ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಬಿಜೆಪಿ ಶಾಸಕರ ವಿರುದ್ಧ ಉತ್ತರಪ್ರದೇಶ ಗ್ರಾಮಸ್ಥರ ಪ್ರತಿಭಟನೆ?

|
Google Oneindia Kannada News

ಪಾಟ್ನಾ, ಅಕ್ಟೋಬರ್ 24: ಪ್ರಚಾರದ ದೃಷ್ಟಿಯಿಂದ ಜನಪ್ರತಿನಿಧಿಗಳ ಫೋಟೋಗಳನ್ನು ವಿಡಿಯೋಗಳನ್ನು ಬದಲಾಯಿಸಿ ತಪ್ಪು ಸಂದೇಶ ಹರಿಬಿಡುವುದರ ಬಗ್ಗೆ ನಾವು ಸುದ್ದಿ ಮಾಡುತ್ತಲೇ ಇದ್ದೇವೆ. ತನಿಖೆಯಿಂದ ವೈರಲ್ ಸುದ್ದಿಗಳ ಸತ್ಯಾಸತ್ಯತೆ ತಿಳಿಸುವಂತ ಪ್ರಯತ್ನ ಕೂಡ ನಡೆಯುತ್ತಲೇ ಇದೆ. ಸದ್ಯ ಇಂತಹ ತಪ್ಪು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವೈರಲ್ ಮಾಡಲಾಗಿದೆ.

ಉತ್ತರ ಪ್ರದೇಶದ ಗ್ರಾಮಕ್ಕೆ ಎರಡು ಬಾರಿ ಬಿಜೆಪಿ ಶಾಸಕರ ಪ್ರವೇಶವನ್ನು ಸಾರ್ವಜನಿಕರ ಗುಂಪು ವಿರೋಧಿಸಿದೆ. ಈ ಹೇಳಿಕೆಯೊಂದಿಗೆ ಕೆಲವು ಗ್ರಾಮಸ್ಥರು ಒಬ್ಬ ರಾಜಕೀಯ ನಾಯಕನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಮಾಡಲಾಗಿದೆ.

Fact Check: Uttar Pradesh villagers protesting against BJP MLA?

ಹಲವಾರು ಫೇಸ್‌ಬುಕ್ ಬಳಕೆದಾರರು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಗ್ರಾಮಸ್ಥರು ಬಿಜೆಪಿ ಕಾರ್ಯಕರ್ತರನ್ನು ವಿರೋಧಿಸುತ್ತಿದ್ದಾರೆ ಮತ್ತು ಎರಡು ಬಾರಿ ಶಾಸಕರಿಗೆ ಪ್ರವೇಶಿಸದಂತೆ ಒತ್ತಾಯಿಸಿದ್ದಾರೆ"ಎಂದು ವಿಡಿಯೋದೊಂದಿಗೆ ಬರೆಯಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಸಂದೇಶ ಭಾರೀ ವೈರಲ್ ಆಗಿದೆ.

ಆದರೆ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವೀಡಿಯೊದೊಂದಿಗಿನ ಸಂದೇಶ ತಪ್ಪು ಎಂದು ಕಂಡುಹಿಡಿದಿದೆ. ಈ ವಿಡಿಯೋ ತುಣುಕು ಬಿಹಾರದಿಂದ ಬಂದಿದ್ದು, ಮಹೇಶ್ವರ ಹಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅವರು ಜೆಡಿಯು ಶಾಸಕರಾಗಿದ್ದು ಪ್ರಸ್ತುತ ಬಿಹಾರ ವಿಧಾನಸಭೆಯ ಉಪ ಸ್ಪೀಕರ್ ಆಗಿದ್ದಾರೆ.

AFWA ತನಿಖೆ

YouTube ನಿಂದಾಗಿ ಈ ವಿಡಿಯೊದ ಅಸಲಿಯತ್ತು ಕಂಡುಹಿಡಿಯಲಾಗಿದೆ. ವಿಡಿಯೊದ ಶೀರ್ಷಿಕೆಯಲ್ಲಿ ರಾಜಕಾರಣಿಯ ಹೆಸರನ್ನು ಉಲ್ಲೇಖಿಸದಿದ್ದರೂ, ಶೀರ್ಷಿಕೆಯಲ್ಲಿ "ಕಲ್ಯಾಣಪುರ ವಿಧಾನ ಸಭಾದ ಜನರು ಶಾಸಕರಿಂದ ಉತ್ತರವನ್ನು ಕೇಳುತ್ತಿದ್ದಾರೆ" ಎಂದು ಬರೆಯಲಾಗಿದೆ. ಇದರಿಂದ ಸುಳಿವು ಪಡೆದು ಹುಡುಕಾಟ ನಡೆಸಿದಾಗ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿ ಬಂದಿರುವುದು ಗೊತ್ತಾಗಿದೆ. ವರದಿಯು ವೈರಲ್ ಪೋಸ್ಟ್‌ನ ವೀಡಿಯೊ ತುಣುಕನ್ನು ಹೋಲುವ ಫೋಟೋವನ್ನು ಹೊಂದಿತ್ತು. ಇದರ ಆಧಾರದ ಮೇಲೆ ಅಕ್ಟೋಬರ್ 2020 ವರದಿಯು ಹೇಳುವಂತೆ ಯೋಜನೆ ಮತ್ತು ಅಭಿವೃದ್ಧಿ ಸಚಿವ ಮಹೇಶ್ವರ ಹಜಾರಿ ಅವರು ಮತ ಕೇಳಲು ಹೋದಾಗ ಬಿಹಾರದ ಸಮಸ್ತಿಪುರದಲ್ಲಿ ಸ್ಥಳೀಯರಿಂದ ಪ್ರತಿರೋಧವನ್ನು ಎದುರಿಸಿದರು ಎನ್ನುವುದು ಗೊತ್ತಾಗಿದೆ. ಆರ್‌ಜೆಡಿ ನಾಯಕ ಮತ್ತು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಕೂಡ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಹೇಶ್ವರ ಹಜಾರಿ ಯಾರು?

ಮಹೇಶ್ವರ ಹಜಾರಿ(59) 2009 ರಲ್ಲಿ ಬಿಹಾರದ ಸಮಸ್ತಿಪುರ ಕ್ಷೇತ್ರದಿಂದ 15 ನೇ ಲೋಕಸಭೆಗೆ ಆಯ್ಕೆಯಾದರು. ಹಜಾರಿ 2005 (ಫೆಬ್ರವರಿ ಮತ್ತು ಅಕ್ಟೋಬರ್), 2015 ಮತ್ತು 2020 ರಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. ಹಜಾರಿ ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಸೋದರಸಂಬಂಧಿ. ನಗರಾಭಿವೃದ್ಧಿ ಮತ್ತು ವಸತಿ ಹಾಗೂ ಹಿಂದಿನ ನಿತೀಶ್ ಕುಮಾರ್ ಸರ್ಕಾರದಲ್ಲಿ ಯೋಜನೆ ಮತ್ತು ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಸಮಸ್ತಿಪುರ ಜಿಲ್ಲೆಯ ಕಲ್ಯಾಣಪುರದಿಂದ ಶಾಸಕರಾಗಿದ್ದಾರೆ. ಜೊತೆಗೆ ಬಿಹಾರ ವಿಧಾನಸಭೆಯ ಪ್ರಸ್ತುತ ಉಪ ಸ್ಪೀಕರ್ ಆಗಿದ್ದಾರೆ.

ಆದ್ದರಿಂದ ಈ ವೀಡಿಯೊ ಕಾನೂನುಬದ್ಧವಾಗಿಲ್ಲ ಎಂದು ತೀರ್ಮಾನಿಸಬಹುದು. ವಿಡಿಯೋಕ್ಕೂ ಉತ್ತರ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಡಿಯೋವನ್ನು ಅಕ್ಟೋಬರ್ 2020 ರಲ್ಲಿ ಬಿಹಾರದಲ್ಲಿ ಕಲ್ಯಾಣಪುರ ಶಾಸಕ ಮಹೇಶ್ವರ ಹಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾಗ ಚಿತ್ರೀಕರಿಸಲಾಗಿದೆ.

Fact Check

ಕ್ಲೇಮು

ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕರಿಗೆ ಗ್ರಾಮ ಪ್ರವೇಶಕ್ಕೆ ಪ್ರವೇಶಿಸದಂತೆ ಒತ್ತಾಯ ಮಾಡಲಾಗಿದೆ.

ಪರಿಸಮಾಪ್ತಿ

ಈ ವಿಡಿಯೋ ಜೆಡಿಯು ಶಾಸಕ ಮಹೇಶ್ವರ ಹಜಾರಿ ಅವರು ಮತ ಕೇಳಲು ಹೋದಾಗ ಬಿಹಾರದ ಸಮಸ್ತಿಪುರದಲ್ಲಿ ಸ್ಥಳೀಯರು ಗ್ರಾಮ ಪ್ರವೇಶಿಸದಂತೆ ಒತ್ತಾಯಿಸಿದರು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video showing a few villagers protesting against a man likely a political leader has gone viral with the claim that the group was resisting a two-time BJP MLA’s entry into the Uttar Pradesh village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X