Namratha Gowda: ಕರ್ಣ ಸೀರಿಯಲ್‌ನಲ್ಲಿ "ನಿತ್ಯಾ" ಪಾತ್ರ ಒಪ್ಪಿಕೊಳ್ಳಲು ಅಸಲಿ ಕಾರಣ ಬಿಚ್ಚಿಟ್ಟ ನಮ್ರತಾ
ನಟ ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಕರ್ಣ ಸೀರಿಯಲ್ ಆರಂಭದಲ್ಲೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಕಿರಣ್ ರಾಜ್ ಎರಡು ವರ್ಷಗಳ ಬಳಿಕ ಈ ಸೀರಿಯಲ್‌ಗೆ ಮರಳಿದ್ದು, ಒಂದೇ ಧಾರಾವಾಹಿಯಲ್ಲಿ ನಮ್ರತಾ, ಭವ್ಯಾ ಇರುವುದು ಡಬಲ್ ಧಮಾಕ ಸಿಕ್ಕಿದಂತಾಗಿದೆ. ನಮ್ರತಾ, ಭವ್ಯಾ ಬಿಗ್‌ಬಾಸ್‌ನಲ್ಲಿ ಮಿಂಚಿ ಬಳಿಕ ಕರ್ಣ ಮೂಲಕ ಜೊತೆಯಾಗಿದ್ದಾರೆ. ಲೇಟ್ ಆದ್ರೂ ಲೇಟೆಸ್ಟ್ ಎನ್ನುವಂತೆ ಈ ಧಾರಾವಾಗಿ ತಡವಾದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇದರಲ್ಲಿ ಪ್ರಮುಖ ಪಾತ್ರದಲ್ಲಿರುವ ನಮ್ರತಾ ಅವರು ಈ ಸೀರಿಯಲ್ ಒಪ್ಪಿಕೊಳ್ಳಲು ಅಚ್ಚರಿ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ "ಕರ್ಣ" ಧಾರಾವಾಹಿಯಲ್ಲಿ ಕಿರಣ್ ರಾಜ್ ಮತ್ತು ಭವ್ಯಾ ಗೌಡ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿ ನಮ್ರತಾ ಗೌಡ "ನಿತ್ಯಾ" ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ತ್ರಿಕೋನ ಪ್ರೇಮದ ಸುತ್ತ ಸಾಗುತ್ತದೆ ಎನ್ನಲಾಗಿದೆ. ಕರ್ಣ ಧಾರಾವಾಹಿಯ ಆರಂಭದ ಕೆಲವೇ ಎಪಿಸೋಡ್‌ಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ನಿತ್ಯಾ ಪಾತ್ರದ ವಿಭಿನ್ನತೆ ಮತ್ತು ನಮ್ರತಾ ಗೌಡ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಅವರು ಹೊಸ ಧಾರಾವಾಹಿಗೆ ಅವಕಾಶ ಸಿಕ್ಕರೂ ಒಪ್ಪಿಕೊಂಡಿರಲಿಲ್ಲ. ಆದರೆ "ಕರ್ಣ" ಧಾರಾವಾಹಿಯ ಕಥೆ ಮತ್ತು ನಿತ್ಯಾ ಪಾತ್ರದ ವಿಶಿಷ್ಟತೆ ಅವರಿಗೆ ಆಕರ್ಷಣೆಯಾಯಿತು ಎನ್ನಲಾಗಿದೆ. ನಮ್ರತಾ ಅವರಿಗೆ ಈ ಧಾರಾವಾಹಿಯ ಆಫರ್ ಎರಡು ವರ್ಷಗಳ ಹಿಂದೆ ಬಂದಿದ್ದರೂ, ಧಾರಾವಾಹಿ ಆರಂಭವಾಗಲು ಸಮಯ ಹಿಡಿಯಿತು. ನಿತ್ಯಾ ಪಾತ್ರವು ಭಾವನೆಗಳನ್ನು ಹೊರಹಾಕದೆ ಪ್ರ್ಯಾಕ್ಟಿಕಲ್ ಆಗಿ ಆಲೋಚಿಸುವ ವ್ಯಕ್ತಿತ್ವವನ್ನು ಹೊಂದಿದೆ. ಇದು ನಮ್ರತಾ ಅವರ ನಿಜ ಜೀವನದ ವ್ಯಕ್ತಿತ್ವಕ್ಕೂ ಹತ್ತಿರವಾಗಿದೆ. ಈ ಕಾರಣದಿಂದಲೇ ನಮ್ರತಾ ಅವರು ಈ ಪಾತ್ರ ಒಪ್ಪಿಕೊಂಡರು ಎನ್ನಲಾಗಿದೆ.
ನಾನು ಕೂಡ ಲೈಫಲ್ಲಿ ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತೇನೆ. ನನ್ನ ಭಾವನೆಗಳನ್ನು ಹೆಚ್ಚಾಗಿ ಹೊರಗೆ ತೋರಿಸಿಕೊಳ್ಳುವುದಿಲ್ಲ. ಈ ಧಾರಾವಾಹಿಯಲ್ಲಿ ನಿತ್ಯಾ ಪಾತ್ರ ಕೂಡ ಹಾಗೆಯೇ ಇರುವುದರಿಂದ ನನಗೆ ಈ ಪಾತ್ರ ಒಗ್ಗಿದೆ. ಬೇರೆ ಧಾರಾವಾಹಿಗಳಲ್ಲಿ ನಾಯಕಿ ಅಳುಮುಂಜಿ ಅಥವಾ ಸಾಫ್ಟ್ ಆಗಿ ಕಾಣಿಸಿಕೊಳ್ಳುತ್ತಾಳೆ. ಆದರೆ ನಿತ್ಯಾ ಪಾತ್ರವು ತುಂಬಾ ಡಿಫರೆಂಟ್ ಆಗಿದೆ. ಹೀಗಾಗಿ ಈ ಪಾತ್ರ ನನಗೆ ತುಂಬಾ ಇಷ್ಟವಾಯ್ತು, ಕೊನೆಗೆ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ರಿವೀಲ್ ಮಾಡಿದ್ದಾರೆ ನಮ್ರತಾ.
ಭವ್ಯಾ ಗೌಡ ಅವರೊಂದಿಗೆ ನಮ್ರತಾ ಗೌಡ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇಬ್ಬರೂ ಈ ಹಿಂದೆ ಒಂದೇ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಅವರಿಬ್ಬರ ನಡುವಿನ ಸ್ನೇಹ ಮತ್ತು ಬಾಂಡಿಂಗ್ ಧಾರಾವಾಹಿಯಲ್ಲಿ ಮುಂದುವರಿದಿದೆ. ಭವ್ಯಾ ಗೌಡ ಅಕ್ಕನ ಪಾತ್ರದಲ್ಲೇ ನಮ್ರತಾ ನಟಿಸುತ್ತಿದ್ದು, ಇವರಿಬ್ಬರ ನಡುವೆ ಬಾಂಡಿಂಗ್ ಸಹಜವಾಗಿ ಮೂಡಿಬಂದಿದೆ ಎಂದು ನಮ್ರತಾ ಹೇಳಿಕೊಂಡಿದ್ದಾರೆ.












Click it and Unblock the Notifications