Fact Check: ನಾಗಾಲ್ಯಾಂಡ್ ಹಿಂಸಾಚಾರದ ವಿಡಿಯೊ ಹಿಂದಿರುವ ಸತ್ಯ
ಡಿಸೆಂಬರ್ 4 ರಂದು ಭದ್ರತಾ ಕಾರ್ಯಾಚರಣೆಯಲ್ಲಿ 13 ನಾಗರಿಕರ ಹತ್ಯೆಯ ನಂತರ ನಾಗಾಲ್ಯಾಂಡ್‌ನಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಈ ಘಟನೆ ಬಳಿಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಹೇಳುವಂತೆ ನಾಗಾಲ್ಯಾಂಡ್‌ನಲ್ಲಿ 13 ನಾಗರಿಕರ ಹತ್ಯೆಯ ಬಳಿಕ ಸೋನ್ ಜಿಲ್ಲೆಯಲ್ಲಿ ಸ್ಥಳೀಯರು ಅಸ್ಸಾಂ ರೈಫಲ್ಸ್ ಶಿಬಿರದ ಮೇಲೆ ದಾಳಿ ನಡೆಸಿದ್ದು ಹೆಚ್ಚಿನ ಸಾವುನೋವುಗಳಿಗೆ ಕಾರಣವಾಯಿತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೆಲವು ರಸ್ತೆ ಬದಿಯ ಅಂಗಡಿಗಳಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ದೃಶ್ಯಗಳು ನಾಗಾಲ್ಯಾಂಡ್ ನ ತುಯೆನ್ಸಾಂಗ್ನಿಂದ ಬಂದವು ಎಂದು ಹೇಳಲಾಗುತ್ತಿದೆ. ಅಲ್ಲಿ ಸ್ಥಳೀಯರು ಹತ್ಯೆಯನ್ನು ವಿರೋಧಿಸಿ ಬೆಂಕಿ ಹಚ್ಚಿದ್ದಾರೆ ಎಂದು ವೈರಲ್ ವಿಡಿಯೋದ ಶೀರ್ಷಿಕೆ ಹೇಳುತ್ತದೆ.
ಟ್ವಿಟ್ಟರ್ ಬಳಕೆದಾರರು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನು "ನಾಗಾಲ್ಯಾಂಡ್‌ನ ತುಯೆನ್ಸಾಂಗ್‌ನಲ್ಲಿ ಆರು ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 13 ನಾಗರಿಕರನ್ನು ಕೊಂದ ನಂತರ ಬೆಂಕಿ ಹಚ್ಚುವ ಕೃತ್ಯ" ಎಂದು ಬರೆಯಲಾಗಿದೆ.
ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವೀಡಿಯೊದೊಂದಿಗೆ ವೈರಸ್ ಸಂದೇಶ ತಪ್ಪಾಗಿದೆ ಎಂದು ಕಂಡುಹಿಡಿದಿದೆ. ಡಿಸೆಂಬರ್ 5 ರಂದು ಶಾರ್ಟ್ ಸರ್ಕ್ಯೂಟ್‌ನಿಂದ ತುಯೆನ್ಸಾಂಗ್‌ನಲ್ಲಿ ಸಂಭವಿಸಿದ ಬೆಂಕಿಯ ವೀಡಿಯೊ ಇದಾಗಿದೆ. ಬೆಂಕಿ ಅವಘಡದಲ್ಲಿ ಕೆಲವು ಅಂಗಡಿಗಳಿಗೆ ಹಾನಿಯಾಗಿದೆ. ಈ ವಿಡಿಯೋ ನಾಗಾಲ್ಯಾಂಡ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿಲ್ಲ.
#FakeNews | This visuals are from Tuensang, fire broke out after a short circuit, 8-9 shops gutted down in fire. NOT RELATED TO MON FIRING INCIDENT https://t.co/cpZqUyO8a4
— Lenio Krichena (@LenioKrichena) December 5, 2021
"ದಿ ಎಕನಾಮಿಕ್ ಟೈಮ್ಸ್" ಮತ್ತು "ಮಿರರ್ ನೌ" ನಂತಹ ಹಲವಾರು ಮುಖ್ಯವಾಹಿನಿಯ ಸುದ್ದಿ ಪ್ರಕಟಣೆಗಳು ಮೋನ್ ಜಿಲ್ಲೆಯಲ್ಲಿ ಗುಂಪು ವಿಧ್ವಂಸಕತೆಯ ಕುರಿತಾದ ತಮ್ಮ ವರದಿಗಳಲ್ಲಿ ವೀಡಿಯೊವನ್ನು ಬಳಸಿಕೊಂಡಿವೆ. ಪ್ರಾಥಮಿಕವಾಗಿ ಈಶಾನ್ಯದ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತ ಲೆನಿಯೊ ಕ್ರಿಚೆನಾ ಅವರು ಇತ್ತೀಚೆಗೆ ವೈರಲ್ ವೀಡಿಯೊದಲ್ಲಿ ಕಂಡುಬರುವ ಬೆಂಕಿ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಎಂದು ಸೂಚಿಸಿದ್ದಾರೆ. ಅವರು ಟ್ವಿಟರ್ ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ಲೆನಿಯೊ ಕ್ರಿಚೆನಾ ಮತ್ತು "ನಾರ್ತ್ ಈಸ್ಟ್ ಬ್ಲಾಗ್" ತಂಡವನ್ನು ಸಂಪರ್ಕಿಸಿದಾಗ ಅವರು ವೀಡಿಯೊ ಯಾವುದೇ ವಿಧ್ವಂಸಕತೆಗೆ ಸಂಬಂಧಿಸಿಲ್ಲ ಎಂದು ದೃಢಪಡಿಸಿದರು.

ಜೊತೆಗೆ ತುಯೆನ್ಸಾಂಗ್ ನ ಕಾಂಚನ್ ಕಂಡ್ಪಾಲ್ ಅವರನ್ನು ಸಂಪರ್ಕಿಸಲಾಯಿತು. ಇವರು ವೈರಲ್ ವೀಡಿಯೊದಲ್ಲಿ ಹಸಿರು ಜಾಕೆಟ್‌ನಲ್ಲಿ ಓಡುತ್ತಿರುವ ವ್ಯಕ್ತಿ. ವೀಡಿಯೋ ಯಾವುದೇ ಗುಂಪು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿಲ್ಲ ಎಂದು ಕಂಡ್ಪಾಲ್ AFWA ಗೆ ತಿಳಿಸಿದ್ದಾರೆ.
"ಮೋನ್ ಜಿಲ್ಲೆಯಲ್ಲಿ ನಾಗರಿಕರ ಸಾವಿನ ನಂತರ, ತುಯೆನ್ಸಾಂಗ್‌ನಲ್ಲಿ ಜನರು ಪ್ರತಿಭಟನೆಯ ಸಂಕೇತವಾಗಿ ಕ್ಯಾಂಡಲ್ ಮೆರವಣಿಗೆಗಳನ್ನು ನಡೆಸಿದರು. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ವಿಧ್ವಂಸಕ ಕೃತ್ಯ ನಡೆದಿಲ್ಲ, "ಎಂದು ಕಂಡ್ಪಾಲ್ ದೃಢಪಡಿಸಿದ್ದಾರೆ.
Hi @bijukrdeka
— North East Blog (@northeastblog) December 6, 2021
You might want to see this. The incident that you have happily attributed as mob vandalism in your report. Do check facts and talk to your fellow journalists. https://t.co/pfCv2WCt44
ಘಟನೆಯನ್ನು ನೆನಪಿಸಿಕೊಂಡ ಅವರು, "ಭಾನುವಾರ (ಡಿಸೆಂಬರ್ 5) ಮಧ್ಯಾಹ್ನ 3:30 ರ ಸುಮಾರಿಗೆ ಬಜಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಯಾರೋ ನನಗೆ ಫೋನ್ ಮೂಲಕ ಮಾಹಿತಿ ನೀಡಿದರು. ನಾನು ತಕ್ಷಣ ನನ್ನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದೆ. ಅದೃಷ್ಟವಶಾತ್ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ 30 ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕೆಲವು ಅಂಗಡಿಗಳಿಗೆ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ'' ಎಂದರು.
It has been come to notice that some people are circulating rumours about fire at bazar point Tuensang https://t.co/eDfiAYFemW has no connection with any other https://t.co/66vczcGlO7 broke out due to suspected short circuit. Situation under control.
— Tuensang Police (@TuensangP) December 6, 2021
ತುಯೆನ್ಸಾಂಗ್‌ನ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ಅಜಿತ್ ಕುಮಾರ್ ವರ್ಮಾ ಅವರು ವಿಡಿಯೋ ಜೊತೆಗೆ ಹಂಚಿಕೊಳ್ಳಲಾಗಿರುವ ಸಂದೇಶ ತಪ್ಪಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಟ್ವಿಟ್ಟರ್‌ನಲ್ಲಿ ವೈರಲ್ ಹೇಳಿಕೆಯನ್ನು ತುಯೆನ್ಸಾಂಗ್ ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯ ವೀಡಿಯೊವನ್ನು ನಾಗಾಲ್ಯಾಂಡ್‌ನಲ್ಲಿ ಗುಂಪು ಹಿಂಸಾಚಾರ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

Fact Check
ಕ್ಲೇಮು
ಭದ್ರತಾ ಕಾರ್ಯಾಚರಣೆಯಲ್ಲಿ 13 ನಾಗರಿಕರ ಹತ್ಯೆಯ ನಂತರ ನಾಗಾಲ್ಯಾಂಡ್ ಹಿಂಸಾಚಾರದ ವಿಡಿಯೋ ಹಂಚಿಕೊಳ್ಳಲಾಗಿದೆ.
ಪರಿಸಮಾಪ್ತಿ
ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದ ವಿಡಿಯೋ ವೈರಲ್ ಆಗಿದೆ.












Click it and Unblock the Notifications