ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಸಮೀಕ್ಷೆ: ಮದುವೆ ಬೇಡವೆನ್ನುತ್ತಿದ್ದಾರೆ ಭಾರತದ ಯುವಜನತೆ!

|
Google Oneindia Kannada News

ಭಾರತೀಯ ಸಂಪ್ರದಾಯದಲ್ಲಿ ಮದುವೆ ಎನ್ನುವುದಕ್ಕೆ ಸಾಕಷ್ಟು ವಿಶೇಷ ಸ್ಥಾನವಿದೆ. ಪ್ರತಿಯೊಬ್ಬ ಭಾರತೀಯ ಯುವಕ-ಯುವತಿಗೆ ಮದುವೆ ಎನ್ನುವುದು ಹೊಸ ಜೀವನದ ಆರಂಭ ಎನ್ನುವಂತೆ ನೋಡಲಾಗುತ್ತದೆ.

ಆದರೆ ಕಾಲ ಬದಲಾದಂತೆ ಭಾರತೀಯ ಯುವಜನತೆಯ ಆಲೋಚನಾ ದಾಟಿಗಳು ಕೂಡ ಸಾಕಷ್ಟು ಬದಲಾವಣೆಯಾಗಿದೆ. ಅದರಲ್ಲೂ ಮದುವೆ ಬಗ್ಗೆ ಇರುವ ದೃಷ್ಟಿಕೋನವೂ ಬದಲಾಗಿದೆ. ಹೆಚ್ಚಿನ ಭಾರತೀಯರು ಮದುವೆಯಾಗಲು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಸಮೀಕ್ಷೆಯೊಂದು ತಿಳಿಸಿದೆ.

ಪತ್ನಿ ತಾಳಿ ತೆಗೆದರೆ ಮಾನಸಿಕ ಕ್ರೌರ್ಯ: ಮದ್ರಾಸ್ ಹೈಕೋರ್ಟ್ ವಿಚಿತ್ರ ತೀರ್ಪು!ಪತ್ನಿ ತಾಳಿ ತೆಗೆದರೆ ಮಾನಸಿಕ ಕ್ರೌರ್ಯ: ಮದ್ರಾಸ್ ಹೈಕೋರ್ಟ್ ವಿಚಿತ್ರ ತೀರ್ಪು!

2011 ರಿಂದ 2019 ರ ವೇಳೆಗೆ ಸುಮಾರು ಎಂಟು ವರ್ಷಗಳಲ್ಲಿ 15-29 ವರ್ಷದೊಳಗಿನ ಅವಿವಾಹಿತರ ಪ್ರಮಾಣವು ಶೇ 17.2 ರಿಂದ ಶೇ 23 ಕ್ಕೆ ಏರಿದೆ ಎಂದು ಸರ್ಕಾರದ ಸಮೀಕ್ಷೆ ಹೇಳಿದೆ. ರಾಷ್ಟ್ರೀಯ ಯುವ ನೀತಿ 2014 ರಲ್ಲಿ 15 ರಿಂದ 29 ವರ್ಷ ವಯಸ್ಸಿನವರನ್ನು ಯುವಕರು ಎಂದು ವರ್ಗೀಕರಿಸಲಾಗಿದೆ.

 ಅವಿವಾಹಿತರ ಸಂಖ್ಯೆ ಹೆಚ್ಚಳ

ಅವಿವಾಹಿತರ ಸಂಖ್ಯೆ ಹೆಚ್ಚಳ

15-29 ವರ್ಷ ವಯಸ್ಸಿನ ಅವಿವಾಹಿತ ಜನಸಂಖ್ಯೆಯ ಶೇಕಡಾವಾರು ಪುರುಷ ಜನಸಂಖ್ಯೆಯಲ್ಲಿ 2011 ರಲ್ಲಿ ಶೇಕಡಾ 20.8 ರಿಂದ 2019 ರಲ್ಲಿ ಶೇಕಡಾ 26.1 ಕ್ಕೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ ವರದಿ ಹೇಳುತ್ತದೆ.

ಮಹಿಳಾ ಜನಸಂಖ್ಯೆಯಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ಗಮನಿಸಲಾಗಿದೆ. ಅವಿವಾಹಿತ ಮಹಿಳೆಯರ ಪ್ರಮಾಣವು 2011 ರಲ್ಲಿ ಶೇಕಡಾ 13.5 ರಿಂದ 2019 ರಲ್ಲಿ ಶೇಕಡಾ 19.9 ಕ್ಕೆ ಏರಿಕೆಯಾಗಿದೆ.

2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಅತಿ ಹೆಚ್ಚು ಅವಿವಾಹಿತ ಯುವಕರನ್ನು ಗಮನಿಸಲಾಗಿದೆ ಎಂದು ವರದಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ನಂತರ ಉತ್ತರ ಪ್ರದೇಶ, ದೆಹಲಿ ಮತ್ತು ಪಂಜಾಬ್ ನಲ್ಲಿ ಅವಿವಾಹಿತ ಯುವಕರ ಸಂಖ್ಯೆ ಹೆಚ್ಚಾಗಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಅವಿವಾಹಿತ ಯುವಕರ ಸಂಖ್ಯೆ ಅತಿ ಕಡಿಮೆ ಪ್ರಮಾಣ ಕಂಡುಬಂದಿದೆ.

ಭಾರತದ ಅತ್ಯಂತ ಕಿರಿಯ ಮೇಯರ್‌ಗೂ ಕೇರಳದ ಅತ್ಯಂತ ಕಿರಿಯ ಶಾಸಕನಿಗೂ ಮದುವೆ!ಭಾರತದ ಅತ್ಯಂತ ಕಿರಿಯ ಮೇಯರ್‌ಗೂ ಕೇರಳದ ಅತ್ಯಂತ ಕಿರಿಯ ಶಾಸಕನಿಗೂ ಮದುವೆ!

 ಬಾಲ್ಯ ವಿವಾಹದ ಪ್ರಮಾಣ ಇಳಿಕೆ

ಬಾಲ್ಯ ವಿವಾಹದ ಪ್ರಮಾಣ ಇಳಿಕೆ

ಭಾರತದಲ್ಲಿ ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವರದಿ ಹೇಳುತ್ತದೆ. ಮದುವೆಯ ವಯಸ್ಸು ಕೂಡ ಹೆಚ್ಚಾಗಿದೆ ಎಂದು ಅದು ಹೇಳಿದೆ. ಹದಿಹರೆಯದ ಮಹಿಳೆಯರಲ್ಲಿ 15-19 ವರ್ಷ ವಯಸ್ಸಿನ ವ್ಯಾಪ್ತಿಯಲ್ಲಿ 2005-2006 ರಲ್ಲಿ ಶೇಕಡಾ 11.9 ರಷ್ಟು 15 ವರ್ಷದೊಳಗಿನ ಯುವತಿಯರು ಮದುವೆಯಾಗಿದ್ದರೆ, 2019-2021 ರ ಅವಧಿಯಲ್ಲಿ15 ವರ್ಷ ವಯಸ್ಸಿನೊಳಗೆ 1.7 ಪ್ರತಿಶತದಷ್ಟು ಮಹಿಳೆಯರು ಮದುವೆಯಾಗಿದ್ದಾರೆ ಎಂದು ವರದಿ ಹೇಳಿದೆ.

2005-06ರಲ್ಲಿ ಶೇಕಡ 72.4 ರಷ್ಟು ಯುವತಿಯರು 20 ವರ್ಷ ವಯಸ್ಸಿನೊಳಗೆ ಮದುವೆಯಾಗುತ್ತಿದ್ದರು. 2019-2021ರ ವೇಳಗೆ 25-29ರ ವಯಸ್ಸಿಗೆ ಯುವತಿಯರ ಮದುವೆಯಾಗುತ್ತಿರುವ ಪ್ರಮಾಣ ಶೇಕಡ 52.8 ರಷ್ಟಕ್ಕೆ ಕಡಿಮೆಯಾಗಿದೆ.

ಮಹಿಳೆಯರಿಗೆ ಹೋಲಿಸಿದರೆ, ಭಾರತದಲ್ಲಿ ಪುರುಷರಲ್ಲಿ 25-29 ವರ್ಷ ವಯಸ್ಸಿನ ಒಟ್ಟು 42.9 ರಷ್ಟು ಪುರುಷ ಜನಸಂಖ್ಯೆಯು 2019-21 ರಲ್ಲಿ 25 ವರ್ಷ ವಯಸ್ಸಿನೊಳಗೆ ಮೊದಲ ವಿವಾಹವಾಗಿದೆ. ಮಹಿಳೆಯರಿಗೆ ಹೋಲಿಸಿಕೊಂಡರೆ ಶೇಕಡಾವಾರು ಎರಡು ಪಟ್ಟು ಎಂದು ಸಮೀಕ್ಷೆ ಹೇಳಿದೆ.

 ವಿದ್ಯಾವಂತ ಮಹಿಳೆಯರ ಮದುವೆ ವಯಸ್ಸು ಹೆಚ್ಚು

ವಿದ್ಯಾವಂತ ಮಹಿಳೆಯರ ಮದುವೆ ವಯಸ್ಸು ಹೆಚ್ಚು

ಮಹಿಳೆ ಹೆಚ್ಚು ವಿದ್ಯಾವಂತಳಾಗಿದ್ದರೆ, ಮದುವೆಯ ಸರಾಸರಿ ವಯಸ್ಸು ಹೆಚ್ಚಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. 12 ನೇ ತರಗತಿ ಉತ್ತೀರ್ಣರಾದ ಅಥವಾ ಹೆಚ್ಚು ಶಿಕ್ಷಣ ಪಡೆದಿರುವ ಮಹಿಳೆಯರು 25-29 ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎಂದು ಹೇಳಿದೆ. 2019-21ರ ವೇಳೆಗೆ ಶಿಕ್ಷಣ ಪಡೆಯದ ಮಹಿಳೆಯರ ವಯಸ್ಸಿಗಿಂತ ಸರಾಸರಿ 5.5 ವರ್ಷಗಳಷ್ಟು ಹೆಚ್ಚು ವಯಸ್ಸಾದವರು ಮದುವೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದವರಿಗೆ 1.2 ವರ್ಷಕ್ಕೆ ಹೋಲಿಸಿದರೆ ಶಾಲೆಗೆ ಹೋಗದ ಮಹಿಳೆಯರಿಗೆ ಮದುವೆಯ ಸರಾಸರಿ ವಯಸ್ಸು ಎರಡು ವರ್ಷಗಳು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

 ಹದಿಹರೆಯದ ತಾಯ್ತನದ ಪ್ರಮಾಣದಲ್ಲಿ ಇಳಿಕೆ

ಹದಿಹರೆಯದ ತಾಯ್ತನದ ಪ್ರಮಾಣದಲ್ಲಿ ಇಳಿಕೆ

ದೇಶದಲ್ಲಿ 18 ವರ್ಷಕ್ಕಿಂತ ಮೊದಲು ವಿವಾಹವಾದ 20-24 ವರ್ಷ ವಯಸ್ಸಿನ ಮಹಿಳೆಯರ ಶೇಕಡಾವಾರು ಪ್ರಮಾಣವು ಕಳೆದ 15 ವರ್ಷಗಳಲ್ಲಿ 2005-2006 ರಲ್ಲಿ ಶೇಕಡಾ 47 ರಿಂದ 2019-21 ರಲ್ಲಿ ಅರ್ಧದಷ್ಟು ಅಂದರೆ ಶೇಕಡಾ 23 ಕ್ಕೆ ಇಳಿದಿದೆ. ಅದೇ ಸಮಯದಲ್ಲಿ, ಹದಿಹರೆಯದ ಗರ್ಭಧಾರಣೆ ಮತ್ತು ತಾಯ್ತನವು ಇದೇ ಅವಧಿಯಲ್ಲಿ ಶೇಕಡಾ 16 ರಿಂದ ಶೇಕಡಾ 7 ಕ್ಕೆ ಇಳಿದಿದೆ ಎಂದು ಸಮೀಕ್ಷೆ ಹೇಳಿದೆ.

English summary
The National Statistical Office report states that the percentage of the unmarried population in the age bracket of 15-29 years has shown an increasing trend in the male population from 20.8 per cent in 2011 to 26.1 per cent in 2019. A government survey has suggested that more Indians prefer to stay unmarried.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X