ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಿಜೆಪಿ ಟಿಶರ್ಟ್' ಧರಿಸಿದ ಮಗುವನ್ನು ಹಿಡಿದುಕೊಂಡ ರಾಹುಲ್ ಗಾಂಧಿ?

|
Google Oneindia Kannada News

ಬಿಜೆಪಿಯ ಕಮಲದ ಚಿಹ್ನೆಯಿರುವ ಕೇಸರಿ ಟೀ ಶರ್ಟ್ ಧರಿಸಿರುವ ಮಗುವನ್ನು ರಾಹುಲ್ ಗಾಂಧಿ ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರವನ್ನು ಹಂಚಿಕೊಳ್ಳುವ ಮೂಲಕ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಂಗ್ರೆಸ್ ನಾಯಕನನ್ನು ಟೀಕಿಸಿದ್ದಾರೆ. "ಅವರು ಕೂಡ ಬಿಜೆಪಿಗಾಗಿ ಗುಂಡಿಯನ್ನು ಒತ್ತುತ್ತಿರುವುದು ದೃಢಪಡಿಸಿದ್ದಾರೆಯೇ?" ಎಂದು ಬರೆಯುವ ಮೂಲಕ ಈ ಫೋಟೋ ಭಾರೀ ವೈರಲ್ ಆಗಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಚಿತ್ರವನ್ನು ಮಾರ್ಫ್(morphed) ಮಾಡಲಾಗಿದೆ ಎಂದು ಕಂಡುಹಿಡಿದಿದೆ. ಮೂಲ ಚಿತ್ರದಲ್ಲಿ, ಮಗು ಬಿಜೆಪಿ ಚಿಹ್ನೆಯ ಟೀ ಶರ್ಟ್ ಧರಿಸಿಲ್ಲ. ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು ಮೂಲ ಚಿತ್ರವನ್ನು ನವೆಂಬರ್ 3, 2017 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ ಎಂದು ಕಂಡುಹಿಡಿಯಲಾಗಿದೆ.

Fact Check: Rahul Gandhi holding kid wearing ‘BJP tshirt’?

2017 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳ ಮೊದಲು ಭೂ ಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ವಲ್ಸಾದ್‌ನ ಧರಂಪುರ್ ಚೋಕ್ಡಿಯಲ್ಲಿ ರೈತರನ್ನು ಭೇಟಿ ಮಾಡಲು ರಾಹುಲ್ ಹೋಗಿದ್ದರು. ರೈತರು ಮತ್ತು ಪಕ್ಷದ ನಾಯಕರೊಂದಿಗೆ ರಾಹುಲ್ ಇರುವ ಹಲವಾರು ಚಿತ್ರಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಚಲಾವಣೆಯಲ್ಲಿರುವ ಚಿತ್ರವು ಇದರಲ್ಲಿತ್ತು. ಮೂಲ ಚಿತ್ರದಲ್ಲಿ, ಮಗು ಯಾವುದೇ ಪಕ್ಷದ ಲೋಗೋ ಇಲ್ಲದೆ ಫಂಕಿ ಟಿಶರ್ಟ್ ಧರಿಸಿರುವುದನ್ನು ಕಾಣಬಹುದು.

2017 ರ ಗುಜರಾತ್ ಚುನಾವಣೆಗೆ ಸಮಯದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಎರಡು ದಿನದ ಪ್ರಚಾರ ಕೈಗೊಂಡಿದ್ದರು. ಹೇಗಾದರೂ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ನಿರ್ಧರಿಸಿದ್ದ ರಾಹುಲ್ ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡಿದ್ದರು.

ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಎರಡು ದಿನಗಳ ಪ್ರಚಾರ ಪ್ರವಾಸ ಮಾಡಿದ್ದರು. ಇದೇ ಸಮಯದಲ್ಲಿ ಅವರು ಅಮ್ರೆಲಿ ಮತ್ತು ಭಾವ್ ನಗರ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿ ರಾಹುಲ್ ಜನರೊಂದಿಗೆ ಸಂವಹನ ನಡೆಸಿದರು. ಸಾರ್ವಜನಿಕ ಸಭೆಗಳಲ್ಲೂ ಪಾಲ್ಗೊಂಡರು.

Fact Check: Rahul Gandhi holding kid wearing ‘BJP tshirt’?

ರಾಹುಲ್ ತಮ್ಮ ಎರಡನೇ ದಿನದ ಪ್ರಚಾರ ಸಮಯದಲ್ಲಿ ಹಲವು ರ್‍ಯಾಲಿಗಳನ್ನು ಕೈಗೊಳುತ್ತಾರೆ. ಜೊತೆಗೆ ಲತಿಯಲ್ಲಿ ಸಾರ್ವಜನಿಕ ಸಭೆಯನ್ನೂ ನಡೆಸುತ್ತಾರೆ. ನಂತರ ಧಾಸ, ಗಧಡ, ಬರ್ವಲ ಮತ್ತು ವಲ್ಲಭಿಪುರ್ ನಗರಗಳಿಗೆ ಭೇಟಿ ನೀಡಿ ಭಾವನಗರ್ನಲ್ಲಿರುವ ನಾರಿ ಚೊಕ್ಡಿ ಪ್ರದೇಶದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯೊಂದಿಗೆ ರಾಹುಲ್ ಪ್ರಚಾರ ಪೂರ್ಣಗೊಂಡಿತ್ತು. ಈ ಸಮಯದಲ್ಲಿ ಗುಜರಾತ್ ಚುನಾವಣಾ ದಿನಾಂಕ ಘೋಷಣೆಯಾದ ನಂತರ ರಾಜ್ಯಕ್ಕೆ ಹಲವಾರು ಬಾರಿ ರಾಹುಲ್ ನೀಡಿದ್ದಾರೆ. ಡಿ.9 ಮತ್ತು ಡಿ.14 ಎರಡು ಹಂತಗಳಲ್ಲಿ ಗುಜರಾತ್‌ನಲ್ಲಿ ಚುನಾವಣೆ ನಡೆದು ಚುನಾವಣೆಯ ಫಲಿತಾಂಶ ಡಿ. 18ರಂದು ಹೊರಬಿಂದಿತ್ತು. ಆದರೆ ಎರಡೂ ರಾಜ್ಯಗಳಲ್ಲಿ ರಾಹುಲ್ ಗೆಲ್ಲುವ ಪ್ರಯತ್ನ ವಿಫಲವಾಗಿತ್ತು.

ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುವುದೇ ಬಿಜೆಪಿ ಸರ್ಕಾರದ ಅತಿದೊಡ್ಡ ಭ್ರಷ್ಟಾಚಾರ ಎಂದು ರಾಹುಲ್ ತಮ್ಮ ಸಾರ್ವಜನಿಕ ರ್ಯಾಲಿಗಳಲ್ಲಿ ಆರೋಪಿಸಿದ್ದರು. ಅವರು ಅಧಿಕಾರಕ್ಕೆ ಬಂದರೆ ಗುಜರಾತ್‌ನಲ್ಲಿ ಭೂಸ್ವಾಧೀನ ಕಾನೂನುಗಳನ್ನು ಬದಲಾಯಿಸುವುದಾಗಿ ಭರವಸೆ ನೀಡಿದ್ದರು.ಜಮೀನು ಕಳೆದುಕೊಂಡ ಅಥವಾ ಭೂಸ್ವಾಧೀನಕ್ಕೆ ನೋಟಿಸ್‌ ಪಡೆದ ರೈತರು ರಾಹುಲ್‌ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ (ಡಿಎಂಐಸಿ), ವಾಪಿ-ವಡೋದರಾ ಎಕ್ಸ್‌ಪ್ರೆಸ್‌ವೇ ಮತ್ತು ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ನಂತಹ ಯೋಜನೆಗಳಿಗೆ ಒಪ್ಪಿಗೆಯಿಲ್ಲದೆ ತಮ್ಮ ಭೂಮಿಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೆಚ್ಚಿನ ರೈತರು ಆರೋಪಿಸಿದ್ದರು. ಆದ್ದರಿಂದ, ರಾಹುಲ್ ಮಗುವನ್ನು ಹಿಡಿದಿರುವ ನಾಲ್ಕು ವರ್ಷಗಳ ಹಳೆಯ ಫೋಟೋ ಮಾರ್ಫ್ ಮಾಡಲಾಗಿದೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಮೂಲ ಚಿತ್ರವನ್ನು ಹೋಲಿಸಿ ನೋಡಿದಾಗ ವ್ಯತ್ಯಾಸ ಇಲ್ಲಿ ಕಾಣಬಹುದಾಗಿದೆ.

Fact Check

ಕ್ಲೇಮು

‘ಬಿಜೆಪಿ ಟಿಶರ್ಟ್' ಧರಿಸಿದ ಮಗುವನ್ನು ಹಿಡಿದುಕೊಂಡ ರಾಹುಲ್ ಗಾಂಧಿ ಫೋಟೋ ವೈರಲ್

ಪರಿಸಮಾಪ್ತಿ

ರಾಹುಲ್ ಗಾಂಧಿ ಹಿಡಿದುಕೊಂಡಿದ್ದ ಮಗು ‘ಬಿಜೆಪಿ ಟಿಶರ್ಟ್' ಧರಿಸಿರಲಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A picture circulating on social media shows Rahul Gandhi holding a kid wearing a saffron tshirt with the BJP’s lotus symbol on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X