ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಬಗ್ಗೆ ಜರ್ಮನಿಗರ ಆತಂಕ: ಅಡ್ಡಪರಿಣಾಮದ ಬಗ್ಗೆ Fact-Check

|
Google Oneindia Kannada News

ಜಗತ್ತನ್ನೇ ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೊರೊನಾಗೆ ಕಂಡು ಹಿಡಿದಿರುವ ಲಸಿಕೆ ಬಗ್ಗೆ ಅನುಮಾನ, ಆತಂಕ ಇದ್ದೇ ಇದೆ. ಇದೀಗ ಜರ್ಮನಿಯ ಸ್ಟಾರ್ ಫುಟ್ಬಾಲ್ ಆಟಗಾರ ಮತ್ತು ಎಫ್‌ಸಿ ಬಾರ್ಯಾ ಮ್ಯೂನಿಚ್ ತಂಡದ ಮಿಡ್‌ಫೀಲ್ಡರ್ ಜೋಶುವಾ ಕಿಮ್ಮಿಚ್ ಅವರು ಇತ್ತೀಚಿಗೆ ಬ್ರಾಡ್‌ಕಾಸ್ಟರ್ ಸ್ಕೈ ಸ್ಟೋರ್ಟ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಕೋವಿಡ್-19 ಲಸಿಕೆ ಬಗ್ಗೆ ತಮಗೆ ಈಗಲೂ ಗೊಂದಲಗಳಿವೆ, ಏಕೆಂದರೆ ಇದರ ದುಷ್ಪರಿಣಾಮಗಳ ಬಗ್ಗೆ ದೀರ್ಘಾವಧಿ ಅಧ್ಯಯನಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.

ಜರ್ಮನಿಯಲ್ಲಿ ಲಸಿಕೆಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಜನರಿಂದ ಇಂಥ ಅಭಿಪ್ರಾಯ ಮತ್ತು ವಾದಗಳು ಕೇಳಿ ಬರುತ್ತಿವೆ. ನಾಲ್ಕು ಮಂದಿಯಲ್ಲಿ ಒಬ್ಬರು ಲಸಿಕೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್ ಲಸಿಕೆಗಳು ಸೃಷ್ಟಿಸುವ ಸಂಭವನೀಯ ದೀರ್ಘ ದುಷ್ಪರಿಣಾಮಗಳಿಗೆ ಕೆಲವರು ಹೆದರುತ್ತಿದ್ದು, ವಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದ್ದಕ್ಕೆ ಇದೇ ಕಾರಣವೆಂದು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು ಇತರೆ ಲಸಿಕೆಗಳ ನಿದರ್ಶನಗಳನ್ನು ಟ್ವೀಟ್ಟರ್‌ನಲ್ಲಿ ಉಲ್ಲೇಖಿಸುತ್ತಿದ್ದಾರೆ. ಉದಾಹರಣೆಗೆ ಸ್ವೈನ್ ಫ್ಲೂ (ಹಂದಿ ಜ್ವರ). ಈ ಚುಚ್ಚುಮದ್ದು ತೆಗೆದುಕೊಂಡರೆ ದೀರ್ಘಾವಧಿ ಸಮಸ್ಯೆಗಳು ತಲೆದೋರುತ್ತವೆ ಎಂಬುದು ಅವರ ಆರೋಪ. ಆದರೆ ಇದು ನಿಜವೇ? ಎಂಬ ಮುಖ್ಯಪ್ರಶ್ನೆಗಳಿಗೆ ಇಲ್ಲಿದೆ ಉತ್ತರವಿದೆ.

ಪ್ರತಿ ಪರಿಣಾಮಗಳು, ಅಡ್ಡ ಪರಿಣಾಮಗಳು ಮತ್ತು ದೀರ್ಘ ಪರಿಣಾಮ

ಪ್ರತಿ ಪರಿಣಾಮಗಳು, ಅಡ್ಡ ಪರಿಣಾಮಗಳು ಮತ್ತು ದೀರ್ಘ ಪರಿಣಾಮ

ಲಸಿಕೆ ಪಡೆದ ನಂತರ ಚುಚ್ಚುಮದ್ದಿನ ಪ್ರತಿಕ್ರಿಯೆಯು ಸಾಮಾನ್ಯವಾಗಿ ಅಲ್ಪಾವಧಿಯದ್ದಾಗಿರುತ್ತದೆ ಹಾಗೂ ಇದು ಕೆಲವು ದಿನಗಳು ಇರುತ್ತವೆ. ಕೋವಿಡ್-19 ಲಸಿಕೆ ಪ್ರಕರಣದಲ್ಲಿ ಇಂಜೆಕ್ಷನ್ ಪಡೆದ ಜಾಗದಲ್ಲಿ ನೋವು ಮತ್ತು ಮೃದುತ್ವ ಇರುತ್ತದೆ. ಇದನ್ನು ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ತೋಳಿನಲ್ಲಿ ನೋವಿನೊಂದಿಗೆ ಸ್ವಲ್ಪ ಊತ ಅಥವಾ ತಲೆನೋವು ಕಂಡುಬರುತ್ತದೆ. ಈ ಲಕ್ಷಣಗಳು ಲಸಿಕೆಗೆ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಪ್ರದರ್ಶಿಸುತ್ತವೆ.

'ಅಡ್ಡ ಪರಿಣಾಮಗಳು' ಎಂದು ನಾವೇನು ಕರೆಯುತ್ತೇವೆಯೋ ಅದು ಲಸಿಕೆಗೆ ಪ್ರಬಲವಾದ ಪ್ರತಿ ಪರಿಣಾಮಗಳು ಎಂದು ಬಣ್ಣಿಸಬಹುದು. ಇದು ಲಸಿಕೆ ಪಡೆದವರ ಪ್ರತಿಕ್ರಿಯೆ ಜೊತೆಗೆ ದೇಹದ ಅನಪೇಕ್ಷಿತ ಪ್ರತಿಕ್ರಿಯೆಯೂ ಆಗಿರುತ್ತದೆ' ಎಂದು ಜರ್ಮನ್ ಸೊಸೈಟಿ ಫಾರ್ ಇಮ್ಯುನಾಲಜಿ ಅಧ್ಯಕ್ಷ ಮತ್ತು ಹ್ಯಾನೋವರ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ಟ್ರಾನ್ಸ್‌ಪ್ಲಾಂಟೇಶನ್ ಇಮ್ಯುನಾಲಜಿಯ ಪ್ರಾಧ್ಯಾಪಕ ಕ್ರಿಸ್ಟೀನ್ ಫಾಕ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದು ಸಾಮಾನ್ಯ ಪ್ರತಿಕ್ರಿಯೆಗಳಿಗಿಂತ ಹೆಚ್ಚು ಗಂಭೀರವಾಗಿರುತ್ತದೆ. ವಿವಿಧ ಸಂದರ್ಭಗಳಲ್ಲಿ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆಗಳಿವೆ. ಮುಖ್ಯವಾಗಿ ಕೋವಿಡ್-19 ಲಸಿಕೆಯೊಂದಿಗೆ ಸೆರೆಬ್ರಲ್, ವೆನಸ್, ಸೈನಸ್, ಥ್ರಂಬೋಸಿಸ್ ಅಥವಾ ಹೃದಯ ಸ್ನಾಯುವಿನ ಉರಿಯೂತದಂತಹ ಅಪರೂಪದ ಅಡ್ಡಪರಿಣಾಮಗಳು ಉಂಟಾಗುತ್ತವೆ ಎನ್ನುವುದು ಈಗಾಗಲೇ ವರದಿಯಾಗಿದೆ.

ಇತರ ಅಡ್ಡ ಪರಿಣಾಮಗಳಿಂದ ಬೇರ್ಪಡಿಸಲಾಗುವುದಿಲ್ಲ

ಇತರ ಅಡ್ಡ ಪರಿಣಾಮಗಳಿಂದ ಬೇರ್ಪಡಿಸಲಾಗುವುದಿಲ್ಲ

ದೀರ್ಘಾವಧಿಯ ಪರಿಣಾಮಗಳನ್ನು ಲಸಿಕೆ ಪಡೆದ ನಂತರ ಉಂಟಾಗುವ ಇತರ ಅಡ್ಡ ಪರಿಣಾಮಗಳಿಂದ ಬೇರ್ಪಡಿಸಲಾಗುವುದಿಲ್ಲ. ಏಕೆಂದರೆ ಲಸಿಕೆಯೊಂದಿಗಿನ ಸಂಪರ್ಕವು ಕೆಲವು ಸಮಯ ಕಳೆದ ನಂತರ ಸ್ಪಷ್ಟವಾಗುತ್ತದೆ. ಉದಾಹರಣೆ ನೋಡುವುದಾದರೆ, ಒಂದು ಮಿಲಿಯನ್ ಜನರಲ್ಲಿ ಅಡ್ಡ ಪರಿಣಾಮಗಳು ಸಂಭವಿಸಿದರೆ, ಅದು ಹಲವು ಮಿಲಿಯನ್‌ ಗಳಿಗೆ ಚುಚ್ಚುಮದ್ದು ನಿರ್ವಹಿಸಿದಾಗಲೇ ಸಂಪರ್ಕದಲ್ಲಿರುವುದು ಸ್ಪಷ್ಟವಾಗುತ್ತದೆ.

ಆದರೆ, ಕೋವಿಡ್-19 ಲಸಿಕೆಯನ್ನು ಈವರೆಗೆ ವಿಶ್ವದಾದ್ಯಂತ 6.8 ಶತಕೋಟಿ ಡೋಸ್ ಗಳನ್ನು ನೀಡಲಾಗಿದೆ. ಇದು ಉತ್ತಮವಾದ ವಿಷಯ. ಏಕೆಂದರೆ ಅಪರೂಪದ ಅಡ್ಡಪರಿಣಾಮಗಳನ್ನು ತ್ವರಿತವಾಗಿ ಗುರುತಿಸಲು ಈ ಸಂಖ್ಯೆ ಅನುವು ಮಾಡಿಕೊಡುತ್ತದೆ. ಈಗಾಗಲೇ ಸಾಕಷ್ಟು ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಹಲವರು ಲಸಿಕೆ ಪಡೆದು ತಿಂಗಳುಗಳೇ ಕಳೆದಿವೆ, ಆದ್ದರಿಂದ ಸಂಭವನೀಯ ಅಡ್ಡಪರಿಣಾಮಗಳ ಬಗ್ಗೆ ನಾವು ಖಚಿತವಾಗಿ ಮಾತನಾಡಬಹುದು ಎಂದು ರೋಗನಿರೋಧಕ ತಜ್ಞ ಫೋರ್ಸ್ಟರ್ ವಿವರಿಸಿದ್ದಾರೆ.

ಆಸ್ಟ್ರಾಜೆನಿಕಾ ಲಸಿಕೆಗೆ ಸಂಬಂಧಿಸಿದಂತೆ ಥ್ರಂಬೋಸಿಸ್ ಪ್ರಕರಣ

ಆಸ್ಟ್ರಾಜೆನಿಕಾ ಲಸಿಕೆಗೆ ಸಂಬಂಧಿಸಿದಂತೆ ಥ್ರಂಬೋಸಿಸ್ ಪ್ರಕರಣ

ಆಸ್ಟ್ರಾಜೆನಿಕಾ ಲಸಿಕೆಯನ್ನು ಬಿಡುಗಡೆ ಮಾಡಿದ ನಂತರವೇ ಆರೋಗ್ಯಾಧಿಕಾರಿಗಳು ಕಂಡುಹಿಡಿದ ಅಪರೂಪದ ಅಡ್ಡಪರಿಣಾಮ ಇದಾಗಿದೆ. ಅಲ್ಲದೆ, ದೇಹದ ವಿವಿಧ ಅಂಗಾಂಗ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗುವ ಜೊತೆಗೆ ತೀವ್ರತರದ ಅಡ್ಡಪರಿಣಾಮವೂ ಇದರಿಂದ ಉಂಟಾಗಿರುವುದು ಕಂಡು ಬಂದಿದೆ (ಉದಾಹರಣೆಗೆ: ಮೆದುಳಿನಲ್ಲಿ ಸೆರೆಬ್ರಲ್ ಸಿರೆಯ ಸೈನಸ್ ಥ್ರಂಬೋಸಿಸ್) ಎಂದು ಫೋರ್ಸ್ಟರ್ ತಿಳಿಸಿದ್ದಾರೆ.

ಇದರೊಂದಿಗೆ ವೈದ್ಯಕೀಯ ಪ್ರಯೋಗಗಳು ಈ ಲಸಿಕೆಯ ಸಾಮಾನ್ಯ ಪ್ರತಿಕ್ರಿಯೆಗಳನ್ನೂ ತೋರಿಸಬಹುದು, ಆದರೆ ಕಡಿಮೆ ಸಂಖ್ಯೆ ಪ್ರಕರಣಗಳು ಕಂಡುಬಂದವು ಎಂದು ರೋಗ ನಿರೋಧಕ ತಜ್ಞ ಫಾಕ್ ವಿವರಿಸಿದ್ದರು. ಅದಕ್ಕಾಗಿಯೇ ಲಸಿಕೆಯನ್ನು ಅನುಮೋದಿಸುವವರೆಗೂ ಈ ಅಡ್ಡಪರಿಣಾಮಗಳು ಬೆಳಕಿಗೆ ಬರಲಿಲ್ಲ ಎಂದು ವಿವರಿಸಿದರು.

ಜರ್ಮನಿಯ ಫೆಡರಲ್ ಸೆಂಟರ್ ಫಾರ್ ಹೆಲ್ತ್ ಎಜುಕೇಶನ್

ಜರ್ಮನಿಯ ಫೆಡರಲ್ ಸೆಂಟರ್ ಫಾರ್ ಹೆಲ್ತ್ ಎಜುಕೇಶನ್

ಆದರೆ, ಆಸ್ಟ್ರೇಲಿಯಾ ಆರೋಗ್ಯಾಧಿಕಾರಿಗಳು ಪ್ರಕಾರ, ಅಸ್ಟ್ರಾಜೆನಿಕಾ ಲಸಿಕೆಯನ್ನು ಪಡೆದ ಒಂದು ಮಿಲಿಯನ್ ಜನರ ಪೈಕಿ ಗರಿಷ್ಠ 4 ರಿಂದ 6 ಜನರಲ್ಲಿ ಮಾತ್ರವೇ ಥ್ರಂಬೋಸಿಸ್ ಸಂಭವಿಸುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.


ಆದರೆ, ಜರ್ಮನಿಯ ಫೆಡರಲ್ ಸೆಂಟರ್ ಫಾರ್ ಹೆಲ್ತ್ ಎಜುಕೇಶನ್ ಪ್ರಕಾರ, ಲಸಿಕೆ ಹಾಕಿಸಿಕೊಂಡ 2-3 ವಾರಗಳ ನಂತರವೇ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಥ್ರಂಬೋಸಿಸ್ ಪ್ರಕರಣಗಳು ಉಂಟಾಗುತ್ತವೆ. ಅದಕ್ಕಾಗಿಯೇ ಜರ್ಮನಿಯು ಅಡ್ಡ ಪರಿಣಾಮಗಳು ಮುಂಚಿತವಾಗಿಯೇ ಪತ್ತೆಯಾದರೆ, ಅದನ್ನು ಶೀಘ್ರವೇ ಶುಶ್ರೂಷೆ ಮಾಡಬಹುದು ಎನ್ನುವ ಕಾರಣಕ್ಕೆ, ಏ.1ರಿಂದ 60 ಮತ್ತು ಅದಕ್ಕಿಂತಲೂ ಹೆಚ್ಚಿನ ವಯಸ್ಕರಿಗೆ ಮಾತ್ರವೇ ಅಸ್ಟ್ರಾಜೆನಿಕಾ ಲಸಿಕೆಯನ್ನು ನೀಡಲು ಶಿಫಾರಸ್ಸು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ರೋಗ ನಿರೋಧಕ ತಜ್ಞ ಕ್ರಿಸ್ಟಿನ್ ಫಾಕ್

ರೋಗ ನಿರೋಧಕ ತಜ್ಞ ಕ್ರಿಸ್ಟಿನ್ ಫಾಕ್

ದೇಹದಿಂದ ಲಸಿಕೆಯನ್ನು ಬೇರ್ಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ.

ಇಲ್ಲಿ ಬಯೋನೆಕ್ ಫಿಸರ್‌ನ ಇಯು; ಎಂಆರ್‌ಎನ್‌ಎ ಅಥವಾ ಮಾಡೆರ್ನಾ ಮತ್ತು ಅಸ್ಟ್ರಾಜೆನಿಕಾ ಅಥವಾ ಜಾನ್ಸನ್ ಅಂಡ್ ಜಾನ್ಸನ್ ಎಂಬ ಎರಡು ರೀತಿಯ ಲಸಿಕೆಗಳನ್ನು ಅನುಮೋದಿಸಲಾಗಿದೆ. ಈ ಎರಡೂ ವಿಧದ ಲಸಿಕೆಗಳ ಬಗ್ಗೆ ನಾವು ಮಾತನಾಡುವಂತೆ ಕೆಲ ದಿನಗಳು ಅಥವಾ ವಾರಗಳಲ್ಲಿ ಲಸಿಕೆಯು ಬೇರ್ಪಡುತ್ತದೆ. ಮತ್ತು ನಮ್ಮ ದೇಹದಲ್ಲಿ ದೀರ್ಘಕಾಲ ಇರುವುದಿಲ್ಲ ಎಂದು ರೋಗ ನಿರೋಧಕ ತಜ್ಞ ಕ್ರಿಸ್ಟಿನ್ ಫಾಕ್ ಹೇಳಿದ್ದಾರೆ.

ಎಂಆರ್‌ಎನ್‌ಎ ಲಸಿಕೆಗಳು ವೈರಸ್‌ನ ನಿರ್ದಿಷ್ಟ ಘಟಕಕ್ಕೆ ಸಂಬಂಧಿಸಿದಂತೆ ನೀಲನಕ್ಷೆಯನ್ನು ಒಳಗೊಂಡಿರುತ್ತವೆ. ಚುಚ್ಚುಮದ್ದಿನ ನಂತರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಿದಾಗಲೇ ಈ ಸಣ್ಣ ಭಾಗಗಳ ವಿರುದ್ಧ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ನಂತರ, ಬಯೋನೆಕ್-ಫಿಜರ್ ಪ್ರಕಾರ ಎಂಆರ್‌ಎನ್‌ಐ ಮತ್ತೆ ಸಂಪೂರ್ಣವಾಗಿ ವಿಭಜನೆಯಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ದೀರ್ಘಕಾಲಿಕ ಪರಿಣಾಮವನ್ನು ಪ್ರಚೋದಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಇದರ ಮುಂದಿನ ಹಂತದಲ್ಲಿ ಪರಿಣಾಮಗಳು ಉಂಟಾಗಬಹುದು ಎಂಬುದಕ್ಕೂ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ರೆನ್ಹೋಲ್ಡ್ ಫಾರ್ಸ್ಟ್ರರೋ ತಿಳಿಸಿದರು.

ಅಡ್ಡಪರಿಣಾಮಗಳನ್ನು ವರ್ಷಗಳ ನಂತರ ಪತ್ತೆಹಚ್ಚಲಾಗಿದೆಯೇ?

ಅಡ್ಡಪರಿಣಾಮಗಳನ್ನು ವರ್ಷಗಳ ನಂತರ ಪತ್ತೆಹಚ್ಚಲಾಗಿದೆಯೇ?

ನಾವು ಗಮಸಿದಂತೆ ಲಸಿಕೆ ವಾಹಕಗಳು ಸ್ಪೈಕ್ ಪ್ರೋಟೀನ್‌ಗಾಗಿ ಜೆನೆಟಿಕ್ ಟೆಂಪ್ಲೇಟ್ ಅನ್ನು ಒಳಗೊಂಡಿರುತ್ತವೆ. ಮಾತ್ರವಲ್ಲದೆ, ಪ್ರತಿಕಾಯಗಳನ್ನು ಉತ್ಪಾದಿಸಲು ರಕ್ಷಣಾ ವ್ಯವಸ್ಥೆಯನ್ನೂ ಉತ್ತೇಜಿಸುತ್ತದೆ ಎನ್ನಲಾಗಿದೆ.

ಫೆಡರಲ್ ಸೆಂಟರ್ ಫಾರ್ ಹೆಲ್ತ್ ಎಜುಕೇಶನ್‌ನ ಹೇಳುವಂತೆ 'ಲಸಿಕೆ ವಾಹಕಗಳು ಸ್ವಲ್ಪ ಸಮಯದ ನಂತರವಷ್ಟೇ ಒಡೆಯುವುದರಿಂದ ಅದರ, ದೀರ್ಘಾವಧಿಯ ನಂತರವೂ ದೇಹಕ್ಕೆ ಯಾವುದೇ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ಹೇಳಿದೆ.

ಇತರೆ ಲಸಿಕೆಗಳಿಗೆ ಹೋಲಿಸಿದರೆ ಅವುಗಳ ಅಡ್ಡಪರಿಣಾಮಗಳನ್ನು ವರ್ಷಗಳ ನಂತರ ಪತ್ತೆಹಚ್ಚಲಾಗಿದೆಯೇ?

ಹಂದಿಜ್ವರದ ವಿರುದ್ಧ ಹೋರಾಡಲು ಪ್ಯಾಂಡಮ್ರಿಕ್ಸ್ ಲಸಿಕೆಯನ್ನು ಪರಿಚಯಿಸಲಾಯಿತು. ಕೆಲವು ತಿಂಗಳಲ್ಲೇ ಸಾಕಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದರು. ಆರಂಭದಲ್ಲಿ ತುಲನಾತ್ಮಕವಾಗಿ ಕೆಲವು ಮಂದಿಗೆ ಹಾಕಲಾಗಿತ್ತು. ಆದರೆ, ಈ ಲಸಿಕೆಯಿಂದ ನಿದ್ರಾ ಅಸ್ವಸ್ಥತೆ (ನರ್ಕೋಲೆಪ್ಸಿ) ಅಡ್ಡಪರಿಣಾಮ ಬೀರಿದರೂ ಬಹಳ ಸಮಯದ ವರೆಗೆ ಈ ಬಗ್ಗೆ ಗಮನವಿರಲಿಲ್ಲ.

ಅಡ್ಡಪರಿಣಾಮವನ್ನು ಪತ್ತೆಹಚ್ಚಬಹುದು ಎನ್ನುವುದು ಮಿಥ್ಯ

ಅಡ್ಡಪರಿಣಾಮವನ್ನು ಪತ್ತೆಹಚ್ಚಬಹುದು ಎನ್ನುವುದು ಮಿಥ್ಯ

ಇದರಿಂದಾಗಿ ಹಂದಿಜ್ವರಕ್ಕೆ ಲಸಿಕೆ ಹಾಕಿದವರಲ್ಲಿ ಅಡ್ಡಪರಿಣಾಮಗಳನ್ನು ಪತ್ತೆಹಚ್ಚಲು ದೀರ್ಘಕಾಲದ ವರೆಗೆ ಗಮನಿಸಬೇಕಿತ್ತು. ಆದರೆ, ಲಸಿಕೆ ಹಾಕಿಸಿಕೊಂಡವರ ಆಧಾರದ ಮೇಲೆ ಅಡ್ಡಪರಿಣಾಮವನ್ನು ಪತ್ತೆಹಚ್ಚಬಹುದು ಎನ್ನುವುದು ಮಿಥ್ಯ. ಏಕೆಂದರೆ, ಲಸಿಕೆ ಹಾಕಿಸಿಕೊಂಡವರು ಬೃಹತ್ ಸಮೂಹದಲ್ಲಿದ್ದಾಗ ಮಾತ್ರ ಅಪರೂಪದ ಅಡ್ಡಪರಿಣಾಮಗಳನ್ನು ಪತ್ತೆಹಚ್ಚಲು ಸಾಧ್ಯ ಎಂದು ರೋಗನಿರೋಧಕ ತಜ್ಞ ಫೋರ್ಸ್ಟರ್ ವಿವರಿಸಿದರು.

ಕ್ರಮೇಣ ಕೆಲವು ವಾರಗಳಲ್ಲಿ 4 ಮತ್ತು 19 ವಯೋಮಾನದ ಮಕ್ಕಳಲ್ಲಿ ಪ್ಯಾಂಡಮ್ರಿಕ್ಸ್ ಲಸಿಕೆಯ ಅಡ್ಡಪರಿಣಾಮ ವಿರಳಬವಾಗಿ ಕಾಣಿಸಿಕೊಳ್ಳತೊಡಗಿತು. ನಂತರ ಮಕ್ಕಳು ಹಾಗೂ ಹದಿಹರೆಯದವರಿಗೆ ನೀಡಲಾಗಿರುವ 100,000 ಡೋಸ್ ಲಸಿಕೆಯಿಂದ 2 ರಿಂದ 6 ನಿದ್ರಾ ಅಸ್ವಸ್ಥ ಪ್ರಕರಣಗಳು ಪತ್ತೆಯಾಗಿರುವುದು ಸೋಂಕುಶಾಸ್ತ್ರದ ಅಧ್ಯಯನಗಳ ಆಧಾರದ ಮೇಲೆ ಪತ್ತೆಹಚ್ಚಲಾಯಿತು. ಆದ್ದರಿಂದ ಇನ್ನು ಮುಂದೆ ಈ ಲಸಿಕೆ ನೀಡುವುದನ್ನು ನಿಷೇಧಿಸಲಾಯಿತು.

ಜರ್ಮನ್ ಫೆಡರಲ್ ಹೆಲ್ತ್ ಏಜೆನ್ಸಿಯಾದ ಪಾಲ್ ಎರ್ಲಿಚ್ ಸಂಸ್ಥೆ

ಜರ್ಮನ್ ಫೆಡರಲ್ ಹೆಲ್ತ್ ಏಜೆನ್ಸಿಯಾದ ಪಾಲ್ ಎರ್ಲಿಚ್ ಸಂಸ್ಥೆ

ಕೋವಿಡ್-19 ಲಸಿಕೆ ನಂತರ ಏನೆಲ್ಲಾ ಅಡ್ಡಪರಿಣಾಮಗಳು ವರದಿಯಾಗಿವೆ?
ಲಸಿಕೆಗಳು, ಜೈವಿಕ ಔಷಧಿಗಳನ್ನು ನಿಯಂತ್ರಿಸುವ ಹಾಗೂ ಸಂಶೋಧಿಸುವ ಜರ್ಮನ್ ಫೆಡರಲ್ ಹೆಲ್ತ್ ಏಜೆನ್ಸಿಯಾದ ಪಾಲ್ ಎರ್ಲಿಚ್ ಸಂಸ್ಥೆಯು, ಲಸಿಕೆಗಳ ಸುರಕ್ಷತಾ ವರದಿಯಲ್ಲಿ ಕೋವಿಡ್-19 ಬಗೆಗಿನ ಅಪರೂಪದ ಅಡ್ಡಪರಿಣಾಮಗಳನ್ನು ಪಟ್ಟಿ ಮಾಡಿದೆ.

ಉದಾಹರಣೆಗೆ: ಮಯೋಕಾರ್ಡಿಟಿಸ್, ಹೃದಯ ಸ್ನಾಯುವಿನ ಉರಿಯೂತ ಮತ್ತು ಪೆರಿಕಾರ್ಡಿಟಿಸ್, ಪೆರಿಕಾರ್ಡಿಯಂನ ಉರಿಯೂತ ಇವುಗಳನ್ನು ಸಾಂದರ್ಭಿಕವಾಗಿ ಪಟ್ಟಿ ಮಾಡಲಾಗಿದ್ದು, ಇನ್ನೂ ನಿರ್ಣಾಯಕವಾಗಿ ಸ್ಪಷ್ಟಪಡಿಸಿಲ್ಲ.

ಅಲ್ಲದೆ, ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಗಳು, ಸೆರೆಬ್ರಲ್ ಸೈನಸ್ ಥ್ರಂಬೋಸಿಸ್, ಗುಯಿಲಿನ್-ಬಾರ್ ಸಿಂಡ್ರೋಮ್ ಮತ್ತು ಥ್ರಂಬೋ ಸೈಟೋಪೆನಿಯಾ ಅಥವಾ ಪ್ರತಿರಕ್ಷಣಾ ಥ್ರಂಬೋ ಸೈಟೋಪೆನಿಯಾ ಪ್ರಕರಣಗಳು ವರದಿಯಾಗಿದೆ. ಜರ್ಮನ್ ಆರೋಗ್ಯ ಸಂಸ್ಥೆಯು ಮಾಸಿಕವಾಗಿ ಈ ವರದಿಯನ್ನು ನವೀಕರಿಸುತ್ತದೆ. ಜೊತೆಗೆ ಅಡ್ಡಪರಿಣಾಮಗಳ ಆವರ್ತನದ ಮಾಹಿತಿಯನ್ನೂ ತಿಳಿಸುತ್ತದೆ.

ಪ್ರತಿಕ್ರಿಯೆಗಳು ತೀವ್ರ ರೋಗಲಕ್ಷಣಗಳಿಂದ ಗೊತ್ತಾಗಬಹುದು

ಪ್ರತಿಕ್ರಿಯೆಗಳು ತೀವ್ರ ರೋಗಲಕ್ಷಣಗಳಿಂದ ಗೊತ್ತಾಗಬಹುದು

ಯಾವ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕೋವಿಡ್-19 ಲಸಿಕೆಗೆ ಸಂಬಂಧಿಸಿಲ್ಲ?
ಮನುಷ್ಯನ ದೇಹವು ಲಸಿಕೆಗೆ ತಕ್ಷಣವೇ ಪ್ರತಿಕ್ರಿಯಿಸಬಹುದು ಅಥವಾ ಕೆಲವು ದಿನ, ವಾರಗಳ ನಂತರ ಲಸಿಕೆಯಿಂದಾಗುವ ಪ್ರತಿಕ್ರಿಯೆಗಳು ತೀವ್ರ ರೋಗಲಕ್ಷಣಗಳಿಂದ ಗೊತ್ತಾಗಬಹುದು. ಆದರೆ, ಜರ್ಮನಿಯ ಪ್ರಮುಖ ರೋಗನಿರೋಧಕ ತಜ್ಞರು ಕೋವಿಡ್-19 ಲಸಿಕೆಯಿಂದಾಗಿ ಜನರು ವರ್ಷಗಳ ನಂತರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳನ್ನು ತಳ್ಳಿಹಾಕುತ್ತಾರೆ. ಆದರೂ ಕೆಲ ಅಪಾಯಕಾರಿ ಸಂದರ್ಭಗಳಲ್ಲಿ ಸೆರೆಬ್ರಲ್ ಸೈನಸ್ ಥ್ರಂಬೋಸಿಸ್ ಅಥವಾ ಹೃದಯ ಸ್ನಾಯುವಿನ ಉರಿಯೂತವಾಗಬಹುದು. ಉದಾಹರಣೆಗೆ, ಇದು ವ್ಯಕ್ತಿಯ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮವನ್ನುಂಟುಮಾಡುತ್ತದೆ.

ವಿಶ್ವದಾದ್ಯಂತ ಸುಮಾರು 7 ಬಿಲಿಯನ್ ಡೋಸ್ ಲಸಿಕೆಗಳನ್ನು ಈಗಾಗಲೇ ನೀಡಲಾಗಿರುವುದರಿಂದ, ಅಪರೂಪದ ಅಡ್ಡಪರಿಣಾಮಗಳನ್ನೂ ಕಂಡುಹಿಡಿಯಲಾಗಿದೆ. ಆದರೆ, ಸಂಭವನೀಯ ದೀರ್ಘಕಾಲೀನ ಪರಿಣಾಮಗಳ ಕುರಿತು ವೈಜ್ಞಾನಿಕ ಅಧ್ಯಯನಗಳು ಇನ್ನೂ ಲಭ್ಯವಿಲ್ಲ. ಲಸಿಕೆಯ ನಂತರ ದೀರ್ಘಕಾಲಿಕ ಪರಿಣಾಮವಾಗಲಿ, ಅಡ್ಡಪರಿಣಾಮಗಳಾಗಲಿ ಬರಲು ಸಾಧ್ಯವಿಲ್ಲ. ಏಕೆಂದರೆ, ಲಸಿಕೆ ದೇಹದಲ್ಲಿ ವೇಗವಾಗಿ ಆವರಿಸಿಕೊಳ್ಳುವುದರಿಂದ (ದೇಹಕ್ಕೆ ಸಂಪರ್ಕೀಸುವುದರಿಂದ) ಯಾವುದೇ ಪರಿಣಾಮಗಳನ್ನು ಪ್ರಚೋದಿಸಲು ಸಾಧ್ಯವಿಲ್ಲ ಎಂದು ನಾವು ಸಂದರ್ಶಿಸಿದ ರೋಗನಿರೋಧಕಶಾಸ್ತ್ರಜ್ಞರು ಹಾಗೂ ಇತರ ಲಸಿಕೆ ವರದಿಗಳಿಂದಲೂ ತಿಳಿದು ಬಂದಿದೆ.

Fact Check

ಕ್ಲೇಮು

ಕೋವಿಡ್ ಲಸಿಕೆ ಬಗ್ಗೆ ಜರ್ಮನಿಗರ ಆತಂಕ: ವಾಕ್ಸಿನ್ ತೆಗೆದುಕೊಂಡರೆ ದೀರ್ಘಾವಧಿ ಸಮಸ್ಯೆಗಳು ತಲೆದೋರುತ್ತವೆ

ಪರಿಸಮಾಪ್ತಿ

ಸಂಭವನೀಯ ದೀರ್ಘಕಾಲೀನ ಪರಿಣಾಮಗಳ ಕುರಿತು ವೈಜ್ಞಾನಿಕ ಅಧ್ಯಯನಗಳು ಇನ್ನೂ ಲಭ್ಯವಿಲ್ಲ. ಲಸಿಕೆಯ ನಂತರ ದೀರ್ಘಕಾಲಿಕ ಪರಿಣಾಮವಾಗಲಿ, ಅಡ್ಡಪರಿಣಾಮಗಳಾಗಲಿ ಬರಲು ಸಾಧ್ಯವಿಲ್ಲ

Rating

Mostly False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X