Vishal Marriage: ನಟ ವಿಶಾಲ್ ಮದುವೆಯಾಗುತ್ತಿರುವ ಹುಡುಗಿ ಯಾರು?
ತಮಿಳು ನಟ ವಿಶಾಲ್ ಕೃಷ್ಣ ಅವರ ಮದುವೆ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಇತ್ತೀಚೆಗೆ ಅವರು ತಮ್ಮ ಅನಾರೋಗ್ಯದ ವಿಷಯದಿಂದಲೂ ಸುದ್ದಿಯಾಗಿದ್ದರು. ವಿಶಾಲ್ ಮದುವೆ ಬಗ್ಗೆ ಇಲ್ಲಿವರೆಗೆ ಗಾಸಿಪ್ ಕೂಡ ಜೋರಾಗಿ ಸದ್ದು ಮಾಡಿತ್ತು. ಕೊನೆಗೂ 47 ವರ್ಷದ ನಟ ಅಂತಿಮವಾಗಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಖುದ್ದು ವಿಶಾಲ್ ಅವರೇ ಮದುವೆ ಬಗ್ಗೆ ಖಚಿತಪಡಿಸಿದ್ದು, ಸಾಯಿ ಧನ್ಶಿಕಾ ಎಂಬುವವರನ್ನು ಮದುವೆಯಾಗಲಿದ್ದಾರೆ. ವಿಶಾಲ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ಧನ್ಶಿಕಾ ಯಾರು ಗೊತ್ತಾ?
ಚೆನ್ನೈನಲ್ಲಿ ನಡೆದ "ಯೋಗಿ ದಾ" ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆ ವಿಚಾರವನ್ನು ಇಬ್ಬರೂ ರಿವೀಲ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿ ತಮ್ಮ ಮದುವೆಯ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಧನ್ಶಿಕಾ, ನಾವು 15 ವರ್ಷಗಳಿಂದ ಪರಸ್ಪರ ಪರಿಚಿತರು, ಆದರೆ ಇತ್ತೀಚೆಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದೇವೆ ಎಂದು ಧನ್ಶಿಕಾ ಹೇಳಿದ್ದಾರೆ. ಈ ಆಗಸ್ಟ್‌ನಲ್ಲಿ ಇವರ ವಿವಾಹ ನೆರವೇರಲಿದೆ.

ಸಾಯಿ ಧನ್ಶಿಕಾ ಕೂಡ ತಮಿಳು ಚಿತ್ರರಂಗದ ಖ್ಯಾತ ನಟಿ. ರಜನಿಕಾಂತ್ ನಟನೆಯ ಕಬಾಲಿ ಚಿತ್ರದಲ್ಲಿ ಧನ್ಶಿಕಾ ನಟಿಸಿದ್ದಾರೆ. ಇವರು ಮೊದಲು ಪೇರಣ್ಮೈ (2009), ಮಾಂಜಾ ವೇಲು (2010) ಮತ್ತು ನಿಲ್ ಗವಾನಿ ಸೆಲ್ಲಾಥೆ (2010) ಸಿನಿಮಾಗಳಲ್ಲಿ ನಟಿಸಿದ್ದಾರೆ. ಅರಾವಣ್ ಮತ್ತು ಪರದೇಸಿ ಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಕಬಾಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ತಮಿಳು ಮಾತ್ರವಲ್ಲದೆ ಧನ್ಶಿಕಾ ಹಲವಾರು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ವಿಶಾಲ್ ಮತ್ತು ಸಾಯಿ ಧನ್ಶಿಕಾ ಶೀಘ್ರದಲ್ಲೇ ವಿವಾಹ ಘೋಷಣೆ ಮಾಡಲಿದ್ದಾರೆ. ತಮ್ಮ ವಿವಾಹದ ಬಗ್ಗೆ ಅಧಿಕೃತವಾಗಿ ಯೋಗಿ ದಾ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಧನ್ಶಿಕಾ ನಟಿಸಿದ್ದು, ವಿಶಾಲ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇತ್ತೀಚೆಗೆ ತಮ್ಮ ಕುರಿತು ಸುದ್ದಿ ವೈರಲ್ ಆದ ನಂತರ ತಮ್ಮ ಸಂಬಂಧವನ್ನು ಅಧಿಕೃತಗೊಳಿಸುವಂತೆ ಒತ್ತಾಯಿಸಲಾಯಿತು ಎಂದು ಧನ್ಶಿಕಾ ಹೇಳಿದರು. ನಾವು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲು ಬಯಸಲಿಲ್ಲ. ಆದರೂ ಸುದ್ದಿ ವರದಿ ವೈರಲ್ ಆಗಿದೆ. ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಮಾಧ್ಯಮಗಳ ಮುಂದೆ ನಮ್ಮ ಸ್ನೇಹವನ್ನು ಉಳಿಸಿಕೊಳ್ಳುತ್ತೇವೆ ಎಂದು ನಾವು ಆರಂಭದಲ್ಲಿ ಭಾವಿಸಿದ್ದೆವು. ಆದರೆ ವರದಿಯ ನಂತರ ಮುಚ್ಚಿಡಲು ಏನೂ ಇಲ್ಲ ಎಂದು ನಮಗೆ ಅನಿಸಿತು ಎಂದು ಎಂದು ಧನ್ಶಿಕಾ ಹೇಳಿದ್ದಾರೆ.
ವಿಶಾಲ್ ಮತ್ತು ನಾನು ಆಗಸ್ಟ್ 29ರಂದು ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ನನಗೆ ವಿಶಾಲ್ ಕಳೆದ 15 ವರ್ಷಗಳಿಂದ ಪರಿಚಯ ಇದ್ದಾರೆ. ಈ ಹಿಂದೆ ನಾವು ಭೇಟಿಯಾದಾಗಲೆಲ್ಲ ಅವರು ನನ್ನನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ನಾನು ತೀವ್ರ ತೊಂದರೆಯಲ್ಲಿದ್ದಾಗ, ಅವರು ನನ್ನ ಮನೆಗೆ ಭೇಟಿ ನೀಡಿ ನನ್ನ ಬೆಂಬಲಕ್ಕೆ ನಿಂತಿದ್ದರು. ಯಾವುದೇ ನಟ ಇದುವರೆಗೆ ನನ್ನ ಮನೆಗೆ ಭೇಟಿ ನೀಡಿರಲಿಲ್ಲ. ವಿಶಾಲ್ ಅವರ ಸಿಹಿಯಾದ ಮಾತು, ಅವರ ಹಾವಭಾವ ಸಂತೋಷಕರವಾಗಿತ್ತು ಎಂದು ಧನ್ಶಿಕಾ ಹೇಳಿದ್ದಾರೆ. ಇವರ ನಿಶ್ಚಿತಾರ್ಥ ಶೀಘ್ರದಲ್ಲೇ ನಡೆಯಲಿದೆ.












Click it and Unblock the Notifications