ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಜೋಶಿಮಠದಲ್ಲಿ ದೊಡ್ಡ ಭೂಕುಸಿತ: ಶೇರ್ ಮಾಡುವ ಮುನ್ನ ಫೋಟೋದ ಸತ್ಯಾಸತ್ಯತೆ ತಿಳಿಯಿರಿ

|
Google Oneindia Kannada News

ಉತ್ತರಾಖಂಡದ ಬದರಿನಾಥ ಧಾಮದ ಹೆಬ್ಬಾಗಿಲು ಜೋಶಿಮಠ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮನೆಗಳು, ಹೋಟೆಲ್‌ಗಳು ಮತ್ತು ಇತರ ಕಟ್ಟಡಗಳಲ್ಲಿ ಆಗಾಗ್ಗೆ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ 700 ಕ್ಕೂ ಹೆಚ್ಚು ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ತಂಡಗಳಿಂದ ಪರಿಹಾರ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದೇ ವೇಳೆ ಜೋಶಿಮಠಕ್ಕೆ ಸಂಬಂಧಿಸಿದ ಕೆಲವು ಅವ್ಯವಸ್ಥೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿವೆ.

ಪರ್ವತದ ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಪರ್ವತ ಎಲ್ಲೆಡೆ ಬಿರುಕುಗೊಂಡಿರುವುದು ಗೋಚರಿಸುತ್ತದೆ. ಇದಲ್ಲದೆ ಹಲವೆಡೆ ಭಾರಿ ಭೂಕುಸಿತವನ್ನು ತೋರಿಸಲಾಗಿದೆ. ಈ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಉತ್ತರಾಖಂಡ್ ಘರ್ ಪರಿವಾರ್' ಹೆಸರಿನ ಪುಟ ಹಂಚಿಕೊಂಡಿದೆ. ಈ ಭೂಕುಸಿತದಿಂದಾಗಿ 600 ಕ್ಕೂ ಹೆಚ್ಚು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಸತ್ಯಾಂಶ ತಿಳಿಯದೇ ಜನ ಇದೇ ಹೇಳಿಕೆಯೊಮದಿಗೆ ದೃಶ್ಯಗಳನ್ನು ವೈರಲ್ ಮಾಡುತ್ತಿದ್ದಾರೆ.

Fact check: Big landslide in Joshimath: Check photo authenticity before sharing

ತನಿಖೆ ನಡೆಸಿದಾಗ ಈ ಚಿತ್ರ ಜೋಶಿಮಠದ್ದಲ್ಲ ಎಂದು ತಿಳಿದುಬಂದಿದೆ. ವೈರಲ್ ಫೋಟೋಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಅದರ ಬಗ್ಗೆ ತನಿಖೆ ನಡೆಸಿದಾಗ ಅದು ಪೆರುವಿನಿಂದ ಬಂದದ್ದು ಎಂದು ತಿಳಿದುಬಂದಿದೆ. ಅಲ್ಲಿನ ರಕ್ಷಣಾ ಸಚಿವಾಲಯವು ಮಾರ್ಚ್ 16, 2018 ರಂದು ಫೋಟೋವನ್ನು ಹಂಚಿಕೊಂಡಿದೆ. ಆ ಸಮಯದಲ್ಲಿ ಲುಸ್ಕೋ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಇದು ಹೆಚ್ಚಿನ ಜನಸಂಖ್ಯೆ ಮೇಲೆ ಪರಿಣಾಮ ಬೀರಿತ್ತು. ಯೂಟ್ಯೂಬ್‌ನಲ್ಲಿ ವಿಡಿಯೊವನ್ನು ಸಹ ಅಪ್‌ಲೋಡ್ ಮಾಡಲಾಗಿದೆ. ಅದರಲ್ಲಿ 5 ಪ್ರಮುಖ ಭೂಕುಸಿತಗಳು ಕಂಡು ಬಮದಿವೆ. ಇದು ಪೆರುವಿನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಲಾಗಿದೆ. ಹೀಗಿರುವಾಗ ಅದು ಉತ್ತರಾಖಂಡ ಅಥವಾ ಭಾರತದಿಂದಲ್ಲ ಎಂಬುದು ಸ್ಪಷ್ಟ.

Fact check: Big landslide in Joshimath: Check photo authenticity before sharing

ಜೋಶಿಮಠರ ಸ್ಥಿತಿ ಏನು?

ಜೋಶಿಮಠದಲ್ಲಿ 700 ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕುಗಳು ಕಂಡು ಬಂದಿವೆ. ಆದರೆ ಯಾವುದೇ ದೊಡ್ಡ ಭೂಕುಸಿತ ಸಂಭವಿಸಿಲ್ಲ. ಇದರ ಬೆನ್ನಲ್ಲೆ ಅಲ್ಲಿ ವಾಸಿಸುವ ಎಲ್ಲ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದರೊಂದಿಗೆ ಜನರಿಗೆ ಪರಿಹಾರ ನೀಡಲಾಗುತ್ತಿದೆ.

Fact Check

ಕ್ಲೇಮು

ಜೋಶಿಮಠದಲ್ಲಿ ದೊಡ್ಡ ಭೂಕುಸಿತ ಸಂಭವಿಸಿದೆ.

ಪರಿಸಮಾಪ್ತಿ

ಜೋಶಿಮಠದಲ್ಲಿ ದೊಡ್ಡ ಭೂಕುಸಿತ ಸಂಭವಿಸಿಲ್ಲ. ಶೇರ್ ಮಾಡಿದ ಫೋಟೋಗಳು ಜೋಶಿಮಠದ್ದಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Joshimath, the gateway to Uttarakhand's Badrinath Dham, is facing a tough situation. Cracks are often appearing in houses, hotels and other buildings due to which more than 700 families have been shifted to relief camps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X