Ekka Song: ಸಂಜೆ 5.18ಕ್ಕೆ 'ಬ್ಯಾಂಗಲ್ ಬಂಗಾರಿ' ವಿಡಿಯೋ ಸಾಂಗ್ ಬಿಡುಗಡೆ.. Yuva Rajkumar
ಬೆಂಗಳೂರು, ಜೂನ್ 07: ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ಸಂಭ್ರಮಾಚರಣೆ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ, 11 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಹಾಡಿನ ಬಿಡುಗಡೆ ಬಗ್ಗೆ 'ಎಕ್ಕ' ಚಿತ್ರತಂಡ ಅಪ್ಡೇಟ್ ನೀಡಿದೆ. ನಟ ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' (Ekka Song) ಸಿನಿಮಾದ 'ಬ್ಯಾಂಗಲ್ ಬಂಗಾರಿ' (Bangle Bangari Song) ಹಾಡಿನ ಬಿಡುಗಡೆಗೆ ಮಹೂರ್ತ ಕೂಡಿ ಬಂದಿದೆ.
ದೊಡ್ಮನೆ ಕುಡಿ ನಟ ಯುವ ರಾಜ್‌ಕುಮಾರ್ ಅವರ ಎಡನೇ ಸಿನಿಮಾ 'ಎಕ್ಕ'ದ 'ಬ್ಯಾಂಗಲ್ ಬಂಗಾರಿ' ಹಾಡು ಇದಾಗಿದೆ. ಇದರಲ್ಲಿ ನಟಿ ಸಂಜನಾ ಆನಂದ್ ಯುವ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡು ಪಡ್ಡೆ ಹುಡುಗರ ನೆಚ್ಚಿನ ಹಾಡಾಗುವುದರಲ್ಲಿ, ನಿಂತಲ್ಲಿ, ಕೂತಲ್ಲಿ ಗುನುಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.

ಸಂಜೆ 5.18 ಗಂಟೆಗೆ ವಿಡಿಯೋ ಸಾಂಗ್ ಲಾಂಚ್..
ಇಂದು ಶನಿವಾರ (June 7) ಸಂಜೆ 5.18 ಗಂಟೆಗೆ 'ಎಕ್ಕ' ವಿಡಿಯೋ ಸಾಂಗ್ 'ಬ್ಯಾಂಗಲ್ ಬಂಗಾರಿ' ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ. ಹಾಡಿನ ಸಾಹಿತ್ಯವನ್ನು ನಾಗಾರ್ಜುನ್ ಶರ್ಮಾ ಅವರು ಬರೆದಿದ್ದಾರೆ. ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ. ಚರಣ್ ರಾಜ್ ಅವರ ಸಂಗೀತ ನೀಡಿದ್ದು, ಅಂತೋನಿ ದಾಸನ್ ಅವರ ಕಂಠದಲ್ಲಿ ಮೂಡಿದ ಬಂದ ಹಾಡಿನ ಗ್ಲಿಮ್ಸ್ ಈಗಾಗಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
ಕನ್ನಡದ 'ಎಕ್ಕ' ಸಿನಿಮಾ ಮುಂದಿನ ತಿಂಗಳು ಜುಲೈ 18ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರಾದ PRK, KRG ಮತ್ತು ಜಯಣ್ಣ ಫಿಲ್ಮ್ ಅವರು ನಿರ್ಧರಿಸಿದ್ದಾರೆ. ಬಹುಶಃ ಕನ್ನಡ ಭಾಷೆಯೊಂದರಲ್ಲೇ ಬೇರೆ ಬೇರೆ ಕಡೆಗೆ ಬಿಡುಗಡೆ ಮಾಡಿಕೊಳ್ಳಲು ಪ್ಲಾನ್ ಮಾಡಲಾಗಿದೆ.
The 𝐂𝐡𝐚𝐫𝐭𝐛𝐮𝐬𝐭𝐞𝐫 𝐃𝐮𝐨 @anthonydaasan and @charanrajmr270 is back with another Musical Banger "𝐁𝐚𝐧𝐠𝐥𝐞 ಬಂಗಾರಿ" 💕#BangleBangari video song releasing tomorrow at 𝟓:𝟏𝟖𝐏𝐌 on @aanandaaudio YouTube Channel!
— YuvaRajkumar (@yuva_rajkumar) June 6, 2025
✍️ Lyrics by: @Nagarjunsharma2
🕺 Choreography by:… pic.twitter.com/9fV6rhWGQk
ಕಾಲ್ತುಳಿತ, ಸಾವು ದುಃಖ: ಹಾಡು ಬಿಡುಗಡೆ ರದ್ದು
ಇದೇ ಹಾಡನ್ನು 'ಎಕ್ಕ' ಟೀಂ ಜೂನ್ 05 ರಂದು ಸಂಜೆ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿತ್ತು. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಕ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವಿಗೀಡಾಗಿದ್ದರು. ಬೆಂಗಳೂರಲ್ಲಿ ಶೋಕದ ವಾತಾವರಣ ಆವರಿಸಿತ್ತು. ಮೃತರ ಕುಟುಂಬಗಳ ಅಳಲು, ದುಃಖ ಎಂಥವರನ್ನು ಮೌನವಾಗಿಸಿತ್ತು. ಈ ಕಾರಣದಿಂದ ಸದರಿ ಹಾಡು ಬಿಡುಗಡೆ ದಿನವನ್ನು ಮುಂದೂಡಿಕೆ ಮಾಡಲಾಯಿತು.
ನೋವಿನಲ್ಲಿ ಚಿತ್ರತಂಡ ಭಾಗಿ: ಯುವ
ನಿಮ್ಮ ದುಃಖದಲ್ಲಿ ನಾವಿದ್ದೇವೆ. ಪ್ರತಿ ದುರಂತಗಳು ಘಟಿಸುವ ಮೊದಲು ಸುಂದರವಾಗಿಯೇ ಇರುತ್ತವೆ. ಸುಂದರ ಕ್ಷಣಗಳನ್ನು ಸಂಭ್ರಮಿಸುವ ಸಮಯದಲ್ಲಿ ಘೋರ ದುರಂತ ನಡೆದಿದೆ. ನಿಮ್ಮ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಹೇಳಿದ್ದ ನಟ ಯುವ ರಾಜ್‌ಕುಮಾರ್ ಹಾಡಿನ ಬಿಡುಗಡೆ ಮುಂದೂಡಿಕೆ ಬಗ್ಗೆ ಮಾಹಿತಿ ನೀಡಿದ್ದರು.












Click it and Unblock the Notifications