ವರಮಹಾಲಕ್ಷ್ಮೀ ಹಬ್ಬವನ್ನು ತಪ್ಪದೇ ಆಚರಿಸೋ ರಾಧಿಕಾ ಪಂಡಿತ್ ಯಶ್ ದಂಪತಿ, ಅವರ ಹಬ್ಬದ ಆಚರಣೆ ಹೇಗಿರುತ್ತೆ!
Yash Radhika Varamahalakshmi:: ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಇದ್ದಂದು ಯಶ್ ತಪ್ಪದೇ ಹಾಜರಿರುತ್ತಾರೆ. ರಾಧಿಕಾ ಪಂಡಿತ್ ಶ್ರದ್ಧೆ ಭಕ್ತಿಗಳಿಂದ ವಿಜೃಂಭಣೆಯಿಂದ ಈ ಹಬ್ಬ ಆಚರಣೆ ಮಾಡುತ್ತಾರೆ. ಪ್ರತೀ ವರ್ಷ ಇವರ ಮನೆಯಲ್ಲಿ ಹಬ್ಬದ ಆಚರಣೆ ತಪ್ಪೋದೇ ಇಲ್ಲ. ಇಬ್ಬರು ಮಕ್ಕಳ ಜೊತೆಗೂಡಿ ಯಶ್ ಹಾಗೂ ರಾಧಿಕಾ ಪಂಡಿತ್ ವರಮಹಾಲಕ್ಷ್ಮೀ ದೇವಿಗೆ ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸುತ್ತಾರೆ. ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿ ಕಾರ್ಯಕ್ರಮಗಳನ್ನು ಮಿಸ್ ಮಾಡದ ಯಶ್ ಈ ಹಬ್ಬದ ಆಚರಣೆಯಲ್ಲಿ ಪ್ರತೀ ವರ್ಷ ಭಾಗಿಯಾಗುತ್ತಾರೆ. ಸದ್ಯ ಯಶ್ ಅವರ ʼಟಾಕ್ಸಿಕ್ʼ ಸಿನಿಮಾ ರಿಲೀಸ್ಗೆ ರೆಡಿ ಇದೆ. ಹೀಗಿರುವಾಗ ಅವರಿಗೆ ವರಮಹಾಲಕ್ಷ್ಮೀ ದೇವಿಯ ವಿಶೇಷ ಕೃಪೆ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅವರಿಗೆ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬ ಬಹಳ ಮಹತ್ವದ್ದಾಗಿದೆ.

ವರಮಹಾಲಕ್ಷ್ಮೀ ಹಬ್ಬದಂದೇ ಮೊದಲ ಸಲ ಯಶ್ ಮನೆಗೆ ಬಂದಿದ್ದ ರಾಧಿಕಾ
ಯಶ್ ಸಂದರ್ಶನವೊಂದರಲ್ಲಿ ಈ ವಿಷಯ ರಿವೀಲ್ ಮಾಡಿದ್ದಾರೆ. ಯಶ್ ಅವರು ರಾಧಿಕಾ ಪಂಡಿತ್ ಜೊತೆಗೆ ಲವ್ವಲ್ಲಿ ಬಿದ್ದ ಮೇಲೆ ಮನೆಗೆ ಹುಡುಗಿಯನ್ನು ಕರೆದುಕೊಂಡು ಹೋಗಿ ಮನೆಯವರಿಗೆ ಅವರ ಪರಿಚಯ ಮಾಡಿಸೋದೇ ಚಾಲೆಂಜಿಂಗ್ ಆಗಿತ್ತು. ಪ್ಲಾನಿಂಗ್ನಲ್ಲಿ ಮಹಾಚಾಣಾಕ್ಷನಾದ ಯಶ್ ತನ್ನಿಷ್ಟದ ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗಲು ವರಮಹಾಲಕ್ಷ್ಮೀ ಹಬ್ಬದ ದಿನವನ್ನೇ ಆರಿಸಿಕೊಳ್ಳುತ್ತಾರೆ. ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಕಾರ್ಯಕ್ರಮವಿದ್ದಾಗ ತನ್ನ ಹುಡುಗಿಯನ್ನು ಕರೆದುಕೊಂಡು ಹೋದರೆ ಅಮ್ಮ ಹುಡುಗಿಯನ್ನು ಒಪ್ಪಿಕೊಳ್ಳುತ್ತಾರೆ ಅನ್ನೋ ಭರವಸೆ ಯಶ್ಗಿತ್ತು. ಅವರ ಪ್ಲಾನ್ ಅವತ್ತು ಸಕ್ಸಸ್ ಆಗಿತ್ತು. ಮಗ ಮನೆಗೆ ತನ್ನ ಹುಡುಗಿಯನ್ನು ಕರೆದುಕೊಂಡು ಬಂದಾಗಲೇ ಅವರಿಗೆ ಮಗ ಈ ಹುಡುಗಿಯನ್ನು ಇಷ್ಟಪಡುತ್ತಿದ್ದಾನೆ ಅನ್ನುವ ವಿಚಾರ ತಿಳಿದುಹೋಯ್ತು.
ರಾಧಿಕಾರನ್ನು ವರಮಹಾಲಕ್ಷ್ಮೀಯಂತೆ ಅಲಂಕರಿಸಿದ್ದ ಯಶ್ ಅಮ್ಮ
ಅಂದು ರಾಧಿಕಾ ಮೊದಲ ಬಾರಿ ಮನೆಗೆ ಬಂದಾಗ ಅವರನ್ನು ಒಡವೆಗಳನ್ನು ಹಾಕಿ ಯಶ್ ಅಮ್ಮ ಅಲಂಕಾರ ಮಾಡಿದ್ದರಂತೆ. ಮನೆಗೆ ಮಹಾಲಕ್ಷ್ಮೀ ಬರುತ್ತಿದ್ದಾಳೆ ಎಂದು ತನಗೆ ಆ ದಿನವೇ ಗೊತ್ತಾಗಿತ್ತು ಅಂತ ಅವರು ಹೇಳಿದ್ದರು. ಹೀಗೆ ಅಂದು ಅವರ ಮನೆಗೆ ಕಾಲಿಟ್ಟ ಹುಡುಗಿ ಈಗ ಮನೆಯ ಮಹಾಲಕ್ಷ್ಮೀಯೇ ಆಗಿದ್ದಾರೆ. ಜೊತೆಗೆ ತಮ್ಮ ಮನೆಯಲ್ಲಿ ಪ್ರತೀ ಸಲ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ.
ವರಮಹಾಲಕ್ಷ್ಮೀ ದೇವಿಯ ಅನುಗ್ರಹ
ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಸಲಾಗಿದ್ದು, ಜ್ಞಾನ (Knowledge), ಐಶ್ವರ್ಯ (Prosperity), ಸುಖ, ಆರೋಗ್ಯ (Health), ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ಮಹಾಲಕ್ಷ್ಮೀ ಸಮೃದ್ರ ಮಥನದ ವೇಳೆ ಉದ್ಭವಿಸಿದವಳು ಎಂಬ ಉಲ್ಲೇಖವಿದೆ. ಅವಳು ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಅವತರಿಸಿದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮೀಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ. ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು ಆವಾಹನೆ ಮಾಡಿ 12ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಹೆಣ್ಣುಮಕ್ಕಳು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಮಹತ್ವದ ಮತ್ತು ಶಕ್ತಿಯುತವಾದ ಆಚರಣೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಶಿವನು ಪಾರ್ವತಿ ದೇವಿಗೆ ಈ ವ್ರತ ಮಾಡಲು ಇದರ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾನೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವ ಜನರು ಎಲ್ಲ ರೀತಿಯ ನೋವು ಮತ್ತು ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ವಿಷಯವನ್ನು ಅನುಭವಿಸುತ್ತಾರೆ. ಅಲ್ಲದೆ, ಭಕ್ತರ ಜೀವನ ಮತ್ತು ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿ ಮೇಲುಗೈ ಸಾಧಿಸುತ್ತದೆ ಎಂಬ ಮಾತಿದೆ.
ಹಬ್ಬದ ಆಚರಣೆ ಹೇಗೆ?
ವ್ರತ ಮಾಡುವವರು ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಕಲಶದಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ, ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು.
ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ನೈವೇದ್ಯ ಸಮರ್ಪಿಸುತ್ತಾರೆ. ಹೆಂಗಸರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.


Click it and Unblock the Notifications
