು ತೆಗೆದು ಕಾರೊನೇಷನ್‌ ಉದ್ಯಾನವನ‌ಕ್ಕೆ ವರ್ಗಾಯಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ, ಭಾರತದ ಸೇನೆಯ ಅಜ್ಞಾತ ಯೋಧನ ಸಮಾಧಿಯ ತಾಣವಾಗಿ ಇಂಡಿಯಾ ಗೇಟ್‌ ಮಾರ್ಪಟ್ಟು, ಅಮರ್ ಜವಾನ್‌ ಜ್ಯೋತಿ (ಅಮರ ಯೋಧನ ಜ್ವಾಲೆ) ಎಂಬುದಾಗಿ ಕರೆಯಲ್ಪಟ್ಟಿತು.

Amar Jawan Jyoti to Be Merged With Flame at National War Memorial at India Gate

ಇಂಡಿಯಾ ಗೇಟ್‌ನ ತೋರಣ-ಕಮಾನಿನ ಅಡಿಯಲ್ಲಿರುವ ಸಂಪುಟವೊಂದರಲ್ಲಿ 1971ರಿಂದಲೂ ಉರಿಯುತ್ತಿರುವ ಅಮರ್ ಜವಾನ್‌ ಜ್ಯೋತಿಯು (ಅಮರ ಯೋಧರ ಜ್ವಾಲೆ) ಅಜ್ಞಾತ ಯೋಧನ ಸಮಾಧಿಯ ಗುರುತಾಗಿದೆ. ಸಂಪುಟವು ಸ್ವತಃ ಒಂದು ಕಪ್ಪು ಅಮೃತಶಿಲೆಯ ಸ್ಮಾರಕ ಸಮಾಧಿಯಾಗಿದ್ದು, ಅದರ ಕೊರಳಿನ ಭಾಗದಲ್ಲಿ ಒಂದು ಬಂದೂಕನ್ನು ಇರಿಸಿ, ಯೋಧನ ಶಿರಸ್ತ್ರಾಣವೊಂದನ್ನು ಅದರ ನೆತ್ತಿಗೇರಿಸಲಾಗಿದೆ. ಸ್ಮಾರಕ ಸಮಾಧಿಯ ಪ್ರತಿ ಮುಖವೂ ಬಂಗಾರದಲ್ಲಿ ಕೆತ್ತಲಾಗಿರುವ "ಅಮರ್‌ ಜವಾನ್‌" (ಅಮರ ಯೋಧ) ಎಂಬ ಪದಗಳನ್ನು ಹೊಂದಿದೆ.

ಈ ಸ್ಮಾರಕ ಸಮಾಧಿಯು ಸ್ವತಃ ಒಂದು ಭವ್ಯಸೌಧದ ಮೇಲೆ ಇರಿಸಲ್ಪಟ್ಟಿದ್ದು, ಚಿರಂತನವಾಗಿ ಉರಿಯುತ್ತಿರುವಂತೆ ಇಡಲಾಗಿರುವ ನಾಲ್ಕು ದೀವಟಿಗೆಗಳನ್ನು ತನ್ನ ನಾಲ್ಕು ಮೂಲೆಗಳಲ್ಲಿ ಅದು ಹೊಂದಿದೆ. ಇದನ್ನು 1931ರಲ್ಲಿ ಅನಾವರಣಗೊಳಿಸಲಾಯಿತು. ಇಂದು, ನಾಗರಿಕ ಸರ್ಕಾರದ ಶಿಷ್ಟಾಚಾರಗಳ ಸಂದರ್ಭಗಳಂದು, ಮತ್ತು ಪ್ರತಿವರ್ಷದ ಜನವರಿ 26ರ ಗಣತಂತ್ರ ದಿವಸದಂದು ಈ ತಾಣದಲ್ಲಿ ಗೌರವಾರ್ಪಣ ಮಾಡುವುದು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಸಂಬಂಧಿಸಿದಂತೆ, ಅಷ್ಟೇ ಏಕೆ, ಸಂದರ್ಶಕರಾಗಿ ಬರುವ ನಾಗರಿಕ ಸರ್ಕಾರದ ಅತಿಥಿಗಳಿಗೆ ಸಂಬಂಧಿಸಿದಂತೆ ಇರುವ ಸಂಪ್ರದಾಯ-ಸಂಹಿತೆಯಾಗಿದೆ;

ರಾಜ್‌ಪಥ್‌‌ನಲ್ಲಿ ನಡೆಯುವ ವಾರ್ಷಿಕ ಸೈನಿಕ ಮೆರವಣಿಗೆಯ ಸಮ್ಮುಖದಲ್ಲಿ ಸೇರಿಕೊಳ್ಳುವುದಕ್ಕೆ ಮುಂಚಿತವಾಗಿ ಪ್ರಧಾನಮಂತ್ರಿಯವರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಯೋಧರಿಗೆ ಗೌರವಾರ್ಪಣ ಮಾಡುವುದು ವಾಡಿಕೆಯಾಗಿದೆ. ಇಲ್ಲಿರುವ ಧ್ವಜಗಳು ಭಾರತದ 3 ಸೇನಾ ಪಡೆಗಳನ್ನು (ಭೂಸೇನೆ, ನೌಕಾಪಡೆ, ಮತ್ತು ವಾಯು ಪಡೆ) ಪ್ರತಿನಿಧಿಸುತ್ತವೆ; ಒಂದಾದ ಮೇಲೊಂದರಂತೆ ಪಡೆಗಳು ವರಸೆಯಾಗಿ ಬರುವ ರೀತಿಯಲ್ಲಿ, ಪ್ರತಿ ಪಡೆಗೆ ಸೇರಿದ ಓರ್ವ ಯೋಧನು ಪ್ರತಿದಿನವೂ ದ್ವಾರ ಮತ್ತು ಸಮಾಧಿಯನ್ನು ಕಾವಲು ಕಾಯುತ್ತಾನೆ.

Recommended Video

Cafe Coffee Day ತೀರ್ಸಿದ್ದು ಹೇಗೆ ಗೊತ್ತಾ! Rebirth of CCD | Oneindia Kannada

ದ್ವಾರಕ್ಕೆ ಸರಿಯಾಗಿ ಹಿಂಭಾಗದಲ್ಲಿ ನಿಂತಿರುವಂತಿರುವ ಒಂದು ಖಾಲಿ ಮೇಲಾವರಣವು ಮರಳುಗಲ್ಲಿನಿಂದ ಮಾಡಲ್ಪಟ್ಟಿದ್ದು, ಇದೂ ಕೂಡ ಲುಟ್ಯೆನ್ಸ್‌ನಿಂದ ವಿನ್ಯಾಸಗೊಳಿಸಲ್ಪಟ್ಟಿದೆ, ಮತ್ತು 18ನೇ ಶತಮಾನಕ್ಕೆ ಸೇರಿದ ಮಹಾಬಲಿಪುರಂನ ಚಾಚುಭಾಗವೊಂದರಿಂದ ಇದು ಪ್ರೇರೇಪಿಸಲ್ಪಟ್ಟಿದೆ; 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಇದು ರಾಜ Vನೇ ಜಾರ್ಜ್‌ನ ಪ್ರತಿಮೆಯನ್ನು ಹೊಂದಿತ್ತು. ಈ ಪ್ರತಿಮೆಯು ಈಗ ದೆಹಲಿಯ ಕಾರೊನೇಷನ್‌ ಉದ್ಯಾನವನದಲ್ಲಿ ನಿಂತಿದೆ. ಕುಳಿತಿರುವ ಅಥವಾ ನಿಂತಿರುವ ಭಂಗಿಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯೊಂದು ಇಲ್ಲಿ ಪ್ರತಿಷ್ಠಾಪಿಸಲ್ಪಡಬೇಕು ಎಂಬುದರ ಕುರಿತು ಅನೇಕ ಯೋಜನೆಗಳು ಮತ್ತು ಕರೆಗಳು ಪ್ರಸ್ತಾವಿಸಲ್ಪಟ್ಟಿದ್ದವು; ಇವೆಲ್ಲಾ ಚರ್ಚಾವಿಷಯಗಳಾಗಿ ಮಾರ್ಪಟ್ಟಿದ್ದವು ಮತ್ತು ಈ ಕುರಿತಾದ ಯಾವುದೇ ಸಮ್ಮತಿಯು ಹೊರಬೀಳಲಿಲ್ಲ.(ಮಾಹಿತಿ ಕೃಪೆ: ವಿಕಿಪೀಡಿಯಾ)

English summary
Days ahead of the 75th Republic Day, the Amar Jawan Jyoti flame at the India Gate lawns would be extinguished and merged with the flame at the National War Memorial. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X