ಯುವರಾಜ್ ಪುನೀತ್ ಸ್ಥಾನ ತುಂಬುತ್ತಾರಾ? ದೊಡ್ಮನೆ ಮೊಮ್ಮಗನ ಸಿನಿಮಾ ಹೇಗಿದೆ?
ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಬಿಟ್ಟು ಹೊದ ನಂತರ ಕನ್ನಡ ನಾಡು ನೋವಿನಲ್ಲಿ ಇದ್ದು, ಅಭಿಮಾನಿಗಳು ಇಂದಿಗೂ ಕಂಬನಿ ಮಿಡಿಯುತ್ತಾರೆ. ಹೀಗಿದ್ದಾಗ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸ್ಥಾನವನ್ನು ಯುವ ಅವರು ತುಂಬುತ್ತಾರೆ ಎಂಬ ಮಾತು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತಿದೆ. ಇದೇ ವೇಳೆ ಯುವರಾಜ್ ಅಭಿನಯ ಮಾಡಿರುವ ಮೊದಲ ಸಿನಿಮಾ 'ಯುವ' ಅಬ್ಬರ ಹೇಗಿದೆ ಗೊತ್ತಾ? ಬನ್ನಿ ತಿಳಿಯೋಣ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಫ್ಯಾನ್ಸ್ ಈಗ ಯುವರಾಜ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಯುವರಾಜ್ ಅವ್ರ ಮೊದಲ ಸಿನಿಮಾ ಮೇಲೆ ನಿರೀಕ್ಷೆ ಕೂಡ ಡಬಲ್ ಆಗಿದೆ. ಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲಿ ದೊಡ್ಮನೆ ಮೊಮ್ಮಗನ ಚಿತ್ರವು ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗಾಗಿ ಫ್ಯಾನ್ಸ್ ಕೂಡ ಅದ್ಧೂರಿ ಸಂಭ್ರಮಾಚರಣೆ ನಡೆಸಿದ್ದಾರೆ. ಹಾಗಾದರೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಇದೀಗ ಹೇಳಿದ್ದಾದ್ರು ಏನು? ಹೇಗಿದೆ ಯುವರಾಜ್ ಅವರ ಸಿನಿಮಾ ಹವಾ? ಬನ್ನಿ ತಿಳಿಯೋಣ.

ಯುವರಾಜ್ ಎಂಟ್ರಿಗೆ ಫುಲ್ ಶೇಕ್!
ವರನಟ ಡಾ. ರಾಜ್‌ಕುಮಾರ್ ಅವರು ಕನ್ನಡ ಸಿನಿಮಾ ರಂಗದ ಅನಭಿಷಿಕ್ತ ದೊರೆ ಅಂತಾ ಹೇಳಬಹುದು. ಯಾಕಂದ್ರೆ ಡಾ. ರಾಜ್‌ಕುಮಾರ್ ಅವರು ಕನ್ನಡ ಸಿನಿಮಾ ರಂಗವನ್ನ ಈ ಎತ್ತರಕ್ಕೆ, ಅಂದ್ರೆ ಇಡೀ ಜಗತ್ತೇ ಹೊಗಳುವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಹೀಗೆ ಕನ್ನಡ ಸಿನಿಮಾ ರಂಗವನ್ನ ಕಟ್ಟಿ ಬೆಳೆಸಿದ ದೊಡ್ಮನೆ ಅಂದ್ರೆ ವರನಟ ಡಾ. ರಾಜ್‌ಕುಮಾರ್ ಅವರ ಕುಟುಂಬ ಸದಸ್ಯರು ಕನ್ನಡ ತಾಯಿಯ ಕಲಾ ಸೇವೆ ಮಾಡಿ ಕನ್ನಡಿಗರನ್ನು ರಂಜಿಸಿದ್ದಾರೆ. ಈಗ ಕನ್ನಡ ಸಿನಿಮಾ ರಂಗದಲ್ಲಿ ಡಾ. ರಾಜ್ ಕುಟುಂಬದ, 3ನೇ ತಲೆಮಾರು ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಅದ್ರಲ್ಲೂ ಇಂದು ಯುವರಾಜ್ ಅವರ ಎಂಟ್ರಿ ದೇಶದಲ್ಲೂ ಸಂಲಚನ ಸೃಷ್ಟಿಸಿದೆ.
ಡಾ. ರಾಜ್ ಮೊಮ್ಮಗ ಯುವ!
ಕಟ್ಟುಮಸ್ತಾದ ದೇಹ, ಡೈಲಾಗ್ ಡೆಲಿವರಿ ಲೆಕ್ಕಕ್ಕೆ ಬಂದ್ರೆ ತಾತನ ರೀತಿ ಡೈಲಾಗ್ ಹೊಡೆಯುವ ನಿರರ್ಗಳತೆ. ಇದು ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವರಾಜ್ ಕೆಪಾಸಿಟಿ. ಮೊದಲ ಸಿನಿಮಾ ರಿಲೀಸ್ ಮೂಲಕವೇ ಯುವ ಅವರು ಇಷ್ಟೆಲ್ಲಾ ಹವಾ ಎಬ್ಬಿಸಿದ್ದಾರೆ. ದೊಡ್ಮನೆಯ ಮೊಮ್ಮಗನ ಸಿನಿಮಾ ಇಂದು ದೇಶಾದ್ಯಂತ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಲ್ಲದೆ ಯುವ ಅವರ ಹವಾ ನೋಡಿ ಸಿನಿಮಾ ಇಂಡಸ್ಟ್ರಿ ಕೂಡ ಜೈ ಅಂದಿದೆ. ಜೊತೆಗೆ, ಸೋಷಿಯಲ್ ಮೀಡಿಯಾದಲ್ಲಿ ಯುವರಾಜ್ ಟ್ರೆಂಡ್ ಬಲು ಜೋರಾಗಿದೆ.
#Yuva
— bRb_anjan K3 (@Wrongranja) March 29, 2024
What a start 🔥🔥🔥
Compromise annodu life allu illa, nammallu illa 🔥...
Welcome to #Gandadagudi next superstarrr 🤗👍
Best wishes from BOSS BAADSHAH #KINGKICCHA #KicchaBOSS fan🤦♂️ pic.twitter.com/6LEhbAfUGG
'ಹೊಂಬಾಳೆ ಫಿಲ್ಮ್ಸ್' ಯುವ ಅವರ ಮೊದಲ ಸಿನಿಮಾಗೆ ಬಂಡವಾಳ ಹೂಡಿದೆ. ಮೊದಲ ಸಿನಿಮಾಗೆ ಯುವ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದರಲ್ಲೂ ಸಂತೋಷ್ ಆನಂದ್ ರಾಮ್ ಮತ್ತೆ ದೊಡ್ಮನೆ ನಟನಿಗೆ ನಿರ್ದೇಶನ ಮಾಡಿದ್ದಾರೆ. ಹೀಗೆ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು ಇದೀಗ ಆ ಕುತೂಹಲ ನಿಜವಾಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ಯುವ ಅವರ ಗುಣಗಾನ ಮಾಡುತ್ತಿದ್ದಾರೆ. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ.
As a Darshan fan I agree 💯 one of best debutant in kannada industry
— Sunil (@Sunil862786) March 29, 2024
Dance . fight . Acting ✨✨✨
Movie ⭐⭐⭐⭐#YuvaRajkumar #yuva pic.twitter.com/WDkBwIDSuM
ದೊಡ್ಮನೆ ಮೊಮ್ಮಗನಿಗೆ ಭರ್ಜರಿ ಓಪನಿಂಗ್!
ಒಟ್ನಲ್ಲಿ ಯುವರಾಜ್ ಅವರಿಗೆ ದೊಡ್ಡ ಮಟ್ಟದಲ್ಲಿ ಇಂದು ಓಪನಿಂಗ್ ಸಿಕ್ಕಿದ್ದು, ಫ್ಯಾನ್ಸ್ ಈ ಸಿನಿಮಾ ನೋಡಿ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ, ಯುವ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದೇವೆ ಎಂಬ ಮಾತು ಹೇಳುತ್ತಿದ್ದಾರೆ ಫ್ಯಾನ್ಸ್. ಇದೇ ಕಾರಣಕ್ಕೆ ಯುವ ಸಿನಿಮಾ ಈಗ ಫುಲ್ ಟ್ರೆಂಡ್ ಆಗುತ್ತಿದೆ. ಹಾಗೇ ಹಲವು ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಯುವ ಅವರ ಚಿತ್ರ ಭರ್ಜರಿ ಗಳಿಕೆ ಕೂಡ ಮಾಡುತ್ತಿದೆ. ಈ ಮೂಲಕ ಬಾಕ್ಸ್ ಆಫಿಸ್‌ನಲ್ಲೂ ದಾಖಲೆಗಳನ್ನು ನಿರ್ಮಾಣ ಮಾಡುವ ಸಾಧ್ಯತೆ ದಟ್ಟವಾಗಿದೆ.
ಥಿಯೇಟರ್ ಸಂಖ್ಯೆ ಏರಿಕೆ?
ಯುವ ರಾಜ್‌ಕುಮಾರ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಈಗ ಅವರ ನಿರೀಕ್ಷೆಗಳು ನಿಜವಾಗಿದ್ದು, ಯುವ ಮೊದಲ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಾಗಿ ಈಗ ಎಲ್ಲೆಲ್ಲೂ ಯುವ ಸಿನಿಮಾ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಹಾಗೇ ಅಭಿಮಾನಿಗಳು ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಇನ್ನು ಶನಿವಾರ & ಭಾನುವಾರ ಅಭಿಮಾನಿ ಬಳಗದ ಎಂಟ್ರಿ ಮತ್ತಷ್ಟು ಭರ್ಜರಿಯಾಗಿ ಇರಲಿದೆ ಎನ್ನಲಾಗಿದ್ದು. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿರುವ ಹಿನ್ನೆಲೆ ಥಿಯೇಟರ್ ಮಾಲೀಕರು ಕೂಡ ಖುಷಿಯಾಗಿದ್ದಾರೆ. ಈಗಾಗಲೇ ಈ ಹಿನ್ನೆಲೆ ಮತ್ತಷ್ಟು ಥಿಯೇಟರ್‌ಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ!
ಯುವ ರಾಜ್‌ಕುಮಾರ್ ಹೋಲಿಕೆಯಲ್ಲಿ ಕೂಡ ಪುನೀತ್ ಅವರನ್ನು ನೆನಪು ಮಾಡುತ್ತಾರೆ. ಹಾಗೇ ಯುವ ಮಾಡುವ ಸ್ಟಂಟ್ & ಡಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರ ನೆನಪು ಮರುಕಳಿಸುತ್ತೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿ ಯುವ ಅವರನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ. ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಹಾಗೇ ಗಲ್ಲಾಪೆಟ್ಟಿಗೆ ತುಂಬಾ ಈ ಸಿನಿಮಾ ಒಳ್ಳೆಯ ಕಾಸು ಕೂಡ ಮಾಡಿದೆ.
ಐತಿಹಾಸಿಕ ಸಿನಿಮಾ ಯಾವಾಗ ಬರುತ್ತೆ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಹಿಂದೆಯೇ ಯುವ ರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬಹುದಿತ್ತು. ಇದಕ್ಕಾಗಿ, ಐತಿಹಾಸಿಕ ಸಿನಿಮಾ ಕಥೆ ಕೂಡ ರೆಡಿಯಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾ ತೆರೆಗೆ ಬರಲೇ ಇಲ್ಲ. ಹೀಗಾಗಿ ಆ ಸಿನಿಮಾ ಪ್ರಾಜೆಕ್ಟ್ ಬಿಟ್ಟು ಯುವ ಸಿನಿಮಾ ಒಪ್ಪಿಕೊಂಡಿದ್ದ ದೊಡ್ಡನೆ ಮೊಮ್ಮಗ ಯುವರಾಜ್ ಇದೀಗ ಅಬ್ಬರಿಸುದ್ದಾರೆ.












Click it and Unblock the Notifications