Yash 19: ಹೊಡೆದರೆ ಆನೆಯನ್ನೇ ಹೊಡೆಯಬೇಕು, ‘ಆಸ್ಕರ್’ ಮೇಲೆ ಕಣ್ಣಿಟ್ಟರಾ ಯಶ್?
ನಟ ಯಶ್ ಅಂದುಕೊಂಡ ಗುರಿಯನ್ನು ಸಾಧಿಸುವ ತನಕ ನಿಲ್ಲಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದ್ರಲ್ಲೂ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನು, ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಯಶಸ್ಸು ಯಶ್‌ಗೆ ಸಲ್ಲಬೇಕು. ಯಶ್ ಇಂದು ತಮ್ಮ 19ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು 'ಹೊಡೆದರೆ ಆನೆಯನ್ನೇ ಹೊಡೆಯಬೇಕು' ಎನ್ನುವ ಅವರದ್ದೇ ಡೈಲಾಗ್‌ನಂತೆ 'ಆಸ್ಕರ್' ಮೇಲೆ ಕಣ್ಣಿಟ್ಟರಾ? ಅನ್ನೋ ಪ್ರಶ್ನೆ ಭುಗಿಲೆದ್ದಿದೆ!
ಹೌದು ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಿನಿಮಾಗಳು ತಮ್ಮ ಖ್ಯಾತಿ ಹಾಗೂ ಬಲವನ್ನು ಕಳೆದುಕೊಳ್ಳುತ್ತಿವೆ ಎಂಬ ಆರೋಪ ಇತ್ತು. ಅದ್ರಲ್ಲೂ ವರನಟ ಡಾ.ರಾಜ್‌ಕುಮಾರ್‌ರಿಂದ ಹಿಡಿದು, ದೊಡ್ಡ ದೊಡ್ಡ ನಟರು ಆರ್ಭಟಿಸಿದ್ದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಸೊರಗುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದ್ರೆ ಈ ಮಾತುಗಳನ್ನ ನಟ ಯಶ್ ಅವರು 2018ರಲ್ಲಿ ಸುಳ್ಳು ಮಾಡಿ, ಕನ್ನಡ ಸಿನಿಮಾ ಜಗತ್ತಿನ ಗತ್ತು ಏನು? ಅನ್ನೋದನ್ನು ಜಗತ್ತಿಗೆ ತೋರಿಸಿದರು. ಈಗ ರಾಕಿಭಾಯ್ ನಟ ಯಶ್ ಇನ್ನು ಒಂದು ಹೆಜ್ಜೆ ದೊಡ್ಡದಾಗಿ ಮುಂದೆ ಇಟ್ಟಿದ್ದಾರೆ.

ಕನ್ನಡಕ್ಕೂ ಬರುತಗ್ತಾ 'ಆಸ್ಕರ್' ಅವಾರ್ಡ್!
'ಕೆಜಿಎಫ್-1' ತನ್ನ ಕೆಪಾಸಿಟಿ ತೋರಿಸಿತ್ತು, ಇದಾದ ನಂತರ 2022ರಲ್ಲಿ 'ಕೆಜಿಎಫ್-2'ಗೆ ಸಿಕ್ಕ 1000 ಕೋಟಿ ರೂಪಾಯಿ ಗೆಲುವು ಜಗತ್ತನ್ನೇ ಇತ್ತ ತಿರುಗಿ ನೋಡುವಂತೆ ಮಾಡಿತ್ತು. ಇದೇ ಸಮಯದಲ್ಲಿ ಯಶ್ ಮತ್ತೆ ಅಬ್ಬರಿಸಲು ಸಿದ್ಧವಾಗಿದ್ದು, ಕನ್ನಡಿಗರಿಗೂ 'ಆಸ್ಕರ್'ನ ಕೊಡಿಸಲು ಸಜ್ಜಾಗಿದ್ದಾರೆ. ಹಾಗಾದ್ರೆ ತೆಲುಗು ಚಿತ್ರರಂಗಕ್ಕೆ ಸಿಕ್ಕಂತೆ ಕನ್ನಡಿಗರಿಗೂ ಇದೀಗ 'ಆಸ್ಕರ್' ಪ್ರಶಸ್ತಿ ಸಿಗುತ್ತಾ? ನಮ್ಮ ರಾಕಿಭಾಯ್ ಅಂದ್ರೆ ಯಶ್ ಅವರ ಪ್ಲ್ಯಾನ್ ಹೇಗಿದೆ? ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.
ಯಶ್ + ಗೀತು + ಕೆವಿಎನ್ = ಆಸ್ಕರ್?
ಏನೇ ಹೇಳಿ, ಇಲ್ಲೊಂದು ವಿಚಾರ ಖಂಡಿತಾ ಇದೆ. ಯಶ್ ತಮ್ಮ ಕೆಲಸದ ಮೇಲೆ ಎಷ್ಟು ಶ್ರದ್ಧೆ ವಹಿಸಿದ್ದಾರೆ ಅಂದ್ರೆ, ಎಲ್ಲವನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಜೊತೆಯಲ್ಲೆ ಕನ್ನಡ ಸಿನಿಮಾಗಳಿಗೂ ಹೊಸ ಗತ್ತು ತಂದುಕೊಡುತ್ತಿದ್ದಾರೆ. ಈಗ, ತಮ್ಮ 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕ, ಗೋವಾ ಡ್ರಗ್ಸ್ ಲೋಕದ 1960-70ರ ಕಥೆಯನ್ನ ಯಶ್ ಹೇಳಲು ಹೊರಟಿದ್ದಾರೆ ಎನ್ನಲಾಗಿದೆ. ಆದರೆ ಕನ್ನಡಕ್ಕೆ ಈ ಸಿನಿಮಾ ಮೂಲಕ 'ಆಸ್ಕರ್' ಪ್ರಶಸ್ತಿ ಸಿಗುವ ಸಾಧ್ಯತೆ ಎಷ್ಟಿದೆ ಗೊತ್ತಾ?

ಸ್ಟಾರ್ ಡೈರೆಕ್ಟರ್ ಗೀತು ಮೋಹನ್‌ದಾಸ್!
ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆಗೆ ಸೇರಿ ಇದೀಗ, ರಾಕಿಂಗ್ ಸ್ಟಾರ್ ಯಶ್ ಕಮಾಲ್ ಮಾಡೋಕೆ ಸಿದ್ಧವಾಗಿದ್ದಾರೆ. ಅಷ್ಟಕ್ಕೂ ಈಗಾಗ್ಲೇ ಗೀತು ಮೋಹನ್‌ದಾಸ್ ಅವರು ಡೈರೆಕ್ಷನ್ ಮಾಡಿದ್ದ 'ಲೈಯರ್ಸ್ ಡೈಸ್' ಸಿನಿಮಾ, 87ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿತ್ತು. ಅಲ್ಲದೆ ಇದೇ ಸಿನಿಮಾಗೆ 2 ರಾಷ್ಟ್ರ ಪ್ರಶಸ್ತಿಗಳು ಕೂಡ ಸಿಕ್ಕಿವೆ. ಈ ಕಾರಣಕ್ಕೆ ಕೆಜಿಎಫ್ ಖ್ಯಾತಿಯ ರಾಕಿಭಾಯ್, 'ಹೊಡೆದರೆ ಆನೆಯನ್ನೇ ಹೊಡೆಯಬೇಕು' ಅನ್ನೋ ತಮ್ಮ ಡೈಲಾಗ್‌ನಂತೆ ದೊಡ್ಡ ಪ್ಲ್ಯಾನ್ ಮಾಡಿದಂತೆ ಕಾಣ್ತಿದೆ.
ಒಟ್ನಲ್ಲಿ ಈಗಿನ ಮಾಹಿತಿಗಳ ಪ್ರಕಾರ, ಯಶ್ ಅವರು ಡ್ರಗ್ಸ್ ಮಾಫಿಯಾದ ಕರಾಳ ಮುಖ ತೋರಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ 'ಸಲಾರ್' ಸಿನಿಮಾ ಟ್ರೈಲರ್ ಬಿಡುಗಡೆ ಆದ ಕೆಲ ದಿನದಲ್ಲಿ ಯಶ್ ಅವರ 19ನೇ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಹೀಗೆ ಕನ್ನಡ ಸಿನಿಮಾಗೆ ಜಾಗತಿಕ ಪ್ರಶಸ್ತಿಯನ್ನ ಯಶ್ ಅವರು ತಂದುಕೊಡೋದು ಪಕ್ಕಾ ಅಂತಿದ್ದಾರೆ ಭಾರತೀಯ ಸಿನಿಮಾ ಫ್ಯಾನ್ಸ್. ಈಗಾಗಲೇ, 'RRR' ಈ ಸಾಧನೆಯ ಮಾಡಿದೆ. ಈಗ ಭಾರತದ ನೆಲದ ಮತ್ತೊಂದು ಸಿನಿಮಾ 'ಟಾಕ್ಸಿಕ್' ರಿಲೀಸ್‌ಗೂ ಮೊದಲೇ 'ಆಸ್ಕರ್' ಮೇಲೆ ಕಣ್ಣಿಟ್ಟಿದೆ.












Click it and Unblock the Notifications