Fact Check: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಲಾಕ್‌ಡೌನ್
ನವೆಹಲಿ, ಸೆಪ್ಟೆಂಬರ್ 14: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಸುತ್ತಿನ ಲಾಕ್‌ಡೌನ್ ಜಾರಿಯಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂತಹ ಯಾವುದೇ ವಿಷಯವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿಲ್ಲ ಇದೆಲ್ಲವೂ ಸುಳ್ಳು ಎಂದು ಹೇಳಿದೆ.
ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಹುದೊಡ್ಡ ಅಪಾಯವೊಂದು ಭಾರತಕ್ಕೆ ಎದುರಾಗಲಿದೆ ಹೀಗಿ ಸೆಪ್ಟೆಂಬರ್ 25ರಿಂದ ಮತ್ತೊಂದು ಸುತ್ತಿನ ಲಾಕ್‌ಡೌನ್ ಘೋಷಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ 46 ದಿನಗಳ ಕಾಲ ಕೊರೊನಾ ಲಾಕ್‌ಡೌನ್ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು.
ಇದೀಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತೆ ದೇಶಾದ್ಯಂತ ಲಾಕ್‌ಡೌನ್ ವಿಧಿಸುವ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

Fact Check
ಕ್ಲೇಮು
ಸೆಪ್ಟೆಂಬರ್ 25 ರಿಂದ ಮತ್ತೊಂದು ಹಂತದ ಲಾಕ್‌ಡೌನ್
ಪರಿಸಮಾಪ್ತಿ
ಸೆಪ್ಟೆಂಬರ್ 25ರಿಂದ ಮತ್ತೊಂದು ಹಂತದ ಲಾಕ್‌ಡೌನ್ ಇಲ್ಲ, ಕೇಂದ್ರ ಸರ್ಕಾರ ಇಂತಹ ಯಾವ ಆಲೋಚನೆಯನ್ನೂ ಮಾಡಿಲ್ಲ, ಆದೇಶವನ್ನೂ ಹೊರಡಿಸಿಲ್ಲ.












Click it and Unblock the Notifications