ಶಿವಣ್ಣನಿಗೆ ಮಾಡಿದ್ದ AK 47 ಸಿನಿಮಾ ಅರ್ಧಕ್ಕೆ ನಿಂತು ಹೋಗಿದ್ದೇಕೆ?
1999ರಲ್ಲಿ ತೆರೆಕಂಡ AK 47 ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ ಮಿಂಚಿದ್ದರು. ಶಿವಣ್ಣನ 50ನೇ ಸಿನಿಮಾವನ್ನು ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಡೈರೆಕ್ಟ್ ಮಾಡಿದ್ರು. ಆದರೆ ಈ ಸಿನಿಮಾ ಸೆಟ್ಟೇರುವ ಮುನ್ನವೇ ಅರ್ಧಕ್ಕೆ ನಿಂತು ಹೋಗಿತ್ತು. ಈ ವಿಚಾರವನ್ನು ಓಂ ಪ್ರಕಾಶ್ ರಾವ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 'ನಾನು ರಿಯಲ್ ಸ್ಟೋರಿಗಳನ್ನ ಇಟ್ಟುಕೊಂಡೇ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. AK 47 ಸಿನಿಮಾ ಕಥೆ ಶಿವಣ್ಣ ಅವರಿಗೆ ಹೇಳಿದೆ. ಅವರಿಗೆ ಖುಷಿಯಾಗಿ ಓಕೆ ಅಂದ್ರು. ಅಂದೇ ಶಿವಣ್ಣನಿಗೆ ಮಾಡಿದ್ದ ಸಿನಿಮಾ ನಿಂತೇ ಹೋಯ್ತು' ಎಂದಿದ್ದರು.
'ಅದು ಶಿವಣ್ಣ ಅವರ 50ನೇ ಸಿನಿಮಾ. ಆದರೆ ರಾಮು ಅವರಿಗೆ ಕಥೆ ಸರಿಯಾಗಿ ಅರ್ಥವಾಗಲಿಲ್ಲ. ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ಕೊನೆಗೆ ಆ ಸಿನಿಮಾ ನಿಂತು ಹೋಗಿತ್ತು. ನಂತರ ಬಾಂಬೆಯಲ್ಲಿ ಬ್ಲಾಸ್ಟ್ ಆದಾಗ ಮತ್ತೆ ಆ ಸಿನಿಮಾ ಮಾಡೋಣ ಅಂತ ರಾಮು ಅವರು ಹೇಳಿದ್ರು. ನಾನು ಬೇಡ ಅಂದೆ, ಯಾಕಂದ್ರೆ ನಮ್ಮ ಜನಕ್ಕೆ ಹಿಂದಿನ ಅರ್ಥ ಮಾಡಿಸೋದು ಕಷ್ಟ. ಗೊತ್ತಿಲ್ಲದ ಭಾಷೆಯನ್ನ ಬಲವಂತವಾಗಿ ಅರ್ಥ ಮಾಡಿಕೊಳ್ಳಿ ಎಂದು ಪ್ರೇಕ್ಷಕರ ಮೇಲೆ ಹಾಕಬಾರದು ಎಂದು ಸುಮ್ಮನಾಗಿದ್ದೆ'.

'ಶಿವಣ್ಣನಿಗೆ ಮಾಡಿದ್ದ AK-47 ಸಿನಿಮಾ ನಿಂತೇ ಹೋಯ್ತು. ಆರು ತಿಂಗಳ ನಂತರ ರಾಮು ಅವರು ಮಾತನಾಡಬೇಕಂತೆ ಅಂದ್ರು. ಆಗ ಮತ್ತೆ AK-47 ಸಿನಿಮಾ ಮಾಡೋಣ ಅಂದ್ರು. ನಾನು ಬೇಡ ಅಂದೆ. ಆದರೆ ಒಂದು ಸಲ ಬೇಡ ಅಂದಿದ್ದನ್ನ ಮಾಡೋಕೆ ನನಗೂ ಇಷ್ಟ ಇರಲಿಲ್ಲ. ಕೊನೆಗೆ ಅವರು ಪದೇ ಪದೇ ಆ ಸಿನಿಮಾ ಮಾಡೋಣ ಅಂತ ಕೇಳಿಕೊಂಡ್ರು. ನಮ್ಮ ಜನರ ಮನಸ್ಥಿತಿ ನೋಡಿ ನಾನು ಬೇಡ ಅಂದಿದ್ದೆ. ಏಕೆಂದರೆ ಅವರಿಗೆ ಹಿಂದಿ ಅರ್ಥ ಮಾಡಿಸೋದು ತುಂಬಾ ಕಷ್ಟ ಎಂದಿದ್ದೆ'.
'ಆಗೆಲ್ಲ ಹೀರೋಗಳಿಗೆ ಮಾಡುವ 50, 100ನೇ ಸಿನಿಮಾಗಳು ಫ್ಲಾಪ್ ಆಗ್ತಾವೆ ಅಂತ ಹೇಳ್ತಿದ್ರು. ಅದು ನನ್ನ ತಲೆಯಲ್ಲೂ ಇತ್ತು. ಅಣ್ಣಾವ್ರ ಮಗನ ಸಿನಿಮಾ ಬೇರೆ, ಕೆಲವರು ಓಂ ಪ್ರಕಾಶ್ ಸಿನಿಮಾ ಓಡಲ್ಲ ಅಂದಿದ್ರು. ಆದರೆ ನಾವು ಸಿನಿಮಾ ಚೆನ್ನಾಗಿ ಮಾಡದೇ ಇದ್ದಾಗ ಮಾತ್ರ ಸಿನಿಮಾ ಸೋಲುತ್ತೆ. ಆದರೆ ಈ ಸಿನಿಮಾ ಸೋಲಲೇಬಾರದು ಅಂತ ಸಿನಿಮಾ ಮಾಡಿದೆ' ಎಂದು ವಿವರಿಸಿದ್ದಾರೆ.
'ಅಣ್ಣಾವ್ರು ಹಾರ ಹಾಕಿ ಖುಷಿ ಪಟ್ರು'
'ಸಿನಿಮಾ ಶುರುವಾದಾಗ ಕೆಲವರಿಗೆ ಕೂತಿದ್ದ ಜಾಗದಲ್ಲೇ ಬೇಧಿ ಶುರುವಾಗಿತ್ತು. ಇಂಟರ್‌ವಲ್‌ನಲ್ಲಿ ಯಾರಿಗೂ ಮಾತೇ ಬರ್ತಿಲ್ಲ, ಎಲ್ರೂ ಸೈಲೆಂಟಾಗಿದ್ರು. ಅಣ್ಣಾವ್ರು, ಪಾರ್ವತಮ್ಮ ಅವ್ರು ಫುಲ್ ಖುಷಿ ಆದ್ರು. ಅಣ್ಣಾವ್ರ ಕೈಯಲ್ಲಿ ಹಾರ ಹಾಕಿಸಿದ್ರು. ಅಣ್ಣಾವ್ರು ಎಂತಾ ಸಿನಿಮಾ ಮಾಡಿದ್ದೀಯ ಎಂದು ಕೊಂಡಾಡಿದ್ರು. ಮಾಧ್ಯಮಗಳಲ್ಲೂ ನಮ್ಮ ಸಿನಿಮಾ ಬಗ್ಗೆ ಹೊಗಳಿದ್ದರು' ಎಂದು ಓಂಪ್ರಕಾಶ್ ರಾವ್ ಆ ದಿನಗಳನ್ನ ಮೆಲುಕು ಹಾಕಿದ್ದಾರೆ.
ಕಳೆದ ವರ್ಷವಷ್ಟೇ ಈ ಸಿನಿಮಾ 25 ವರ್ಷಗಳನ್ನು ಪೂರೈಸಿತ್ತು. ಈ ಬಗ್ಗೆ ಪೋಸ್ಟ್ ಮೂಲಕ ಸಂತಸ ಹಂಚಿಕೊಂಡಿದ್ದ ಶಿವಣ್ಣ, 'AK 47 ಚಿತ್ರ ತೆರೆಗೆ ಬಂದು ಇಂದಿಗೆ 25 ವರ್ಷಗಳು. AK47 ನನ್ನ ಸಿನಿ ಪಯಣದ ಒಂದು ಮೈಲಿಗಲ್ಲು. ಇದಕ್ಕೆ ಕಾರಣರಾದ ನಮ್ಮ ನಿರ್ಮಾಪಕರು ದಿವಂಗತ ರಾಮು ಹಾಗೂ ನಿರ್ದೇಶಕರಾದ ಎನ್.ಓಂ ಪ್ರಕಾಶ್ ರಾವ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು' ಎಂದಿದ್ದರು.












Click it and Unblock the Notifications