'ನನ್ನ ಗಂಡ ಸತ್ತ ದಿನವೇ ಸಂಚು ಮಾಡಿದ್ದರು': ಗುರುಪ್ರಸಾದ್ ಪತ್ನಿ ಆಕ್ರೋಶ
ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಸ್ಟಾರ್ ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಚಿತ್ರ ಎದ್ದೇಳು ಮಂಜುನಾಥ 2 ಇಂದು (ಫೆಬ್ರವರಿ 21)ರಂದು ರಿಲೀಸ್ ಆಗಬೇಕಿತ್ತು. ಆದರೆ ಬಿಡುಗಡೆಗೆಯ ಸಮಯದಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿದೆ. ಗುರುಪ್ರಸಾದ್ ಪತ್ನಿ ಸುಮಿತ್ರಾ ನಿರ್ಮಾಪಕರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದು, ಸದ್ಯ ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ. ಯಾಕೆ ಸುಮಿತ್ರಾ ಸಿನಿಮಾ ಬಿಡುಗಡೆಗೆ ತಡೆ ತಂದರು ಎನ್ನುವುದಕ್ಕೆ ಕಾರಣ ಇಲ್ಲಿದೆ.
ಗುರುಪ್ರಸಾದ್ ಪತ್ನಿ ಸುಮಿತ್ರಾ ಟಿವಿ 9 ಕನ್ನಡಕ್ಕೆ ನೀಡಿದ ಹೇಳಿಕೆಯಲ್ಲಿ ಈ ಬಗ್ಗೆ ವಿವರಿಸಿದ್ದಾರೆ. 'ಎಲ್ಲರಿಗೂ ಗೊತ್ತಿರುವ ಹಾಗೇ ಎದ್ದೇಳು ಮಂಜುನಾಥ-2 ಗುರು ಪ್ರಸಾದ್ ಅವರ ಸಿನಿಮಾ. ಗುರು ಪ್ರಸಾದ್ ಅವರ ಬ್ಯಾನರ್‌ನಲ್ಲೇ ಸಿನಿಮಾ ರೆಡಿಯಾಗಿತ್ತು. ನಾನು ಜನವರಿಯಲ್ಲಿ ಸುದ್ದಿಗೋಷ್ಠಿಯವರೆಗೂ ಅವರ ಜೊತೆಯಲ್ಲಿ ಇದ್ದಿದ್ದು ಇದೇ ಕಾರಣಕ್ಕಾಗಿ. ನಮ್ಮ ಸಿನಿಮಾ ಇದು ಎಂದು'

'ಗುರು ಪ್ರಸಾದ್ ಅವರು ತೀರಿ ಕೊಂಡ ಬಳಿಕ ಸಿನಿಮಾದ ಕಟೆಂಟ್ ನನ್ನ ಬಳಿ ಇರುತ್ತದೆ. ಆ ಸಮಯದಲ್ಲಿ ನನಗೂ ಉಸಿರಾಡಲು ಕೂಡ ಬಿಡಲಿಲ್ಲ. ಗಂಡ ಸತ್ತ ನೋವು ಎಷ್ಟಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಯಾರೂ ಆ ಸಮಯದಲ್ಲಿ ಸಂತೋಷ ಪಟ್ಟುಕೊಂಡು ಇರುವುದಿಲ್ಲ. ಅವರು ಸತ್ತ ದಿನವೇ ಸಂಚು ಹೂಡುತ್ತಾರೆ. ಸಿನಿಮಾ ಕಂಟೆಟ್‌ಅನ್ನು ವಶ ಮಾಡಿಕೊಳ್ಳಬೇಕು ಎನ್ನುವ ಪ್ಲಾನ್ ಮೊದಲ ದಿನಾದಿಂದಲೇ ಶುರುವಾಗುತ್ತದೆ. ಆ ಸಮಯದಲ್ಲಿ ಪೊಲೀಸರು ಬಿಡಲಿಲ್ಲ' ಎಂದರು.
'ಬಳಿಕ ನಮ್ಮ ಯಜಮಾನರ ಶವ ಸಂಸ್ಕಾರ ಮಾಡಿ ಎರಡನೇ ದಿನ ಹೋಗಿ ನಾನು ಹೋಟೆಲ್‌ನಲ್ಲಿದ್ದ ಕಂಟೆಂಟ್‌ಗಳನ್ನು ತೆಗೆದುಕೊಂಡು ಬಂದು ನನ್ನ ಹತ್ತಿರ ಇಟ್ಟುಕೊಂಡೆ. ಅವತ್ತಿನಿಂದ ಕೊಟ್ಟು ಬಿಡಿ ಸಿನಿಮಾ ರಿಲೀಸ್ ಮಾಡೋಣ ಎನ್ನುವುದು ಶುರುವಾಗುತ್ತದೆ. ಸಿನಿಮಾ ಬಹುತೇಕ ಮುಗಿದಿತ್ತು. ಪೋಸ್ಟ್ ಪೊಡಕ್ಷನ್ ಕೆಲಸ ಬಾಕಿ ಇತ್ತು. ನನಗೆ ಸುಧಾರಿಸಿಕೊಳ್ಳಲು ಸಮಯ ಕೊಡದೇ ಮಾತುಕತೆ ಮಾಡಿ ತೆಗೆದುಕೊಂಡು ಹೋಗುತ್ತಾರೆ'.

'ಸಿನಿಮಾ ಕೆಲಸ ಮುಗಿಸುತ್ತೇವೆ ರಿಲೀಸ್ ಮಾಡಲ್ಲ ಎಂದು ತೆಗೆದುಕೊಂಡು ಹೋದರು. ಈಗ ತನ್ನ ಬ್ಯಾನರ್‌ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ ಎಂದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ. ನನ್ನ ಗಂಡನ ಹಕ್ಕು, ನನ್ನ ಮಗುವಿನ ಆಸ್ತಿಯನ್ನು ಹೇಗೆ ಬೇರೆಯವರಿಗೆ ಬಿಟ್ಟುಕೊಡುವುದು. ನನ್ನನ್ನು ಹೊರಗಿಟ್ಟು ಸಿನಿಮಾದ ಎಲ್ಲವನ್ನೂ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಸಿನಿಮಾ ರಿಲೀಸ್‌ಗೆ ಕೋರ್ಟ್ ಮೂಲಕ ಸ್ಟೇ ತರಲಾಗಿದೆ' ಎಂದು ಗುರುಪ್ರಸಾದ್ ಪತ್ನಿ ಸುಮಿತ್ರಾ ಹೇಳಿಕೊಂಡಿದ್ದಾರೆ.












Click it and Unblock the Notifications