ಮಕ್ಕಳು ಆದ ಮೇಲೆ ಮದುವೆ ಆಗ್ತೀವಿ ಎಂದಿದ್ದ ಜೋಡಿಗೆ ಬ್ರೇಕಪ್: ಕಾರಣವೇನು..?
ಕನ್ನಡ ಸಂಗೀತ ನಿರ್ದೇಶಕ, ನಟ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ನಂತರ ರಾಜಾ-ರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್ ನಡುವೆ ಬ್ರೇಕಪ್ ಆಗಿದ್ದು, ಇಬ್ಬರು ದೂರ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಈ ಊಹಾಪೋಹಾಗಳಿಗೆ ಸಾಕ್ಷಿ ಎನ್ನುವಂತೆ ಇಬ್ಬರು ಸದ್ಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಲ್ಲದೇ, ಜೊತೆಗಿರುವ ಫೋಟೋಗಳನ್ನು, ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಹಾಗೂ ಇತ್ತೀಚಿಗೆ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯ ಈ ಬಗ್ಗೆ ಈ ಜೋಡಿಯೇ ಸ್ಪಷ್ಟನೆ ನೀಡಬೇಕಿದ್ದು, ದೂರಾಗಲು ಕಾರಣ ಏನು ಎನ್ನುವುದು ಕೂಡ ಇನ್ನಷ್ಟೇ ತಿಳಿದು ಬರಬೇಕಿದೆ.

ಇನ್ನು ಈ ಹಿಂದೆ ತಮ್ಮ ಸಂಬಂಧದ ಬಗ್ಗೆ ಫಿಲ್ಮೀ ಬೀಟ್ ಕನ್ನಡದ ಜೊತೆ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್ ಮಾತನಾಡಿದ್ದರು. 'ನಾವಿಬ್ಬರು ಯಾವಾಗಲೂ ಸುಳ್ಳು ಹಾಗೂ ಕಂಪ್ಲೈಂಟ್‌ಗಳನ್ನು ಮೈಟೈನ್ ಮಾಡಲು ಹೋಗುವುದಿಲ್ಲ. ಏನೇ ಇದ್ದರೂ ತಕ್ಷಣಕ್ಕೆ ಹೇಳಿ ಬಿಡುತ್ತೇನೆ. ಆದರೂ ನಾನು ಆಣೆ ಪ್ರಮಾಣ ಮಾಡುವುದು ಹೆಚ್ಚು. ಏನೇ ಇದ್ದರೂ ನನ್ನ ಮೇಲೆ ಆಣೆ ಮಾಡು ಎಂದು ಹೇಳುತ್ತೇನೆ. ಸಾಮಾನ್ಯವಾಗಿ ನಾನೇ ಹೆಚ್ಚು ಗಿಫ್ಟ್‌ಗಳನ್ನು ಕೊಡುತ್ತೇನೆ. ಬರ್ತಡೇ ದಿನ ಅವನು ಉಂಗುರ ಗಿಫ್ಟ್ ಕೊಟ್ಟಿದ್ದ ಅದು ಬೆಳಗ್ಗೆ ಅಷ್ಟರಲ್ಲಿ ಕಳೆದು ಹೋಗಿತ್ತು' ಎಂದು ಜಯಶ್ರೀ ಹೇಳಿದ್ದರು.
'ನಮ್ಮಿಬ್ಬರಲ್ಲಿ ರೊಮ್ಯಾಂಟಿಕ್, ಲೇಜಿ ಎಲ್ಲಾ ನಾನೇ. ನಮ್ಮಿಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪೊಸೆಸಿವ್‍ನೆಸ್ ಇಲ್ಲ. ನನ್ನ ಫೋನ್ ಅನ್ನು ಅವರು ಚೆಕ್ ಮಾಡಲ್ಲ. ಆದರೆ ಅವನ ಫೋನ್‌ಅನ್ನು ನಾನು ಜಾಸ್ತಿ ಚೆಕ್ ಮಾಡುತ್ತೇನೆ. ಹೆಚ್ಚಾಗಿ ವಾಟ್ಸಪ್ ಅನ್ನು ಚೆಕ್ ಮಾಡುತ್ತೇನೆ. ಒಂದು ಟೈಮ್ ಅಲ್ಲಿ ವಾಟ್ಸಪ್ ವರ್ಕ್ ಆಗಲ್ಲ ಅಂತಾ ಗೊತ್ತಾಯ್ತು. ಇಮೇಲ್ ಅಲ್ಲಿ ಮೆಸೇಜ್ ಬರುತ್ತದೆ. ಅದು ಗೊತ್ತಾಯ್ತು. ಸ್ನ್ಯಾಪ್ ಚಾಟ್, ಇಮೇಲ್ ಎಲ್ಲಾ ಚೆಕ್ ಮಾಡುತ್ತೇನೆ. ಹೀಗಾಗಿ ಅವನ ಮೇಲೆ ಎಷ್ಟು ಕಣ್ಣಿಟ್ಟಿದ್ದೀನಿ ಎನ್ನುವುದು ಅವನಿಗೆ ಗೊತ್ತಾಯ್ತು' ಎಂದರು.

'ನಾನೇ ಅವನನ್ನು ತುಂಬಾ ಕಂಟ್ರೋಲ್ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದ ಜಯಶ್ರೀ ಬಟ್ಟೆ, ತಿನ್ನುವುದು ಜೀವನದಲ್ಲಿ ಹೀಗೆ ಇರಬೇಕು ಹೀಗಾಗಿ ಕೆಲವೊಂದು ವಿಚಾರವನ್ನು ತಿದ್ದಿಕೋ ಅಂತಾ ಹೀಗೆಲ್ಲಾ ಕಂಟ್ರೋಲ್ ಮಾಡುವುದು ನಾನೇ'ಎಂದಿದ್ದರು. ಇದೇ ವೇಳೆ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದ ಜಯಶ್ರೀ 'ಸದ್ಯ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುತ್ತೇವೆ' ಎಂದಿದ್ದರು. ಈ ವೇಳೆ ಸ್ಟೀವನ್ 'ಮಕ್ಕಳಾದ ಮೇಲೆ ಮದುವೆ ಮಾಡಿಕೊಳ್ಳೋಣ ಅಂತಾ ಇದ್ದೀವಿ' ಅಂತಾ ಹೇಳಿದ್ದರು. ಆದರೆ ಸದ್ಯ ಈ ಜೋಡಿ ದೂರಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.












Click it and Unblock the Notifications