ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.4ರಷ್ಟು ಹೆಚ್ಚಳ!

|
Google Oneindia Kannada News

ನವದೆಹಲಿ, ಸಪ್ಟೆಂಬರ್ 22: ಕೇಂದ್ರ ಸರ್ಕಾರದ ನೌಕರರು 7ನೇ ವೇತನ ಆಯೋಗದ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಸಂದರ್ಭದಲ್ಲಿ ಇದೇ ವರ್ಷ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಶೇ.4ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡುತ್ತದೆ ಎಂಬ ವಾಟ್ಸಾಪ್ ಸಂದೇಶವು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶದ ಪ್ರಕಾರ, ಕೇಂದ್ರ ಸರ್ಕಾರವು ಜುಲೈ 1, 2022 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳವನ್ನು ಜಾರಿಗೆ ತರಲು ನಿರ್ಧರಿಸಿದೆ. ತುಟ್ಟಿಭತ್ಯೆ ಅನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಲಾಗಿದೆ.

Fact Check: ವಾಟ್ಸಾಪ್ ಮೆಸೇಜ್ ಮೇಲೆ ಕಣ್ಣಿಡಲು ಸರ್ಕಾರದ ಮಾರ್ಗಸೂಚಿ!?Fact Check: ವಾಟ್ಸಾಪ್ ಮೆಸೇಜ್ ಮೇಲೆ ಕಣ್ಣಿಡಲು ಸರ್ಕಾರದ ಮಾರ್ಗಸೂಚಿ!?

ಪತ್ರಿಕಾ ಮಾಹಿತಿ ಬ್ಯೂರೋದ ನಡೆಸಿದ ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿಯನ್ನು ತಳ್ಳಿ ಹಾಕಿದೆ. ಕೇಂದ್ರ ಸರ್ಕಾರವು ಇದುವರೆಗೂ ಇಂಥ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ವಾಟ್ಸಾಪ್‌ನಲ್ಲಿನ ಆದೇಶ ನಕಲಿ ಎಂದು ಹೇಳಿದ್ದು, ಕೇಂದ್ರ ಹಣಕಾಸು ಸಚಿವಾಲಯವು ಅಂತಹ ಯಾವುದೇ ಸೂಚನೆಯನ್ನು ಹೊರಡಿಸಿಲ್ಲ ಎಂದು ತಿಳಿಸಿದೆ.

Fact Check: Central Govt offering 4 per cent additional DA hike? Know truth behind WhatsApp message

ನಕಲಿ ಸಂದೇಶದಲ್ಲಿ ಇರುವುದೇನು?:

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ನಕಲಿ ನೋಟೀಸ್‌ನಲ್ಲಿ, "ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು 2022 ರ ಜುಲೈ 1 ರಿಂದ ಜಾರಿಗೆ ಬರುವಂತೆ ಮೂಲ ವೇತನದಲ್ಲಿ ಶೇ. 34 ರಿಂದ ಶೇ.38ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ."

ಸಾಮಾಜಿಕ ಮಾಧ್ಯಮದಲ್ಲಿನ ಕ್ಲೈಮ್‌ಗೆ ಸಂಬಂಧಿಸಿದ ಗೊಂದಲವನ್ನು ಸ್ಪಷ್ಟಪಡಿಸಿದ PIB ಫ್ಯಾಕ್ಟ್ ಚೆಕ್, "#WhatsApp ನಲ್ಲಿ ಹರಿದಾಡುತ್ತಿರುವ ಆದೇಶವು 01.07.2022 ರಿಂದ ಹೆಚ್ಚುವರಿ ಕಂತುಗಳ ತುಟ್ಟಿಭತ್ಯೆ ಜಾರಿಯಾಗಲಿದೆ ಎಂದು ಹೇಳುತ್ತದೆ. ಈ ಆದೇಶವು ನಕಲಿಯಾಗಿದ್ದು, ಕೇಂದ್ರ ಹಣಕಾಸು ಸಚಿವಾಲಯವು ಇಂತಹ ಯಾವುದೇ ಆದೇಶವನ್ನು ನೀಡಿಲ್ಲ," ಎಂದು ತಿಳಿಸಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಈಗಿರುವ ಡಿಎ ಶೇ.34ರಷ್ಟಿದ್ದು, ಈಗಿರುವ ಈ ದರ ಏರಿಕೆ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಕೇಂದ್ರವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶೇಕಡಾ 3 ರಷ್ಟು ಹೆಚ್ಚಳವನ್ನು ಘೋಷಿಸಿದ್ದು, ಅದರ ದರವು ಶೇಕಡಾ 31 ರಿಂದ 34ಕ್ಕೆ ಹೆಚ್ಚಾಗಿತ್ತು.

Fact Check

ಕ್ಲೇಮು

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಜುಲೈ 1, 2022 ರಿಂದಲೇ ಶೇ.4ರಷ್ಟು ಹೆಚ್ಚಳವಾಗಲಿದ್ದು, ಶೇ.34 ರಿಂದ ಶೇ.38ರಷ್ಟು ಏರಿಕೆ ಆಗಲಿದೆ ಎಂದು ವಾಟ್ಸಾಪ್ ಮೂಲಕ ಸಂದೇಶ ಹರಿ ಬಿಡಲಾಗಿದೆ.

ಪರಿಸಮಾಪ್ತಿ

ಕೇಂದ್ರ ಹಣಕಾಸು ಸಚಿವಾಲಯದಿಂದ ತುಟ್ಟಿ ಭತ್ಯೆ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಅಧಿಸೂಚನೆಯನ್ನು ಹೊರಡಿಸಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Central Govt offering 4 per cent additional DA hike? Know truth behind WhatsApp message
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X