Zameer Ahmed: ನಾವಿಬ್ಬರೂ ಸ್ನೇಹಿತರು..! ದರ್ಶನ್ ಬಂಧನದ ಬಗ್ಗೆ ಜಮೀರ್ ಖಾನ್ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಜುಲೈ 4ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದರ್ಶನ್‌ರ ಆಪ್ತ ಸ್ನೇಹಿತ ಎಂದೇ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ಈ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದರು, ಈಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಉಪ್ಪು ತಿಂದವರು ನೀರು ಕುಡಿಯಬೇಕು, ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದಿದ್ದಾರೆ.

ನಾನು ದರ್ಶನ್ ಪರ ಲಾಬಿ ಮಾಡಿದ್ದೇನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅದೆಲ್ಲ ಸುಳ್ಳು ದರ್ಶನ್‌ರನ್ನು ರಕ್ಷಣೆ ಮಾಡಲು ನಾನು ಪ್ರಯತ್ನ ಮಾಡಿಲ್ಲ. ನಾನು ದರ್ಶನ್ ಪರವಾಗಿದ್ದೇನೆ ಎಂದು ಹೇಳಲಾಗುತ್ತಿದೆ, ಈ ವಿಚಾರದಲ್ಲಿ ನಾನು ದರ್ಶನ ಪರ ವಹಿಸಲ್ಲ, ಕಾನೂನು ಪ್ರಕಾರ ತನಿಖೆಯಾಗಲಿದ್ದು, ನ್ಯಾಯಾಲಯದಲ್ಲಿ ಇದು ತೀರ್ಮಾನವಾಗಲಿದೆ ಎಂದರು.
ನಾವಿಬ್ಬರೂ ಸ್ನೇಹಿತರು
ನಾನು ಮತ್ತು ದರ್ಶನ್ ಉತ್ತಮ ಸ್ನೇಹಿತರು, ಆದರೆ ಇಂತಹ ಪ್ರಕರಣದಲ್ಲಿ ದರ್ಶನ್ ಅವರಿಗೆ ನನ್ನ ಬೆಂಬಲ ಇಲ್ಲ. ನಾವಿಬ್ಬರೂ ಉತ್ತಮ ಸ್ನೇಹಿತರೇ ಆದರೆ ಈ ರೀತಿ ತಪ್ಪು ನಡೆದಾಗ ಯಾರು ಬೆಂಬಲ ಕೊಡುತ್ತಾರೆ? ಅವರ ಪರವಾಗಿ ಯಾರು ನಿಲ್ಲುತ್ತಾರೆ ಎಂದು ಪ್ರಶ್ನೆ ಮಾಡಿದರು. ತಪ್ಪು ಯಾರೇ ಮಾಡಿದ್ರು ತಪ್ಪೇ, ಅದು ದರ್ಶನ್ ಆಗಿರಲಿ ಅಥವಾ ಇನ್ಯಾರೇ ಇರಲಿ ಎಂದರು.
ನಟ ದರ್ಶನ್ ಮತ್ತು ಜಮೀರ್ ಖಾನ್ ಉತ್ತಮ ಸ್ನೇಹಿತರು, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಮೀರ್ ಖಾನ್ ದರ್ಶನ್ ಸಿನಿಮಾ ಹಾಡಿನ ರೀಲ್ಸ್ ಹಂಚಿಕೊಂಡು ದರ್ಶನ್‌ರನ್ನು ನೆನಪಿಸಿಕೊಂಡಿದ್ದರು.
ಜಮೀರ್ ಮಗ ಝೈದ್ ಖಾನ್ ಅವರ ಮೊದಲ ಸಿನಿಮಾ ಬನಾರಸ್‌ಗೆ ದರ್ಶನ್ ಪ್ರಚಾರ ಮಾಡಿದ್ದರು. ರಂಜಾನ್, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ದರ್ಶನ್ ತಪ್ಪದೇ ಜಮೀರ್ ಮನೆಗೆ ಭೇಟಿ ನೀಡಿ ಹಬ್ಬದೂಟ ಸವಿಯುತ್ತಿದ್ದರು. ಈಗ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೆ, ಜಮೀರ್ ಕೂಡ ಬೆಂಬಲ ಇಲ್ಲ ಎಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ, ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಜುಲೈ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಲ್ಲರೂ ಈಗ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ದರ್ಶನ್ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ದರ್ಶನ್ 28 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರು.











Click it and Unblock the Notifications