Rashmika Mandanna: ರಶ್ಮಿಕಾ ಬೆಳೆಯಬಾರದು ಅಂತ ಹಣ ಕೊಟ್ಟು ಟ್ರೋಲ್ ಮಾಡಿಸಿದ್ದು ಯಾರು?
ಕಿರಿಕ್ ಬೆಡಗಿ, ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಹಲವು ಚಿತ್ರರಂಗಗಳಲ್ಲಿ ಹೆಚ್ಚು ಬೇಡಿಕೆ ಇರುವ ನಟಿ. ಹಲವು ವಿಚಾರಗಳಿಂದಾಗಿ ರಶ್ಮಿಕಾ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಕೂಡ ಉಂಟು. ಅದೆಲ್ಲವನ್ನೂ ಸೈಡಿಗಟ್ಟು ತಮ್ಮ ವೃತ್ತಿ ಜೀವನದಲ್ಲಿ ಹೆಜ್ಜೆ ಹಾಕಿರುವ ರಶ್ಮಿಕಾ ಇತ್ತೀಚೆಗೆ ಪುಷ್ಪ ಸಿನಿಮಾ ಸಿನಿಮಾ ಮೂಲಕ ಮತ್ತಷ್ಟು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಟ ನಟಿಯರನ್ನು ಸುಖಾಸುಮ್ಮನೆ ಟ್ರೋಲ್ ಮಾಡುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಆದರೆ ರಶ್ಮಿಕಾ ಮಂದಣ್ಣ ಸಿನಿಮಾರಂಗದಲ್ಲಿ ಬೆಳೆಯಬಾರದು ಅಂತ ಹಣ ಕೊಟ್ಟು ಟ್ರೋಲ್ ಮಾಡಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ.
ಹೌದು, ಕನ್ನಡದಿಂದ ಟಾಲಿವುಡ್‌ಗೆ ಹಾರಿದ ರಶ್ಮಿಕಾ ಅಲ್ಲಿನ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿ, ಅದೃಷ್ಟಲಕ್ಷಿ ಎನಿಸಿಕೊಂಡರು. ಬಹುತೇಕ ರಶ್ಮಿಕಾ ಅವರ ಸಿನಿಮಾಗಳೆಲ್ಲವೂ ಹಿಟ್ ಆಗಿವೆ. ನಂತರ ತಮಿಳು, ಈಗ ಬಾಲಿವುಡ್‌ನಲ್ಲೂ ಒಟ್ಟೊಟ್ಟಿಗೆ ಮಿಂಚುತ್ತಿದ್ದಾರೆ. ಇತ್ತೀಚೆಗೆ ತಮಿಳು ನಟ ಧನುಷ್ ಜೊತೆ ಕುಬೇರ ಸಿನಿಮಾದಲ್ಲೂ ರಶ್ಮಿಕಾ ನಟಿಸಿದ್ದರು. ಇದು ಕೂಡ ಹಿಟ್ ಕಂಡಿದೆ. ಇನ್ನು ಕೈತುಂಬಾ ಸಿನಿಮಾಗಳೂ ಇವೆ. ಆದರೆ ರಶ್ಮಿಕಾ ಅವರ ಸಾಧನೆಗೆ ಅಡ್ಡಗಾಲು ಹಾಕಲು ಹಣ ಕೊಟ್ಟು ಟ್ರೋಲ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸಿಂಪತಿಯನ್ನೇ ನಕಲಿ ಎಂದು ಭಾವಿಸಲಾಗುತ್ತಿದೆ. ಹಾಗಾಗಿ ನಾವು ಸಾರ್ವಜನಿಕವಾಗಿ ಎಷ್ಟರಮಟ್ಟಿಗೆ ಭಾವನಾತ್ಮಕ ಮತ್ತು ನೈಜ ಎಂದು ತೋರಿಸಿಕೊಳ್ಳುವ ಬಗ್ಗೆ ಅಲರ್ಟ್ ಆಗಿದ್ದೇನೆ. ನಾನು ತುಂಬಾ ಭಾವನಾತ್ಮಕ ವ್ಯಕ್ತಿ ಮತ್ತು ನಿಜವಾದ ವ್ಯಕ್ತಿ ಎಂದು ನನಗೆ ತಿಳಿದಿದೆ. ಆದರೆ ಕೆಲವರು ಆ ದಯೆಯನ್ನ ನಕಲಿ, ದೌರ್ಬಲ್ಯ ಎಂದು ಭಾವಿಸುವುದರಿಂದ ನಾನು ಅದನ್ನು ನಿಜವಾಗಿಯೂ ತೋರಿಸಲು ಸಾಧ್ಯವಿಲ್ಲ. ನೀವು ಹೆಚ್ಚು ರಿಯಲ್ ಆದರೂ ಅದು ಹೆಚ್ಚು ಒಳ್ಳೆಯದಲ್ಲ ಎಂದಿದ್ದಾರೆ ರಶ್ಮಿಕಾ
ತಮ್ಮ ವಿರುದ್ಧ ಹಣ ಕೊಟ್ಟು ಟ್ರೋಲ್ ಮಾಡುವ ಬಗ್ಗೆ ಕೇಳಿಬಂದ ಆರೋಪಗಳ ವಿಚಾರವಾಗಿಯೂ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಟ್ರೋಲ್ ಮತ್ತು ನೆಗೆಟಿವ್ ಅಭಿಪ್ರಾಯಗಳು ಹರಡುತ್ತಿರುವುದರಿಂದ ಇದಕ್ಕೆ ಸಂಬಂಧಿಸಿದಂತೆ ಅವರು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. "ಬೇರೆಯವರನ್ನ ಬೆಳೆಯಲು ಕತ್ತು ಹಿಸುಕುವ ಅವಶ್ಯಕತೆ ಇಲ್ಲ ಎಂದು ತಿಳಿದುಕೊಳ್ಳಲು ನಾನು ಸಾಕಷ್ಟು ಟ್ರೋಲ್ ಮತ್ತು ನೆಗೆಟಿವ್ ಪಿಆರ್ ಅನ್ನು ಎದುರಿಸಿದ್ದೇನೆ" ಎಂದಿದ್ದಾರೆ.

ನಾನು ತುಂಬಾ ನೆಗೆಟಿವ್ ಪಿಆರ್ ಮತ್ತು ಟ್ರೋಲಿಂಗ್ ಎದುರಿಸಿದ್ದೇನೆ. ನೀವು ದಯೆಯಿಂದ ಇರಲು ಸಾಧ್ಯವಾಗದಿದ್ದರೆ, ಏನನ್ನೂ ಹೇಳಬೇಡಿ. ಜನರು ಉಸಿರಾಡಲು ಬಿಡಿ. ನೀವು ಜನರನ್ನು ಏಕೆ ಉಸಿರುಗಟ್ಟಿಸಬೇಕು? ನೀವು ಬೆಳೆಯಲು ಜನರನ್ನು ಏಕೆ ಕತ್ತು ಹಿಸುಕಬೇಕು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಜಗತ್ತು ತುಂಬಾ ದೊಡ್ಡದಾಗಿದೆ, ನಮಗೆಲ್ಲರಿಗೂ ಸ್ಥಳವಿದೆ. ನಾವೆಲ್ಲರೂ ಬೆಳೆಯಲು ಬಿಡಿ ಎಂದಿದ್ದಾರೆ.
ಈ ಕ್ರೂರ ವರ್ತನೆ ಏಕೆ?
ಹಣ ನೀಡಿ ನನ್ನ ಮೇಲೆ ಟ್ರೋಲ್ ಮಾಡಲಾಗಿದೆ. ನೆಗೆಟಿವ್ ವಿಚಾರಗಳನ್ನು ಹರಡಲಾಗುತ್ತಿದೆ. ನಾನು ಈ ಎಲ್ಲವನ್ನು ಎದುರಿಸಿದ್ದೇನೆ. ನಿಮಗೆ ನಿಜವಾಗಿಯೂ ದಯೆಯಿರದಿದ್ದರೆ ಮೌನವಾಗಿರಿ. ಈ ಜಗತ್ತಿನಲ್ಲಿ ನಾವೆಲ್ಲರೂ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ ಅದನ್ನು ತಡೆಯುವುದು ಏಕೆ? ಜನರು ಯಾಕೆ ಈ ರೀತಿ ಕ್ರೂರವಾಗಿ ವರ್ತಿಸುತ್ತಾರೆಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ತುಂಬಾ ನೋವು ತಂದಿದೆ ಎಂದು ಬೇಸರ ಹೊರಹಾಕಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವೇ ತಮ್ಮ ಬೆಂಬಲ ಎಂದು ರಶ್ಮಿಕಾ ಹೇಳಿದ್ದಾರೆ. ಈಗ ಟ್ರೋಲ್‌ಗಳ ವಿಷಯಗಳಲ್ಲಿ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡೋಂಟ್ ಕೇರ್ ಹೇಳಿದ್ದಾರೆ.












Click it and Unblock the Notifications