ಪುನೀತ್ ರಾಜ್‌ಕುಮಾರ್ ಇದ್ದಿದ್ದರೆ ಹಿಂಗೆ ಆಗ್ತಿರಲಿಲ್ಲ ಅಂತಿದ್ದಾರೆ ಅಭಿಮಾನಿಗಳು!
ಪುನೀತ್ ರಾಜ್‌ಕುಮಾರ್ ಅಂದ್ರೆ ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ದೇವರು ಅಂತಾ ಕರೆಸಿಕೊಳ್ಳುತ್ತಿದ್ದಾರೆ. ಡಾ. ರಾಜ್‌ಕುಮಾರ್ ಅವರ ಕುಟುಂಬದ ಹೆಸರನ್ನು ಜಗತ್ತಿನಾದ್ಯಂತ ಪಸರಿಸುವ ರೀತಿ ಮಾಡಿದ್ದರು ಅಪ್ಪು ಪುನೀತ್ ರಾಜ್‌ಕುಮಾರ್. ಆದರೆ ಇಂದು ಇದೇ ಪುನೀತ್ ಅವರ ಹೋಲಿಕೆ ಇರುವ ಯುವ ರಾಜ್‌ಕುಮಾರ್ ಅವರು ಡಿವೋರ್ಸ್ ಪಡೆಯಲು ಮುಂದೆ ಬಂದಿರುವುದು ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಅಭಿಮಾನಿಗಳು ಏನ್ ಹೇಳುತ್ತಿದ್ದಾರೆ ಗೊತ್ತಾ? ಮುಂದೆ ಓದಿ.
ಅಂದಹಾಗೆ ಯುವ ರಾಜ್‌ಕುಮಾರ್ ಅವರು ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಭರ್ಜರಿ ಎಂಟ್ರಿ ಕೊಟ್ಟು, ಸಖತ್ ಸದ್ದು ಮಾಡಿದ್ದವರು. ಅದ್ರಲ್ಲೂ ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ 'ಯುವ' ಇತ್ತೀಚೆಗೆ ಬಿಡುಗಡೆ ಆಗಿತ್ತು. ಹೀಗಿದ್ದಾಗಲೇ, ಅವರ ಬಾಳಲ್ಲಿ ಇದೀಗ ಬಿರುಗಾಳಿ ಎದ್ದಿದೆ. ಯುವ ರಾಜ್‌ಕುಮಾರ್ & ಶ್ರೀದೇವಿ ಅವರ ನಡುವೆ ಬಿರುಕು ಮೂಡಿದೆ.

ಸದಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹೀಗಿದ್ದಾಗ ಪುನೀತ್ ಅವರ ಅಭಿಮಾನಿಗಳು & ದೊಡ್ಮನೆ ಫ್ಯಾನ್ಸ್ 'ಪುನೀತ್ ರಾಜ್‌ಕುಮಾರ್ ಅವರು ಇದ್ದಿದ್ದರೆ ಹಿಂಗೆ ಆಗುತ್ತಿರಲಿಲ್ಲ' ಅಂತಿದ್ದಾರೆ, ಯಾಕೆ ಗೊತ್ತಾ? ಯುವ ಅವರ ಪತ್ನಿ ಕೈಯಲ್ಲಿ ಇರುವುದು ಯಾರ ಟ್ಯಾಟೂ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಮಹಿಳೆಯರಿಗೆ ಅಪ್ಪು ಗೌರವ
ಪುನೀತ್ ರಾಜ್‌ಕುಮಾರ್ ಕೇವಲ ಒಬ್ಬ ಉತ್ತಮ ನಟ ಮಾತ್ರವಲ್ಲ, ಪುನೀತ್ ಅಂದ್ರೆ ಇಡೀ ದೇಶವೇ ಗೌರವ ನೀಡುವಂತಹ ವ್ಯಕ್ತಿತ್ವ. ಅದರಲ್ಲೂ ಮಹಿಳೆಯರಿಗೆ ಪುನೀತ್ ರಾಜ್‌ಕುಮಾರ್ ಅವರು ಭಾರಿ ಗೌರವ ನೀಡುತ್ತಿದ್ದರು. ಹಾಗೆಯೇ ಮಹಿಳೆಯರು ಬೆಳೆಯಲು ಬೆಂಬಲ ಕೂಡ ನೀಡುತ್ತಿದ್ದರು. ಸಿನಿಮಾ ಕ್ಷೇತ್ರ ಮಾತ್ರವಲ್ಲ ಎಲ್ಲಾ ವಿಭಾಗದಲ್ಲು ಅಪ್ಪು ಅವರು ಮಹಿಳಾ ಸಬಲೀಕರಣದ ವಿಚಾರ ಪ್ರಸ್ತಾಪಿಸುತ್ತಿದ್ದರು.
ಅದೇ ರೀತಿ, ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಅವರು ಡಾ. ರಾಜ್‌ಕುಮಾರ್ ಅಕಾಡೆಮಿ ನಡೆಸುವಾಗ ಕೂಡ ಅಪ್ಪು ಪುನೀತ್ ಅವರು ಬೆಂಬಲ ನೀಡಿದ್ದರು. ಈ ಕಾರಣಕ್ಕೆ ಮತ್ತು ಪುನೀತ್ ರಾಜ್‌ಕುಮಾರ್ ಅವರ ಈ ಒಳ್ಳೆಯ ಗುಣವನ್ನು ಮೆಚ್ಚಿ ಯುವ ಅವರ ಪತ್ನಿ ಕೂಡ, ಅಪ್ಪು ಅವರ ಅಭಿಮಾನಿ ಆಗಿದ್ದರು. ಹಾಗೇ ಅಭಿಮಾನಿಯಾಗಿ ಟ್ಯಾಟೂ ಅಂದ್ರೆ ಅಚ್ಚೆ ಕೂಡ ಹಾಕಿಸಿಕೊಂಡಿದ್ದರಂತೆ!
ಹೀಗೆ ಅಪ್ಪು ಅವರ ಟ್ಯಾಟೂ ಅಚ್ಚೆ ಹಾಕಿಸಿಕೊಂಡು, ಪುನೀತ್ ರಾಜ್‌ಕುಮಾರ್ ಅವರ ಮೌಲ್ಯ ಮುಂದುವರಿಸಿಕೊಂಡು ಬಂದಿದ್ದರು ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಅವರು. ಹಾಗೇ ಯುವ ರಾಜ್‌ಕುಮಾರ್ ಕೂಡ ಭವಿಷ್ಯದ ಪುನೀತ್ ರಾಜ್‌ಕುಮಾರ್ ಎಂಬ ಬಿರುದು ಪಡೆದರು. ಹೀಗೆ ಎಲ್ಲವೂ ಸರಿಯಾಗಿರುವ ಸಮಯದಲ್ಲೇ ಇಬ್ಬರ ಬಾಳಲ್ಲಿ ಈಗ ವಿಚ್ಛೇದನ ಎಂಬ ಬಿರುಗಾಳಿ ಬಂದಿದೆ.
ಡಾ. ರಾಜ್ ಕುಟುಂಬದಲ್ಲಿ ಮೌನ
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ವಿಚಾರ ಈಗ ಎಲ್ಲೆಲ್ಲೂ ಸಂಚಲನ ಎಬ್ಬಿಸಿದೆ. ಅದರಲ್ಲೂ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಈ ಕುರಿತು ಮೌನ ಆವರಿಸಿದೆ. ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ನೋವು ಪಟ್ಟಿದ್ದಾರೆ. ಹೀಗಾಗಿ ಈ ಘಟನೆಗಳಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕು, ನಾವು ಕೇಳಿದ ಸುದ್ದಿ ಸುಳ್ಳಾಗಲಿ ಅಂತಾ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಹಿರಿಯರು, ಈ ವಿಚಾರವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಸರಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈಗಲಾದರೂ ಈ ಸಮಸ್ಯೆ ಸರಿ ಆಗುತ್ತಾ? ಅಥವಾ ಮತ್ತಷ್ಟು ಜಟಿಲವಾಗಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications