Kiccha Sudeep: ರಾಜಕೀಯಕ್ಕೆ ಸ್ಟೈಲಾಗೇ ಎಂಟ್ರಿ ಕೊಡ್ತೀನಿ: ಯಾವಾಗ ಎಂದೂ ಹೇಳಿದ ಸುದೀಪ್‌

ಕಿಚ್ಚ ಸುದೀಪ್‌ ಅವರು ಕನ್ನಡದ ಸ್ಟಾರ್‌ ನಟರಲ್ಲಿ ಒಬ್ಬರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ರಾಜಕಾರಣಿಗಳ ಜೊತೆಗೆ ಸುದೀಪ್‌ ಮೊದಲಿನಿಂದಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕೆ ಸುದೀಪ್‌ ಸದ್ಯದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ಸುದೀಪ್‌ ಬರ್ತೀನಿ ಅಥವಾ ಬರಲ್ಲ ಎಂದು ಖಚಿತಪಡಿಸಲೇ ಇರಲಿಲ್ಲ. ಇತ್ತೀಚಿನ ಸಂದರ್ಶನದಲ್ಲಿ ಸುದೀಪ್‌ ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ನೀಡಿದ್ದು, "ರಾಜಕೀಯಕ್ಕೆ ಸ್ಟೈಲಾಗಿ, ಸೌಂಡ್‌ ಮಾಡಿಕೊಂಡು ಎಂಟ್ರಿ ಕೊಡ್ತೀನಿ" ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಮಾರ್ಕ್‌ ಸಿನಿಮಾದ ಸಂದರ್ಶನಗಳಲ್ಲಿ ಸುದೀಪ್ ತಮ್ಮ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. 'ಸಮಾಜ ಸೇವೆಗೆ ರಾಜಕೀಯ ಬೇಕಾಗಿಲ್ಲ. ನಿಮ್ಮಲ್ಲಿ ಮನಸ್ಥಿತಿ ಹಾಗೂ ಹಣ ಇದ್ದರೆ ಸಮಾಜ ಸೇವೆ ಮಾಡಬಹುದು. ಈ ಎರಡೂ ಅಲ್ಲದೆ ಆ ಕೆಲಸ ನಡೆಯಲ್ಲ. ನಮ್ಮ ಸಮಾಜಸೇವೆಗೆ ಇನ್ನೊಬ್ಬರ ಜೇಬಿಗೆ ಕೈಹಾಕುವುದು ತಪ್ಪಾಗುತ್ತೆ. ನಿಮ್ಮತ್ರ ಬಂದು ಸ್ವಲ್ಪ ದುಡ್ಡು ಕೊಡಿ ಅನ್ನುವುದೆಲ್ಲ ಬೇಡ. ನನ್ನ ಹತ್ತಿರ ಹಣ ಇದ್ದಾಗ, ಸಾಧ್ಯವಾದಾಗಲೆಲ್ಲ ನಾನು ಮಾಡಿದ್ದೇನೆ' ಎನ್ನುತ್ತಾರೆ ಕಿಚ್ಚ.

Will Enter Politics In Style Actor Kiccha Sudeep On Political Entry

'ಮಾಡಿದ ಸಹಾಯಗಳಲ್ಲಿ ಯಾವುದೋ ಒಂದೆರಡಷ್ಟೇ ಕಿವಿಗೆ ಕೇಳಿಸಬಹುದು. ಅಥವಾ ಯಾರೋ ಇಬ್ಬರಿಗೆ ಸಹಾಯ ಮಾಡಲಿಲ್ಲ ಅನ್ನೋದು ದೊಡ್ಡದಾಗಿರಬಹುದು. ಸುದೀಪ್‌ ಅವರು ಸಹಾಯ ಮಾಡೇ ಇಲ್ಲ ಅಂತಲೂ ಹೇಳಬಹುದು. ಆದರೆ ಸಾವಿರಾರು ಜನಕ್ಕೆ ಸಹಾಯ ಮಾಡುತ್ತಲೇ ಇರ್ತೀವಿ. ಎಷ್ಟಾಗುತ್ತೋ ಅಷ್ಟು ಮಾಡೋಕೆ ನನ್ನಿಂದ ಸಾಧ್ಯ. ಹಾಗಂತ ಮಾಡೋದೆ ಇಲ್ಲ ಅಂತಲ್ಲ' ಎಂದಿದ್ದಾರೆ.

'ರಾಜಕೀಯ ಸಮಾಜ ಸೇವೆ ಅಲ್ಲ'

'ಇಲ್ಲಿ ಸಮಾಜ ಸೇವೆಯೇ ಬೇರೆ, ಸಹಾಯವೇ ಬೇರೆ. ಚಿತ್ರರಂಗದಲ್ಲಿ ಅನೇಕರಿಗೆ ಕೆಲವು ಅವಶ್ಯಕತೆಗಳಿರುತ್ತೆ. ಸಾಧ್ಯವಾದಾಗ ಅದನ್ನು ಮಾಡುತ್ತಲೇ ಇರ್ತೀನಿ. ಆದರೆ ರಾಜಕೀಯ ಅನ್ನೋದು ಸಮಾಜ ಸೇವೆ ಅಲ್ಲ, ಅದು ಜವಾಬ್ದಾರಿ. ಆ ಜವಾಬ್ದಾರಿ ತೆಗೆದುಕೊಳ್ಳೋಕೆ, ಈ ರಾಜ್ಯವನ್ನು ನಡೆಸುತ್ತೀವಿ, ಈ ಜನರಿಗೆ ಒಳ್ಳೆಯದಾಗಬೇಕು ಅಂತ ಮಾತ್ರ ರಾಜಕೀಯಕ್ಕೆ ಬರಬೇಕೇ ಹೊರತು ಸಮಾಜಸೇವೆಗೆ ರಾಜಕೀಯಕ್ಕೆ ಬಂದಿದ್ದೀನಿ ಅನ್ನೋದು ಸುಳ್ಳು. ಸಮಾಜ ಸೇವೆ ಆಸೆ ಇಟ್ಕೊಂಡು ರಾಜಕೀಯಕ್ಕೆ ಬರೋದು ಸಾಧ್ಯವಿಲ್ಲ' ಎಂದು ಅಭಿಪ್ರಾಯ ತಿಳಿಸಿದ್ದಾರೆ.

ರಾಜಕೀಯಕ್ಕೆ ಬರೋದು ಯಾವಾಗ?

ರಾಜಕೀಯಕ್ಕೆ ಯಾವಾಗ ಬರುತ್ತೀರಿ? ಎನ್ನುವ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಸುದೀಪ್‌ ಉತ್ತರಿಸಿದ್ದಾರೆ. 'ನೋಡೋಣ.. ನಾನು ರಾಜಕೀಯಕ್ಕೆ ಬರೋದಾದ್ರೆ ಸ್ಟೈಲಾಗೇ ಬರ್ತೀನಿ, ಅದರಲ್ಲೇನಿದೆ? ಇದು ಸಿನಿಮಾ ಅಭ್ಯಾಸ ಇದ್ದಂಗೆ, ಒಳ್ಳೆಯ ಸ್ಕ್ರಿಪ್ಟ್‌ ಹಾಗು ಎಂಟ್ರಿ ಸೀನ್‌ ಇಲ್ಲದಿದ್ರೆ ನಾವು ಎಂಟ್ರಿ ಕೊಡೋಕೆ ಆಗಲ್ಲ. ಹಾಗಾಗಿ ಬರಬೇಕು ಅನಿಸಿದಾಗ ಒಂದು ಸೌಂಡ್‌ ಮಾಡಿಕೊಂಡೇ ಬರೋಣ' ಎಂದಿದ್ದಾರೆ.

ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಸುದೀಪ್‌ ಉತ್ತಮ ಒಡನಾಟ ಹೊಂದಿದ್ದಾರೆ. ಈ ಹಿಂದೆಯೂ ಅವರು ಬಿಜೆಪಿಯಿಂದ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಗುಸುಗಸು ಕೇಳಿಬಂದಿತ್ತು. ಆದರೆ ಸುದೀಪ್‌ ಅವರನ್ನು ರಾಜಕೀಯದಲ್ಲಿ ನೋಡಬೇಕು ಎನ್ನುವುದು ಹಲವರ ಆಸೆಯಾದರೆ, ಸುದೀಪ್‌ ಅವರು ರಾಜಕೀಯಕ್ಕೆ ಬರುವುದು ಬೇಡ ಎನ್ನುವ ಪರ-ವಿರೋಧದ ಅಭಿಪ್ರಾಯವೂ ಅವರ ಅಭಿಮಾನಿಗಳಲ್ಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+