• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ನನಗೆ ಅಧಿಕಾರ ಬೇಕು, ಸತ್ಯವಲ್ಲ- ಹೀಗಂದರಾ ರಾಹುಲ್ ಗಾಂಧಿ?

|
Google Oneindia Kannada News

ಭಾರತ್ ಜೋಡೋ ಯಾತ್ರೆ ದೇಶದೆಲ್ಲೆಡೆ ತುಂಬಾ ಸುದ್ದಿಯಲ್ಲಿದೆ. ಸೆಪ್ಟೆಂಬರ್ 7ರಂದು ಪ್ರಾರಂಭವಾದ ಈ ಯಾತ್ರೆ ಸದ್ಯ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಪ್ರಮುಖ ನೇತೃತ್ವ ವಹಿಸಿದ್ದಾರೆ. ಈ ಯಾತ್ರೆಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಮಧ್ಯೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ವಾದ ಪ್ರತಿವಾದಗಳು ನಡೆಯುತ್ತಲೇ ಇವೆ. ಈ ಎಲ್ಲದರ ನಡುವೆ ರಾಹುಲ್ ಗಾಂಧಿಯನ್ನು ಒಳಗೊಂಡ 15 ಸೆಕೆಂಡುಗಳ ಅವಧಿಯ ವಿಡಿಯೊ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಈ ವೈರಲ್ ವಿಡಿಯೋದಲ್ಲಿ ರ್‍ಯಾಲಿಯೊಂದರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ನನಗೆ ಅಧಿಕಾರ ಬೇಕು. ನನಗೆ ಸತ್ಯದ ಬಗ್ಗೆ ನಂಬಿಕೆ ಇಲ್ಲ. ಸತ್ಯ ನರಕಕ್ಕೆ ಹೋಗಬಹುದು. ನನಗೆ ಸೀಟು ಮಾತ್ರ ಬೇಕು" ಎಂದು ಹೇಳುತ್ತಿದ್ದಾರೆ.

ಗುರ್ಜರ್ ಸಮುದಾಯದಿಂದ ಭಾರತ್ ಜೋಡೋ ಯಾತ್ರೆಗೆ ವಿರೋಧ ಗುರ್ಜರ್ ಸಮುದಾಯದಿಂದ ಭಾರತ್ ಜೋಡೋ ಯಾತ್ರೆಗೆ ವಿರೋಧ

ಇದು ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ್ದು ಎಂಬಂತೆ "ರಾಹುಲ್ ಜಿ ಅವರಿಗೆ ಅಧಿಕಾರ ಮಾತ್ರ ಬೇಕು. ಅವರು ಸತ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ" ಎಂದು ಹಿಂದಿಯಲ್ಲಿ ಶೀರ್ಷಿಕೆಗಳೊಂದಿಗೆ ಹಲವರು ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಎಎಫ್‌ಡ್ಲ್ಯೂಎಯ ವೈರಲ್ ವಿಡಿಯೋದ ಮೂಲ ವಿಡಿಯೊವನ್ನು ಹಂಚಿಕೋಂಡಿದೆ. ಈ ವೈರಲ್ ವಿಡಿಯೋದ ಹಿಂದಿರುವ ಸತ್ಯವನ್ನು ಬಯಲಿಗೆಳದಿದೆ.

ಎಎಫ್‌ಡ್ಲ್ಯೂಎ ತನಿಖೆ

ಈ ವಿಡಿಯೋದ ಸತ್ಯಾಸತ್ಯತೆಯ ಪರಿಶೀಲನೆಯ ವೇಳೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಇದು ಡಿಸೆಂಬರ್ 13, 2021 ರಂದು ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಲಾದ ಕಾಂಗ್ರೆಸ್ ಪಕ್ಷದ "ಮೆಹಂಗೈ ಹಟಾವೊ ಮಹಾ ರ್‍ಯಾಲಿ" ಯಲ್ಲಿ ಸೆರೆಹಿಡಿಯಲಾದ ವಿಡಿಯೋವಾಗಿದೆ. ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲೂ ಈ ವಿಡಿಯೊದ ದೀರ್ಘ ಆವೃತ್ತಿಯನ್ನು ಸಹ ನಾವು ಕಾಣಬಹುದು. "ರಾಜಸ್ಥಾನದ ಜೈಪುರದಲ್ಲಿ 'ಮೆಹಂಗೈ ಹಟಾವೋ ಮಹಾ ರ್‍ಯಾಲಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಬಿಜೆಪಿಯನ್ನು ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಹಿಂದಿಯಲ್ಲಿ ಮಾತನಾಡುವಾಗ 'ನನಗೆ ಸತ್ಯ ಬೇಕು. ನಾನು ಸತ್ಯವನ್ನು ಹುಡುಕುತ್ತೇನೆ .ನನಗೆ ಅಧಿಕಾರ ಬೇಡ', ಅದೇ ರೀತಿ ಅವರು (ಬಿಜೆಪಿ) 'ನನಗೆ ಅಧಿಕಾರ ಬೇಕು, ನನಗೆ ಸತ್ಯದ ಬಗ್ಗೆ ಕಾಳಜಿ ಇಲ್ಲ, ಸತ್ಯ ನರಕಕ್ಕೆ ಹೋಗಬಹುದು. ನನಗೆ ಸೀಟು ಬೇಕು' ಎಂದು ಹೇಳುತ್ತಾರೆ. ಈ ಸುದೀರ್ಘ ವಿಡಿಯೋದ ಮೊದಲ ಹೇಳಿಕೆಯನ್ನು ತೆಗೆದು ಕೊನೆ ಹೇಳಿಕೆಯನ್ನು ಜೋಡಿಸಿ ವೈರಲ್ ಮಾಡಲಾಗಿದೆ.

Fact check:Rahul Gandhi says I want power, not truth?

ಆಗ ರ್‍ಯಾಲಿ ಮತ್ತು ಗಾಂಧಿಯವರ ಭಾಷಣವನ್ನು ಸುದ್ದಿವಾಹಿನಿಗಳು ವ್ಯಾಪಕವಾಗಿ ವರದಿ ಮಾಡಿದ್ದವು. ದಿ ಹಿಂದೂ ವರದಿಯ ಪ್ರಕಾರ, ಗಾಂಧಿ ಹೊರತುಪಡಿಸಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಮಲ್ಲಿಕಾರ್ಜುನ ಖರ್ಗೆ, ಭೂಪಿಂದರ್ ಸಿಂಗ್ ಹೂಡಾ, ಕಮಲ್ ನಾಥ್, ಸಚಿನ್ ಪೈಲಟ್, ಅಜಯ್ ಮಾಕನ್, ಅಧೀರ್ ರಂಜನ್ ಚೌಧರಿ ಇತರರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಹೀಗಾಗಿ ವೈರಲ್ ಕ್ಲಿಪ್‌ನಲ್ಲಿ ಗಾಂಧಿ ಅವರು ತಮ್ಮ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಅವರು ಭಾರತೀಯ ಜನತಾ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Fact Check

ಕ್ಲೇಮು

‘ನನಗೆ ಅಧಿಕಾರ ಬೇಕು, ಸತ್ಯವಲ್ಲ’ ಹೀಗಂದರಂತೆ ರಾಹುಲ್ ಗಾಂಧಿ.

ಪರಿಸಮಾಪ್ತಿ

ರಾಹುಲ್ ಗಾಂಧಿ ‘ನನಗೆ ಅಧಿಕಾರ ಬೇಕು, ಸತ್ಯವಲ್ಲ’ ​​ಎಂದು ಹೇಳಿಲ್ಲ. ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Fact check, a video has gone viral where Rahul Gandhi said 'I want power, not truth'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X