• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4ನೇ ಹಂತದಲ್ಲಿ 3 ಅಭ್ಯರ್ಥಿಗಳ ಆಸ್ತಿ ಗಳಿಕೆ 'ಶೂನ್ಯ ಸಂಪಾದನೆ'

|

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದೆ. ಈ ಹಂತದಲ್ಲಿ ಮೂವರು ಅಭ್ಯರ್ಥಿಗಳು ತಮ್ಮ ಆಸ್ತಿ ಗಳಿಕೆ 'ಶೂನ್ಯ' ಎಂದು ಘೋಷಿಸಿಕೊಂಡಿದ್ದಾರೆ. 4ನೇ ಹಂತದಲ್ಲಿ 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಶೂನ್ಯ ಸಂಪಾದನೆ ಉಳ್ಳ ಮೂವರು ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ ವರದಿ ಹೇಳಿದೆ.

4ನೇ ಹಂತ: ಬಿಜೆಪಿ 25, ಕಾಂಗ್ರೆಸ್ 11 ಕ್ರಿಮಿನಲ್ ಹಿನ್ನಲೆ ಅಭ್ಯರ್ಥಿಗಳು

ಪ್ರಿಯಾಂಕಾ ರಾಮರಾವ್ ಶಿರೋಲಿ ಹಾಗೂ ವಿಠಲ್ ನಾಥ ಚವಾಣ್ ಅವರು ಮಹಾರಾಷ್ಟ್ರದ ನಾಸಿಕ್ ಹಾಗೂ ಥಾಣೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರೇಮಲತ ಬನ್ಶಿವಾಲ್ ಅವರು ಟೊಂಕ್ ಸವಾಯಿ ಮಾಧೋಪುರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಮೂವರು ತಮ್ಮ ಪ್ಯಾನ್ ಕಾರ್ಡ್ ವಿವರ ಕೂಡಾ ನೀಡಿದ್ದಾರೆ. ಯಾವುದೇ ಆಸ್ತಿ ಗಳಿಕೆ ಇಲ್ಲ ಎಂದು ನಮೂದಿಸಿದ್ದಾರೆ.

ಇನ್ನಿತರ ಆಸಕ್ತಿಗಳ ಸಂಗತಿಗಳು:

* ಒಟ್ಟು 1 ಕೋಟಿ ರು ಆಸ್ತಿ ಹೊಂದಿದವರು: 303(33%)

ಪಕ್ಷವಾರು ವಿವರ:

* ಕಾಂಗ್ರೆಸ್ಸಿನ 57 ಅಭ್ಯರ್ಥಿಗಳ ಪೈಕಿ 50(88%)

* ಬಿಜೆಪಿಯ 57 ಅಭ್ಯರ್ಥಿಗಳ ಪೈಕಿ (88%)

* ಬಿಎಸ್ಪಿಯ 54 ಅಭ್ಯರ್ಥಿಗಳ ಪೈಕಿ 20(37%)

* ಎಸ್ಎಚ್ಎಸ್ ನ 21 ಅಭ್ಯರ್ಥಿಗಳ ಪೈಕಿ 13(62%)

* ಎಸ್ಪಿಯ 10 ಅಭ್ಯರ್ಥಿಗಳ ಪೈಕಿ 8(80%)

4ನೇ ಹಂತದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಆಸ್ತಿ ಸರಾಸರಿ 4.53 ಕೋಟಿ ರು ನಷ್ಟಿದೆ ಎಂದು ವರದಿ ಹೇಳಿದೆ.

English summary
There are three candidates with zero assets contesting the 4th phase of the Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X