ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಎಟಿಎಂನಲ್ಲಿ ಎರಡು ಬಾರಿ 'ಕ್ಯಾನ್ಸಲ್' ಬಟನ್ ಒತ್ತಿದರೆ PIN ಕಳ್ಳತನವಾಗುವುದಿಲ್ಲ?

|
Google Oneindia Kannada News

ನವದೆಹಲಿ, ಏಪ್ರಿಲ್ 05: ಇಂಟರ್ನೆಟ್ ಯುಗದಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ಸಂದೇಶವೊಂದು ಎಟಿಎಂನಿಂದ ಹಣ ತೆಗೆಯುವ ಮುನ್ನ 'ಕ್ಯಾನ್ಸಲ್' ಬಟನ್ ಅನ್ನು ಎರಡು ಬಾರಿ ಒತ್ತಿದರೆ ಎಟಿಎಂ ಕಾರ್ಡ್ ಬ್ಲಾಕ್ ಆಗುತ್ತದೆ. ಪಿನ್ ಕಳ್ಳತನಕ್ಕೆ ಕಡಿವಾಣ ಹಾಕಬಹುದು ಎಂಬ ಹೇಳಿಕೆಯೊಂದಿಗೆ ಸಂದೇಶವೊಂದು ವೈರಲ್ ಆಗುತ್ತಿದೆ. ಈ ವೈರಲ್ ಸಂದೇಶದ ಸತ್ಯಾಸತ್ಯತೆ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಡಿಜಿಟಲ್ ಪಾವತಿಯನ್ನು ಮಾಡುತ್ತಾರೆ. ಆದರೆ ಎಟಿಎಂ ಅನ್ನು ನಗದು ಪಡೆಯಲು ಬಳಸಲಾಗುತ್ತದೆ. ಆದರೆ ಅನೇಕ ಬಾರಿ ಎಟಿಎಂ ಕಾರ್ಡ್ ಅನ್ನು ಎಚ್ಚರಿಕೆಯಿಂದ ಬಳಸದಿರುವುದು ಗ್ರಾಹಕರಿಗೆ ಕಾರ್ಡ್ ಬ್ಲಾಕ್‌ ನಂತಹ ಸಮಸ್ಯೆಗಳಿಗೆ ಎಡೆ ಮಾಡಬಹುದು. ಹೀಗಾಗಿ ಬ್ಯಾಂಕ್ ತನ್ನ ಗ್ರಾಹಕರಿಗೆ ಎಟಿಎಂಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಾಲಕಾಲಕ್ಕೆ ನೀಡುತ್ತಿರುತ್ತದೆ. ಈ ಮಧ್ಯೆ ಬ್ಯಾಂಕ್ ಮತ್ತು ವಂಚನೆಗೆ ಸಂಬಂಧಿಸಿದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Fact check: ಬೈಕ್ ಕಳ್ಳತನಕ್ಕಾಗಿ 12 ವರ್ಷಗಳ ಹಿಂದೆ ಸಿಎಂ ಭಗವಂತ್ ಮಾನ್ ಬಂಧನ? Fact check: ಬೈಕ್ ಕಳ್ಳತನಕ್ಕಾಗಿ 12 ವರ್ಷಗಳ ಹಿಂದೆ ಸಿಎಂ ಭಗವಂತ್ ಮಾನ್ ಬಂಧನ?

ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶ ವೈರಲ್ ಆಗುತ್ತಿದ್ದು, ಎಟಿಎಂನಲ್ಲಿ 'ಕ್ಯಾನ್ಸಲ್' ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ವ್ಯವಹಾರ ನಡೆಸುವ ಮುನ್ನ ಪಿನ್ ಕಳ್ಳತನವನ್ನು ತಡೆಯಬಹುದು ಎಂದು ಹೇಳಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ಸಂದೇಶವನ್ನು ತಪ್ಪು ಎಂದು ಪೋಸ್ಟ್ ಮೂಲಕ ತಿಳಿಸಿದೆ. ಹೀಗಾಗಿ ವೈರಲ್ ಸಂದೇಶ ತಪ್ಪು ಸಂದೇಶವನ್ನು ನೀಡಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ. ಅಂತಹ ಯಾವುದೇ ಸಂದೇಶವನ್ನು ಆರ್‌ಬಿಐ ನೀಡಿಲ್ಲ ಎಂದು ಫ್ಯಾಕ್ಟ್ ಚೆಕ್ ಮೂಲಕ ತಿಳಿದುಬಂದಿದೆ.

ಪಿಐಬಿ ಫ್ಯಾಕ್ಟ್ ಚೆಕ್ ಈ ಸುದ್ದಿಯನ್ನು ಪರಿಶೀಲಿಸಿದಾಗ ವೈರಲ್ ಸಂದೇಶ ನಕಲಿ ಎಂದು ತಿಳಿದು ಬಂದಿದೆ ಮತ್ತು ಆರ್‌ಬಿಐ ಇಂತಹ ಯಾವುದೇ ಸಂದೇಶವನ್ನು ನೀಡಿಲ್ಲ ಎಂದು ಫ್ಯಾಕ್ಟ್ ಚೆಕ್ ಮೂಲಕ ತಿಳಿದು ಬಂದಿದೆ. ಈ ಸಂದೇಶಕ್ಕೆ ಸಂಬಂಧಿಸಿದಂತೆ ಪಿಐಬಿ ವೈರಲ್ ಪೋಸ್ಟ್ ಹಂಚಿಕೊಂಡಿದೆ. ಜೊತೆಗೆ ಈ ಸಂದೇಶವನ್ನು ಆರ್‌ಬಿಐ ತಪ್ಪಾಗಿದೆ ಎಂದು ಟ್ವೀಟ್ ಮಾಡಿರುವುದನ್ನು ಪೋಸ್ಟ್ ಹೇಳುತ್ತದೆ.

Fact Check: Pressing the ‘Cancel’ Button Twice Before the Transaction Will Not Lead To Pin Theft

ವಹಿವಾಟಿನ ಮೊದಲು ಎಟಿಎಂನಲ್ಲಿ 'ರದ್ದು ಮಾಡಿ' (ಕ್ಯಾನ್ಸಲ್) ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ಪಿನ್ ಕಳ್ಳತನವನ್ನು ತಡೆಯಬಹುದು. ಇದರೊಂದಿಗೆ ನಿಮ್ಮ ವಹಿವಾಟುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ, ಪಿನ್ ಅನ್ನು ಯಾರಿಗೂ ಹೇಳಬೇಡಿ ಮತ್ತು ಕಾರ್ಡ್‌ನಲ್ಲಿ ಪಿನ್ ಬರೆಯಬೇಡಿ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. ಆದರೆ ಇದರಲ್ಲಿ ವಹಿವಾಟಿನ ಮೊದಲು ಎಟಿಎಂನಲ್ಲಿ 'ರದ್ದು ಮಾಡಿ' (ಕ್ಯಾನ್ಸಲ್) ಬಟನ್ ಅನ್ನು ಎರಡು ಬಾರಿ ಒತ್ತುವ ಮೂಲಕ ಪಿನ್ ಕಳ್ಳತನವನ್ನು ತಡೆಯಬಹುದು ಎನ್ನುವ ಸಂದೇಶವನ್ನು ಆರ್‌ಬಿಐ ಎಲ್ಲೂ ನೀಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.

Fact Check

ಕ್ಲೇಮು

ಎಟಿಎಂನಲ್ಲಿ ಎರಡು ಬಾರಿ 'ಕ್ಯಾನ್ಸೆಲ್' ಬಟನ್ ಒತ್ತಿದರೆ ಪಿನ್ ಕಳ್ಳತನವಾಗುವುದಿಲ್ಲ

ಪರಿಸಮಾಪ್ತಿ

ಎಟಿಎಂನಲ್ಲಿ ಎರಡು ಬಾರಿ 'ಕ್ಯಾನ್ಸೆಲ್' ಬಟನ್ ಒತ್ತಿದರೆ ಪಿನ್ ಕಳ್ಳತನವಾಗುವುದಿಲ್ಲ ಎಂಬ ಸಂದೇಶ ತಪ್ಪಾಗಿದೆ ಎಂದು ಆರ್‌ಬಿಐ ಹೇಳಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact check: Pressing the 'Cancel' button twice before the transaction will not lead to PIN theft, know the truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X