Sonal Monteiro: ನಟಿ ಸೋನಾಲ್‌ ಅವರ ಫಸ್ಟ್‌ ಕ್ರಶ್‌ ಯಾರು ಗೊತ್ತಾ..?

ಬೆಂಗಳೂರು, ಆಗಸ್ಟ್‌ 13: ಕನ್ನಡ ಚಿತ್ರರಂಗದ ನಟಿ ಸೋನಲ್ ಮೊಂಥೆರೋ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಬರ್ಟ್‌ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ಸೋನಲ್ ಮೊಂಥೆರೋ ಕರಾವಳಿ ಭಾಗದವರು. ಮೂಲತಃ ಮಂಗಳೂರಿನವರಾದ ಸೋನಲ್ ಮೊದಲು ತುಳು ಚಿತ್ರಗಳಲ್ಲಿ ನಟಿಸಿದ್ದರು. ತುಳು ಭಾಷೆಯ ಎಕ್ಕ ಸಕ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಪಿಲಿಬೈಲ್‌ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿ ಬಳಿಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿರುವ ಸೋನಾಲ್‌ ಈ ಹಿಂದೆ ನೀಡಿದ್ದ ಒಂದು ಸಂದರ್ಶನದಲ್ಲಿ ತಮ್ಮ ಕ್ರಶ್‌, ತಮ್ಮ ಕನಸಿನ ಪಾತ್ರ ಸೇರಿದಂತೆ ಎಲ್ಲದರ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಫಸ್ಟ್ ಕ್ರಶ್‌ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ ನಟಿ ಸೋನಾಲ್‌, 'ಸ್ಕೂಲ್‌ ಅಲ್ಲಿ ನಮ್ಮ ಫ್ರೆಂಡ್ಸ್‌ ಗ್ರೂಪ್‌ ಇತ್ತು. ಅದರಲ್ಲಿ ಒಬ್ಬರು ನನ್ನ ಫ್ರಸ್ಟ್‌ ಕ್ರಶ್‌. ಅವರು ಈಗ ಬೇರೆಯವರ ಜೊತೆ ಡೇಟ್‌ ಮಾಡುತ್ತಿದ್ದಾರೆ. ಹೀಗಾಗಿ ಅವರ ಹೆಸರು ಬೇಡ' ಎಂದು ಹೇಳಿದ್ದರು.

Who Is The Sandalwood Actress Sonal Monteiro s First Crush

ಹೀಗೆ ಇನ್ನೊಂದಿಷ್ಟು ರ್ಯಾಪಿಡ್ ಫೈರ್‌ ಪ್ರಶ್ನೆಗಳಿಗೆ ಉತ್ತರಿಸಿದ ನಟಿ ಸೋನಾಲ್‌ ತಮ್ಮ ಕನಿಸಿನ ಹುಡುಗ ಹೇಗಿರಬೇಕು ಎನ್ನುವುದರ ಬಗ್ಗೆ ಕೂಡ ಮುಕ್ತವಾಗಿ ಮಾತನಾಡಿದ್ದರು. 'ನನ್ನ ಹುಡುಗ ತುಂಬಾ ವಿನಯದಿಂದ ನಡೆದುಕೊಳ್ಳಬೇಕು, ಅವರಲ್ಲಿ ಪ್ರಾಮಾಣಿಕತೆ ಇರಬೇಕು, ನಂಬಿಕೆಗೆ ಅರ್ಹರಾಗಿರಬೇಕು, ನನಗೆ ತುಂಬಾ ಪ್ರೀತಿ ಕೊಡಬೇಕು. ಜೊತೆಗೆ ನನಗೆ ವರ್ತನೆ ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಅವರ ವರ್ತನೆ ಸರಿಯಾಗಿ ಇರಬೇಕು. ಹುಡುಗನ ಬಗ್ಗೆ ನನಗೆ ಇರುವುದು ಎಲ್ಲಾ ಸರಳ ಬೇಡಿಕೆಗಳು' ಎಂದು ಹೇಳಿದ್ದಾರೆ.

ಇನ್ನು ತಮಗೆ ಯಾವ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ ಎನ್ನುವ ಬಗ್ಗೆ ಮಾತನಾಡಿದ ಸೋನಾಲ್‌, 'ಶ್ರೀದೇವಿ ಅವರು ಸದ್ಮಾ ಸಿನಿಮಾ ಒಂದು ಪಾತ್ರ ಮಾಡಿದ್ದರು. ಅಂತಹ ಒಂದು ಪಾತ್ರ ಮಾಡಬೇಕು ಎನ್ನುವ ಆಸೆ ತುಂಬಾ ಇದೆ. ಇನ್ನು ಕನ್ನಡ ಚಿತ್ರರಂಗದಲ್ಲಿರುವ ಎಲ್ಲಾ ಟಾಪ್‌ ಒನ್‌ ನಟರ ಜೊತೆ ನಟನೆ ಮಾಡಬೇಕು ಎನ್ನುವ ಆಸೆ ಇದೆ' ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+