ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact-Check: ಎಸ್‌ಬಿಐ Yono ಖಾತೆಗೆ Pan ಕಾರ್ಡ್ ಅಪ್‌ಡೇಟ್ ಮಾಡಬೇಕೇ?

|
Google Oneindia Kannada News

ನವದೆಹಲಿ, ಆಗಸ್ಟ್ 29: 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದ ಯೋನೋ ಖಾತೆಯು ನಿಷ್ಕ್ರಿಯಗೊಳ್ಳುವ ಅಪಾಯವಿದೆ. ನಿಮ್ಮ ಎಸ್‌ಬಿಐ ಯೋನೋ ಖಾತೆಯನ್ನು ಸಕ್ರಿಯವಾಗಿ ಇರಿಸುವುದಕ್ಕೆ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿರಿ ಎನ್ನುವ ಸಂದೇಶಗಳು ಹಲವರ ಮೊಬೈಲ್ ಸಂಖ್ಯೆಗೆ ಬರುತ್ತಿವೆ. ಹಾಗಿದ್ದರೆ ಇದು ನಿಜವೇ?.

ಎಸ್‌ಬಿಐ ಗ್ರಾಹಕರು ತಮ್ಮ ಯೋನೋ ಖಾತೆಯನ್ನು ಸಕ್ರಿಯವಾಗಿ ಇರಿಸುವುದಕ್ಕೆ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನಿಸುವುದಾದರೆ ವರದಿಯಲ್ಲಿ ಉತ್ತರ ಕಂಡುಕೊಳ್ಳಿರಿ. ಏಕೆಂದರೆ ಇದೊಂದು ನಕಲಿ ಸಂದೇಶವಾಗಿದೆ. ಎಸ್‌ಬಿಐ ಕಡೆಯಿಂದ ಈ ರೀತಿಯಾದ ಯಾವುದೇ ಸಂದೇಶಗಳನ್ನು ನೀಡಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ.

Fact Check: ವಾಟ್ಸಾಪ್ ಮೆಸೇಜ್ ಮೇಲೆ ಕಣ್ಣಿಡಲು ಸರ್ಕಾರದ ಮಾರ್ಗಸೂಚಿ!?Fact Check: ವಾಟ್ಸಾಪ್ ಮೆಸೇಜ್ ಮೇಲೆ ಕಣ್ಣಿಡಲು ಸರ್ಕಾರದ ಮಾರ್ಗಸೂಚಿ!?

ಕೇಂದ್ರ ಸರ್ಕಾರದ ಅಧಿಕೃತ ಸತ್ಯ-ಪರೀಕ್ಷಕ ಸಂಸ್ಥೆ ಆಗಿರುವ ಪಿಐಬಿ ಫ್ಯಾಕ್ಟ್ ಚೆಕ್, ಇದೊಂದು ನಕಲಿ ಸಂದೇಶ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಬಗ್ಗೆ ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಪಿಐಬಿ ಫ್ಯಾಕ್ಟ್ ಚೆಕ್ ಮಾಡಿರುವ ಟ್ವೀಟ್ ಸಂದೇಶದಲ್ಲಿ ಏನಿದೆ?

ಪಿಐಬಿ ಫ್ಯಾಕ್ಟ್ ಚೆಕ್ ಮಾಡಿರುವ ಟ್ವೀಟ್ ಸಂದೇಶದಲ್ಲಿ ಏನಿದೆ?

"ಭಾರತೀಯ ಸ್ಟೇಟ್ ಬ್ಯಾಂಕ್ ಹೆಸರಿನಲ್ಲಿ ಗ್ರಾಹಕರಿಗೆ ಸಂದೇಶ ನೀಡಲಾಗಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸುವುದನ್ನು ತಡೆಯುವುದಕ್ಕಾಗಿ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿರಿ ಎಂದು ಮೆಸೇಜ್ ಕಳುಹಿಸಲಾಗಿದೆ. ಆದರೆ ಈ ರೀತಿಯ ಸಂದೇಶಗಳಿಗೆ ಗ್ರಾಹಕರು ಯಾವುದೇ ರೀತಿ ಪ್ರತಿಕ್ರಿಯೆ ನೀಡಬೇಡಿ. ನಿಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರಿ," ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮೂಲಕ ತಿಳಿಸಿದೆ. ಮೆಸೇಜ್ ಮೂಲಕ ಮಾಹಿತಿ ನೀಡುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಗ್ರಾಹಕರನ್ನು ಕೇಳುವುದಿಲ್ಲ ಎಂದು ತಿಳಿಸಿದೆ.

ನಕಲಿ ಸಂದೇಶ ಸ್ವೀಕರಿಸಿದವರು ಏನು ಮಾಡಬೇಕು?

ನಕಲಿ ಸಂದೇಶ ಸ್ವೀಕರಿಸಿದವರು ಏನು ಮಾಡಬೇಕು?

ಎಸ್ ಬಿಐ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆ ಸಂದೇಶವನ್ನು ಸ್ವೀಕರಿಸಿದ ಗ್ರಾಹಕರು ಎಚ್ಚರಿಕೆ ವಹಿಸಬೇಕು. ಈ ಕುರಿತು [email protected] ಗೆ ಈಮೇಲ್ ಕಳುಹಿಸುವ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ ಅಂತಹ ಸಂದೇಶಗಳ ಬಗ್ಗೆ ವರದಿ ಮಾಡುವಂತೆ ಸರ್ಕಾರದ ಅಧಿಕೃತ ಸತ್ಯ-ಪರೀಕ್ಷಕರು ನಾಗರಿಕರಿಗೆ ಮನವಿ ಮಾಡಿದ್ದಾರೆ.

ನಕಲಿ ಸಂದೇಶದಲ್ಲಿ ಉಲ್ಲೇಖವಾದ ಅಂಶವೇನು?

ನಕಲಿ ಸಂದೇಶದಲ್ಲಿ ಉಲ್ಲೇಖವಾದ ಅಂಶವೇನು?

"ಆತ್ಮೀಯ ಗ್ರಾಹಕರೇ ನಿಮ್ಮ SBI YONO ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಕೆಳಗಿನ ಲಿಂಕ್‌ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆಯನ್ನು ನವೀಕರಿಸಿ," ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಸಂದೇಶವನ್ನು ರಾಜೇಶ್ ಎಂಬ ಹೆಸರಿನಲ್ಲಿ ಕಳುಹಿಸಲಾಗಿದ್ದು, ಅದು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.

2021-22ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಗ್ರಾಹಕರನ್ನು ವಂಚಿಸುವುದರ ಮೂಲಕ ಸುಮಾರು 179 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಅದೇ ರೀತಿ 2020-21ರ ಹಣಕಾಸು ವರ್ಷದಲ್ಲಿ ಅಧಿಕೃತ RBI ಅಂಕಿ-ಅಂಶಗಳ ಪ್ರಕಾರ, "ಎಟಿಎಂ/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಂಚನೆ"ನಲ್ಲಿ 216 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

5.25 ಕೋಟಿ ದಾಟಿದ ಯೋನೋ ಖಾತೆದಾರರ ಸಂಖ್ಯೆ

5.25 ಕೋಟಿ ದಾಟಿದ ಯೋನೋ ಖಾತೆದಾರರ ಸಂಖ್ಯೆ

ಎಸ್ ಬಿಐ ಬ್ಯಾಂಕ್ ಶೀಘ್ರದಲ್ಲೇ ಯೋನೋ 2.0 ಅನ್ನು ಮಾತ್ರ ಹೊರತರಲಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದರು. "ಬ್ಯಾಂಕ್‌ನ ಡಿಜಿಟಲ್ ನಾಯಕತ್ವದ ಪ್ರಯಾಣವು ಮುಂದುವರಿಯುತ್ತಿದೆ. ಶೇಕಡಾ 96.6ಕ್ಕಿಂತ ಹೆಚ್ಚು ವಹಿವಾಟುಗಳನ್ನು ಈಗ ಪರ್ಯಾಯ ಮಾರ್ಗಗಳ ಮೂಲಕ ನಡೆಸಲಾಗುತ್ತಿದೆ. YONO ಖಾತೆಯಲ್ಲಿ ನೋಂದಾಯಿತ ಬಳಕೆದಾರರು ಈಗಾಗಲೇ 5.25 ಕೋಟಿ ದಾಟಿದ್ದಾರೆ. ಇದೊಂದು ದೊಡ್ಡ ಮೈಲಿಗಲ್ಲು ಮತ್ತು ಇದು ಬ್ಯಾಂಕ್‌ಗೆ ಗಮನಾರ್ಹ ಮೌಲ್ಯವನ್ನು ಸೃಷ್ಟಿಸಿದೆ. ಶೇಕಡಾ 65ರಷ್ಟು ಹೊಸ ಉಳಿತಾಯ ಖಾತೆಗಳನ್ನು YONO ಮೂಲಕ ತೆರೆಯಲಾಗಿದೆ," ಎಂದು ಹೇಳಿದರು.

Fact Check

ಕ್ಲೇಮು

ಎಸ್‌ಬಿಐ ಗ್ರಾಹಕರು ತಮ್ಮ ಯೋನೋ ಖಾತೆಯನ್ನು ನಿಷ್ಕ್ರಿಯಗೊಳಿಸದಂತೆ ನೋಡಿಕೊಳ್ಳಲು ಪ್ಯಾನ್ ಕಾರ್ಡ್ ಅನ್ನು ಅಪ್ ಡೇಟ್ ಮಾಡುವಂತೆ ಮೊಬೈಲ್ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸಿದೆ.

ಪರಿಸಮಾಪ್ತಿ

ಭಾರತೀಯ ಸ್ಟೇಟ್ ಬ್ಯಾಂಕ್ ಯೋನೋ ಖಾತೆದಾರರಿಗೆ ಪ್ಯಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆ ಯಾವುದೇ ರೀತಿ ಸಂದೇಶವನ್ನು ಕಳುಹಿಸಿಲ್ಲ. ಪ್ಯಾನ್ ಅಥವಾ ಬೇರೆ ರೀತಿಯ ವೈಯಕ್ತಿಕ ಮಾಹಿತಿಯನ್ನು ಬ್ಯಾಂಕ್ ಕೇಳಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
State Bank of india message’ asking customers to update PAN details is ‘fake’: Here Read Govt Clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X