Puneeth Rajkumar: ಡಾ. ರಾಜ್, ಪುನೀತ್ ಫೋಟೋ ಶೇರ್ ಮಾಡಿದ ಸಚಿವ ಜಮೀರ್
ಬೆಂಗಳೂರು, ಸೆಪ್ಟೆಂಬರ್ 28: ಕಾಂಗ್ರೆಸ್ ನಾಯಕ ಮತ್ತು ಸಚಿವ ಜಮೀರ್ ಅಹಮದ್ ಖಾನ್ ರಾಜಕೀಯದ ಜೊತೆ ಸಿನಿಮಾ ರಂಗದಲ್ಲೂ ಪರಿಚಿತರು. ಕನ್ನಡ ಸಿನಿಮಾ ಮತ್ತು ಬಾಲಿವುಡ್‌ನಲ್ಲಿಯೂ ಹಲವು ಸ್ನೇಹಿತರನ್ನು ಹೊಂದಿದ್ದಾರೆ. ಹಲವಾರು ಬಾರಿ ಅವರು ನಟರ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್ ಮಾಡುತ್ತಿರುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಜಮೀರ್ ಅಹಮದ್ ಖಾನ್ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು. ನಟ ದರ್ಶನ್, ಬಾಲಿವುಡ್ ನಟ ಸಜಯ್ ದತ್ ಸೇರಿದಂತೆ ಅನೇಕ ನಟರ ಜೊತೆ ಜಮೀರ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 'ಬನಾರಸ್' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಪಯಣ ಆರಂಭಿಸಿದ್ದಾರೆ. ಇವರು ನಾಯಕರಾಗಿರುವ 2ನೇ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಮುಹೂರ್ತ ನೆರವೇರಿಸಲಾಗಿದೆ. ಈಗ ಸಚಿವ ಜಮೀರ್ ಅಹಮದ್ ಖಾನ್ ಡಾ. ರಾಜ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆಗಿನ ಹಳೆಯ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ.
ಹಳೆಯ ನೆನಪು ಮಾಡಿಕೊಂಡ ಜಮೀರ್: ಶನಿವಾರ ದಿ. ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆಗಿನ ಫೋಟೋವನ್ನು ಜಮೀರ್ ಅಹಮದ್ ಖಾನ್ ಶೇರ್ ಮಾಡಿದ್ದಾರೆ.
'ಕನ್ನಡ ಚಿತ್ರರಂಗದ ದಿಗ್ಗಜರಾದ ದಿವಂಗತ ಡಾ. ರಾಜಕುಮಾರ್ ಮತ್ತು ದಿವಂಗತ ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ನೆನಪುಗಳು' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಈ ಫೋಟೋ ಯಾವಾಗ ತೆಗೆದಿರುವುದು, ಯಾರು ತೆಗೆದಿರುವುದು ಎಂಬ ಬಗ್ಗೆ ಸಚಿವರು ಮಾಹಿತಿ ನೀಡಿಲ್ಲ. ಆದರೆ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದರೂ ಕನ್ನಡಿಗರ ಹೃದಯದಲ್ಲಿ ಸದಾ ಸ್ಥಾನ ಪಡೆದಿರುವ ಇಬ್ಬರ ಜೊತೆಗಿನ ನೆನಪುಗಳನ್ನು ಜಮೀರ್ ಅಹಮದ್ ಖಾನ್ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಡಾ. ರಾಜ್ ಮತ್ತು ಪುನೀತ್ ರಾಜ್‌ಕುಮಾರ್ ಊಟ ಮಾಡುತ್ತಿದ್ದಾರೆ. ಒಂದು ಚಿತ್ರದಲ್ಲಿ ಸ್ವತಃ ಜಮೀರ್ ಅಹಮದ್ ಖಾನ್ ಪುನೀತ್ ರಾಜ್‌ಕುಮಾರ್‌ಗೆ ಊಟವನ್ನು ಬಡಿಸುತ್ತಿದ್ದಾರೆ. ಮುದ್ದೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಚಿತ್ರದಲ್ಲಿ ಕಾಣಬಹುದು.
ಜಮೀರ್ ಹಂಚಿಕೊಂಡ ಚಿತ್ರಗಳು
Sharing some of the unforgettable golden memories with the Legends of the Kannada film industry Late Dr.Rajkumar Ji and Late Shri.Puneet Kumar pic.twitter.com/Frb4z5699n
— B Z Zameer Ahmed Khan (@BZZameerAhmedK) September 28, 2024
ಸಚಿವ ಜಮೀರ್ ಅಹಮದ್ ಖಾನ್ ಹಾಕಿರುವ ಪೋಸ್ಟ್‌ಗೆ ಹಲವಾರು ಜನರು ಲೈಕ್ ಮಾಡಿದ್ದಾರೆ. ಕಮೆಂಟ್‌ಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಈ ಚಿತ್ರಗಳನ್ನು ಸಚಿವರು ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಒಂದು ಗಂಟೆಯಲ್ಲಿ ಸುಮಾರು 200 ಜನರು ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ 143 ಜನರು ಲೈಕ್ ಮಾಡಿದ್ದಾರೆ.
ನಟ ದಿ. ಪುನೀತ್ ರಾಜ್‌ಕುಮಾರ್ ಸಹ ಜಮೀರ್ ಅಹಮದ್ ಖಾನ್ ಮತ್ತು ಅವರ ಪುತ್ರ ಝೈದ್ ಖಾನ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಪುನೀತ್ ರಾಜ್‌ಕುಮಾರ್ ಝೈದ್ ಖಾನ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸುವ, ತಂದೆ ಏನು ಮಾಡುತ್ತಿದ್ದಾರೆ?, ಹೇಗಿದ್ದಾರೆ? ಎಂದು ವಿಚಾರಿಸುವ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿವೆ.
ಇಂದು ನಮ್ಮೊಂದಿಗೆ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಇಬ್ಬರೂ ಸಹ ಇಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ, ನಾಡಿಗೆ ಅವರು ನೀಡಿದ ಕೊಡುಗೆಯ ಮೂಲಕ ಎಲ್ಲರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಶನಿವಾರ ಇಬ್ಬರ ಜೊತೆಗಿನ ಒಡನಾಟದ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications