Darshan Thoogudeepa: ಡಿಆರ್​​ಡಿಒ, ಇಸ್ರೋ ಸ್ಫೋಟಿಸುತ್ತೇನೆ! ದರ್ಶನ್ ಇರುವ ಪಕ್ಕದ ಸೆಲ್‌ಗೆ ಹಾಕಿ ಎಂದ ಯುವಕ

ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಂನ್‌ನಲ್ಲಿ ವಿಡಿಯೋ ಮೂಲಕ ಯುವಕನೊಬ್ಬ ಬೆಂಗಳೂರಿನ ಹಲವು ಕಡೆ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ಸದ್ಯ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಗಾಂಧಿನಗರದ ನಿವಾಸಿ ಪೃಥ್ವಿರಾಜ್ ಎನ್ನುವ ಯುವಕನೇ ಈ ವಿಡಿಯೊ ಮಾಡಿದ್ದಾನೆ. ತನ್ನ ತಾಯಿ ದೂರು ಕೊಡಲು ಹೋದರೆ ಪೋಲೀಸರು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾನೆ.

Youngster Threatens to Blow Up Bengaluru Over Police Inaction demand to Cell beside Darshan

ಪೊಲೀಸರು ತಮ್ಮ ಫೋನ್ ಕಿತ್ತುಕೊಂಡರು ಎಂದು ಪೃಥ್ವಿರಾಜ್ ಆರೋಪಿಸಿದ್ದು, ನಾನು ಪ್ರಸಾರ ಮಾಡಿದ ಲೈವ್ ವೀಡಿಯೊಗಳನ್ನು ಅಳಿಸಲಾಗಿದೆ. ನನ್ನ ತಾಯಿಯ ಎದುರೇ ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಮವಸ್ತ್ರವು ಅವರಿಗೆ ಇಷ್ಟವಾದುದನ್ನು ಹೇಳುವ ಹಕ್ಕನ್ನು ನೀಡುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಎಸ್‌ಪಿ ಕಚೇರಿಗೆ ದೂರು ಕೊಡುತ್ತೇನೆ

ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ಹೋಗುವುದಾಗಿ ಪೃಥ್ವಿರಾಜ್ ಹೇಳಿದ್ದಾರೆ. ಈ ಕುರಿತು ಡಿಸಿ ಅವರನ್ನೂ ಸಂಪರ್ಕಿಸುವುದಾಗಿ ತಿಳಿಸಿದ್ದಾರೆ. ದೂರು ಸ್ವೀಕರಿಸದೇ ಇದ್ದರೆ ಬೆಂಗಳೂರಿನಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ನಾನು ಐಐಎಸ್‌ಸಿ ಮತ್ತು ಬೆಂಗಳೂರು ಮೆಟ್ರೋದ ಎಲೆಕ್ಟ್ರಿಕಲ್ ವಿಭಾಗದಲ್ಲಿ 9 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಡಿಆರ್ ಡಿಒ, ಇಸ್ರೋ ಮತ್ತು ಸೇನಾ ಶಿಬಿರಗಳು ಹೇಗೆ ತಮ್ಮ ಶಕ್ತಿಯನ್ನು ಪಡೆಯುತ್ತವೆ ಎಂಬುದು ನನಗೆ ತಿಳಿದಿದೆ. ನಾನು ಯಾವುದೇ ಸ್ಥಳವನ್ನು ಸ್ಫೋಟಿಸಬಹುದು ಮತ್ತು ಬೂದಿಯನ್ನಾಗಿ ಮಾಡಬಹುದು. ನೀವು ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಬಯಸಿದರೆ, ಅದರಂತೆ ನೀವು ಮುಂದುವರಿಯಬಹುದು. ಒಂದು ವೇಳೆ ನನ್ನನ್ನು ಪೊಲಿಸರು ಬಂಧಿಸಿದರೆ ನಟ ದರ್ಶನ್ ಪಕ್ಕದ ಸೆಲ್ ಕೊಡಿ ಎಂದು ಪೃಥ್ವಿರಾಜ್ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ.

ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರಿನಲ್ಲಿ ಕೆಲಸ ಮಾಡುವ ಪೃಥ್ವಿರಾಜ್ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಪೃಥ್ವಿರಾಜ್ ತಾಯಿ ಆತಂಕಗೊಂಡು, ಚಳ್ಳಕೆರೆ ಪೊಲೀಸ್ ಠಾಣೆಗೆ ತೆರೆಳಿ, ನನ್ನ ಮಗ ಕಾಣೆಯಾಗಿದ್ದಾನೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ತೆಗೆದುಕೊಳ್ಳುವಂತೆ ಕೇಳಿದ್ದಾರೆ, ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದಾರೆ.

ಕೆಲವು ದಿನಗಳ ಬಳಿಕ ಮನೆಗೆ ಬಂದ ಪೃಥ್ವಿರಾಜ್ ತಾಯಿಯ ದೂರನ್ನು ಪೊಲೀಸರು ತೆಗೆದುಕೊಂಡಿಲ್ಲ ಎಂದು ತಿಳಿದು ಕೆರಳಿದ್ದು, ಪೊಲೀಸರ ಠಾಣೆಗೆ ತೆರಳಿ ವಿಡಿಯೋ ಮಾಡಿದ್ದಾನೆ. ಪೊಲೀಸರು, ಪೃಥ್ವಿರಾಜ್ ಕಿತ್ತುಕೊಂಡು ಬುದ್ದಿ ಹೇಳಿ ಕಳುಹಿಸಿದ್ದರು ಎಂದು ಹೇಳಲಾಗಿದೆ.

ಪೊಲೀಸರ ವರ್ತನೆಯಿಂದ ಮತ್ತಷ್ಟು ಕೋಪಗೊಂಡ ಯುವಕ ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+