ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!

|
Google Oneindia Kannada News

ನಾವು ಇರುವುದು ಸೌರಮಂಡಲದಲ್ಲಿ, ಹಾಗೇ ನಮ್ಮ ಸೌರಮಂಡಲ ಇರುವುದು ಆಕಾಶಗಂಗೆ ಅಥವಾ 'ಮಿಲ್ಕಿ ವೇ' ಗ್ಯಾಲಕ್ಸಿಯಲ್ಲಿ. ಗ್ಯಾಲಕ್ಸಿ ಎಂದರೆ ನಕ್ಷತ್ರ ಪುಂಜ. ಹೀಗೆ ನಮ್ಮ ಗ್ಯಾಲಕ್ಸಿಯಲ್ಲಿರುವ ಸುಮಾರು 500 ನಕ್ಷತ್ರಗಳು ನಮ್ಮ ಗ್ಯಾಲಕ್ಸಿಯನ್ನ ಬಿಟ್ಟು ಬೇರೆ ಕಡೆಗೆ ಪಯಣ ಬೆಳೆಸಿವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಇದು ನೂರಾರು ಊಹಾಪೋಹಗಳಿಗೆ ಕಾರಣವಾಗಿದ್ದು, 'ಮಿಲ್ಕಿ ವೇ' ಗ್ಯಾಲಕ್ಸಿಯ ಸಮೀಪ ಕಪ್ಪುಕುಳಿ ಅಥವಾ ಬ್ಲ್ಯಾಕ್ ಹೋಲ್ ಆಗಮಿಸಿದೆಯಾ ಎಂಬ ಅನುಮಾನ ಮೂಡಿದೆ. ಏಕೆಂದರೆ ಕಪ್ಪುಕುಳಿ ಅಥವಾ ಬ್ಲ್ಯಾಕ್ ಹೋಲ್ ಎಂದು ಕರೆಯಲಾಗುವ ಸತ್ತ ನಕ್ಷತ್ರಗಳ ಕಳೆಬರ, ಎಲ್ಲಾ ವಸ್ತುಗಳನ್ನ ನುಂಗಿ ಹಾಕುತ್ತವೆ. ಅದು ನಕ್ಷತ್ರವೇ ಇರಲಿ ಅಥವಾ ಗ್ರಹವೇ ಇರಲಿ.

ಬ್ಲ್ಯಾಕ್ ಹೋಲ್ ಒಳಗೆ ಒಂದು ಬಾರಿ ಪ್ರವೇಶ ಮಾಡಿದರೆ ಮತ್ತೆ ವಾಪಸ್ ಬರುವುದೇ ಇಲ್ಲ. ಕಣ್ಣಿಗೆ ಕಾಣುವುದೂ ಇಲ್ಲ. ಇದೀಗ 500 ನಕ್ಷತ್ರಗಳ ಗ್ಯಾಂಗ್ ಕೂಡ ಅದೇ ವೇಗದಲ್ಲಿ ಬೇರೆ ದಿಕ್ಕಿನ ಕಡೆಗೆ, ನಮ್ಮ ಗ್ಯಾಲಕ್ಸಿ ಬಿಟ್ಟು ಹೋಗುತ್ತಿರುವುದು ಹಲವಾರು ಅನುಮಾನಗಳನ್ನ ಹುಟ್ಟುಹಾಕಿದೆ.

ನಕ್ಷತ್ರಗಳು ಹೇಗೆ ಸಾಯುತ್ತವೆ? ವಿಜ್ಞಾನಿಗಳಿಂದ ರಹಸ್ಯ ಬಯಲು ನಕ್ಷತ್ರಗಳು ಹೇಗೆ ಸಾಯುತ್ತವೆ? ವಿಜ್ಞಾನಿಗಳಿಂದ ರಹಸ್ಯ ಬಯಲು

ಒಂದೇ ‘ಡೇಟ್ ಆಫ್ ಬರ್ತ್’..!

ಒಂದೇ ‘ಡೇಟ್ ಆಫ್ ಬರ್ತ್’..!

ಅಮೆರಿಕ ವಿಜ್ಞಾನಿಗಳು ನಾಸಾ ಉಪಗ್ರಹದ ಅಧ್ಯಯನದಿಂದ ನಡೆಸಿರುವ ಅಧ್ಯಯನದಲ್ಲಿ 468 ನಕ್ಷತ್ರಗಳು ಈ ರೀತಿ ನಮ್ಮ ಗ್ಯಾಲಕ್ಸಿ ಬಿಟ್ಟು ಬೇರೆ ಕಡೆಗೆ ಓಡುತ್ತಿರುವುದು ಕಂಡುಬಂದಿದೆ. ಈ ಪೈಕಿ 456 ನಕ್ಷತ್ರಗಳ ಡೇಟ್ ಆಫ್ ಬರ್ತ್ ಒಂದೇ ಆಗಿದೆ. ಅಂದರೆ ಒಂದೇ ಸಮಯಕ್ಕೆ ಈ 456 ನಕ್ಷತ್ರಗಳು ಹುಟ್ಟಿವೆ. ಹೀಗಾಗಿ ಸದ್ಯ ಖಗೋಳ ಶಾಸ್ತ್ರಜ್ಞರಿಗೂ ಈ ವಿದ್ಯಮಾನ ಸಾಕಷ್ಟು ತಲೆಕೆಡಿಸಿದೆ. ಮತ್ತೊಂದು ಕಡೆ ಈ 500 ನಕ್ಷತ್ರಗಳು ಅಕ್ಕಪಕ್ಕ ಇರುವ ಗ್ಯಾಲಕ್ಸಿ ಕಡೆಗೂ ಗುಳೆ ಹೊರಟಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ

ನಮ್ಮ ಗ್ಯಾಲಕ್ಸಿಯಲ್ಲಿ 8,292 ನಕ್ಷತ್ರಗಳು..!

ನಮ್ಮ ಗ್ಯಾಲಕ್ಸಿಯಲ್ಲಿ 8,292 ನಕ್ಷತ್ರಗಳು..!

ಮೊದಲೇ ಹೇಳಿದಂತೆ ನಾವು ಇರುವುದು ಸೌರಮಂಡಲದಲ್ಲಿ, ಹಾಗೇ ನಮ್ಮ ಸೌರಮಂಡಲ ಇರುವುದು ಆಕಾಶಗಂಗೆ ಅಥವಾ ‘ಮಿಲ್ಕಿ ವೇ' ಗ್ಯಾಲಕ್ಸಿಯಲ್ಲಿ. ಗ್ಯಾಲಕ್ಸಿ ಎಂದರೆ ನಕ್ಷತ್ರ ಪುಂಜವಾಗಿದ್ದು, ಹೀಗೆ ನಮ್ಮ ಗ್ಯಾಲಕ್ಸಿಯಲ್ಲಿ ಸುಮಾರು 8,292 ನಕ್ಷತ್ರಗಳು ಇವೆ. ಈ 8,292 ನಕ್ಷತ್ರಗಳ ಪೈಕಿ ಸೂರ್ಯ ಕೂಡ ಒಬ್ಬ. ಆದರೆ 8,292 ನಕ್ಷತ್ರಗಳ 468 ನಕ್ಷತ್ರಗಳು ಬೇರೆ ದಿಕ್ಕಿನಲ್ಲಿ ಚಲನೆ ಆರಂಭಿಸಿರುವುದು ವಿಜ್ಞಾನಿಗಳನ್ನು ಚಿಂತೆಗೀಡು ಮಾಡಿದೆ. ಅಕಸ್ಮಾತ್ ನಮ್ಮ ಗ್ಯಾಲಕ್ಸಿ ಒಳಗೆ ಬ್ಲ್ಯಾಕ್ ಹೋಲ್ ಕಂಡುಬಂದರೆ ಪರಿಸ್ಥಿತಿಯನ್ನ ಯಾರೂ ಕೂಡ ನಿಭಾಯಿಸಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ವಿಜ್ಞಾನಿಗಳು ಆತಂಕಗೊಂಡಿದ್ದಾರೆ.

ನಕ್ಷತ್ರಗಳ ಸಾವಿನ ಬಗ್ಗೆ ಅಧ್ಯಯನ

ನಕ್ಷತ್ರಗಳ ಸಾವಿನ ಬಗ್ಗೆ ಅಧ್ಯಯನ

ಜನವರಿ ಆರಂಭದಲ್ಲಿ ಸೂರ್ಯನಿಗಿಂತ ಸಾವಿರಾರು ಪಟ್ಟು ದೊಡ್ಡದಾದ ನಕ್ಷತ್ರಗಳು, ತಮ್ಮ ಅಂತ್ಯಕಾಲದಲ್ಲಿ ಆಂತರಿಕವಾಗಿ ಎದುರಿಸುವ ಒತ್ತಡದಿಂದಲೇ ಸಾವಿಗೀಡಾಗುತ್ತವೆ ಎಂದು ಭಾರತದ ವಿಜ್ಞಾನಿಗಳು ತಿಳಿಸಿದ್ದರು. ‘ನ್ಯೂಟ್ರಿನೋಸ್' ಎನ್ನುವ ಚಿಕ್ಕದಾದ ಸಬ್ಟಾಮಿಕ್ ಕಣಗಳಿಂದ ನಕ್ಷತ್ರಗಳ ಸಾವು ಸಂಭವಿಸುತ್ತದೆ ಎಂದಿದ್ದರು. ಅಂತ್ಯಕಾಲದಲ್ಲಿ ನ್ಯೂಟ್ರಿನೋಸ್ ನಕ್ಷತ್ರದ ಶೇ. 99ರಷ್ಟು ಶಾಖ ಹೊರದಬ್ಬುವ ಕಾರಣ ನಕ್ಷತ್ರ ಸ್ಫೋಟವಾಗಿ ಸೂಪರ್ ‌ನೋವಾ ಸೃಷ್ಟಿಯಾಗುತ್ತದೆ ಎಂದು ಭಾರತದ ವಿಜ್ಞಾನಿಗಳು ಮಹತ್ತರ ಮಾಹಿತಿ ಹೊರಗೆಡವಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಇದೀಗ ಅಮೆರಿಕ ವಿಜ್ಞಾನಿಗಳು ನಕ್ಷತ್ರಗಳ ಬಗ್ಗೆ ಮತ್ತೊಂದು ಮಹತ್ತರ ವಿಚಾರ ಹೊರಗೆಡವಿದ್ದಾರೆ.

ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಬಿಸಿ ಹೆಚ್ಚಾಗುತ್ತಾ ಸಾಗಿ ಬೈಜಿಕ ಸಮ್ಮಿಲ ಕ್ರಿಯೆ ಆರಂಭವಾಗುತ್ತದೆ. ಇದನ್ನ ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿ ಅನುಸರಿಸುತ್ತವೆ. ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆಯಿಂದ ಆಗುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಅವಲಂಬಿಸಿರುತ್ತದೆ.

ಭಾರತೀಯರ ಮಹತ್ವದ ಸಾಧನೆ

ಭಾರತೀಯರ ಮಹತ್ವದ ಸಾಧನೆ

ಬೃಹತ್ ನಕ್ಷತ್ರ ಸ್ಫೋಟವಾದ ನಂತರ ಸೂಪರ್ ‌ನೋವಾ ಉಂಟಾಗುತ್ತದೆ. ಬಿಳಿ ನಕ್ಷತ್ರಗಳು ಸಾಮಾನ್ಯವಾಗಿ ಸ್ಫೋಟಗೊಂಡು, ತಮ್ಮ ಅಂತ್ಯಕಾಲ ಸಮೀಪಿಸಿದಾಗ ಸೂಪರ್ ‌ನೋವಾ ಉಂಟಾಗುತ್ತದೆ. ಇದನ್ನು ನಕ್ಷತ್ರ ತ್ಯಾಜ್ಯ ಎಂದು ಕರೆಯುವ ವಿಜ್ಞಾನಿಗಳು, ಭವಿಷ್ಯದಲ್ಲಿ ನಕ್ಷತ್ರ ತ್ಯಾಜ್ಯದಿಂದಲೇ ಮತ್ತಷ್ಟು ಗ್ರಹ, ನಕ್ಷತ್ರಗಳು ಉದಯಿಸುತ್ತವೆ ಎಂಬುದನ್ನು ಪ್ರತಿಪಾದಿಸುತ್ತಾರೆ. ಆದರೆ ಇಷ್ಟು ದಿನ ‘ಸೂಪರ್ ‌ನೋವಾ' ಉಂಟಾಗಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಗುವಾಹಟಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಸಂಶೋಧಕರು ಜರ್ಮನಿಯ ‘ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್' ಹಾಗೂ ಅಮೆರಿಕದ ನಾರ್ತ್‌ವೆಸ್ಟರ್ನ್ ವಿವಿ ಸಂಶೋಧಕರ ಸಹಾಯದೊಂದಿಗೆ ನಕ್ಷತ್ರಗಳ ಸಾವಿನ ಕುರಿತು ಹೊಸ ಅಂಶಗಳನ್ನು ಪ್ರತಿಪಾದಿಸಿದ್ದರು.

ಬ್ರಹ್ಮಾಂಡ ಅರಿಯಲು ಸಾಧ್ಯ..!

ಬ್ರಹ್ಮಾಂಡ ಅರಿಯಲು ಸಾಧ್ಯ..!

ನಕ್ಷತ್ರಗಳ ಸಾವು ತಿಳಿದರೆ ಬ್ರಹ್ಮಾಂಡ ಅರಿಯಲು ಸಾಧ್ಯ, ಬ್ರಹ್ಮಾಂಡ ಅರಿತುಕೊಂಡರೆ ‘ಬಿಗ್‌ಬ್ಯಾಂಗ್' ಬಗ್ಗೆ ತಿಳಿಯಲು ಸಾಧ್ಯ. ಹೀಗೆ ಇದೆರಡೂ ಅಂಶಗಳು ಗೊತ್ತಾದರೆ ಭೂಮಿ ಮೇಲಿನ ನೂರಾರು ಪ್ರಾಕೃತಿ ಸಮಸ್ಯೆಗೆ ಹಾಗೂ ಒತ್ತಡಗಳಿಗೆ ಪರಿಹಾರ ಸಿಗಲಿದೆ. ಇದೇ ಕಾರಣಕ್ಕೆ ವಿಜ್ಞಾನಿಗಳು ನಕ್ಷತ್ರಗಳ ಹುಟ್ಟು ಹಾಗೂ ಸಾವಿನ ಸುತ್ತಾ ಸಾಕಷ್ಟು ಅಧ್ಯಯನ ನಡೆಸುತ್ತಿದ್ದಾರೆ. ಇದೇ ರೀತಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಜೊತೆಗೆ ಭಾರತದ ವಿಜ್ಞಾನಿಗಳು ಸಂಶೋಧನೆ ನಡೆಸುವಾಗ ಬೃಹತ್ ನಕ್ಷತ್ರಗಳ ಸಾವಿನ ರಹಸ್ಯ ಬಯಲಾಗಿತ್ತು.

English summary
American scientists says nearly 500 stars in our Milky Way galaxy moving together in same direction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X