Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ₹5,00,00,000 ನೆರವು ನೀಡಲಿದ್ದಾರಂತೆ ದರ್ಶನ್ ಅಭಿಮಾನಿಗಳು.!

Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್‌ ಜೈಲು ಸೇರಿದೆ. ಈಗಾಗಲೇ ಹೈಕೋರ್ಟ್‌ನಲ್ಲಿ ಅಕ್ಟೋಬರ್ 22ರಂದು ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಮತ್ತೆ 28ಕ್ಕೆ ಮೂಂದೂಡಿಕೆಯಾಗಿದೆ. ಇದರ ನಡುವೆ ಅಭಿಮಾನಿಗಳು ನಟ ದರ್ಶನ್‌ ಪರವಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ ದನಸಾಹಯ ಮಾಡಲಿದ್ದಾರೆ ಎನ್ನವ ಮಾತುಗಳು ಕೇಳಿಬರುತ್ತಿವೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆದರೆ, ದರ್ಶನ್‌ ಜಾಮೀನು ಅರ್ಜಿ ಮಾತ್ರ ಮುಂದೂಡಿಕೆಯಾಗುತ್ತಲೇ ಇದೆ. ಈಗಾಗಲೇ ಪತಿ ದರ್ಶನ್‌ಗಾಗಿ ಪತ್ನಿ ವಿಜಯಲಕ್ಷ್ಮಿ ಟೆಂಪಲ್‌ ರನ್‌ ಕೂಡ ಮುಂದುವರೆಸಿದ್ದರು. ಅಲ್ಲದೆ ಅಭಿಮಾನಿಗಳು ಸಹ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ.

Will Actor Darshan s Fans Give 5 00 00 000 to Renukaswamy Family

ಮತ್ತೊಂದೆಡೆ, ಕೆಲ ದರ್ಶನ್‌ ಅಭಿಮಾನಿಗಳು ಬೇರೆ ನಟರ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾ ಅಂಧಾಭಿಮಾನವನ್ನು ಮುಂದುವರೆಸಿದ್ದರು. ಇಂತಹವರಿಗೆ ಈಗಾಗಲೇ ಪೊಲೀಸರು ಸರಿಯಾದ ಪಾಠ ಕಲಿಸುವ ಕೆಲಸವನ್ನು ಮಾಡಿದ್ದರು. ಬಳಿಕ ಕೆಲವರು ಅಂಧಾಭಿಮಾನ ಮೆರೆಯುವ ಬದಲು ನೀವು ನಿಜವಾಗಲೂ ದರ್ಶನ್‌ ಅಭಿಮಾನಿಗಳೇ ಆಗಿದ್ದರೇ ಮತ್ತೊಂದು ಹೆಣ್ಣು ಅಂದರೆ ರೇಣುಕಾದಸ್ವಾಮಿ ಪತ್ನಿ ಪಡುತ್ತಿರುವ ಕಷ್ಟವನ್ನು ಅರ್ಥ ಮಾಡಿಕೊಂಡು ಅವರಿಗೆ ದನಸಹಾಯವನ್ನಾದರೂ ಮಾಡಿ ಎಂದು ಸವಾಲು ಎಸೆದಿದ್ದರು.

ಬಳಿಕ ದರ್ಶನ್‌ ಅಭಿಮಾನಿಗಳೆಲ್ಲಾ ಸೇರಿ ರೇಣುಕಾಸ್ವಾಮಿ ಕುಟುಂಬಕ್ಕೆ ಒಟ್ಟು 5,00,00,000 ರೂಪಾಯಿ ದನಸಹಾಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದು ಒಂದು ವೇಳೆ ನಿಜವಾದರೆ, ನಟ ದರ್ಶನ್‌ಗೆ ಅಭಿಮಾನಿಗಳು ಮಾಡುವ ದೊಡ್ಡ ಸಹಾಯ ಅಂತಲೂ ಹೇಳಬಹುದಾಗಿದೆ. ಬರೀ ದ್ವೇಷ ಕಾರುವ ಬದಲು ಹಣ ಸಂಗ್ರಹ ಮಾಡಿ ರೇಣುಕಾಸ್ವಾಮಿ ಕುಟುಂಬಕ್ಕೆ ನೀಡಿ. ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಿಕರ್ತರಾಗಿ ಅಂತಲೂ ಹೇಳಿದ್ದರು.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿದ್ದಾರೆ ಎನ್ನುವ ಕಾರಣಕ್ಕೆ ನಟ ದರ್ಶನ್‌ & ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಭೀಕರವಾಗಿ ಹತ್ಯ ಮಾಡಿದ್ದರು ಎನ್ನುವುದು ಪೊಲೀಸರ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ದರ್ಶನ್‌ ಕೊಲೆ ಮಾಡುವ ಬದಲು ನೇರವಾಗಿ ಚಿತ್ರದುರ್ಗ ಎಸ್‌ಪಿ ಅವರಿಗೆ ಕರೆ ಮಾಡಿ ರೇಣುಕಾಸ್ವಾಮಿಗೆ ಹೆದರಿಸಬಹುದಿತ್ತು ಅಂತಲೂ ಈಗಾಗಲೇ ಹಲವು ಗಣ್ಯರು, ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+