Year Ender 2025: 'ಕಾಂತಾರ ಚಾಪ್ಟರ್ 1'ರಿಂದ 'ಧುರಂಧರ್'; ಈ ವರ್ಷ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾಗಳಿವು
2025 ಕೆಲವು ಚಿತ್ರರಂಗಕ್ಕೆ ವರವಾಗಿದೆ. ಇನ್ನು ಕೆಲವು ಚಿತ್ರರಂಗಕ್ಕೆ ನಷ್ಟವನ್ನುಂಟು ಮಾಡಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವಂತಹ ಯಾವುದೇ ಸಿನಿಮಾ ಬಂದಿಲ್ಲ. ಇನ್ನು ಕನ್ನಡ ಚಿತ್ರರಂಗಕ್ಕೂ ಈ ವರ್ಷ ಮಿಶ್ರ ಫಲಿತಾಂಶ ಸಿಕ್ಕಿದೆ ಅಂತಲೇ ಹೇಳಬಹುದು.
ಈ ವರ್ಷದ ಆರಂಭದ ಆರು ತಿಂಗಳು ಕನ್ನಡ ಚಿತ್ರರಂಗದ ಒಂದೇ ಒಂದು ಸಿನಿಮಾವೂ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಆದರೆ, ಸೆಕೆಂಡ್ ಹಾಫ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆದವು. ಇದೇ ಪರಿಸ್ಥಿತಿ ಬಾಲಿವುಡ್‌ಗೂ ಆಗಿದೆ. ಈ ವರ್ಷ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳಲ್ಲಿ ಹಿಂದಿ ಭಾಷೆಯ ಸಿನಿಮಾಗಳೇ ಹೆಚ್ಚಿದ್ದರೂ, ಕನ್ನಡದ ಸಿನಿಮಾ ಟಾಪ್‌ನಲ್ಲಿದೆ. 2025ರ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಕಾಂತಾರ ಚಾಪ್ಟರ್ 1
ನಿರ್ದೇಶನ: ರಿಷಬ್ ಶೆಟ್ಟಿ
ತಾರಾಬಳಗ: ರಿಷಬ್ ಶೆಟ್ಟಿ, ಜಯರಾಮ್, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ
ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸಕ್ಸಸ್ ಲೇಟ್ ಆಗಿ ಸಿಕ್ಕರೂ ಭರ್ಜರಿಯಾಗಿಯೇ ಸಿಕ್ಕಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ 'ಕಾಂತಾರ ಚಾಪ್ಟರ್ 1' ಇಲ್ಲಿವರೆಗೂ ಅತೀ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಟಾಪ್‌ನಲ್ಲಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ ಈ ಸಿನಿಮಾ ವರ್ಲ್ಡ್‌ವೈಡ್ ಸುಮಾರು ₹853.4 ಕೋಟಿ ಕಲೆಕ್ಷನ್ ಆಗಿದೆ ಎಂದು ಈ ಟಿವಿ ಭಾರತ್ ವರದಿ ಮಾಡಿದೆ. ರಿಷಬ್ ಶೆಟ್ಟಿಯೇ ನಿರ್ದೇಶಿಸಿ, ನಟಿಸಿದ್ದ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದರು. 'ಕಾಂತಾರ' ಪ್ರೀಕ್ವೆಲ್‌ಗೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಸಿಕ್ಕಿದೆ. ಮಂಕಾಗಿದ್ದ ಸ್ಯಾಂಡಲ್‌ವುಡ್ ಮತ್ತೆ ಚಿಗುರಿದೆ.
ಛಾವಾ
ನಿರ್ದೇಶನ: ಲಕ್ಷ್ಮಣ್ ಉಟೇಕರ್
ತಾರಾಬಳಗ: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ,
ಬಾಲಿವುಡ್‌ಗೆ ಆರಂಭದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ 'ಛಾವಾ'. ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದರು. ಮರಾಠಿಗರ ಹೆಮ್ಮಯ ಧೀರನ ಬಗ್ಗೆ ಲಕ್ಷ್ಮಣ್ ಉಟೇಕರ್ ಸಿನಿಮಾ ಮಾಡಿದ್ದರು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ದಕ್ಷಿಣ ಭಾರತದಲ್ಲಿ ಸಿನಿಮಾ ಹೆಚ್ಚಾಗಿ ಸದ್ದು ಮಾಡದೇ ಹೋದರೂ, ಉತ್ತರ ಭಾರತದ ಬಾಕ್ಸಾಫೀಸ್‌ನಲ್ಲಿ ಗದ್ದಲ ಎಬ್ಬಿಸಿತ್ತು. ಈ ಸಿನಿಮಾ ವಿಶ್ವದಾದ್ಯಂತ ₹808.7 ಕೋಟಿ ಗಳಿಕೆ ಕಂಡು ಟಾಪ್ 2 ಸ್ಥಾನದಲ್ಲಿದೆ.
ಧುರಂಧರ್
ನಿರ್ದೇಶನ: ಆದಿತ್ಯ ಧರ್
ತಾರಾಗಣ: ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಆರ್.ಮಾಧವನ್,
ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡುತ್ತಿರುವ ಸಿನಿಮಾ 'ಧುರಂಧರ್'. ಇದು ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲೇ ವಿಶ್ವದಾದ್ಯಂತ ₹500 ಕೋಟಿ ಕ್ಲಬ್ ಸೇರಿದೆ. ಇನ್ನು ಭಾರತದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾದ ಗಳಿಕೆ ₹350 ಕೋಟಿ. ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿಯೇ ಈ ಮೈಲಿಗಲ್ಲು ಸಾಧಿಸಿರೋದು ವಿಶೇಷ.

ಸೈಯ್ಯಾರಾ
ನಿರ್ದೇಶನ: ಮೋಹಿತ್ ಸೂರಿ
ತಾರಾಗಣ: ಅಹಾನ್ ಪಾಂಡೆ, ಅನೀತ್ ಪಡ್ಡಾ
ಈ ವರ್ಷದ ಬಾಲಿವುಡ್‌ನ ಸರ್ಪ್ರೈಸ್ ಬ್ಲಾಕ್‌ಬಸ್ಟರ್ ಅಂತ ಅನಿಸಿಕೊಂಡಿದ್ದು 'ಸೈಯ್ಯಾರಾ'. ಯುವ ಪ್ರತಿಭೆಗಳನ್ನು ಇಟ್ಕೊಂಡು ಮೋಹಿತ್ ಸೂರಿ ನಿರ್ದೇಶಿಸಿದ ಈ ಸಿನಿಮಾ 2025ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ರೊಮ್ಯಾಂಟಿಕ್ ಸಿನಿಮಾಗಳ ಲಿಸ್ಟ್ ಸೇರಿದೆ. ಯಶ್ ರಾಜ್ ಫಿಲ್ಮ್ಸ್ ಕೇವಲ ₹50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಸಿನಿಮಾ ವಿಶ್ವದಾದ್ಯಂತ ₹575.8 ಕೋಟಿ ಕಲೆಕ್ಷನ್ ಮಾಡಿತ್ತು. IMDbಯ 2025ರ ಜನಪ್ರಿಯ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಟಾಪ್‌ನಲ್ಲಿದೆ.
'ಕೂಲಿ'
ನಿರ್ದೇಶನ: ಲೋಕೇಶ್ ಕನಕರಾಜ್
ತಾರಾಬಳಗ: ರಜನಿಕಾಂತ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ
ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಸಿನಿಮಾ ಬಳಿಕ ಅತೀ ಹೆಚ್ಚು ಗಳಿಸಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿಯಲ್ಲಿ 'ಕೂಲಿ' ಇದೆ. ಲೋಕೇಶ್ ಕನಕರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿತ್ತು. ಅನಿರುದ್ಧ್ ರವಿಚಂದರ್ ಟ್ಯೂನ್‌ಗಳು ಸಿನಿಮಾ ಪ್ರಿಯರಿಗೆ ಹುಚ್ಚು ಹಿಡಿಸಿತ್ತು. ಈ ಸಿನಿಮಾಗೆ ಬಿಡುಗಡೆ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ವಿಶ್ವದಾದ್ಯಂತ ₹516.7 ಕೋಟಿ ಕಲೆಕ್ಷನ್ ಮಾಡಿತ್ತು.












Click it and Unblock the Notifications