ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್ ಸ್ಕೀಮ್ ಫೇಕ್ ನ್ಯೂಸ್ ಅಲರ್ಟ್: ಯೂಟ್ಯೂಬ್ ವಿಡಿಯೋ ಸುಳ್ಳು ಹೇಳಿಕೆ ಬಗ್ಗೆ ಎಚ್ಚರದಿಂದಿರಿ

|
Google Oneindia Kannada News

ದೇಶಾದ್ಯಂತ ಹಲವೆಡೆ ಅಗ್ನಿಪಥ್ ಯೋಜನೆ ವಿರುದ್ಧ ಯುವ ಅಭ್ಯರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದು ಹಿಂಸಾತ್ಮಕ ಘಟನೆಗಳು ವರದಿಯಾಗಿವೆ. ರೈಲುಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ಹಿಂಸಾಚಾರ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ಪ್ರತಿಭಟನಾಕಾರರ ಆಕ್ರೋಶದ ಪರಿಣಾಮ ಅಪಾರ ಹಾನಿಯನ್ನುಂಟು ಮಾಡಿದೆ. ಅಗ್ನಿಪಥ್ ಯೋಜನೆಯ ಮೇಲಿನ ಅಶಾಂತಿಯ ನಡುವೆ ಸಾಕಷ್ಟು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅಂತಹದೊಂದು ಯೂಟ್ಯೂಬ್ ವಿಡಿಯೊವನ್ನು ಸರ್ಕಾರ ಹೈಲೈಟ್ ಮಾಡಿದ್ದು ಎಚ್ಚರಿಕೆಗೆ ಒತ್ತಾಯಿಸಿದೆ.

ಸರ್ಕಾರ ಸೇನೆಯನ್ನು ಖಾಸಗೀಕರಣದತ್ತ ತಳ್ಳುತ್ತಿದೆ ಮತ್ತು ಸೇನೆಯಲ್ಲಿ 4 ವರ್ಷಗಳ ನೇಮಕಾತಿಯನ್ನು ಯಾವುದಾದರೂ ಏಜೆನ್ಸಿಯಿಂದ ಮಾಡಲಾಗುವುದು ಎಂದು ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಮತ್ತು ಈ ಏಜೆನ್ಸಿಯು ಒಂದು ವರ್ಷಕ್ಕೆ ನಿಮ್ಮನ್ನು ನೇಮಿಸಿಕೊಳ್ಳುತ್ತದೆ ಮತ್ತು ಕೆಲಸದಿಂದ ತೆಗೆದುಹಾಕುತ್ತದೆ.

"ಅಗ್ನಿಪಥ್ ಯೋಜನೆಯ ಮೂಲಕ ಸೇನೆಯಲ್ಲಿ ನೇಮಕಾತಿಗಳನ್ನು ಕೆಲವು ಖಾಸಗಿ ಏಜೆನ್ಸಿಗಳು ನಡೆಸುತ್ತವೆ ಎಂದು ಯೂಟ್ಯೂಬ್ ವಿಡಿಯೊದಲ್ಲಿ ಹೇಳಿಕೊಳ್ಳಲಾಗುತ್ತಿದೆ" ಎಂದು ಪತ್ರಿಕಾ ಮಾಹಿತಿ ಬ್ಯೂರೋದ (PIB) ಸತ್ಯ-ಪರಿಶೀಲನೆಯ ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ. ''ಈ ಹಕ್ಕು ಸುಳ್ಳು. ಅಂತಹ ಯಾವುದೇ ಘೋಷಣೆಯನ್ನು ಭಾರತ ಸರ್ಕಾರ ಮಾಡಿಲ್ಲ'' ಎಂದು ಅದು ಸ್ಪಷ್ಟಪಡಿಸಿದೆ.

ಎಲ್ಲೆಡೆ ಪ್ರತಿಭಟನೆ

ಎಲ್ಲೆಡೆ ಪ್ರತಿಭಟನೆ

ಅಗ್ನಿಪಥ ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಹಾರ, ರಾಜಸ್ಥಾನದಲ್ಲಿ ಈ ಯೋಜನೆಯ ವಿರುದ್ಧ ಜನರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜೊತೆಗೆ ಉದ್ಯೋಗ ಭದ್ರತೆ ಮತ್ತು ಪಿಂಚಣಿಗೆ ಒತ್ತಾಯಿಸುತ್ತಿದ್ದಾರೆ. ಛಾಪ್ರಾದಲ್ಲಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ. ಅದರ ವಿಡಿಯೊ ಕೂಡ ಹೊರಬಿದ್ದಿದ್ದು ಇದರಲ್ಲಿ ರೈಲು ಹೊಗೆ ಬೆಂಕಿಯೊಂದಿಗೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಅರ್ರಾದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಬಳಸಲಾಗಿದೆ.

ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಗರಂ

ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಗರಂ

ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ, ಸೇನೆಯಲ್ಲಿ ನೇಮಕಾತಿ ಬಯಸುವ ಜನರು ನಾಲ್ಕು ವರ್ಷಗಳ ಗುತ್ತಿಗೆ ನೇಮಕಾತಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾಲ್ಕು ವರ್ಷಗಳ ನಂತರ ನಮ್ಮ ಭವಿಷ್ಯವೇನಾಗಬೇಕು ಎಂದು ಪ್ರತಿಭಟನಾಕಾರರು ಪ್ರಶ್ನೆ ಮಾಡಿದ್ದಾರೆ. ಕೇವಲ 25 ಪ್ರತಿಶತ ಜನರಿಗೆ ಮಾತ್ರ ಸೇವೆ ವಿಸ್ತರಣೆ ನೀಡಲಾಗುತ್ತದೆ ಎಂದು ಅವರು ಹೇಳುತ್ತಾರೆ. ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳುವ ಜನರಲ್ಲಿ ಶೇಕಡಾ 75 ರಷ್ಟು ಜನರಿಗೆ ಸೇವಾ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಅಥವಾ ಯಾವುದೇ ರೀತಿಯ ಪಿಂಚಣಿ ಪ್ರಯೋಜನವನ್ನು ಪಡೆಯುವುದಿಲ್ಲ. ಎರಡು ವರ್ಷಗಳ ನಂತರ ಸೇನೆಗೆ ನೇಮಕಾತಿ ಆರಂಭವಾಗಿದ್ದು, ನಂತರವೂ ಭವಿಷ್ಯದ ಬಗ್ಗೆ ಖಚಿತತೆ ಇಲ್ಲ ಎನ್ನುತ್ತಾರೆ ಪ್ರತಿಭಟನಾಕಾರರು. 4 ವರ್ಷಗಳ ನಂತರ ಸೇವೆ ವಿಸ್ತರಣೆಯಾಗದಿದ್ದರೆ ನಾವು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಈ ಯೋಜನೆಗೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಿಥ್ ವರ್ಸಸ್ ಫ್ಯಾಕ್ಟ್ ದಾಖಲೆ

ಮಿಥ್ ವರ್ಸಸ್ ಫ್ಯಾಕ್ಟ್ ದಾಖಲೆ

ಆದರೆ ಅಗ್ನಿಪಥ್‌ ಹೊಸ ಯೋಜನೆಯು ಸೇನೆಯಲ್ಲಿ ಹೊಸ ಸಾಮರ್ಥ್ಯಗಳನ್ನು ತರುತ್ತದೆ ಎಂದು ಒತ್ತಿಹೇಳಲು ಮಿಥ್ ವರ್ಸಸ್ ಫ್ಯಾಕ್ಟ್ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯು ಖಾಸಗಿ ವಲಯದಲ್ಲೂ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಲ್ಲದೆ ಹಣಕಾಸಿನ ನೆರವಿನ ಸಹಾಯದಿಂದ ಯುವಕರು ಸ್ವಂತ ಉದ್ಯೋಗಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಅಸಮಧಾನಗೊಂಡ ಅಭ್ಯರ್ಥಿಗಳು

ಅಸಮಧಾನಗೊಂಡ ಅಭ್ಯರ್ಥಿಗಳು

ಈವರೆಗೆ ಒಬ್ಬ ಸೈನಿಕನು ಸರಿಸುಮಾರು 17 ವರ್ಷಗಳವರೆಗೆ ಉದ್ಯೋಗ ಭದ್ರತೆಯನ್ನು ಹೊಂದಿದ್ದನು. ನಂತರ ಪಿಂಚಣಿಯ ಸೌಕರ್ಯ ಮತ್ತು ತನಗೆ ಮತ್ತು ಅವನ ಕುಟುಂಬಕ್ಕೆ ಆರೋಗ್ಯ ಸಂಬಂಧ ಸೌಲಭ್ಯಗಳನ್ನು ಹೊಂದಿದ್ದನು. ಸೈನಿಕನು ಯುದ್ಧದಲ್ಲಿ ಸತ್ತರೆ, ಅವನ ಕುಟುಂಬಕ್ಕೆ ಪ್ರಯೋಜನಗಳು ಮುಂದುವರೆಯುತ್ತವೆ ಎಂದು ಹೇಳಲಾಗಿತ್ತು. ಆದರೆ ಅಗ್ನಿಪಥ್ ಯೋಜನೆಯು ಈ ಪ್ರಯೋಜನಗಳನ್ನು ಕೊನೆಗೊಳಿಸುತ್ತದೆ. ಸಶಸ್ತ್ರ ಪಡೆಗಳ ಹೆಚ್ಚುತ್ತಿರುವ ಸಂಬಳ ಮತ್ತು ಪಿಂಚಣಿ ಸೌಲಭ್ಯಗಳನ್ನು ಕಡಿತಗೊಳಿಸುವುದು ಈ ಯೋಜನೆಯ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಈ ವರ್ಷಕ್ಕೆ, 5.25 ಲಕ್ಷ ಕೋಟಿ ರಕ್ಷಣಾ ಬಜೆಟ್‌ನಲ್ಲಿ ಈ ಎರಡು ಮುಖ್ಯಸ್ಥರ ಅಡಿಯಲ್ಲಿ ಸರ್ಕಾರವು 2.5 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

Fact Check

ಕ್ಲೇಮು

ಅಗ್ನಿಪಥ್ ಯೋಜನೆಯ ಮೂಲಕ ಸೇನೆಯಲ್ಲಿ ನೇಮಕಾತಿಗಳನ್ನು ಕೆಲವು ಖಾಸಗಿ ಏಜೆನ್ಸಿಗಳು ನಡೆಸುತ್ತವೆ ಎಂದು ಯೂಟ್ಯೂಬ್ ವಿಡಿಯೊದಲ್ಲಿ ಹೇಳಿಕೊಳ್ಳಲಾಗುತ್ತಿದೆ.

ಪರಿಸಮಾಪ್ತಿ

ಅಂತಹ ಯಾವುದೇ ಘೋಷಣೆಯನ್ನು ಭಾರತ ಸರ್ಕಾರ ಮಾಡಿಲ್ಲ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಹೇಳಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Some private agencies are recruiting in the army through the Agnipath project said YouTube video. What is the truth behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X