ಭೋಪಾಲ್ ಅನಿಲ ದುರಂತಕ್ಕೆ 33ರ ಕಹಿ ನೆನಪು, ಕಲ್ಯಾಣ ಕನಸು

Posted By:
Subscribe to Oneindia Kannada

ಮಧ್ಯಪ್ರದೇಶದ ಭೋಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಲ್ಲಿ ಡಿಸೆಂಬರ್ 3, 1984ರಲ್ಲಿ ಸಂಭವಿಸಿದ ಅನಿಲ ಮಹಾದುರಂತದ ಕಹಿನೆನಪಿಗೆ 33 ವರ್ಷ ಸಂದಿದೆ.

ಆ ಪೋರ ತೋರಿದ ಕಾಳಜಿ ಪ್ರಧಾನಿ ತೋರಿದ್ದರೆ?

ಈ ದುರಂತದಿಂದ ಸುಮಾರು 5 ಲಕ್ಷ ಜನ, ಅಂದರೆ ಭೋಪಾಲದ ಅರ್ಧದಷ್ಟು ಜನಸಂಖ್ಯೆ, ಅನೇಕ ಬಗೆಯ ಅಂಗವಿಕಲತೆಗಳು ಹಾಗೂ ಅನಾರೋಗ್ಯಪೀಡಿತರಾಗಿ, ಉಸಿರಾಡುವ ಶವಗಳಂತೆ ಆಗಿದ್ದಾರೆ.

ಭೋಪಾಲ್ ದುರಂತ ನಮ್ಮನ್ನು ಎಚ್ಚರಿಸುವುದೆಂದು?

ಭಾರತದ ಇತಿಹಾಸದಲ್ಲೊಂದು ಮರೆಯಲಾರದ ಅನಾಹುತಗಳಲ್ಲಿ ಒಂದೆನಿಸಿರುವ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ನಿಧನರಾಗಿ ಮೂರು ವರ್ಷಗಳು ಕಳೆದಿವೆ.

1989ರಲ್ಲಿ ಯೂನಿಯನ್ ಕಾರ್ಬೈಡ್ ಸಂಸ್ಥೆ ಸಂತ್ರಸ್ತರಿಗೆ 470 ಯುಎಸ್ ಡಾಲರ್ ಪರಿಹಾರ ಮೊತ್ತವನ್ನು ಭಾರತ ಸರ್ಕಾರಕ್ಕೆ ನೀಡಿ ಕೇಸಿನಿಂದ ಖುಲಾಸೆಗೊಳಿಸುವಂತೆ ಕೋರಿತ್ತು. ಅದರೆ, ಜನ ಸಾಮಾನ್ಯರ ಮನಸ್ಸಿನಿಂದ ಭೋಪಾಲ್ ಮಹಾದುರಂತ ಎಂದಿಗೂ ಅಳಿಸುವುದಿಲ್ಲ.

1984ರ ಭೋಪಾಲ್ ಅನಿಲ ದುರಂತ

1984ರ ಭೋಪಾಲ್ ಅನಿಲ ದುರಂತ

1984ರ ಡಿಸೆಂಬರ್ 2-3 ಸಂಭವಿಸಿದ್ದ ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಂಪನಿ ಕಾರಣವಾಗಿತ್ತು. 42 ಟನ್ ವಿಷಾನಿಲ (ಮಿಥೈಲ್‌ಐಸೋ ಸೈನೇಟ್ MiC) ವಾತಾವರಣದಲ್ಲಿ ಸೇರಿಕೊಂಡ ಪರಿಣಾಮವಾಗಿ, ಈ ಕಾರ್ಖಾನೆಯ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿದ್ದ ಸುಮಾರು 3,800 ಜನ ತಕ್ಷಣ ಅಸುನೀಗಿದರೆ, ನಂತರದ ಎರಡು ದಶಕಗಳಲ್ಲಿ ಈ ಸೋರುವಿಕೆಯ ಪರಿಣಾಮವಾಗಿ 20,000 ಜನ ಸತ್ತ ವರದಿಯಾಗಿದೆ. ಇದಲ್ಲದೆ, ಸುಮಾರು 5 ಲಕ್ಷ ಜನ, ಶಾಶ್ವತ ಅಂಗವಿಕಲರಾಗಿದ್ದಾರೆ. ಚಿತ್ರದಲ್ಲಿ :ವಾರೆನ್ ಆಂಡರ್ಸನ್

ಮದುವೆ, ಜೀವನ ಎಲ್ಲವೂ ಕನಸು

ಮದುವೆ, ಜೀವನ ಎಲ್ಲವೂ ಕನಸು

ದುರಂತದಲ್ಲಿ ಕುಟುಂಬದ ಅರ್ಧದಷ್ಟು ಮಂದಿಯನ್ನು ಕಳೆದುಕೊಂಡ ರಾಮಸ್ವರೂಪ್ ಸಾಹು (46) ಕಷ್ಟಪಟ್ಟು ಹೆಜ್ಜೆಗಳನ್ನು ಇಡಬಲ್ಲರು. ಕಿರಿಯ ಸೋದರ ಮುಕೇಶ್ (35) ಮದುವೆಯಾಗುವ ಬಯಕೆಯಲ್ಲಿ ಕಾಲದೂಡುತ್ತಿದ್ದಾರೆ. ಮುಕೇಶ್ ರೀತಿಯಲ್ಲಿ ಇಲ್ಲಿನ ಅನೇಕ ಯುವಕರಿಗೆ ಮದುವೆ ಭಾಗ್ಯ ಇಲ್ಲದ್ದಂತಾಗಿದೆ. ಮದುವೆಯಾದವರು ಕೂಡಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಊರು ತುಂಬಾ ಇದೇ ಸಮಸ್ಯೆ

ಊರು ತುಂಬಾ ಇದೇ ಸಮಸ್ಯೆ

ರಾಮಸ್ವರೂಪ್ ಅವರ ನೆರೆ ಮನೆಯಾತ ಸಂಜಯ್ ಯಾದವ್ ಅವರ 21 ವರ್ಷ ಮಗಳು ಯೋಗಿತಾಳಿಗೆ ಗಂಡು ಹುಡುಕುತ್ತಿದ್ದಾರೆ. ಯಾದವ್ ಅವರ ಉಳಿದ ಮಕ್ಕಳ ಪೈಕಿ ವಿಕಾಸ್ (18) ಹಾಗೂ ಅಮಾನ್ (16) ಇಬ್ಬರೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕಿರಿಯ ಪುತ್ರಿ ವಂದನಾಳಿಗೆ ಋತುಚಕ್ರದ ಸಮಸ್ಯೆ ಇದೆ. ಯೋಗಿತಾಳನ್ನು ವಧುವಾಗಿ ಸ್ವೀಕರಿಸಲು ನೆರೆ ಮನೆಯವರೇ ಸಿದ್ಧರಿಲ್ಲ.

ಸಾಮೂಹಿಕ ರೋಗ ರುಜಿನ ಪೀಡಿತರು

ಸಾಮೂಹಿಕ ರೋಗ ರುಜಿನ ಪೀಡಿತರು

ಸಾಂಕ್ರಾಮಿಕ ರೋಗ ರುಜಿನ ಪೀಡಿತರ ನೆರವಿಗಾಗಿ ಸ್ವತಃ ಸಂತ್ರಸ್ತೆಯಾಗಿರುವ ಚಂಪಾದೇವಿ ಶುಕ್ಲಾ ಅವರು ಚಿಂಗಾರಿ ಎಂಬ ಹೆಸರಿನಲ್ಲಿ ಟ್ರಸ್ಟ್ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಮಕ್ಕಳಿಗೆ ರೋಗದ ಸಮಸ್ಯೆ ಬರುವ ಭೀತಿಯಿಂದ ಅನೇಕರು ಮದುವೆಯಾಗುವ ಧೈರ್ಯ ಮಾಡುತ್ತಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಇದು ನಡೆದುಕೊಂಡು ಬಂದಿದೆ. ಮದುವೆಯಾದವರು ಕಾಯಿಲೆ ಬೀಳುತ್ತಿದ್ದಂತೆ ಬೀದಿಗೆ ಹಾಕಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
33rd Year of Bhopal Gas Tragedy : Survivals dream of Wedding Bells Still Don't Ring in Affected Households.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ