ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್? ಹೀಗೊಂದು ಸಂದೇಶ ವೈರಲ್

|
Google Oneindia Kannada News

ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಮಾಹಿತಿಯು ಬಹಳ ವೇಗವಾಗಿ ವೈರಲ್ ಆಗುತ್ತದೆ. ಅನೇಕ ಬಾರಿ ವದಂತಿಗಳು ಬಹಳ ವೇಗವಾಗಿ ವೈರಲ್ ಆಗುತ್ತವೆ. ಇದರಿಂದ ಜನರ ಅನುಮಾನಗಳು ಹೆಚ್ಚಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ಸಹ ಬಹಳಷ್ಟು ಹಂಚಿಕೊಳ್ಳಲ್ಪಡಲಾಗುತ್ತಿದೆ. ಇದೇ ವೇಳೆ ಇಂತಹದ್ದೇ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಇದನ್ನು ಪತ್ರಿಕಾ ಮಾಹಿತಿ ಬ್ಯೂರೋ (PIB) ಸತ್ಯವನ್ನು ಪರಿಶೀಲಿಸಿದೆ. PIB ಯ ಸತ್ಯಾಸತ್ಯತೆ ಪರಿಶೀಲನೆಯಿಂದ ಈ ಸಂದೇಶ ನಕಲಿ ಎಂದು ಕಂಡುಹಿಡಿಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೇಗವಾಗಿ ವೈರಲ್ ಆಗುತ್ತಿದೆ. ಇದರಲ್ಲಿ ಕೋವಿಡ್ -19 ಕಾರಣದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಇರುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಶಾಲಾ-ಕಾಲೇಜುಗಳು ಸಹ ಮುಚ್ಚಲ್ಪಡುತ್ತವೆ. ಈ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ವೈರಲ್ ಆದ ನಂತರ, PIB ಅದನ್ನು ಸತ್ಯ-ಪರಿಶೀಲನೆ ಮಾಡಿದೆ. PIB ಯ ಸತ್ಯ ಪರಿಶೀಲನೆಯಲ್ಲಿ ಈ ಸಂದೇಶ ಸಂಪೂರ್ಣವಾಗಿ ತಪ್ಪಾಗಿದೆ. ಈ ಎಲ್ಲಾ ಹೇಳಿಕೆಗಳು ಸಂಪೂರ್ಣವಾಗಿ ಹುಸಿಯಾಗಿದೆ ಎಂದು ಹೇಳಿದರು.


ವೈರಲ್ ಸಂದೇಶದಂತೆ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸರ್ಕಾರ ಹಂಚಿಕೊಂಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಭಾರತ ಸರ್ಕಾರ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಈ ಎಲ್ಲಾ ಹೇಳಿಕೆಗಳು ಸುಳ್ಳು ಮತ್ತು ನಕಲಿಯಾಗಿದೆ. ಇದರೊಂದಿಗೆ ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸಿ ಅದರ ಸತ್ಯಾಸತ್ಯ ಪರಿಶೀಲನೆ ಬಳಿಕ ಹಮಚಿಕೊಳ್ಳಿ ಎಂದು ಮನವಿ ಮಾಡಿದೆ.

Fact check: Nationwide lockdown due to Covid-19? Such a message went viral

ಪ್ರಪಂಚದ ಅನೇಕ ದೇಶಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದರಿಂದ ಭಾರತದ ಆತಂಕವೂ ಹೆಚ್ಚಿದೆ. ಕೊರೊನಾ ಪರೀಕ್ಷೆ ಮತ್ತು ಲಸಿಕೆಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಸೂಚನೆಗಳನ್ನು ನೀಡಿದೆ. ಇದರೊಂದಿಗೆ ವಿದೇಶದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೆ ಲಾಕ್‌ಡೌನ್ ಮತ್ತು ಶಾಲಾ-ಕಾಲೇಜು ಮುಚ್ಚುವ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹೀಗಾಗಿ ಈ ವೈರಲ್ ಸಂದೇಶ ತಪ್ಪಾಗಿದೆ.

Fact Check

ಕ್ಲೇಮು

ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ.

ಪರಿಸಮಾಪ್ತಿ

ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact check: The message that a nationwide lockdown has been announced due to Covid-19 has gone viral. What is the truth behind this message? Fact check:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X