ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊರೊನಾವೈರಸ್ ಲಸಿಕೆ ಹಾರಿಸಿಕೊಂಡರೆ 2 ವರ್ಷದಲ್ಲೇ ಸಾವು!?

|
Google Oneindia Kannada News

ನವದೆಹಲಿ, ಮೇ 25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸಾಮೂಹಿಕವಾಗಿ ಲಸಿಕೆ ಹಾಕಿಸಿಕೊಳ್ಳುವುದರಿಂದ ರೂಪಾಂತರ ರೋಗಾಣುಗಳು ರಚನೆ ಆಗುತ್ತವೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಫ್ರೆಂಚ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಹೇಳಿದ್ದಾರೆ.

ಕೊವಿಡ್-19 ಸೋಂಕಿಗೆ ಲಸಿಕೆ ಪಡೆದುಕೊಳ್ಳುವುದರ ಬಗ್ಗೆ ಆಲೋಚಿಸುವುದೂ ಕೂಡ ತಪ್ಪಾಗುತ್ತದೆ. ಈ ಲಸಿಕೆಗಳು ಕೊರೊನಾವೈರಸ್ ರೂಪಾಂತರಗಳಿಗೆ ಕಾರಣವಾಗುವುದರ ಜೊತೆಗೆ ನಮ್ಮನ್ನು ರೋಗದಿಂದ ಸಾವಿನತ್ತ ಕರೆದುಕೊಂಡು ಹೋಗುತ್ತವೆ ಎಂದು ತಿಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.

Fact Check: ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಕಡಿಮೆ?Fact Check: ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಕಡಿಮೆ?

ಸಾಮೂಹಿಕ ಲಸಿಕೆ ನೀಡುವುದು ಕ್ಷಮಿಸಲಾಗದ ತಪ್ಪಾಗುತ್ತದೆ. ಈ ರೀತಿಯ ವೈಜ್ಞಾನಿಕ ಮತ್ತು ವೈದ್ಯಕೀಯ ಲೋಪವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಲಸಿಕೆಯು ರೋಗದ ರೂಪಾಂತರವನ್ನು ಸೃಷ್ಟಿಸುತ್ತವೆ ಎಂಬುದನ್ನು ಇತಿಹಾಸದ ಪುಸ್ತಕಗಳೇ ಹೇಳುತ್ತವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಸಂದರ್ಶನದಲ್ಲಿ ನೀಡಿರುವ ಹೇಳಿಕೆಯನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಆರ್ಎಐಆರ್ ಫೌಂಡೇಶನ್ ಭಾಷಾಂತರ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾವೈರಸ್ ರೂಪಾಂತರಗಳಿಗೆ ಲಸಿಕೆ ಕಾರಣವೇ. ಲಸಿಕೆ ಹಾಕಿಸಿಕೊಂಡರೆ ಅಪಾಯ ಎದುರಾಗುತ್ತಾರೆಯೇ. ಅಸಲಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಆಳ ಅಳತೆ ಏನು. ಈ ಸುದ್ದಿಯಲ್ಲಿ ಅಸಲಿ ಎಷ್ಟು, ನಕಲಿ ಎಷ್ಟು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

"ಕೊರೊನಾವೈರಸ್ ಲಸಿಕೆಯಿಂದ ಸೋಂಕಿಗೆ ಮತ್ತಷ್ಟು ಬಲ"

ರೋಗಾಣುಗಳ ವರ್ಧನೆಯ ಮೇಲೆ ಪ್ರತಿಕಾಯಗಳ ಉತ್ಪತ್ತಿ ಅವಲಂಬನೆ ಆಗಿರುತ್ತದೆ ಎಂಬ ವಿಷಯ ಪ್ರತಿಯೊಬ್ಬ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಿಗೂ ಗೊತ್ತಿದೆ. ಹೀಗಿದ್ದರೂ ಅವರೆಲ್ಲ ಏನನ್ನೂ ಹೇಳದೇ ಮೌನಕ್ಕೆ ಶರಣಾಗಿದ್ದಾರೆ. ದೇಹದಲ್ಲಿನ ರೋಗಾಣುಗಳಿಂದಲೇ ಪ್ರತಿಕಾಯ ಉತ್ಪತ್ತಿ ಆಗುವುದರಿಂದ ಸೋಂಕು ಮತ್ತಷ್ಟು ಬಲಗೊಳ್ಳುತ್ತದೆ ಎಂದು "ಪಿಯರೆ ಬಾರ್ನೇರಿಯಸ್" ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಹೇಳಿರುವ ಬಗ್ಗೆ ವರದಿಯಾಗಿದೆ.

ಚಿತ್ರ ಕೃಪೆ: Wikipedia

"ಲಸಿಕೆಯಿಂದಲೇ ರೂಪಾಂತರಗಳ ಸೃಷ್ಟಿ"

ರೋಗಾಣುಗಳು ರೂಪಾಂತರಗೊಳ್ಳುವುದು ಸ್ವಾಭಾವಿಕವೇ ಆಗಿದ್ದರೂ ಲಸಿಕೆಯು ಈ ಪ್ರಕ್ರಿಯೆಗೆ ಪ್ರೇರೇಪಣೆ ನೀಡುತ್ತದೆ. ವೈರಸ್ ತಾನೇ ಏನು ಮಾಡುವುದಕ್ಕೆ ಸಾಧ್ಯ. ದೇಹಣದಲ್ಲಿ ವೈರಸ್ ಸಾಯಬಹುದು ಅಥವಾ ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ ಲಸಿಕೆಯನ್ನು ಪಡೆದುಕೊಳ್ಳುವುದರಿಂದ ರೋಗಾಣುಗಳಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಅದು ರೂಪಾಂತರಗಳ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಹೇಳಿದ್ದಾರೆ ಎಂದು ವರದಿಯಾಗಿದೆ.

"ಸಾವಿರ ಪ್ರಕರಣ ಹೆಚ್ಚಳಕ್ಕೆ ಲಸಿಕೆ ಪಡೆದಿರುವುದೇ ಕಾರಣ?"

ಕೊರೊನಾವೈರಸ್ ರೂಪಾಂತರಗಳ ಹುಟ್ಟಿಗೆ ಲಸಿಕೆ ಪಡೆದುಕೊಳ್ಳುತ್ತಿರುವುದೇ ಮುಖ್ಯ ಕಾರಣವಾಗಿದೆ. ನೀವು ಪ್ರತಿಯೊಂದು ರಾಷ್ಟ್ರವನ್ನು ಗಮನಿಸಿದರೆ ಪ್ರತಿಯೊಂದು ದೇಶಗಳಲ್ಲಿ ಲಸಿಕೆ ಪಡೆಯುವವರ ಜೊತೆಗೆ ಪ್ರಾಣ ಬಿಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶವನ್ನು ಗಮನಿಸಿದಾಗ, ಜನವರಿ ತಿಂಗಳಿನಲ್ಲಿ ಲಸಿಕೆಯನ್ನು ಪರಿಚಯಿಸಲಾಗಿದೆ. ಅಲ್ಲಿಂದ ಕೊರೊನಾದ ಹೊಸ ರೂಪಾಂತರಗಳ ಸ್ಫೋಟದ ಜೊತೆಗೆ ಯುವಕರಿಗೆ ಹೆಚ್ಚು ಅಪಾಯಕಾರಿಯಾದ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗಿರುವುದು ಕಂಡು ಬಂದಿದೆ ಎಂದು ಅವರು ಹೇಳಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಲಸಿಕೆ ಹಾಕಿಸಿಕೊಂಡವರನ್ನೂ ಬಿಟ್ಟಿಲ್ಲ ಕೊರೊನಾವೈರಸ್

ಲಸಿಕೆ ಹಾಕಿಸಿಕೊಂಡವರನ್ನೂ ಬಿಟ್ಟಿಲ್ಲ ಕೊರೊನಾವೈರಸ್

ಪ್ರಸ್ತುತ ಸನ್ನಿವೇಶದಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲೂ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿರುವವರ ಬಗ್ಗೆ ಸಂಶೋಧನೆ ನಡೆಸಬೇಕಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರೀವಿಯನ್ಷನ್ ನೀಡಿರುವ ಏಪ್ರಿಲ್ ತಿಂಗಳ ವರದಿ ಪ್ರಕಾರ, 5,800 ಜನರಿಗೆ ಲಸಿಕೆ ಹಾಕಿಸಿಕೊಂಡ ನಂತರವೂ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 396 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು,74 ರೋಗಿಗಳು ಲಸಿಕೆ ಹಾಕಿಸಿಕೊಂಡ ನಂತರವೂ ಪ್ರಾಣ ಬಿಟ್ಟಿದ್ದಾರೆ. ಲಸಿಕೆ ಪಡೆದುಕೊಳ್ಳುವುದರಿಂದ ರೂಪಾಂತರಗಳ ಸೃಷ್ಟಿ ಆಗುತ್ತದೆ ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಕೊವಿಡ್-19 ರೋಗಾಣು ಹಿಂದೆ ಮನುಷ್ಯನ ಷಡ್ಯಂತ್ರ

ಕೊವಿಡ್-19 ರೋಗಾಣು ಹಿಂದೆ ಮನುಷ್ಯನ ಷಡ್ಯಂತ್ರ

ಕಳೆದ 2020ರ ಏಪ್ರಿಲ್ ತಿಂಗಳಿನಲ್ಲಿ ಫ್ರೆಂಚ್ ದೂರದರ್ಶನದಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ಮಾತನಾಡಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಈ ರೋಗಾಣು ನೈಸರ್ಗಿಕವಾಗಿ ಹರಡುವುದಲ್ಲ ಎಂದು ಶಂಕಿಸಿದ್ದರು. ಸಾರ್ಸ್-ಕೊವಿ-2 ವೈರಸ್ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಮನುಷ್ಯನೇ ಸಿದ್ಧಪಡಿಸಿರುವ ರೋಗಾಣುವಾಗಿದೆ. ಹೆಚ್ಐವಿ ಮತ್ತು ಮಲೇರಿಯಾದ ಸೂಕ್ಷ್ಮಾಣುಗಳ ಉಪಸ್ಥಿತಿಯಲ್ಲಿ ಹೊಸ ವೈರಸ್ ಅನ್ನು ಸೃಷ್ಟಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಕೊರೊನಾವೈರಸ್ ಲಸಿಕೆಯು ಸುರಕ್ಷಿತವಾಗಿದೆ ಎಂದ ಪಿಐಬಿ

ಕೊರೊನಾವೈರಸ್ ಲಸಿಕೆಯು ಸುರಕ್ಷಿತವಾಗಿದೆ ಎಂದ ಪಿಐಬಿ

ಲಸಿಕೆ ಪಡೆದುಕೊಳ್ಳುವುದರಿಂದ ಕೊರೊನಾವೈರಸ್ ರೂಪಾಂತರಗಳು ಸೃಷ್ಟಿಯಾಗುವ ಬಗ್ಗೆ ಫ್ರೆಂಚ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಹೇಳಿಕೆಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನೆಲೆ ಪ್ರೆಸ್ ಇನ್ ಫಾರ್ಮೆಷನ್ ಬ್ಯುರೋ ಪೋಸ್ಟ್ ಹಿಂದಿನ ಸತ್ಯಾಸತ್ಯತೆಯನ್ನು ಬಯಲು ಮಾಡಿದೆ. ಫ್ರೆಂಚ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಹೆಸರಿನಲ್ಲಿ ಹರಿದಾಡುತ್ತಿರುವ ಪೋಸ್ಟ್ ನಕಲಿಯಾಗಿದ್ದು, ಅದನ್ನು ಫಾರ್ ವರ್ಡ್ ಮಾಡದಂತೆ ಎಚ್ಚರಿಸಿದೆ. ಇದರ ಜೊತೆಗೆ ಕೊರೊನಾವೈರಸ್ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಪಿಐಬಿ ಸ್ಪಷ್ಟಪಡಿಸಿದೆ.

Fact Check

ಕ್ಲೇಮು

ಲಸಿಕೆ ಹಾಕಿಸಿಕೊಳ್ಳುವುದರಿಂದ ಕೊರೊನಾವೈರಸ್ ರೂಪಾಂತರಗಳ ಸೃಷ್ಟಿ

ಪರಿಸಮಾಪ್ತಿ

ಫ್ರೆಂಚ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಲುಕ್ ಮೊಂಟಾಗ್ನಿಯರ್ ಹೆಸರಿನಲ್ಲಿ ಹರಿದಾಡುತ್ತಿರುವ ಪೋಸ್ಟ್ ನಕಲಿಯಾಗಿದೆ. ಕೊರೊನಾವೈರಸ್ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Coronavirus Variant Are Spreading After Vaccination In World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X