Get Updates
Get notified of breaking news, exclusive insights, and must-see stories!

Fact check: ಧ್ವನಿವರ್ಧಕ ನಿಷೇಧ: ರಾಜ್ ಠಾಕ್ರೆ ಹೇಳಿಕೆಯಂತೆ ಫ್ರಾನ್ಸ್‌ನಲ್ಲಿ ಪ್ರೊಟೆಸ್ಟ್

ಸತ್ಯ ಪರಿಶೀಲನೆ: ಸಾರ್ವಜನಿಕ ನಮಾಜ್ ವಿರುದ್ಧದ ಈ ಫ್ರಾನ್ಸ್‌ನಲ್ಲಿ ಪ್ರತಿಭಟನೆಯು ಧ್ವನಿವರ್ಧಕಗಳಲ್ಲಿ ರಾಜ್ ಠಾಕ್ರೆಯವರ ಘೋಷಣೆಗೆ ಸಂಬಂಧಿಸಿಲ್ಲ

ದೇಶದಲ್ಲಿ ಧಾರ್ಮಿಕ ಬಿಕ್ಕಟ್ಟು ದಿನಕಳೆದಂತೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ತಪ್ಪು ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ವೈರಲ್ ಮಾಡುವುದರ ಮೂಲಕ ಕೋಮುವಾದಿಗಳು ಇದಕ್ಕೆ ಪುಷ್ಟಿ ನೀಡುತ್ತಿದ್ದಾರೆ. ಹೀಗೊಂದು ಫೋಟೋವೊಂದನ್ನು ತಪ್ಪು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಕೋಮು ಬಣ್ಣವನ್ನು ಹಚ್ಚಲಾಗಿದೆ.

ಥಾಣೆಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಇತ್ತೀಚೆಗೆ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ಮೇ 3 ರೊಳಗೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಕಂಠಪಾಠ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ಈ ವೇಳೆ ಮುಸ್ಲಿಮರ ಸಾರ್ವಜನಿಕ ಪ್ರಾರ್ಥನೆಯ ವಿರುದ್ಧ ಜನರು ಪ್ರತಿಭಟಿಸುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಇದು ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಾಗಿದ್ದು ಅದು ಠಾಕ್ರೆಯವರ ಹೇಳಿಕೆಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

Fact check: Protest in France inspired by Raj Thackerays statement

ಅಂತಹ ಒಂದು ವಿಡಿಯೊದ ಶೀರ್ಷಿಕೆ ಹೀಗಿದೆ, "ಪ್ಯಾರಿಸ್‌ನಲ್ಲಿ ರಾಜ್ ಠಾಕ್ರೆ ಎಫೆಕ್ಟ್... ಪ್ಯಾರಿಸ್‌ನಲ್ಲಿ ಮುಸ್ಲಿಮರು ರಸ್ತೆಗಳಲ್ಲಿ ಪ್ರಾರ್ಥನೆ ಮಾಡುವಾಗ ರಸ್ತೆಗಳನ್ನು ನಿರ್ಬಂಧಿಸಿದರೆ. ಈ ವೇಳೆ ಫ್ರೆಂಚ್ ನಾಗರಿಕರು ಫ್ರೆಂಚ್ ರಾಷ್ಟ್ರಗೀತೆಯನ್ನು ಅಷ್ಟೇ ಜೋರಾಗಿ ಹಾಡುತ್ತಾರೆ" ಎಂದಿದೆ.

ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ವಿಡಿಯೋ ಜೊತೆಗಿನ ಸಂದೇಶ ತಪ್ಪುದಾರಿಗೆಳೆಯುತ್ತಿದೆ ಎಂದು ಕಂಡುಹಿಡಿದಿದೆ. ಫ್ರಾನ್ಸ್‌ನ ಈ ವಿಡಿಯೊ ನಾಲ್ಕು ವರ್ಷಗಳಿಗಿಂತಲೂ ಹಳೆಯದು. ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ನಿರ್ಬಂಧಿಸಿದ್ದಕ್ಕಾಗಿ ಸಾರ್ವಜನಿಕ ನಮಾಜ್ ವಿರುದ್ಧ ಪ್ಯಾರಿಸ್‌ನಲ್ಲಿ 2017 ರಲ್ಲಿ ಪ್ರತಿಭಟನೆ ಮಾಡಿರುವುದನ್ನು ವಿಡಿಯೊ ತೋರಿಸಿದೆ.

Fact check: Protest in France inspired by Raj Thackerays statement

ವೈರಲ್ ವಿಡಿಯೊದಲ್ಲಿ ಕಂಡುಬರುವ ದೃಶ್ಯಗಳಂತೆಯೇ ಫೋಟೋಗಳು 2017 ರಿಂದ ಹೆಚ್ಚು ವರದಿಗಳಲ್ಲಿ ಕಂಡುಬಂದಿದೆ. ಈ ವರದಿಗಳ ಪ್ರಕಾರ ನವೆಂಬರ್ 2017 ರಲ್ಲಿ ನೂರಾರು ರಾಜಕಾರಣಿಗಳು ಮತ್ತು ಪ್ಯಾರಿಸ್‌ನ ಉಪನಗರದ ಕ್ಲಿಚಿಯ ನಿವಾಸಿಗಳು ಮುಸ್ಲಿಮರು ಸಾರ್ವಜನಿಕವಾಗಿ ನಮಾಜ್ ಮಾಡುವಾಗ ಫ್ರೆಂಚ್ ರಾಷ್ಟ್ರಗೀತೆಯನ್ನು ಹಾಡುತ್ತಾ ಪ್ರತಿಭಟಿಸಿದರು.

ಈ ಘಟನೆಯನ್ನು ನವೆಂಬರ್ 10, 2017 ರಂದು BBC ವರದಿ ಮಾಡಿದೆ. BBC ಪ್ರಕಾರ, ಪ್ರತಿಭಟನಾಕಾರರು "ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ನಿರ್ಬಂಧಿಸಿದ್ದಕ್ಕಾಗಿ ಸಾರ್ವಜನಿಕ ನಮಾಜ್ ವಿರುದ್ಧ" ಪ್ರತಿಭಟನೆ ಎಂದು ಹೇಳುತ್ತದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕ್ಲಿಚಿಯ ಬಲಪಂಥೀಯ ಮೇಯರ್ ರೆಮಿ ಮುಝೆಯು, ಬೀದಿ ಪ್ರಾರ್ಥನೆಗಳನ್ನು ನಿಷೇಧಿಸುವಂತೆ ಆಂತರಿಕ ಸಚಿವಾಲಯಕ್ಕೆ ಕರೆ ನೀಡಿದರು.

ವೈರಲ್ ವಿಡಿಯೊದಲ್ಲಿ ಪ್ರತಿಭಟನಾಕಾರರು ಹಿಡಿದಿರುವಂತೆಯೇ ನೀಲಿ ಬ್ಯಾನರ್ ಅನ್ನು ಈ ಬಿಬಿಸಿ ವರದಿಯಲ್ಲಿಯೂ ಕಾಣಬಹುದು. ಇದರಲ್ಲಿ ಫ್ರೆಂಚ್‌ ಭಾಷೆಯಲ್ಲಿ "STOP AUX PRIERES DE RUE ILLEGALS" ಎಂದು ಬರೆಯಲಾಗಿದೆ. ಇದರರ್ಥ "ಅಕ್ರಮ ಬೀದಿ ಪ್ರಾರ್ಥನೆಗಳನ್ನು ನಿಲ್ಲಿಸಿ" ಎಂದಿದೆ.

ವೈರಲ್ ವಿಡಿಯೊವನ್ನು ಹೋಲುವ ದೃಶ್ಯಗಳೊಂದಿಗೆ ಅದೇ ಪ್ರತಿಭಟನೆಯ ಚಿಡಿಯೊವನ್ನು ನವೆಂಬರ್ 15, 2017 ರಂದು ಅಸೋಸಿಯೇಟೆಡ್ ಪ್ರೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ "ಪ್ಯಾರಿಸ್ ಉಪನಗರವು ಮುಸ್ಲಿಂ ಬೀದಿ ಪ್ರಾರ್ಥನೆಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ.

ಹೀಗಾಗಿ ಸದ್ಯ ವೈರಲ್ ವಿಡಿಯೊ ನಾಲ್ಕು ವರ್ಷಗಳಿಗಿಂತಲೂ ಹಳೆಯದಾಗಿದೆ ಮತ್ತು ಠಾಕ್ರೆ ಅವರ ಧ್ವನಿವರ್ಧಕ ನಿಷೇಧದ ಬೇಡಿಕೆಗೆ ಸಂಬಂಧಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

Fact Check

ಕ್ಲೇಮು

ಫ್ರಾನ್ಸ್‌ನಲ್ಲಿ ನಡೆದ ಪ್ರತಿಭಟನೆ ಅದು ಠಾಕ್ರೆಯವರ ಹೇಳಿಕೆಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

ಪರಿಸಮಾಪ್ತಿ

ಫ್ರಾನ್ಸ್‌ನಲ್ಲಿ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ನಿರ್ಬಂಧಿಸಿದ್ದಕ್ಕಾಗಿ ಸಾರ್ವಜನಿಕ ನಮಾಜ್ ವಿರುದ್ಧ ಪ್ರತಿಭಟನೆ ಮಾಡಿದರು.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+