India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಮುಂಬೈ ಮುಂಗಾರಿನಿಂದ ಅಪಘಾತ, ಇದು ನಿಜವೇ?

|
Google Oneindia Kannada News

ಇತ್ತೀಚೆಗೆ ಮುಂಬೈನಲ್ಲಿ ಮುಂಗಾರು ಪ್ರವೇಶದಿಂದಾಗಿ ರಸ್ತೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಮುಂಬೈ ನಗರದಲ್ಲಿ ಹೆಚ್ಚು ಮಳೆಯಾಗಿಲ್ಲ. ಆದರೂ ಇಲ್ಲಿ ಮುಂಗಾರು ಪ್ರವೇಶದಿಂದ ಅಪಘಾತ ಸಂಭವಿಸಿದೆ ಎಂದು ಹೇಳಿಕೊಳ್ಳುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋದಲ್ಲಿ ಕೆಲವು ದ್ವಿಚಕ್ರ ವಾಹನಗಳು ಫ್ಲೈಓವರ್ ಮೇಲೆ ಜಾರಿ ಬೀಳುತ್ತಿರುವುದಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ಜನರು ಈ ಆಘಾತಕಾರಿ ದೃಶ್ಯವನ್ನು ನವ ಮುಂಬೈನದ್ದು ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು "ಓ ಮೈ ಗಾಡ್! ಈ ವಿಡಿಯೋ ನವಿ ಮುಂಬೈ ಪ್ರದೇಶದ್ದು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಹೇಳಿಕೆಯನ್ನು ಸುಳ್ಳು ಎಂದು ಕಂಡುಹಿಡಿದಿದೆ. ಈ ವಿಡಿಯೋವನ್ನು ನವಿ ಮುಂಬೈನಲ್ಲಿ ಚಿತ್ರೀಕರಿಸಲಾಗಿಲ್ಲ. ಇದು ಪಾಕಿಸ್ತಾನದ ಕರಾಚಿಯಲ್ಲಿ ತೆಗೆಯಲಾಗಿದೆ.

AFWA ತನಿಖೆ

ವೈರಲ್ ವಿಡಿಯೋ ಒಂದರ ಕಾಮೆಂಟ್ ವಿಭಾಗದಲ್ಲಿ ಈ ಘಟನೆಯು ಕರಾಚಿಯದ್ದು ಎಂದು ಜನರು ಹೇಳಿಕೊಂಡಿದ್ದಾರೆ.

5 ಸೆಕೆಂಡ್‌ಗಳ ಈ ವಿಡಿಯೋದಲ್ಲಿ 'ಹೋಂಡಾ' ಶೋ ರೂಂ ಕಾಣಿಸುತ್ತದೆ. ಈ ಶೋ ರೂಂ ಅನ್ನು ಕರಾಚಿಯಲ್ಲಿ ಕಾಣಬಹುದು. ಕರಾಚಿಯ ಹೋಂಡಾ ಶೋರೂಂಗಳಿಗಾಗಿ Google ನಕ್ಷೆಗಳಲ್ಲಿ ಹುಡುಕಲಾಯಿತು. ನಗರದ ರಶೀದ್ ಮಿನ್ಹಾಸ್ ರಸ್ತೆಯ ಬಳಿ ಅದೇ ರೀತಿ 'ಹೋಂಡಾ' ಶೋ ರೂಂ ಕಾಣಬಹುದು.

ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ನೊಂದಿಗೆ ಗೂಗಲ್ ಫೋಟೋಗಳನ್ನು ಹೋಲಿಸಿದ ನಂತರ, ಶೋ ರೂಂ ಮತ್ತು ಎಡಭಾಗದಲ್ಲಿರುವ 'ಫ್ರೀ ಪಾರ್ಕಿಂಗ್' ಗೇಟ್ ಕರಾಚಿ ನಗರದಲ್ಲಿದೆ. ಈ ವೈರಲ್ ವಿಡಿಯೋದ ಶೀರ್ಷಿಕೆ ಹೇಳಿಕೊಂಡಂತೆ ಇದು ಮುಂಬೈನದ್ದಲ್ಲ ಎಂಬುದು ಸ್ಪಷ್ಟವಾಯಿತು.

ಅಪಘಾತಕ್ಕೆ ಕಾರಣವೇನು?

ಜೂನ್ 23, 2022 ರಂದು ಇದೇ ವಿಡಿಯೋವನ್ನು ಹೊಂದಿರುವ ಜಿಯೋ ಟಿವಿಯಲ್ಲಿ ಪ್ರಕಟವಾದ ಸುದ್ದಿ ವರದಿ ಪತ್ತೆ ಮಾಡಲಾಯಿತು. ಬುಧವಾರ (ಜೂನ್ 22, 2022) ಭಾರೀ ಮಳೆ ಮತ್ತು ಅನಿರೀಕ್ಷಿತ ಧೂಳಿನ ಚಂಡಮಾರುತದ ನಡುವೆ ಜಾರು ರಸ್ತೆಯಿಂದಾಗಿ ಈ ಅಪಘಾತಗಳು ಸಂಭವಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಕೆಲವು ಸವಾರರು ಗಾಯಗೊಂಡಿದ್ದಾರೆ.

Fact check: Accident from Mumbai Monsoon Is this true

ಜೂನ್ 22 ರಂದು ಕರಾಚಿಯಲ್ಲಿ ಗಂಟೆಗೆ 81 ಕಿ. ಮೀ. ವೇಗದ ಗಾಳಿಯ ವೇಗವನ್ನು ಉಲ್ಲೇಖಿಸಿರುವ ಪಾಕಿಸ್ತಾನದ ಮತ್ತೊಂದು ಸುದ್ದಿ ವರದಿಯಲ್ಲಿ ಈ ವೈರಲ್ ವಿಡಿಯೋವನ್ನು ಬಳಸಲಾಗಿದೆ. ಡಾನ್ ವರದಿಯ ಪ್ರಕಾರ, 'ಅನಿರೀಕ್ಷಿತ' ಪೂರ್ವ ಮುಂಗಾರು ಮಳೆಯ ನಂತರ ಕರಾಚಿಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆದ್ದರಿಂದ, ಕರಾಚಿಯ ವಿಡಿಯೋವನ್ನು ತಪ್ಪು ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತೀರ್ಮಾನಿಸಬಹುದು.

Fact Check

ಕ್ಲೇಮು

ಮುಂಬೈ ಮುಂಗಾರಿನಿಂದ ಅಪಘಾತ ಸಂಭವಿಸಿದೆ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.

ಪರಿಸಮಾಪ್ತಿ

ವೈರಲ್ ವಿಡಿಯೋ ಕರಾಚಿಯಲ್ಲಿ ತೆಗೆಯಲಾಗಿದ್ದು ಮುಂಬೈನಲ್ಲಿ ನಡೆದ ಅಪಘಾತವಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
A video claiming to have caused an accident due to monsoon in Mumbai is viral on the social networking site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X